ನಿಮ್ಮ ಹೃದಯದ ಆರೋಗ್ಯ ಹೇಗಿದೆ? ಮನೆಯಲ್ಲಿಯೇ ಐದು ನಿಮಿಷದ ಈ ಸಿಂಪಲ್ ಟೆಸ್ಟ್ ಮಾಡಿ ನೋಡಿ
ಇತ್ತೀಚೆಗೆ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಕಳವಳದ ನಡುವೆ, ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಹೃದಯದ ಆರೋಗ್ಯವನ್ನು ಪರೀಕ್ಷಿಸಿಕೊಳ್ಳುವ 5 ಸರಳ ವಿಧಾನಗಳನ್ನು ಡಾ. ವಿನಯ್ ವಿವರಿಸಿದ್ದಾರೆ. ಮನೆಯಲ್ಲಿ ಈ ಸುಲಭದ ಪರೀಕ್ಷೆ ಮಾಡುವಂತಹ ಈ ಸುಲಭ ಟೆಸ್ಟ್‌ಗಳಿಂದ ಹೃದಯದ ಸ್ಥಿತಿ ಅರಿಯಬಹುದು.

ಹೃದಯ ಚೆನ್ನಾಗಿದ್ಯಾ?
ಹೃದಯಾಘಾತ, ಹೃದಯ ಸ್ತಂಭನ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿ ಬಿಟ್ಟಿದೆ. ಐದು ನಿಮಿಷಗಳ ಹಿಂದೆ ಚೆನ್ನಾಗಿ ಮಾತನಾಡುತ್ತಾ, ಖುಷಿಯಿದ್ದ ಇದ್ದವರು ಸತ್ತರು ಎನ್ನುವ ಸುದ್ದಿ ದಿನ ಬೆಳಗಾದರೆ ಬರುತ್ತಿದೆ. ಅದರಲ್ಲಿಯೂ ಯುವಕರಲ್ಲಿಯೇ ಈ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಪ್ರತಿಯೊಬ್ಬರಿಗೂ ಆಸ್ಪತ್ರೆಗೆ ಹೋಗಿ ನಮ್ಮ ಹೃದಯ ಚೆನ್ನಾಗಿದೆಯೇ ಎಂದು ಪರೀಕ್ಷೆ ಮಾಡಿಕೊಳ್ಳಲು ಮುಜುಗರ, ಕೆಲವರಿಗೆ ಆರೋಗ್ಯ ನೋಡಿಕೊಳ್ಳಲು ಟೈಮೂ ಇರಲ್ಲ. ಹಾಗಿದ್ದರೆ, ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಸಿಂಪಲ್ ಟಿಪ್ಸ್ ಬಗ್ಗೆ ಡಾ. ವಿನಯ್ ಅವರು ಹೇಳಿದ್ದಾರೆ. ಐದು ಟೆಸ್ಟ್ನಲ್ಲಿ ಐದೂ ಮಾಡಿದರೆ ಸೂಪರ್, ಮೂರು ಅಥವಾ ನಾಲ್ಕು ಮಾಡಿದರೆ ಆರೋಗ್ಯ ಸುಧಾರಿಸಬೇಕು. 1-2 ಬಂದರೆ ಕೂಡಲೇ ವ್ಯಾಯಾಮ ಶುರು ಮಾಡಿ. ಜೀರೋ ಬಂದರೆ, ಕೂಡಲೇ ವೈದ್ಯರ ಬಳಿ ಹೋಗಬೇಕು ಎಂದು ಡಾ.ವಿನಯ್ ಜೆ. ಹೇಳಿದ್ದಾರೆ.
ಒಂದೇ ಕಾಲಿನ ಮೇಲೆ ನಿಂತುಕೊಳ್ಳಿ
ಒಂದೇ ಕಾಲಿನ ಮೇಲೆ ನಿಂತುಕೊಳ್ಳಿ. 10 ಸೆಕೆಂಡ್ಗಿಂತ ಹೆಚ್ಚು ನಿಂತುಕೊಳ್ಳಲು ಸಾಧ್ಯವಾಯಿತು ಎಂದರೆ ನಿಮ್ಮ ಹೃದಯ ಆರೋಗ್ಯವಾಗಿದೆ. ಇಲ್ಲದಿದ್ದರೆ ನೀವು ಡೇಂಜರ್ ಜೋನ್ನಲ್ಲಿ ಇದ್ದೀರಿ ಎಂದರ್ಥ.
ಈಸಿಯಾಗಿ ಎದ್ದರೆ
ಕೆಳಗಡೆ ಕುಳಿತುಕೊಂಡಾಗ ಕೈಯನ್ನು ನೆಲದ ಮೇಲೆ ಊರದೇ, ಯಾವ ಸಹಾಯವನ್ನೂ ಪಡೆಯದೇ ನೀವು ಏಳಲು ಶಕ್ಯರಾಗಿದ್ದೀರಿ ಎಂದರೆ ನೀವು ಆರೋಗ್ಯವಂತರು ಎಂದು.
ಕೈ ಮುಟ್ಟಿದರೆ
ಇನ್ನು ಕೆಳಗಡೆ ಕುಳಿತು, ಕಾಲನ್ನು ಉದ್ದಕ್ಕೆ ಚಾಚಿ ನಿಮ್ಮ ಕೈಗಳನ್ನು ಕಾಲಿನ ಹೆಬ್ಬೆರಳಿಗೆ ಶ್ರಮ ಪಡದೇ ಟಚ್ ಮಾಡುತ್ತೀರಿ ಎಂದಾದರೆ ನೀವು ಆರೋಗ್ಯವಂತರು ಎಂದು. ಇಲ್ಲದಿದ್ದರೆ ನಿಮ್ಮ ರಕ್ತನಾಳಗಳು ಗಟ್ಟಿಯಾಗಿವೆ ಎಂದು ಅರ್ಥ
ನಾಡಿ ಬಡಿತದ ಟೆಸ್ಟ್
ಎದ್ದ ತಕ್ಷಣ ನಾಡಿ ಬಡಿತವನ್ನು ನೋಡಿಕೊಳ್ಳಿ. 60ಕ್ಕಿಂತ ಕಡಿಮೆ ಬಡಿತವಿದ್ದರೆ ನಿಮ್ಮ ಹೃದಯ ಸೂಪರ್ ಆಗಿದೆ ಎಂದರ್ಥ. 100ರ ಮೇಲೆ ಇದ್ದರೆ ಹಾರ್ಟ್ ರಿಸ್ಕ್ ಹೆಚ್ಚಾಗಿದೆ ಎಂದರ್ಥ
ಮಹಡಿ ಏರುವ ಪರೀಕ್ಷೆ
ನಾಲ್ಕರಿಂದ ಐದು ಮಹಡಿಯನ್ನು 45 ಸೆಕೆಂಡ್ನಿಂದ ಒಂದು ನಿಮಿಷದಲ್ಲಿ ಮುಗಿಸಿದರೆ ಹಾರ್ಟ್ ಚೆನ್ನಾಗಿದೆ ಎಂದು ಅರ್ಥ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

