10:07 PM (IST) Jul 11

India Latest News Live 11 July 2026S Janaki - ಗಂಡಿನ ಧ್ವನಿಯಲ್ಲಿ ಹಾಡಿ ದೇಶವನ್ನೇ ಬೆರಗುಗೊಳಿಸಿದ್ದ ಎಸ್. ಜಾನಕಿ - ಯಾವುದು ಆ ಹಾಡು!

ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಗಂಡಸರ ಧ್ವನಿಯನ್ನೂ ಅನುಕರಿಸಿ ಹಾಡಬಲ್ಲ ಅದ್ಭುತ ಪ್ರತಿಭೆ ಅವರದಾಗಿತ್ತು. ಎಸ್. ಜಾನಕಿಯಮ್ಮ ತಮ್ಮ ವೃತ್ತಿಜೀವನದಲ್ಲಿ ಮಾಡಿದ ವಿಶಿಷ್ಟ ಪ್ರಯೋಗವೆಂದರೆ 'ಗಂಡು ಧ್ವನಿ'ಯಲ್ಲಿ ಹಾಡಿದ್ದು.

Read Full Story
09:21 PM (IST) Jul 11

India Latest News Live 11 July 2026Ramayana - ಕಾಮಿಕ್ ಕಾನ್‌ನಲ್ಲಿ 'ರಾಮಾಯಣ'.. ಭಾರತ್ ಮಂಟಪದಲ್ಲಿ ಯಶ್-ರಣಬೀರ್ ಒಟ್ಟಿಗೇ ಸಿಗ್ತಾರೆ!

ಹಾಲಿವುಡ್ ಸಿನಿಮಾಗಳೇ ಹೆಚ್ಚಾಗಿ ರಾರಾಜಿಸುವ ಕಾಮಿಕ್ ಕಾನ್ (Comic Con) ವೇದಿಕೆಗೆ ಈ ಹಿಂದೆ ಪ್ರಭಾಸ್ ನಟನೆಯ' ಕಲ್ಕಿ 2898 ಎಡಿ' ಸಿನಿಮಾ ಎಂಟ್ರಿ ಕೊಟ್ಟಿತ್ತು. ಈಗ ರಾಮಾಯಣ ಸಿನಿಮಾ ಪ್ರವೇಶಿಸಿದೆ. ಸುಮಾರು 4,800 ಜನರು ಕುಳಿತುಕೊಳ್ಳಬಹುದಾದ ಬೃಹತ್ ಸಭಾಂಗಣದಲ್ಲಿ ಈ ಚಿತ್ರದ ಝಲಕ್ ಅನಾವರಣಗೊಳ್ಳಲಿದೆ.

Read Full Story
08:39 PM (IST) Jul 11

India Latest News Live 11 July 2026ಮಗನ ಅಗಲಿಕೆಯ ದುಃಖದಲ್ಲೇ ಕಣ್ಣು ಮುಚ್ಚಿದ ಗಾನಕೋಗಿಲೆ!; 88ರ ಇಳಿವಯಸ್ಸಲ್ಲಿ ಜಾನಕಿ ಅವರನ್ನು ಕುಗ್ಗಿಸಿತ್ತು ಏಕೈಕ ಪುತ್ರನ ಸಾವು!

ಗಾನಕೋಗಿಲೆ ಎಸ್. ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇದಕ್ಕೂ ಕೆಲವೇ ತಿಂಗಳುಗಳ ಹಿಂದೆ ತಮ್ಮ ಏಕೈಕ ಪುತ್ರ ಮುರಳಿ ಕೃಷ್ಣ ಅವರನ್ನು ಕಳೆದುಕೊಂಡಿದ್ದ ಅವರು, ಮಗನ ಸಾವಿನ ದುಃಖದಲ್ಲೇ ಕೊನೆಯುಸಿರೆಳೆದರು.

Read Full Story
08:32 PM (IST) Jul 11

India Latest News Live 11 July 2026S Janaki - ಭಾರತದ ಗಾನ ಕೋಗಿಲೆ ಎಸ್ ಜಾನಕಿ ವಿಧಿವಶ; ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಕನ್ನಡದ ನಂಟು ಮರೆಯಾಯ್ತು!

ದಿವಂಗತ ಮೇರುಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಯೋಜಕ ಇಳಯರಾಜ ಅವರೊಂದಿಗೆ ಎಸ್ ಜಾನಕಿ ಅವರಿಗೆ ಆತ್ಮೀಯ ಒಡನಾಟವತ್ತು. ಜೊತೆಗೆ ಉಳಿದ ಹಿರಿಯ ಹಾಗೂ ಕಿರಿಯ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕರು, ನಟನಟಿಯರು ಕಲಾವಿದರು ಸೇರಿದಂತೆ ಚಿತ್ರರಂಗದ ಬಹಳಷ್ಟು ಜನರ ಜೊತೆ ಎಸ್ ಜಾನಕಿಯವರ ಸಂಬಂಧ ಆಪ್ತವಾಗಿತ್ತು.

Read Full Story
07:19 PM (IST) Jul 11

India Latest News Live 11 July 2026ಪತ್ನಿಗೆ ಬಿಕಿನಿ ಧರಿಸೋ ಆಸೆ ಆಯ್ತೆಂದು 500 ಕೋಟಿಗೆ ಪೂರ್ತಿ ದ್ವೀಪವನ್ನೇ ಖರೀದಿಸಿದ ಉದ್ಯಮಿ

ದುಬೈನ ಶ್ರೀಮಂತ ಶೇಖ್ ಒಬ್ಬರು, ತಮ್ಮ ಪತ್ನಿ ಬಿಕಿನಿ ಧರಿಸುವ ಸರಳ ಆಸೆಯನ್ನು ಪೂರೈಸಲು ಸುಮಾರು 7 ಬಿಲಿಯನ್ ರೂಪಾಯಿ ಖರ್ಚು ಮಾಡಿ ಇಡೀ ಖಾಸಗಿ ದ್ವೀಪವನ್ನೇ ಖರೀದಿಸಿದ್ದಾರೆ. ಈ ದ್ವೀಪದಲ್ಲಿ ಎಲ್ಲಾ ಐಷಾರಾಮಿ ಸೌಲಭ್ಯಗಳನ್ನು ನಿರ್ಮಿಸಿ, ಅದನ್ನು ತಮ್ಮ ವೈಯಕ್ತಿಕ ಸಾಮ್ರಾಜ್ಯವನ್ನಾಗಿ ಮಾಡಿಕೊಂಡಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
Read Full Story
07:06 PM (IST) Jul 11

India Latest News Live 11 July 2026Karuru Stampede Victims - ಕರೂರು ಕಾಲ್ತುಳಿದ ರಹಸ್ಯ ಬಿಚ್ಚಿಟ್ಟ ವಿಜಯ್; 'ಕೊಲೆಗಾರರಿಗೆ ಕ್ಷಮೆಯಿಲ್ಲ' ಎಂದು ಗುಡುಗಿದ ದಳಪತಿ!

ವಿರೋಧಿಗಳು ಯಾವ ಮಣ್ಣಿನಲ್ಲಿ ದಳಪತಿ ಕಥೆ ಮುಗಿಯಿತು ಅಂದುಕೊಂಡಿದ್ದರೋ, ಅದೇ ಮಣ್ಣಿನಿಂದ ವಿಜಯ್ ತಮ್ಮ ರಾಜಕೀಯ ಸಾಮ್ರಾಜ್ಯದ ನೈಜ ವಿಸ್ತರಣೆಯನ್ನು ಆರಂಭಿಸಿದ್ದಾರೆ. ಇದು ಕೇವಲ ನೌಕರಿ ಕೊಡುವ ಕಾರ್ಯಕ್ರಮವಲ್ಲ, ಮುಂಬರುವ ತಮಿಳುನಾಡು ರಾಜಕೀಯ ಸಮರಕ್ಕೆ ದಳಪತಿ ವಿಜಯ್ ಇಟ್ಟಿರುವ ಅತ್ಯಂತ ಚಾಣಾಕ್ಷ ನಡೆ ಅಂತಿದ್ದಾರೆ ರಾಜಕೀಯ ಪಂಡಿತರು..!

Read Full Story
06:48 PM (IST) Jul 11

India Latest News Live 11 July 2026ಬೆಂಗಳೂರಾದ ಸೌಥಾಂಪ್ಟನ್, ಅಂತಿಮ ಟಿ20 ಪಂದ್ಯಕ್ಕೆ ಮೈದಾನಕ್ಕೆ ಬರದ ಟೀಂ ಇಂಡಿಯಾದಿಂದ ಟಾಸ್ ವಿಳಂಬ

ಸೌತ್ ಆಫ್ರಿಕಾದ ಸೌಥಾಂಪ್ಟನ್ ಬೆಂಗಳೂರಾಗಿದೆ. ವೈಟ್ ವಾಶ್ ಭೀತಿಯಲ್ಲಿರುವ ಟೀಂ ಇಂಡಿಯಾ ಟಾಸ್ ಸಮಯವಾದರೂ ಮೈದಾನಕ್ಕೆ ಬಂದಿಲ್ಲ. ಪರಿಣಾಮ ಟಾಸ್ ವಿಳಂಬವಾಗಿದೆ. ಅಷ್ಟಕ್ಕೂ ಇತಿಹಾಸದಲ್ಲೇ ಮೊದಲ ಬಾರಿಗೆ ನಾಯಕ ಬರದೆ ಟಾಸ್ ವಿಳಂಬವಾಗಿದ್ದು ಯಾಕೆ?

Read Full Story
06:42 PM (IST) Jul 11

India Latest News Live 11 July 2026ತಿರುಪತಿಯಲ್ಲಿ ಈ ಬಾರಿ ‘ಅವಳಿ ಬ್ರಹ್ಮೋತ್ಸವ’ ವೈಭವ; ಭಕ್ತರಿಗಾಗಿ ಅತ್ಯಂತ ಮಹತ್ವದ ನಿರ್ಧಾರ ಮಾಡಿದ ಟಿಟಿಡಿ

ಈ ವರ್ಷ ಅಧಿಕ ಮಾಸದ ಕಾರಣ ತಿರುಮಲದಲ್ಲಿ 2 ಬ್ರಹ್ಮೋತ್ಸವ ನಡೆಯಲಿವೆ. ಈ ಹಿನ್ನೆಲೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಲಕ್ಷಾಂತರ ಭಕ್ತರ ದಟ್ಟಣೆ ನಿರ್ವಹಿಸಲು ಬೃಹತ್ ಯೋಜನೆಯನ್ನು ರೂಪಿಸಿದ್ದು, ಸಾಮಾನ್ಯ ಭಕ್ತರಿಗೆ ಅನುಕೂಲವಾಗುವಂತೆ ಬಹುತೇಕ ಎಲ್ಲಾ ವಿಶೇಷ ದರ್ಶನಗಳನ್ನು ರದ್ದುಗೊಳಿಸಿದೆ.

Read Full Story
06:34 PM (IST) Jul 11

India Latest News Live 11 July 2026ಟೀಂ ಇಂಡಿಯಾದಲ್ಲಿ ಬಿಗಡಾಯಿಸಿದ ಸಮಸ್ಯೆ, ಗಂಭೀರ್ ಬಳಗದ ಸಹಾಯಕ ಕೋಚ್ ಶೀಘ್ರದಲ್ಲೇ ರಾಜೀನಾಮೆ

ಸತತ ಸರಣಿ ಸೋಲಿನಿಂದ ಟೀಂ ಇಂಡಿಯಾದಲ್ಲಿ ಸಮಸ್ಯೆ ತೀವ್ರಗೊಂಡಿದೆ. ಗೌತಮ್ ಗಂಭೀರ್ ಪಾಳಯದ ಕೆಲ ಸಹಾಯಕ ಕೋಚ್‌ಗಳು ರಾಜೀನಾಮೆಗೆ ಸಜ್ಜಾಗಿದ್ದಾರೆ. ಇತ್ತ ಐಪಿಎಲ್ ತಂಡದ ಜೊತೆಗೆ ಮಾತುಕತೆಯೂ ನಡೆಸಿದ್ದಾರೆ.

Read Full Story
06:21 PM (IST) Jul 11

India Latest News Live 11 July 2026ಬೆಚ್ಚಿಬೀಳಿಸಿತು 6 ಕೊಲೆ - ಕೋರ್ಟ್​ ಜಾಮೀನು ಕೊಟ್ಟ ಖುಷಿಯಲ್ಲಿ ಸಂತ್ರಸ್ತೆಯ ಕುಟುಂಬ ನಾಶ ಮಾಡಿದ ಪಾಪಿ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ, ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಯು ಸೇಡು ತೀರಿಸಿಕೊಳ್ಳಲು ತನ್ನ ಕುಟುಂಬದ ಮೂವರು ಮತ್ತು ಸಂತ್ರಸ್ತ ಬಾಲಕಿಯ ಕುಟುಂಬದ ಮೂವರು ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆಯು ಕಾನೂನು ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story
05:28 PM (IST) Jul 11

India Latest News Live 11 July 2026ಭಾರತಕ್ಕೆ ಬಂದ ಅನ್ಯಗ್ರಹ ಜೀವಿ? ಚಂದ್ರಲೋಕದಿಂದ ಬಂದವನಂತೆ ಈತ! 3 ವರ್ಷ ಭೂಮಿ ಮೇಲೆ ಇದ್ದವ ಏನಂದ

ಉತ್ತರ ಪ್ರದೇಶದ ವೃಂದಾವನದಲ್ಲಿ ವ್ಯಕ್ತಿಯೊಬ್ಬ ತಾನು ಚಂದ್ರನಿಂದ ಬಂದವನು ಎಂದು ಹೇಳಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಕಳೆದ ಮೂರು ವರ್ಷಗಳಿಂದ ಭೂಮಿಯ ಮೇಲೆ ವಾಸಿಸುತ್ತಿದ್ದು, ಜನರ ಮನಸ್ಸನ್ನು ಓದುವ ಶಕ್ತಿ ತನಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಭೂಮಿಯ ಮೇಲೆ ಯಾವುದೂ ಸರಿಯಿಲ್ಲ ಎಂದು ಹೇಳಿ, ತಾನು ಚಂದ್ರಲೋಕಕ್ಕೆ ವಾಪಸ್ ಹೋಗುವುದಾಗಿ ತಿಳಿಸಿದ್ದಾನೆ.
Read Full Story
05:13 PM (IST) Jul 11

India Latest News Live 11 July 2026ಮತ್ತೆ ಮತ್ತೆ ಅದೇ ತಪ್ಪು ಮಾಡ್ತಿದ್ದಾರೆ ವೈಭವ್ ಸೂರ್ಯವಂಶಿ! ಈ 3 ತಪ್ಪು ತಿದ್ದಿಕೊಳ್ಳದಿದ್ರೆ, ಟೀಂ ಇಂಡಿಯಾದಿಂದ ಗೇಟ್‌ಪಾಸ್ ಗ್ಯಾರಂಟಿ!

ಬೆಂಗಳೂರು: 15 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಹೊಸ ಇತಿಹಾಸವನ್ನೇ ಸೃಷ್ಟಿಸಿರುವ ಬಿಹಾರ ಮೂಲದ ವೈಭವ್ ಸೂರ್ಯವಂಶಿ, ಮೊದಲ ಮೂರು ಟಿ20 ಪಂದ್ಯಗಳಲ್ಲಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.

Read Full Story
05:07 PM (IST) Jul 11

India Latest News Live 11 July 2026ಹೊಸ ಹೆಂಡ್ತಿ ಜೊತೆ ಹಳೆ ಹೆಂಡ್ತಿನೂ ಕರ್ಕೊಂಡು 100 ಕೋಟಿ ಬಂಗ್ಲೆಗೆ 'ಬೆಂಗಳೂರು ಅಳಿಯ' ಆಮೀರ್​ ಶಿಫ್ಟ್​

ನಟ ಆಮೀರ್ ಖಾನ್ ಬೆಂಗಳೂರಿನ ಗೌರಿ ಸ್ಪ್ರಾಟ್ ಅವರನ್ನು ಮೂರನೇ ಮದುವೆಯಾಗುವ ಮೂಲಕ ಬೆಂಗಳೂರು ಅಳಿಯಾಗಿದ್ದಾರೆ. ಈ ದಂಪತಿ ಮುಂಬೈನಲ್ಲಿ 100 ಕೋಟಿ ಮೌಲ್ಯದ ಹೊಸ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಗೊಳ್ಳಲು ಸಿದ್ಧರಾಗಿದ್ದು, ಕುತೂಹಲ ಎಂದರೆ ಮಾಜಿ ಪತ್ನಿ ಕಿರಣ್ ರಾವ್ ಕೂಡ ಅದೇ ಕಟ್ಟಡದಲ್ಲಿ ವಾಸಿಸಲಿದ್ದಾರೆ.

Read Full Story
04:35 PM (IST) Jul 11

India Latest News Live 11 July 2026ವಿಯೆಟ್ನಾಂನಲ್ಲಿ ಭಾರತೀಯ ಪ್ರವಾಸಿಗರಿದ್ದ ಬೋಟ್ ಮಗುಚಿ ದುರಂತ, 36 ಮಂದಿ ಪೈಕಿ 15 ಸಾವು

ವಿಯೆಟ್ನಾಂನಲ್ಲಿ ಬೋಟ್ ದುರಂತ ಸಂಭವಿಸಿದೆ. ಐಸ್‌ಲ್ಯಾಂಡ್‌ನಲ್ಲಿ ಸಂಭವಿಸಿದ ಬೋಟ್ ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ವಿಯೆಟ್ನಾಂ ಭಾರತೀಯ ರಾಯಭಾರ ಕಚೇರಿ ಕಂಟ್ರೋಲ್ ರೂಂ ತೆರೆದಿದೆ.

Read Full Story
04:25 PM (IST) Jul 11

India Latest News Live 11 July 202616ನೇ ವಯಸ್ಸಿಗೆ ಎಲ್ಲರ ಮನವೊಲಿಸಿ ಶಾಲೆ ಬಿಟ್ಟ ಬಾಲಕಿ, ಇಂದು 7 ಸಾವಿರ ರೂ.ಕೋಟಿ ಒಡತಿ

15ನೇ ವಯಸ್ಸಿಗೆ ಶಾಲೆ ಬಿಟ್ಟ ಉತ್ತರ ಪ್ರದೇಶದ ಹರ್ಷಿತಾ ಅರೋರಾ, ಕೋಡಿಂಗ್ ಮೇಲಿನ ಆಸಕ್ತಿಯಿಂದ ಕ್ರಿಪ್ಟೋ ಆ್ಯಪ್ ರಚಿಸಿದರು. ನಂತರ 'AtoB' ಎಂಬ ಸ್ಟಾರ್ಟ್ಅಪ್ ಸ್ಥಾಪಿಸಿ, ಅಮೆರಿಕದ ಟ್ರಕ್ಕಿಂಗ್ ಉದ್ಯಮಕ್ಕೆ ಸೇವೆ ನೀಡುವ ಮೂಲಕ ತಮ್ಮ ಕಂಪನಿಯನ್ನು 7,600 ಕೋಟಿ ರೂ. ಮೌಲ್ಯಕ್ಕೆ ಬೆಳೆಸಿದ್ದಾರೆ.
Read Full Story
03:53 PM (IST) Jul 11

India Latest News Live 11 July 2026ಅನ್ಯಗ್ರಹ ಜೀವಿಗಳ UFO ಚಲನೆ ರಹಸ್ಯ ವಿಡಿಯೋ, ದಾಖಲೆ ಬಿಡುಗಡೆ ಮಾಡಿದ ಅಮೆರಿಕ ರಕ್ಷಣಾ ಇಲಾಖೆ

ಅನ್ಯಗ್ರಹ ಜೀವಿಗಳ ಕುರಿತು ಕುತೂಹಲಕ್ಕೆ ಇದೀಗ ಡಬಲ್ ಆಗಿದೆ. ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ಕಚೇರಿ ಮಹತ್ವದ ರಹಸ್ಯ ಫೈಲ್ಸ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಯುಎಫ್ಒ ವೇಗವಾಗಿ ಚಲಿಸುತ್ತಿರುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.

Read Full Story
03:50 PM (IST) Jul 11

India Latest News Live 11 July 2026ನಿಮ್ಮ ಫೋನ್ ಕಳೆದು ಹೋಗಿದೆಯಾ? ಚಿಂತೆ ಬೇಡ Google Mapsನ ಈ ಸಿಂಪಲ್ ಟ್ರಿಕ್ಸ್ ನಿಮಗೆ ಗೊತ್ತಿದ್ರೆ ಸುಲಭವಾಗಿ ಪತ್ತೆ ಹಚ್ಚಬಹುದು

ಈಗಿನ ಕಾಲದಲ್ಲಿ ಮೊಬೈಲ್ ಫೋನ್ ನಮ್ಮ ದೇಹದ ಒಂದು ಭಾಗವೇ ಆಗಿಬಿಟ್ಟಿದೆ. ಅಂತಹ ಫೋನ್ ಕಳೆದುಹೋದರೆ ಸಿಕ್ಕಾಪಟ್ಟೆ ತೊಂದರೆಯಾಗುತ್ತದೆ, ಕೆಲವರಿಗಂತೂ ವಿಪರೀತ ಆತಂಕ ಶುರುವಾಗುತ್ತೆ. ಹಾಗಾದ್ರೆ, ಕಳೆದುಹೋದ ಫೋನನ್ನು ಗೂಗಲ್ ಮ್ಯಾಪ್ ಬಳಸಿ ಹೇಗೆ ಪತ್ತೆ ಮಾಡೋದು ಅಂತಾ ಇಲ್ಲಿ ನೋಡೋಣ.

Read Full Story
03:25 PM (IST) Jul 11

India Latest News Live 11 July 2026ಈ ಚಿತ್ರದಲ್ಲಿರುವ ಒಂದು ತಪ್ಪನ್ನ ಪತ್ತೆ ಹಚ್ಚಿ.. ಶೇಕಡಾ 99 ಜನ ಫೇಲ್..!

ವೈರಲ್ ಆಗಿರುವ ಈ ಚಿತ್ರದಲ್ಲಿನ ತಪ್ಪನ್ನು ಹುಡುಕಲು ನೆಟ್ಟಿಗರು ಪರದಾಡುತ್ತಿದ್ದಾರೆ. 1 ರಿಂದ 10 ರವರೆಗಿನ ಅಂಕಿಗಳತ್ತ ಎಲ್ಲರ ಗಮನ ಹರಿಯುತ್ತದೆ, ಆದರೆ ನಿಜವಾದ ತಪ್ಪು ಬೇರೆಲ್ಲೋ ಅಡಗಿದೆ. ಈ ಪಜಲ್ ನಿಮ್ಮ ಮೆದುಳು ಮತ್ತು ಕಣ್ಣಿನ ಶಕ್ತಿಯನ್ನು ಪರೀಕ್ಷಿಸುತ್ತದೆ.
Read Full Story
03:07 PM (IST) Jul 11

India Latest News Live 11 July 2026Dhanush Politics - 'ರಾಜಕೀಯಕ್ಕೆ ಧನುಷ್ ಎಂಟ್ರಿ' ಸುದ್ದಿ ಬೆನ್ನಲ್ಲೇ ನಟನ ಭಾರೀ ಆಸ್ತಿ, ಅರಮನೆಯಂತಹ ಮನೆಯ ಸುದ್ದಿ ವೈರಲ್!

ಧನುಷ್ ಅವರು ಕಟ್ಟಿರುವ ಈ ಬೃಹತ್ ಸಾಮ್ರಾಜ್ಯದ ಹಿಂದೆ ಅವರ ಕಠಿಣ ಪರಿಶ್ರಮವಿದೆ. ಪ್ರತಿ ಸಿನಿಮಾಗೆ ಅವರು 20 ರಿಂದ 35 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲದೆ, ತಿಂಗಳಿಗೆ ಸುಮಾರು 3 ಕೋಟಿ ರೂಪಾಯಿಗಳಿಗೂ ಅಧಿಕವಾದ ಇತರ ಮೂಲಗಳ ಆದಾಯ ಇವರಿಗಿದೆ.

Read Full Story
02:08 PM (IST) Jul 11

India Latest News Live 11 July 2026ಮುದ್ದಾದ ಕಂದಮ್ಮನ ಬಲಿ ಪಡೆದ ಅನಸ್ತೇಶಿಯಾ; ವೈದ್ಯರ ಯಡವಟ್ಟಿಗೆ ಭುಗಿಲೆದ್ದ ಆಕ್ರೋಶ

ವೈದ್ಯರ ಯಡವಟ್ಟಿಗೆ ಮುದ್ದಾದ ಕಂದಮ್ಮನ ಬಲಿಯಾಗಿದೆ. ಆಸ್ಪತ್ರೆ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿದ್ದು, ಭಾರೀ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ. 

Read Full Story