ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು, ಕಟಿಹಾರ್ ಜಂಕ್ಷನ್‌ನಲ್ಲಿ ಟಿಕೆಟ್ ರಹಿತ ಜನರ ಗುಂಪಿನಿಂದ ತಪ್ಪಿಸಿಕೊಳ್ಳಲು ಶೌಚಾಲಯದಲ್ಲಿ ಲಾಕ್ ಆಗಿದ್ದರು. ರೈಲ್ವೆ ಸಹಾಯವಾಣಿಗೆ ಕರೆ ಮಾಡಿದ ನಂತರ RPF ಸಿಬ್ಬಂದಿ ಅವರನ್ನು ರಕ್ಷಿಸಿದರು. ಘಟನೆಯ ವಿಡಿಯೋ ವೈರಲ್ ಆಗಿದೆ.
- Home
- News
- India News
- India Latest News Live: ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ - 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
India Latest News Live: ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ - 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಮುಂದುವರಿದಿದ್ದು, ಗುರುವಾರ 38 ಪೈಸೆ ಕುಸಿತವಾಗಿ 90.32 ರು.ಗೆ ತಲುಪಿದೆ. ಇದು ರುಪಾಯಿ ಮೌಲ್ಯದ ಸಾರ್ವಕಾಲಿಕ ಕನಿಷ್ಠ ಮೊತ್ತವಾಗಿದೆ. ಬುಧವಾರ, ರುಪಾಯಿ ಮೌಲ್ಯವು 7 ಪೈಸೆ ಕುಸಿತ ಕಂಡು 89.94ಕ್ಕೆ ತಲುಪಿತ್ತು.
India Latest News Liveಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ - 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
India Latest News Liveದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್ ಫಿಕ್ಸಿಂಗ್, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಭ್ರಷ್ಟಾಚಾರ ಆರೋಪದ ಮೇಲೆ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ನಾಲ್ವರು ಆಟಗಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ಎಸಿಎಸ್‌ಯು) ಈ ಬಗ್ಗೆ ತನಿಖೆ ಆರಂಭಿಸಿದೆ.
India Latest News Liveಗ್ರಾಹಕರಿಗೆ ಬಂಪರ್ ಪ್ಲ್ಯಾನ್ ಘೋಷಿಸಿದ Vi - 61 ರೂಪಾಯಿಯ ಮೊಬೈಲ್ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್!
ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ಒಂದು ಅದ್ಭುತ ಉಡುಗೊರೆಯನ್ನು ನೀಡಿದೆ. ಕಂಪನಿಯು ಮೂರು ಹೊಸ ಡೇಟಾ ಪ್ಲ್ಯಾನ್ ಪ್ರಾರಂಭಿಸಿದೆ, ಅದರೊಂದಿಗೆ ಕಂಪನಿಯು ಉಚಿತ ಫೋನ್ ವಿಮೆಯನ್ನು ಒದಗಿಸುತ್ತದೆ.
India Latest News Liveಆಧಾರ್ ಲಿಂಕ್ ಕಮಾಲ್, ಒಂದೇ ವರ್ಷದಲ್ಲಿ 3 ಕೋಟಿ ಫೇಕ್ IRCTC ಅಕೌಂಟ್ ಬಂದ್ ಮಾಡಿದ ಭಾರತೀಯ ರೈಲ್ವೇ!
ಈ ವರ್ಷ ರೈಲ್ವೆ 3.02 ಕೋಟಿ ನಕಲಿ IRCTC ಖಾತೆಗಳನ್ನು ಬಂದ್ ಮಾಡಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಹೇಳಿದ್ದಾರೆ. ತತ್ಕಾಲ್ ಟಿಕೆಟ್‌ಗಳ ಬ್ಲ್ಯಾಕ್ ಮಾರ್ಕೆಟಿಂಗ್ ತಡೆಯಲು OTP ಅನ್ನು ಪರಿಚಯಿಸಲಾಯಿತು ಎಂದಿದ್ದಾರೆ.
India Latest News Liveಚಳಿಗಾಲಕ್ಕಾಗಿಯೇ ವಿಶೇಷ ಬ್ರೇಕ್‌ಫಾಸ್ಟ್ ರೆಸಿಪಿ ತಿಳಿಸಿದ ಬಾಬಾ ರಾಮ್‌ದೇವ್, ಇದರಿಂದ ಇದೆ ಸಾಕಷ್ಟು ಪ್ರಯೋಜನ!
Ramdev Baba Winter Snack: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸುವುದು ಮುಖ್ಯ. ಈಗ ರಾಮದೇವ್ ಬಾಬಾ ಚಳಿಗಾಲಕ್ಕಾಗಿ ವಿಶೇಷ ಬ್ರೇಕ್‌ಫಾಸ್ಟ್ ರೆಸಿಪಿ ಸಿದ್ಧಪಡಿಸಿದ್ದಾರೆ.
India Latest News Liveಕೇವಲ 1% ಜನರ ಕೈಯಲ್ಲಿ ಭಾರತದ 40% ಸಂಪತ್ತು, ವಿಶ್ವ ಅಸಮಾನತೆ ವರದಿ 2026 ರ ಭಯಾನಕ ಚಿತ್ರ!
World Inequality Report 2026: ವಿಶ್ವ ಅಸಮಾನತೆ ವರದಿ 2026 ರ ಪ್ರಕಾರ, ಭಾರತವು ತೀವ್ರ ಆದಾಯ ಅಸಮಾನತೆಯನ್ನು ಎದುರಿಸುತ್ತಿದೆ. ದೇಶದ ಕೇವಲ 1% ಶ್ರೀಮಂತರು ಒಟ್ಟು ಸಂಪತ್ತಿನ 40% ಭಾಗವನ್ನು ಹೊಂದಿದ್ದರೆ, ಆದಾಯ, ಸಂಪತ್ತು ಮತ್ತು ಲಿಂಗ ಅಸಮಾನತೆಗಳು ಆಳವಾಗಿ ಬೇರೂರಿವೆ ಎಂದು ವರದಿ ಬಹಿರಂಗಪಡಿಸಿದೆ.
India Latest News Liveಕೇಂದ್ರದಿಂದ MNREGA ಹೆಸರು ಬದಲಾವಣೆ, ಹೊಸ ನಿಯಮಗಳು ಜಾರಿ, ಕೆಲಸದ ಅವಧಿ, ಕನಿಷ್ಟ ವೇತನ ಹೆಚ್ಚಳ!
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MNREGA) 'ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆ' ಎಂದು ಮರುನಾಮಕರಣ ಮಾಡಿದೆ. ಈ ಬದಲಾವಣೆಯೊಂದಿಗೆ, ಕೆಲಸದ ದಿನಗಳನ್ನು 100 ರಿಂದ 125 ಕ್ಕೆ ಹೆಚ್ಚಿಸಲಾಗಿದ್ದು, ಕನಿಷ್ಠ ವೇತನವನ್ನು ದಿನಕ್ಕೆ ₹240 ಕ್ಕೆ ಪರಿಷ್ಕರಣೆ.
India Latest News Liveದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್, ಲಾಹೋರ್‌ನಲ್ಲಿ ಸಂಸ್ಕೃತ ಶ್ಲೋಕ, ಪ್ರಮುಖವಾಗಿ ಮಹಾಭಾರತ, ಭಗವವದ್ಗೀತೆ ಶ್ಲೋಕಗಳು ಮೊಳಗಲಿದೆ.ಈ ಮೂಲಕ ಪಾಕಿಸ್ತಾನ ಐತಿಹಾಸಿಕ ಹೆಜ್ಜೆ ಇಟ್ಟಿದೆ.
India Latest News Liveಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?
ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?, ಮೆಟ್ರೋ ಪ್ರಯಾಣಿಕರ ಪ್ರಯಾಣ ಮತ್ತಷ್ಟು ಸುಲಭಗೊಂಡಿದೆ. ಯುಪಿಐ ಮೂಲಕ ಸುಲಭವಾಗಿ ಪಾವತಿ ಮಾಡಿ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ?
India Latest News LiveActress Assault Case - ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಿಸಿದ ಕೇರಳ ಕೋರ್ಟ್
ಮಲಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ಎರ್ನಾಕುಲಂ ನ್ಯಾಯಾಲಯವು ಆರು ಅಪರಾಧಿಗಳಿಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಪ್ರಮುಖ ಆರೋಪಿ ಪಲ್ಸರ್ ಸುನಿಗೆ ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ.
India Latest News Liveಎರಡು ಹಂತಗಳಲ್ಲಿ ನಡೆಯಲಿದೆ ಜನಗಣತಿ, 11,718 ಕೋಟಿ ಮೀಸಲಿಟ್ಟ ಸರ್ಕಾರ; ಇದೇ ಮೊದಲ ಬಾರಿಗೆ ಡಿಜಿಟಲ್ ಮೂಲಕ ಗಣತಿ!
Union Cabinet Press Briefing Live: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಸಚಿವ ಸಂಪುಟ ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ಇವುಗಳಲ್ಲಿ ಒಂದು ಜನಗಣತಿಗೆ ಸಂಬಂಧಿಸಿದೆ.
India Latest News Liveದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಬಸ್ ಅಪಘಾತ, ಕಂದಕಕ್ಕೆ ಉರುಳಿ 9 ಸಾವು
ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಬಸ್ ಅಪಘಾತ, ಕಂದಕಕ್ಕೆ ಉರುಳಿ 9 ಸಾವು, ಇನ್ನುಳಿದ 28 ಮಂದಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಘಾಟಿ ರಸ್ತೆಯಲ್ಲಿ ನಡೆದ ಆ ಅಪಘಾತಕ್ಕೆ ಕಾರಣವೇನು?
India Latest News LiveT20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?
ಮುಲ್ಲನ್‌ಪುರ: ದಕ್ಷಿಣ ಆಫ್ರಿಕಾ ಎದುರಿನ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 100 ಸಿಕ್ಸರ್ ಸಿಡಿಸಿದ ಎಲೈಟ್ ಬ್ಯಾಟರ್‌ಗಳ ಕ್ಲಬ್ ಸೇರಿದ್ದಾರೆ. ಬನ್ನಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಭಾರತೀಯ ಬ್ಯಾಟರ್ ಯಾರು ನೋಡೋಣ.
India Latest News Liveಜನ್ಮ ದಿನದಲ್ಲಿ ಒಮ್ಮೆಯಾದ್ರೂ ಸಂಖ್ಯೆ 1 ಇದ್ಯಾ? ಹಾಗಿದ್ದರೆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ- ಎಷ್ಟು ಬಾರಿ ಇದ್ದರೆ ಏನು ಫಲ?
ಸಂಖ್ಯಾಶಾಸ್ತ್ರದ ಪ್ರಕಾರ, ಜನ್ಮ ದಿನಾಂಕದಲ್ಲಿ ಸಂಖ್ಯೆ 1ರ ಪುನರಾವರ್ತನೆಯು ವ್ಯಕ್ತಿಯ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಈ ಲೇಖನವು ನಿಮ್ಮ ಜನ್ಮ ದಿನಾಂಕದಲ್ಲಿ ಒಂದು, ಎರಡು, ಅಥವಾ ಮೂರು ಬಾರಿ ಸಂಖ್ಯೆ 1 ಬಂದರೆ ಅದರ ಅರ್ಥ, ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳನ್ನು ವಿವರಿಸುತ್ತದೆ.
India Latest News Liveಅತಿಹೆಚ್ಚು ಮದ್ಯಪಾನ ಮಾಡುವ ಜಗತ್ತಿನ ಸೈನ್ಯ ಯಾವುದು? ಭಾರತದ ಸೇನೆಗೆ ಎಷ್ಟನೇ ಸ್ಥಾನ?
Heavy Alcohol Drinker Army: ಜಗತ್ತಿನ ಅನೇಕ ಸೈನ್ಯಗಳಲ್ಲಿ ಮದ್ಯಪಾನಕ್ಕೆ ಅನುಮತಿ ಇದೆ. ಕೆಲಸದ ನಂತರ, ವಿಶೇಷವಾಗಿ ರಾತ್ರಿಯಲ್ಲಿ, ವಾರದ ಕೊನೆಯಲ್ಲಿ, ಸಮಾರಂಭದಲ್ಲಿ, ಮದ್ಯವನ್ನು ಸೇವಿಸುತ್ತಾರೆ. ಜಗತ್ತಿನಲ್ಲಿಯೇ ಅತಿಹೆಚ್ಚು ಮದ್ಯಪಾನ ಮಾಡುವ ಸೇನೆ ಯಾವುದು ಅನ್ನೋದರ ವಿವರ ಇಲ್ಲಿದೆ.
India Latest News Liveಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್ , ಡಿಸೆಂಬರ್ 12ರಂದು ಬೆಳ್ಳಿ ಬೆಲೆ ಐತಿಹಾಸಿಕ ಗಡಿ ದಾಟಿದೆ. ಇಂದು ಬೆಳ್ಳಿ ಬೆಲೆ ಎಷ್ಟಾಗಿದೆ. ದುಬಾರಿ ಬೆಲೆಯಿಂದ ಹೂಡಿಕೆಯಲ್ಲಿ ಇದೆಯಾ ಆತಂಕ?
India Latest News Liveಧುರಂಧರ್ ಸಿನಿಮಾ ನೋಡಿ ಪಾಕಿಸ್ತಾನಕ್ಕೆ ಸಾಲ ನಿರಾಕರಿಸಿತ್ತಾ ವಿಶ್ವಬ್ಯಾಂಕ್ - ಏನಿದು ಅಸಲಿ ಕತೆ?
ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್' ಸಿನಿಮಾ ತಂಡದ ವಿರುದ್ಧ ಪಾಕಿಸ್ತಾನ ಮಾನನಷ್ಟ ಮೊಕದ್ದಮೆ ಹೂಡಿದೆ. ಚಿತ್ರದಲ್ಲಿ ಪಾಕಿಸ್ತಾನವನ್ನು ಶ್ರೀಮಂತ ದೇಶವೆಂದು ಬಿಂಬಿಸಿದ್ದರಿಂದ ವಿಶ್ವಬ್ಯಾಂಕ್ ಸಾಲ ನಿರಾಕರಿಸಿದೆ ಎಂಬ ಸುದ್ದಿಯೊಂದು ವೈರಲ್ ಆಗ್ತಿದ್ದು, ಈ ಸುದ್ದಿಯ ಅಸಲಿಯತ್ತು ಇಲ್ಲಿದೆ.
India Latest News Liveಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
ಮುಲ್ಲಾನ್‌ಪುರ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 51 ರನ್ ಅಂತರದ ಭರ್ಜರಿ ಜಯ ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಇದರ ನಡುವೆ ಪಾಂಡ್ಯ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
India Latest News Liveವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ - ವೀಡಿಯೋ
ಆಸ್ಟ್ರೇಲಿಯಾದಲ್ಲಿ ಸ್ಕೈಡೈವಿಂಗ್ ಮಾಡುವಾಗ, ಓರ್ವ ಸ್ಕೈಡೈವರ್‌ನ ಪ್ಯಾರಾಚೂಟ್ ವಿಮಾನದ ಬಾಲಕ್ಕೆ ಸಿಲುಕಿಕೊಂಡು ಆತ ಆಗಸದಲ್ಲಿ ನೇತಾಡಿದ್ದು, ಆತ ಕೊನೆಗೂ ಪವಾಡದಂತೆ ಪಾರಾಗಿದ್ದು, ಆ ಘಟನೆಯ ರೋಚಕ ವೀಡಿಯೋ ಇಲ್ಲಿದೆ.