MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Dhanush Politics: 'ರಾಜಕೀಯಕ್ಕೆ ಧನುಷ್ ಎಂಟ್ರಿ' ಸುದ್ದಿ ಬೆನ್ನಲ್ಲೇ ನಟನ ಭಾರೀ ಆಸ್ತಿ, ಅರಮನೆಯಂತಹ ಮನೆಯ ಸುದ್ದಿ ವೈರಲ್!

Dhanush Politics: 'ರಾಜಕೀಯಕ್ಕೆ ಧನುಷ್ ಎಂಟ್ರಿ' ಸುದ್ದಿ ಬೆನ್ನಲ್ಲೇ ನಟನ ಭಾರೀ ಆಸ್ತಿ, ಅರಮನೆಯಂತಹ ಮನೆಯ ಸುದ್ದಿ ವೈರಲ್!

ಧನುಷ್ ಅವರು ಕಟ್ಟಿರುವ ಈ ಬೃಹತ್ ಸಾಮ್ರಾಜ್ಯದ ಹಿಂದೆ ಅವರ ಕಠಿಣ ಪರಿಶ್ರಮವಿದೆ. ಪ್ರತಿ ಸಿನಿಮಾಗೆ ಅವರು 20 ರಿಂದ 35 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲದೆ, ತಿಂಗಳಿಗೆ ಸುಮಾರು 3 ಕೋಟಿ ರೂಪಾಯಿಗಳಿಗೂ ಅಧಿಕವಾದ ಇತರ ಮೂಲಗಳ ಆದಾಯ ಇವರಿಗಿದೆ.

2 Min read
Author : Shriram Bhat
Published : Jul 11 2026, 03:07 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : X

ಚೆನ್ನೈನ 150 ಕೋಟಿ ಅರಮನೆ, 230 ಕೋಟಿಯ ಸಾಮ್ರಾಜ್ಯ! ತಮಿಳು ಸ್ಟಾರ್ ನಟ ಧನುಷ್ ಐಶ್ವರ್ಯದ ಅಸಲಿ ಕಥೆ!

ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಆದ ಮ್ಯಾನರಿಸಂ ಮತ್ತು ಅದ್ಭುತ ನಟನೆಯ ಮೂಲಕ 'ಸ್ಟಾರ್ ನಟ' ಎನಿಸಿಕೊಂಡವರು ಧನುಷ್. ಕೇವಲ ತಮಿಳು ಚಿತ್ರರಂಗಕ್ಕೆ ಸೀಮಿತವಾಗದ ಈ ನಟ (Dhanush), ಬಾಲಿವುಡ್ ದಾಟಿ ಈಗ ಹಾಲಿವುಡ್‌ನಲ್ಲೂ ತನ್ನ ಛಾಪು ಮೂಡಿಸಿದ್ದಾರೆ. ಸದಾ ಸಿಂಪಲ್‌ ಆಗಿ ಕಾಣಿಸಿಕೊಳ್ಳುವ ಈ ನಟನ ಆಸ್ತಿ ಎಷ್ಟಿರಬಹುದು ಎಂಬ ಕುತೂಹಲ ಬಹಳಷ್ಟು ಜನರಿಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಧನುಷ್ ಅವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 230 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : X

230 ಕೋಟಿಯ ಒಡೆಯ: ಸಂಭಾವನೆ ಎಷ್ಟು ಗೊತ್ತಾ?

ಧನುಷ್ ಅವರು ಕಟ್ಟಿರುವ ಈ ಬೃಹತ್ ಸಾಮ್ರಾಜ್ಯದ ಹಿಂದೆ ಅವರ ಕಠಿಣ ಪರಿಶ್ರಮವಿದೆ. ಪ್ರತಿ ಸಿನಿಮಾಗೆ ಅವರು 20 ರಿಂದ 35 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲದೆ, ತಿಂಗಳಿಗೆ ಸುಮಾರು 3 ಕೋಟಿ ರೂಪಾಯಿಗಳಿಗೂ ಅಧಿಕವಾದ ಇತರ ಮೂಲಗಳ ಆದಾಯ ಇವರಿಗಿದೆ. ಜೊತೆಗೆ, ರಸ್ಸೋ ಬ್ರದರ್ಸ್ ನಿರ್ದೇಶನದ ಹಾಲಿವುಡ್ ಸಿನಿಮಾ 'ದಿ ಗ್ರೇ ಮ್ಯಾನ್' (The Gray Man) ನಲ್ಲಿ ನಟಿಸಿದ್ದಕ್ಕಾಗಿ ಧನುಷ್ ಅವರು 4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎಂಬ ಮಾಹಿತಿ ಇದೆ. 7Up ಮತ್ತು OLX ನಂತಹ ದೊಡ್ಡ ಬ್ರ್ಯಾಂಡ್‌ಗಳ ರಾಯಭಾರಿಯಾಗಿ ಕೂಡ ಅವರು ಕೋಟಿ ಕೋಟಿ ಗಳಿಸುತ್ತಿದ್ದಾರೆ. ಜೊತೆಗೆ, ಸಾಕಷ್ಟು ಲೋಕಲ್ ಹಾಗೂ ನ್ಯಾಷನಲ್ ಲೆವೆಲ್‌ ಜಾಹೀರಾತುಗಳ ಆದಾಯ ಕೂಡ ನಟ ಧನುಷ್ ಜೇಬಿಗೆ ಬೀಳುತ್ತಿದೆ.

Related Articles

Related image1
Shivarajkumar Birthday: ಶಿವರಾಜ್‌ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳ ಜೊತೆಗೆ ಸಂಭ್ರಮಾಚರಣೆಗೆ 'ದೊಡ್ಮನೆ ದೊರೆ' ಸಿದ್ಧತೆ!
Related image2
Yash-Kiara: ಯಶ್-ಕಿಯಾರ ಮೋಡಿ, ಇವರೇ ನಂಬರ್-01ಜೋಡಿ.. ಆ ಸ್ಟಾರ್ ನಟ ಹೇಳಿರೋ ಮಾತು ಈಗ ಟ್ರೆಂಡಿಂಗ್!
36
Image Credit : X

ಚೆನ್ನೈನಲ್ಲಿರುವ 150 ಕೋಟಿಯ ಐಷಾರಾಮಿ ಬಂಗಲೆ

ಧನುಷ್ ಅವರ ಆಸ್ತಿಯಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಚೆನ್ನೈನಲ್ಲಿ ಅವರು ನಿರ್ಮಿಸಿರುವ ಅರಮನೆಯಂತಹ ಮನೆ. ಸುಮಾರು 150 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮನೆ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಸದಾ ಸಿಂಪ್ಲಿಸಿಟಿಗೆ ಒತ್ತು ನೀಡುವ ಧನುಷ್, ತಮ್ಮ ವೈಯಕ್ತಿಕ ಜೀವನದಲ್ಲಿ ರಾಜವೈಭೋಗವನ್ನು ಅನುಭವಿಸುತ್ತಿದ್ದಾರೆ.

ಕಾರುಗಳ ಕ್ರೇಜ್: ಗ್ಯಾರೇಜ್‌ನಲ್ಲಿವೆ ದುಬಾರಿ ಗಾಡಿಗಳು!

ಧನುಷ್ ಅವರಿಗೆ ವೇಗದ ಮತ್ತು ಐಷಾರಾಮಿ ಕಾರುಗಳೆಂದರೆ ಪಂಚಪ್ರಾಣ. ಅವರ ಕಾರ್ ಕಲೆಕ್ಷನ್ ನೋಡಿದರೆ ಯಾರೂ ಕೂಡ ಬೆರಗಾಗುವುದು ಖಚಿತ. ಅವರ ಬಳಿ ಅತ್ಯಂತ ದುಬಾರಿ 'ರೋಲ್ಸ್ ರಾಯ್ಸ್ ಘೋಸ್ಟ್' (Rolls-Royce Ghost) ಕಾರಿದೆ. ಇದರ ಜೊತೆಗೆ ಬೆಂಟ್ಲಿ (Bentley), ಜಾಗ್ವಾರ್ (Jaguar) ಮತ್ತು ಆಡಿ (Audi) ನಂತಹ ಬ್ರ್ಯಾಂಡ್‌ಗಳ ಲಕ್ಸುರಿ ಕಾರುಗಳು ಅವರ ಗ್ಯಾರೇಜ್‌ನಲ್ಲಿ ಅಂದವಾಗಿ ಸಾಲುಗಟ್ಟಿ ನಿಂತಿವೆ. ಕಾರುಗಳ ಒಡೆತನದಲ್ಲಿ ಕೂಡ ನಟ ಧನುಷ್ ಭಾರೀ ಶ್ರೀಮಂತರು ಎನ್ನಬಹುದು.

46
Image Credit : Asianet News

19ನೇ ವಯಸ್ಸಿನಿಂದ ಶುರುವಾದ ಜೈತ್ರಯಾತ್ರೆ

ತಂದೆ ಕಸ್ತೂರಿ ರಾಜಾ ಅವರ ನಿರ್ದೇಶನದ ಸಿನಿಮಾ ಮೂಲಕ 19ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧನುಷ್, ಆರಂಭದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಆದರೆ ಇಂದು ಅವರು 2 ರಾಷ್ಟ್ರ ಪ್ರಶಸ್ತಿಗಳ ವಿಜೇತ ಮತ್ತು 50ಕ್ಕೂ ಹೆಚ್ಚು ಸಿನಿಮಾಗಳ ನಾಯಕ. ಬರೀ ನಟನಾಗಿ ಮಾತ್ರವಲ್ಲದೆ ಗಾಯಕ, ನಿರ್ದೇಶಕ, ಗೀತರಚನೆಕಾರ ಮತ್ತು ಯಶಸ್ವಿ ನಿರ್ಮಾಪಕರಾಗಿಯೂ ಧನುಷ್ ಗುರುತಿಸಿಕೊಂಡಿದ್ದಾರೆ.

56
Image Credit : Instagram

ವೈಯಕ್ತಿಕ ಬದುಕು ಮತ್ತು ಮುಂದಿನ ಸಿನಿಮಾಗಳು

ಧನುಷ್ 2004ರಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಪುತ್ರರಿದ್ದಾರೆ. ಆದರೆ ಸುದೀರ್ಘ ಸಂಸಾರಿಕ ಜೀವನದ ನಂತರ ಇತ್ತೀಚೆಗಷ್ಟೇ ಅವರು ವಿಚ್ಛೇದನ ಘೋಷಿಸಿ ಬೇರೆಯಾಗಿದ್ದಾರೆ. ಸದ್ಯ ಧನುಷ್ ಅವರ ಬಹುನಿರೀಕ್ಷಿತ ಚಿತ್ರ 'ಓಂ' (Om) ಅಕ್ಟೋಬರ್ 16, 2026 ರಂದು ಬಿಡುಗಡೆ ಆಗಲಿದೆ. ಜೊತೆಗೆ, ಅವರದೇ ನಿರ್ದೇಶನದ ಸಿನಿಮಾಗಳು ಕೂಡ ಸಾಲಾಗಿ ಬರುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲು ಧನುಷ್ ರೆಡಿಯಾಗಿದ್ದಾರೆ.

66
Image Credit : X

ಒಟ್ಟಿನಲ್ಲಿ, ಬಡಕಲು ದೇಹದ ಸಾಮಾನ್ಯ ಹುಡುಗನಂತೆ ಕಾಣುವ ಧನುಷ್, ಇಂದು ಭಾರತೀಯ ಚಿತ್ರರಂಗದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರಾಗಿ ಬೆಳೆದಿರುವುದು ನಿಜಕ್ಕೂ ಸ್ಫೂರ್ತಿದಾಯಕ! ಇತ್ತೀಚೆಗೆ ನಟ ಧನುಷ್ ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಹಬ್ಬಿದೆ. ತಮಿಳುನಾಡಿನಲ್ಲಿ ಸಿನಿಮಾ ನಟನಟಿಯರು ರಾಜಕೀಯಕ್ಕೆ ಬರುವ, ಮುಖ್ಯಮಂತ್ರಿಗಳಾಗುವ ಸಂಪ್ರದಾಯವೇ ಇದೆ. ಇದಕ್ಕೆ ಇತ್ತೀಚೆಗೆ ದಳಪತಿ ವಿಜಯ್ ಸಿಎಂ ಆಗಿರೋದೇ ಸಾಕ್ಷಿ. ಆದ್ದರಿಂದ ನಟ ಧನುಷ್ ಅವರು ರಾಜಕೀಯಕ್ಕೆ ಬಂದರೆ, ಮುಂದೊಂದು ದಿನ ತಮಿಳುನಾಡಿನ ಮುಖ್ಯಮಂತ್ರಿಯಾದರೆ ಅದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎನ್ನಬಹುದು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಧನುಷ್
ಮನರಂಜನಾ ಸುದ್ದಿ
ಕಾಲಿವುಡ್

Latest Videos
Recommended Stories
Recommended image1
ಬಡವರಿಗೆ ಮಕ್ಕಳಾದ್ರೆ ಬಡತನ ಹೆಚ್ಚುತ್ತೆ, ಶ್ರೀಮಂತರಿಗಾದ್ರೆ ಶ್ರೀಮಂತಿಕೆ ಹೆಚ್ಚು: Bharatpe ಫೌಂಡರ್‌ ಪತ್ನಿ
Recommended image2
Suriya Son Dev: ಅಪ್ಪನ ಸ್ಟಾರ್‌ ಗಿರಿ ಬಿಟ್ಟು, ವಿಜ್ಞಾನ ಲೋಕಕ್ಕೆ ಧುಮುಕಿದ ಮಗ ದೇವ್;‌ ಭಾಷಣಕ್ಕೆ ಎಲ್ರೂ ಬೆರಗು
Recommended image3
Yash-Kiara: ಯಶ್-ಕಿಯಾರ ಮೋಡಿ, ಇವರೇ ನಂಬರ್-01ಜೋಡಿ.. ಆ ಸ್ಟಾರ್ ನಟ ಹೇಳಿರೋ ಮಾತು ಈಗ ಟ್ರೆಂಡಿಂಗ್!
Related Stories
Recommended image1
Shivarajkumar Birthday: ಶಿವರಾಜ್‌ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳ ಜೊತೆಗೆ ಸಂಭ್ರಮಾಚರಣೆಗೆ 'ದೊಡ್ಮನೆ ದೊರೆ' ಸಿದ್ಧತೆ!
Recommended image2
Yash-Kiara: ಯಶ್-ಕಿಯಾರ ಮೋಡಿ, ಇವರೇ ನಂಬರ್-01ಜೋಡಿ.. ಆ ಸ್ಟಾರ್ ನಟ ಹೇಳಿರೋ ಮಾತು ಈಗ ಟ್ರೆಂಡಿಂಗ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved