ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್' ಸಿನಿಮಾ ತಂಡದ ವಿರುದ್ಧ ಪಾಕಿಸ್ತಾನ ಮಾನನಷ್ಟ ಮೊಕದ್ದಮೆ ಹೂಡಿದೆ. ಚಿತ್ರದಲ್ಲಿ ಪಾಕಿಸ್ತಾನವನ್ನು ಶ್ರೀಮಂತ ದೇಶವೆಂದು ಬಿಂಬಿಸಿದ್ದರಿಂದ ವಿಶ್ವಬ್ಯಾಂಕ್ ಸಾಲ ನಿರಾಕರಿಸಿದೆ ಎಂಬ ಸುದ್ದಿಯೊಂದು ವೈರಲ್ ಆಗ್ತಿದ್ದು, ಈ ಸುದ್ದಿಯ ಅಸಲಿಯತ್ತು ಇಲ್ಲಿದೆ.
ಥಿಯೇಟರ್‌ನಲ್ಲಿ ಕಮಲ್ ಮಾಡಿ ಕೋಟ್ಯಾಂತರ ರೂಪಾಯಿ ಗಳಿಕೆ ಮಾಡಿರುವ ಆದಿತ್ಯ ಧಾರ್ ಅವರ ಧುರಂಧರ್ ಸಿನಿಮಾದ ವಿರುದ್ಧ ಪಾಕಿಸ್ತಾನವೂ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದೆಯೇ? ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಆದಿತ್ಯ ಧಾರ್ ಅವರ ನಿರ್ದೇಶನದ ಧುರಂಧರ್ ಸಿನಿಮಾದ ನಂತರ ಆದಿತ್ಯ ಧಾರ್ ಅವರ ವಿರುದ್ಧ ಪಾಕಿಸ್ಥಾನವೂ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ಒಂದು ವರದಿ.
ಧರುಂಧರ್ ಸಿನಿಮಾವೂ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿರುವಂತಹ ಬಾಲಿವುಡ್‌ನ ಇತ್ತೀಚೆಗಷ್ಟೇ ಬಿಡುಗಡೆಯಾದ ಸಿನಿಮಾವಾಗಿದೆ. ಈ ಸಿನಿಮಾ ಭಾರತೀಯ ಗೂಢಾಚಾರಿಯೊಬ್ಬನ ಕತೆಯನ್ನು ಆಧರಿಸಿದೆ. ಅಕ್ರಮವಾಗಿ ಪಾಕಿಸ್ಥಾನದ ಒಳ ನುಸುಳಿ ಅಲ್ಲಿನ ಮಾಫಿಯಾ ಹಾಗೂ ರಾಜಕೀಯದ ರಹಸ್ಯಗಳನ್ನು ಹೊರಗೆ ಹಾಕುವ ಭಾರತೀಯ ಸ್ಪೈ ಓರ್ವನ ಕತೆಯನ್ನು ಈ ಸಿನಿಮಾ ಆಧರಿಸಿದೆ. ಕರಾಚಿಯನ್ನೇ ಕೇಂದ್ರವಾಗಿರಿಸಿಕೊಂಡು ಹೆಣೆದ ಈ ಸಿನಿಮಾದಲ್ಲಿ ಗೂಢಚಾರನ ಪಾತ್ರವನ್ನು ರಣವೀರ್ ಸಿಂಗ್ ನಿರ್ವಹಿಸಿದರೆ, ಅವರು ಮೊದಲು ಸ್ನೇಹ ಬೆಳೆಸಿದ ಹಾಗೂ ನಂತರ ದ್ರೋಹ ಮಾಡಿದ ಪಾಕಿಸ್ತಾನಿ ಗ್ಯಾಂಗ್ ನಾಯಕ ರೆಹಮಾನ್ ದಕೈತ್ ಪಾತ್ರವನ್ನು ಅಕ್ಷಯ್ ಖನ್ನಾ ಅವರು ಮಾಡಿದ್ದಾರೆ. ವಿಶೇಷವಾಗಿ ಸಿನಿಮಾದ ಹೆಚ್ಚಿನ ಪಾತ್ರಗಳು ಹಾಗೂ ನಿಜವಾದ ಜನರು ಹಾಗೂ ನೈಜ ಘಟನೆಯನ್ನು ಆಧರಿಸಿರುವುದರಿಂದ ಈ ಸಿನಿಮಾದ ಕತೆಗೂ ಪಾಕಿಸ್ತಾನಕ್ಕೂ ಬಹಳ ಗಾಢವಾದ ಸಂಬಂಧವಿದೆ.
ಇದನ್ನು ಓದಿ: ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ
ಹೀಗಾಗಿ ಪಾಕಿಸ್ತಾನಕ್ಕೆ ಈ ಸಿನಿಮಾದ ಮೇಲೆ ನ್ಯಾಯಯುತ ಪಾಲಿದೆ ಎಂಬುದು ಕೆಲವರ ವ್ಯಂಗ್ಯ ಅಭಿಪ್ರಾಯವಾಗಿದೆ. ಆದರೆ ಈ ಎಲ್ಲಾ ನಾಟಕಗಳ ನಡುವೆ, ಪಾಕಿಸ್ತಾನ ನಿಜವಾಗಿಯೂ ಚಿತ್ರ ತಂಡದ ಮೇಲೆ ಮೊಕದ್ದಮೆ ಹೂಡಿದೆಯೇ? ಖಂಡಿತ ಇಲ್ಲ, ಆದರೆ ಒಂದು ತಮಾಷೆಯ ವಿಡಂಬನಾತ್ಮಕ ವೀಡಿಯೊವೊಂದನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅದರ ಪ್ರಕಾರ, ಪಾಕಿಸ್ತಾನವು ಆದಿತ್ಯ ಧರ್ ಅವರ ಧುರಂಧರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದೆ. ಏಕೆಂದರೆ ಈ ಸಿನಿಮಾವೂ ಪಾಕಿಸ್ತಾನವನ್ನು ಶ್ರೀಮಂತ ದೇಶದಂತೆ ಬಿಂಬಿಸಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ವಿಶ್ವಬ್ಯಾಂಕ್‌ನ ದಾರಿ ತಪ್ಪಿಸುವಷ್ಟು, ಸಿನಿಮಾದಲ್ಲಿರುವ ಪಾಕಿಸ್ತಾನದ ಶ್ರೀಮಂತಿಕೆ ನೋಡಿ ವಿಶ್ವಬ್ಯಾಂಕ್ ಅಂತಿಮವಾಗಿ ಪಾಕಿಸ್ತಾನಕ್ಕೆ ಸಾಲ ನೀಡಲು ನಿರಾಕರಿಸಿದೆಯಂತೆ.
ಇದನ್ನು ಓದಿ: ಇಂಡಿಗೋ ಅವಾಂತರದ ಬಳಿಕ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಫೋಟೋ ಭಾರಿ ವೈರಲ್
@the_fauxy ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ತಮಾಷೆಯ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಈ ವೀಡಿಯೋದಲ್ಲಿ ಪಾಕಿಸ್ತಾನದಲ್ಲಿ ಕೇವಲ ಹೋಂಡಾ ಸಿಡಿ 700 ಬೈಕ್‌ಗಳು ಚಾಲನೆಯಲ್ಲಿರುವಾಗ ಈ ಸಿನಿಮಾದಲ್ಲಿ ಕ್ರೂಸಿ ಸ್ಟೈಲ್ ಬೈಕ್‌ಗಳನ್ನು ಪಾಕಿಸ್ತಾನದಲ್ಲಿ ಬಳಸಲಾಗುತ್ತಿದೆ ಎಂದು ತೋರಿಸಲಾಗಿದೆ. ವೀಡಿಯೋವನ್ನು ಸಂಪೂರ್ಣವಾಗಿ ಮನೋರಂಜನೆಗಾಗಿ ಮಾಡಲಾಗಿದ್ದರು. ನೆಟ್ಟಿಗರು ಮಾತ್ರ ಅದೂ ನಿಜ ಎಂಬಂತೆ ಕಾಮೆಂಟ್ ಮಾಡಿದ್ದಾರೆ. ಧರುಂಧರ್ ಸಿನಿಮಾದಲ್ಲಿ ಪಾಕಿಸ್ತಾನವನ್ನು ಶ್ರೀಮಂತವಾಗಿ ತೋರಿಸಿ ವಿಶ್ವಬ್ಯಾಂಕ್‌ನಿಂದ ಸಾಲ ಸಿಗದಂತೆ ಮಾಡಿದ್ದರಿಂದ ಸಿನಿಮಾದ ವಿರುದ್ಧ ಪಾಕಿಸ್ತಾನವೂ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ಬರೆದು ವೀಡಿಯೋವನ್ನು ಪೋಸ್ಟ್ ಮಾಡಲಾಗಿತ್ತು. ಈ ವೀಡಿಯೋ ನೋಡಿದ ಜನ ಹಲವು ಕಾಮೆಂಟ್ ಮಾಡಿದ್ದಾರೆ.


