ಇಂಗ್ಲೆಂಡ್ ಸೌಥಾಂಪ್ಟನ್ ಬೆಂಗಳೂರಾಗಿದೆ. ವೈಟ್ ವಾಶ್ ಭೀತಿಯಲ್ಲಿರುವ ಟೀಂ ಇಂಡಿಯಾ ಟಾಸ್ ಸಮಯವಾದರೂ ಮೈದಾನಕ್ಕೆ ಬಂದಿಲ್ಲ. ಪರಿಣಾಮ ಟಾಸ್ ವಿಳಂಬವಾಗಿದೆ. ಅಷ್ಟಕ್ಕೂ ನಾಯಕ ಬರದೆ ಟಾಸ್ ವಿಳಂಬವಾಗಿದ್ದು ಯಾಕೆ?

ಸೌಥಾಂಪ್ಟನ್ (ಜು.11) ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟಿ20 ಪಂದ್ಯದಲ್ಲಿ ಇದುವರೆಗೂ ನಡೆಯದ ಇತಿಹಾಸವೊಂದು ನಿರ್ಮಾಣವಾಗಿದೆ. ವೈಟ್ ವಾಶ್ ಭೀತಿಯಲ್ಲಿರುವ ಟೀಂ ಇಂಡಿಯಾ 5ನೇ ಟಿ20 ಪಂದ್ಯಕ್ಕಾಗಿ ಮೈದಾನಕ್ಕೆ ಹಾಜರಾಗಿಲ್ಲ. ಪರಿಣಾಮ ಟಾಸ್ ವಿಳಂಭವಾಗಿದೆ. ಹೌದು ಇಂಗ್ಲೆಂಡ್ ನಾಯಕ ಟಾಸ್‌ಗೆ ಕಾಯುತ್ತಿದ್ದರೆ, ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮಾತ್ರವಲ್ಲ, ಟೀಂ ಇಂಡಿಯಾದ ಯಾವುದೇ ಆಟಗಾರರು ಮೈದಾನಕ್ಕೆ ಆಗಮಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಸೌಥಾಂಪ್ಟನ್ ಟ್ರಾಫಿಕ್. ಬೆಂಗಳೂರಿನಂತಾದ ಸೌಥಾಂಪ್ಟನ್‌ನಲ್ಲಿನ ಟ್ರಾಫಿಕ್‌ನಲ್ಲಿ ಟೀಂ ಇಂಡಿಯಾ ಸಿಲುಕಿ ಕೊಂಡಿದೆ. ಹೀಗಾಗಿ ಟಾಸ್ ವಿಳಂಬವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಾಸ್ ಸಮಯ ಬದಲು

ಟ್ರಾಫಿಕ್‌ಲ್ಲಿ ಸಿಲುಕಿದ ಕಾರಣ ಟೀಂ ಇಂಡಿಯಾ ಮೈದಾನ ತಲುಪುದು ವಿಳಂಬವಾಗಿದೆ. ಹೀಗಾಗಿ ಟಾಸ್ ವಿಳಂಬವಾಗಿದೆ. ಸದ್ಯ ಟೀಂ ಇಂಡಿಯಾ ಮೈದಾನಕ್ಕೆ ತಲುಪಿದೆ. ಹೀಗಾಗಿ ಭಾರತೀಯ ಸಮಯದ ಪ್ರಕಾರ 7.15ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಯಾವುದೇ ಓವರ್ ಕಡಿತ ಇಲ್ಲ.

ಎರಡನೇ ಬಾರಿಗೆ ಟಾಸ್ ವಿಳಂಬ

ಟ್ರಾಫಿಕ್‌‌ನಲ್ಲಿ ಸಿಲುಕಿ ಟಾಸ್ ವಿಳಂಬವಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು. ಇದೀಗ ಎರಡನೇ ಬಾರಿಗೆ ಟ್ರಾಫಿಕ್ ಸಮಸ್ಯೆಯಿಂದ ಕ್ರಿಕೆಟ್ ಪಂದ್ಯದ ಟಾಸ್ ವಿಳಂಬವಾಗುತ್ತಿದೆ.

ಸೌತ್ ಬೆಂಗಳೂರಾದ ಸೌಥಾಂಪ್ಟನ್

ಇಂಗ್ಲೆಂಡ್‌ನ ಸೌಥಾಂಪ್ಟನ್ ಸೌತ್ ಬೆಂಗಳೂರಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 6 ಕಿಲೋಮೀಟರ್ ಪ್ರಯಾಣಕ್ಕೆ 1 ರಿಂದ ಒಂದೂವರೆ ಗಂಟೆ ತೆಗೆದುಕೊಂಡಿದೆ. ಭಾರಿ ಟ್ರಾಫಿಕ್ ನಡುವೆ ತಕ್ಕ ಸಮಯಕ್ಕೆ ಹೊಟೆಲ್‌ನಿಂದ ಮೈದಾನಕ್ಕೆ ತಲುಪಲು ಟೀಂ ಇಂಡಿಯಾಗೆ ಸಾಧ್ಯವಾಗಿಲ್ಲ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯ ಭಾರತ ಪಾಲಿಗೆ ಮುಖ್ಯವಾಗಿದೆ. ಮೂರು ಪಂದ್ಯ ಸೋತು ಸರಣಿ ಕೈಚೆಲ್ಲಿದೆ. ಇದೀಗ ಕೊನೆಯ ಪಂದ್ಯ ಗೆದ್ದು ವೈಟ್ ವಾಶ್ ಮುಖಭಂಗ ಅನುಭವಿಸುವುದು ತಪ್ಪಿಸಲು ಹೋರಾಟ ನಡೆಸಲಿದೆ. ಇನ್ನು ಇಂಗ್ಲೆಂಡ್ ಸರಣಿಗೂ ಮುನ್ನ ನಡೆದ ಐರ್ಲೆಂಡ್ ಸರಣಿಯಲ್ಲಿ ಭಾರತ 2 ಪಂದ್ಯ ಸೋತು ಸರಣಿ ಕೈಚೆಲ್ಲಿತ್ತು. ಟೀಂ ಇಂಡಿಯಾ ಸೋಲಿಗೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಕೊನೆಯ ಪಂದ್ಯದಲ್ಲಿ ಮಹತ್ತರ ಬದಲಾವಣೆ ಮಾಡುವ ಸಾಧ್ಯತೆ ಇದೆ.