ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?, ಮೆಟ್ರೋ ಪ್ರಯಾಣಿಕರ ಪ್ರಯಾಣ ಮತ್ತಷ್ಟು ಸುಲಭಗೊಂಡಿದೆ. ಯುಪಿಐ ಮೂಲಕ ಸುಲಭವಾಗಿ ಪಾವತಿ ಮಾಡಿ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ?

ಬೆಂಗಳೂರು (ಡಿ.12) ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ. ಮೆಟ್ರೋ ಟಿಕೆಟ್ ಬುಕಿಂಗ್ ಆಯ್ಕೆ ಮತ್ತಷ್ಟು ವಿಸ್ತಾರಗೊಂಡಿದೆ. ಇದೀಗ ಕ್ಯಾಬ್ ಬುಕಿಂಗ್ ಆ್ಯಪ್ ಉಬರ್‌ನಲ್ಲೂ ನಮ್ಮ ಮೆಟ್ರೋ ಟಿಕೆಟ್ ಬುಕಿಂಗ್ ಮಾಡಲು ಸಾಧ್ಯವಿದೆ. ಹೊಸ ಫೀಚರ್ ಇದೀಗ ಉಬರ್ ಆ್ಯಪ್ ಹೊರತಂದಿದೆ. ಹೌದು ಉಬರ್ ಇದೀಗ ನಮ್ಮ ಮೆಟ್ರೋ ಟಿಕೆಟ್ ಬುಕಿಂಗ್ ಅವಕಾಶ ನೀಡಿದೆ. ಓಪನ್ ನೆಟ್‍‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ( ONDC)ಸಹಯೋಗದೊಂದಿಗೆ ಉಬರ್ ಕ್ಯೂಆರ್ ಕೋಡ್ ಆಧಾರಿತ ನಮ್ಮ ಮೆಟ್ರೋ ಟಿಕೆಟ್ ಸೇವೆ ಆರಂಭಿಸಿದೆ. ಯುಪಿಐ ಪಾವತಿ ಮೂಲಕ ಸುಲಭವಾಗಿ ಟಿಕೆಟ್ ಬುಕಿಂಗ್ ಅವಕಾಶ ನೀಡಿದೆ.

ಸೇವ ವಿಸ್ತರಿಸಿದ ಉಬರ್

ಬ್ಯೂಸಿನೆಸ್ ಟು ಬ್ಯೂಸಿನೆಸ್ ಲಾಜಿಸ್ಟಿಕ್ ಆರಂಭಿಸಿರುವ ಉಬರ್, ಬೆಂಗಳೂರಿನಲ್ಲಿ ಉಬರ್ ಡೈರೆಕ್ಟ್ ಮೂಲಕ ತನ್ನ ಸೇವೆ ವಿಸ್ತರಿಸುತ್ತಿದೆ. ವಿಶೇ ಅಂದರೆ ಉಬರ್ ತನ್ನ ಆ್ಯಪ್ ಮೂಲಕ ಮೆಟ್ರೋದ ರಿಯಲ್ ಟೈಮ್ ಅಪ್‌ಡೇಟ್ ನೀಡಲಿದೆ. ಉಬರ್ ಆ್ಯಪ್ ಮೂಲಕ ಮೆಟ್ರೋ ಆಯ್ಕೆ ಮಾಡಿಕೊಂಡು ಟಿಕೆಟ್ ಬುಕಿಂಗ್ ಮಾಡಲು ಸಾಧ್ಯವಿದೆ.

ಬುಕಿಂಗ್ ಮಾಡುವುದು ಹೇಗೆ?

ದೆಹಲಿ,ಮುಂಬೈ, ಚೆನ್ನೈ ನಗರಗಳಲ್ಲಿ ಈ ರೀತಿ ಉಬರ್ ಮೂಲಕ ಮೆಟ್ರೋ ಟಿಕೆಟ್ ಬುಕಿಂಗ್ ಸೌಲಭ್ಯ ನೀಡಲಾಗಿದೆ. ಈ ಯಶಸ್ಸಿನ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಉಬರ್ ಆ್ಯಪ್ ಮೂಲಕ ಮೆಟ್ರೋ ಟಿಕೆಟ್ ಬುಕಿಂಗ್ ಮಾಡಲು ಸೌಲಭ್ಯ ನೀಡಲಾಗಿದೆ. ಉಬರ್ ಆ್ಯಪ್ ಮೂಲಕ ಗ್ರಾಹಕರು ಕ್ಯೂಆರ್ ಕೋಡ್ ಟಿಕೆಟ್ ಖರೀದಿಸಬೇಕು. ಪ್ರಯಾಣಿಕನ ಹೊರಡುವ ನಿಲ್ದಾಣ ಹಾಗೂ ಉದ್ದೇಶಿತ ಪ್ರಯಾಣದ ನಿಲ್ದಾಣ ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಎಷ್ಟು ಮಂದಿ ಪ್ರಯಾಣಿಸುತ್ತದ್ದೀರಿ ಅನ್ನೋದು ನಮೂದಿಸಬೇಕು. ಇದಾದ ಬಳಿಕ ಮಾಹಿತಿಗಳನ್ನು ಖಚಿತಪಡಿಸಿಕೊಂಡು ಯುಪಿಐ ಮೂಲಕ ಪಾವತಿ ಮಾಡಬೇಕು. ಈ ವೇಳೆ ಕ್ಯೂಆರ್ ಕೋಡ್ ಟಿಕೆಟ್ ಲಭ್ಯವಾಗಲಿದೆ. ಈ ಕ್ಯೂರ್‌ಆರ್ ಕೋಡ್ ಟಿಕೆಟ್‌ನ್ನು ನಿರ್ಗಮಿಸುವ ಮೆಟ್ರೋ ನಿಲ್ದಾಣದ ಎಂಟ್ರಿ ಬಳಿ ಸ್ಕ್ಯಾನ್ ಮಾಡಿ ಒಳ ಪ್ರವೇಶಿಸಬೇಕು. ಬಳಿಕ ಇಳಿಯುವ ನಿಲ್ದಾಣದಲ್ಲಿ ಸ್ಕ್ಯಾನ್ ಮಾಡಿ ನಿಲ್ದಾಣದಿಂದ ಹೊರಬರಬೇಕು.

ಟಿಕೆಟ್‌ಗಾಗಿ ಕಾಯಬೇಕಿಲ್ಲ

ನಮ್ಮ ಮೆಟ್ರೋ ಟಿಕೆಟ್‌ಗೆ ಕಾಯಬೇಕಿಲ್ಲ. ಮೆಟ್ರೋದಲ್ಲೂ ಡಿಜಿಟಲ್ ಮೂಲಕ ಕ್ಯೂಆರ್ ಕೋಡ್ ಟಿಕೆಟ್ ಖರೀದಿಸಲು ಸಾಧ್ಯವಿದೆ. ಮೆಟ್ರೋ ಕಾರ್ಡ್ ಅಥವಾ ವ್ಯಾಟ್ಸಾಪ್ ಮೂಲಕವೂ ನಮ್ಮ ಮೆಟ್ರೋ ಟಿಕೆಟ್ ಖರೀದಿಸಲು ಸಾಧ್ಯವಿದೆ. ಮೆಟ್ರೋ ಡಿಜಿಟಲೈಸೇಶನ್‌ನಿಂದ ಮೆಟ್ರೋ ಕೇಂದ್ರಗಳಲ್ಲಿ ಟಿಕೆಟ್‌ಗಾಗಿ ಕಾಯಬೇಕಿಲ್ಲ. ಇದರಿಂದ ಜನಸಂದಣಿ ಹೆಚ್ಚಿದ್ದರು ಅಡೆ ತಡೆ ಇಲ್ಲದೆ ಪ್ರಯಾಣ ಮಾಡಬಹುದು.