MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಕೊನೆಗೂ ಮದುವೆಗೆ ರೆಡಿಯಾದ್ರಾ ಅನುಷ್ಕಾ ಶೆಟ್ಟಿ? 44ನೇ ವಯಸ್ಸಲ್ಲಿ ಸಿಕ್ತು ಬಿಗ್ ಟ್ವಿಸ್ಟ್!

ಕೊನೆಗೂ ಮದುವೆಗೆ ರೆಡಿಯಾದ್ರಾ ಅನುಷ್ಕಾ ಶೆಟ್ಟಿ? 44ನೇ ವಯಸ್ಸಲ್ಲಿ ಸಿಕ್ತು ಬಿಗ್ ಟ್ವಿಸ್ಟ್!

ನಟಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಆಗಾಗ ಗಾಸಿಪ್‌ಗಳು ಕೇಳಿಬರುತ್ತಲೇ ಇರುತ್ತವೆ. ಆದರೆ ಈ ಬಾರಿ ಅವರ ಮದುವೆ ಬಗ್ಗೆ ಬಲವಾದ ಸುದ್ದಿಯೊಂದು ಹರಿದಾಡುತ್ತಿದೆ. ಉದ್ಯಮಿಯೊಬ್ಬರ ಜೊತೆ ಅವರ ಮದುವೆ ನಿಶ್ಚಯವಾಗಿದೆ ಎಂದು ಹೇಳಲಾಗುತ್ತಿದೆ.

1 Min read
Author : Naveen Kodase
Published : Mar 15 2026, 04:34 PM IST
Share this Photo Gallery
  • FB
  • TW
  • Linkdin
  • Whatsapp
15
ಅನುಷ್ಕಾ ಶೆಟ್ಟಿ ಪ್ಯಾನ್ ಇಂಡಿಯಾ ಕ್ರೇಜ್
Image Credit : Asianet News

ಅನುಷ್ಕಾ ಶೆಟ್ಟಿ ಪ್ಯಾನ್ ಇಂಡಿಯಾ ಕ್ರೇಜ್

ಸೌತ್ ಸಿನಿಮಾರಂಗದ ಲೇಡಿ ಸೂಪರ್‌ಸ್ಟಾರ್ ಅಂತಾನೇ ಫೇಮಸ್ ಆದವರು ನಟಿ ಅನುಷ್ಕಾ ಶೆಟ್ಟಿ. ಗ್ಲಾಮರ್ ಹಾಗೂ ನಟನೆ ಎರಡರಲ್ಲೂ ಅಭಿಮಾನಿಗಳನ್ನು ಇವರು ಗೆದ್ದಿದ್ದಾರೆ. ನಾಗಾರ್ಜುನ ನಟನೆಯ 'ಸೂಪರ್' ಚಿತ್ರದ ಮೂಲಕ ಅನುಷ್ಕಾ ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು. ನಂತರ ಹಿಂತಿರುಗಿ ನೋಡಲೇ ಇಲ್ಲ. 'ಅರುಂಧತಿ', 'ಬಾಹುಬಲಿ 1' ಮತ್ತು 'ಬಾಹುಬಲಿ 2' ಚಿತ್ರಗಳು ಅನುಷ್ಕಾ ಖ್ಯಾತಿಯನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದವು.
25
 ಮದುವೆ ವಿಚಾರದಲ್ಲಿ ಮೌನವಾಗಿದ್ದ ಅನುಷ್ಕಾ ಶೆಟ್ಟಿ
Image Credit : Instagram/@anushkashettyofficial

ಮದುವೆ ವಿಚಾರದಲ್ಲಿ ಮೌನವಾಗಿದ್ದ ಅನುಷ್ಕಾ ಶೆಟ್ಟಿ

ಅನುಷ್ಕಾಗೆ 44 ವರ್ಷ ವಯಸ್ಸಾದರೂ ಮದುವೆ ವಿಚಾರದಲ್ಲಿ ಮೌನವಾಗಿದ್ದರು. ಆದರೆ ಕೊನೆಗೂ ಅವರು ಮದುವೆ ಬಗ್ಗೆ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಅಧಿಕೃತವಾಗಿ ಘೋಷಿಸಿಲ್ಲವಾದರೂ, ಅನುಷ್ಕಾ ಕುಟುಂಬದವರು ಮದುವೆ ಸಂಬಂಧವೊಂದನ್ನು ನಿಶ್ಚಯಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Related Articles

Related image1
ನಯನತಾರಾ ಮಾಡಿದ ಅದೊಂದು ಸಣ್ಣ ತಪ್ಪು, ಅನುಷ್ಕಾ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿತು!
Related image2
ಎಡಿಟಿಂಗ್ ರೂಮ್‌ನಲ್ಲೇ ಗೊತ್ತಾಯ್ತು: ಪ್ರಭಾಸ್ ಸಿನಿಮಾದ ಬಗ್ಗೆ ಆ ನಿರ್ಮಾಪಕ ಹೀಗಾ ಹೇಳೋದು?
35
ಬೆಂಗಳೂರು ಮೂಲದ ಉದ್ಯಮಿ ಜತೆ ಮದುವೆ?
Image Credit : Asianet News

ಬೆಂಗಳೂರು ಮೂಲದ ಉದ್ಯಮಿ ಜತೆ ಮದುವೆ?

ಅನುಷ್ಕಾ ಕೂಡ ಇನ್ನು ಮದುವೆ ಬಂಧನಕ್ಕೆ ಒಳಗಾಗಲು ನಿರ್ಧರಿಸಿದ್ದಾರಂತೆ. ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಜೊತೆ ಶೀಘ್ರದಲ್ಲೇ ಅನುಷ್ಕಾ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ. ಅನುಷ್ಕಾ ಕುಟುಂಬಕ್ಕೆ ಮತ್ತು ವರನ ಕುಟುಂಬಕ್ಕೆ ಮೊದಲೇ ಪರಿಚಯವಿದೆಯಂತೆ. ಹಾಗಾಗಿಯೇ ಈ ಸಂಬಂಧ ಕುದುರಿದೆ ಎಂದು ಸುದ್ದಿಯಾಗುತ್ತಿದೆ.
45
ಸದ್ಯದಲ್ಲೇ ಅಧಿಕೃತ ಘೋಷಣೆ?
Image Credit : our own

ಸದ್ಯದಲ್ಲೇ ಅಧಿಕೃತ ಘೋಷಣೆ?

ಶೀಘ್ರದಲ್ಲೇ ಈ ವಿಚಾರವನ್ನು ಅನುಷ್ಕಾ ಕುಟುಂಬದವರು ಅಧಿಕೃತವಾಗಿ ತಿಳಿಸಲಿದ್ದಾರೆ. ಹುಡುಗನ ಪೂರ್ತಿ ವಿವರಗಳು ಇನ್ನೂ ತಿಳಿದುಬಂದಿಲ್ಲ. ಒಂದು ವೇಳೆ ಈ ಸಂಬಂಧ ನಿಕ್ಕಿಯಾದರೆ, ಕೆಲವೇ ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ ಎಂದು ಅನುಷ್ಕಾ ಆಪ್ತರು ಹೇಳುತ್ತಿದ್ದಾರೆ.
55
ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಈ ಹಿಂದೆ ಹಲವು ಗಾಸಿಪ್
Image Credit : Instagram

ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಈ ಹಿಂದೆ ಹಲವು ಗಾಸಿಪ್

ಹಿಂದೆ ಅನುಷ್ಕಾ ಮದುವೆ ಬಗ್ಗೆ ಹಲವು ಬಾರಿ ಗಾಸಿಪ್‌ಗಳು ಹಬ್ಬಿದ್ದವು. ಅದರಲ್ಲೂ ಪ್ರಭಾಸ್ ಮತ್ತು ಅನುಷ್ಕಾ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಜೋರಾಗಿತ್ತು. ಆದರೆ ಆ ವದಂತಿಗಳನ್ನು ಅನುಷ್ಕಾ ತಳ್ಳಿಹಾಕಿದ್ದರು. ಪ್ರಭಾಸ್ ತನಗೆ ಒಳ್ಳೆಯ ಸ್ನೇಹಿತ ಎಂದು ಹೇಳಿದ್ದರು. 40ರ ಹರೆಯದಲ್ಲೂ ಮದುವೆ ಬಗ್ಗೆ ಮಾತನಾಡದ ಕಾರಣ, ಅವರ ಬಗ್ಗೆ ಆಗಾಗ ವದಂತಿಗಳು ಬರುತ್ತಲೇ ಇವೆ. ಆದರೆ ಈ ಬಾರಿ ಅನುಷ್ಕಾ ಮದುವೆ ಆಗುವುದು ಖಚಿತ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಅನುಷ್ಕಾ ಶೆಟ್ಟಿ
ಟಾಲಿವುಡ್
ಮದುವೆ
Latest Videos
Recommended Stories
Recommended image1
ರಶ್ಮಿಕಾ ಜೊತೆ ಮದುವೆಯಾದ ಬೆನ್ನಲ್ಲೇ ಕೀರ್ತಿ ಸುರೇಶ್ ಜೊತೆ ರೊಮಾನ್ಸ್‌ಗೆ ರೆಡಿಯಾದ ವಿಜಯ್ ದೇವರಕೊಂಡ!
Recommended image2
'ಸಪೋರ್ಟಿಂಗ್ ಆಕ್ಟರ್' ಪಟ್ಟಕ್ಕೆ ದಿವ್ಯಾ ದತ್ತಾ ಗರಂ: 'ನಾನು ಯಾರಿಗೂ ಸಪೋರ್ಟ್ ಮಾಡಲು ಬಂದಿಲ್ಲ' ಎಂದ ನಟಿ!
Recommended image3
ಡಿಪ್ಪಿ ಯಾವಾಗ್ಲೂ ಎಡಭಾಗಕ್ಕೆ ತಿರುಗಿ ಪೋಸ್ ಕೊಡಲು ಕಾರಣ ರಿವೀಲ್
Related Stories
Recommended image1
ನಯನತಾರಾ ಮಾಡಿದ ಅದೊಂದು ಸಣ್ಣ ತಪ್ಪು, ಅನುಷ್ಕಾ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿತು!
Recommended image2
ಎಡಿಟಿಂಗ್ ರೂಮ್‌ನಲ್ಲೇ ಗೊತ್ತಾಯ್ತು: ಪ್ರಭಾಸ್ ಸಿನಿಮಾದ ಬಗ್ಗೆ ಆ ನಿರ್ಮಾಪಕ ಹೀಗಾ ಹೇಳೋದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved