ಹಾಲಿವುಡ್ ಸಿನಿಮಾಗಳೇ ಹೆಚ್ಚಾಗಿ ರಾರಾಜಿಸುವ ಕಾಮಿಕ್ ಕಾನ್ (Comic Con) ವೇದಿಕೆಗೆ ಈ ಹಿಂದೆ ಪ್ರಭಾಸ್ ನಟನೆಯ' ಕಲ್ಕಿ 2898 ಎಡಿ' ಸಿನಿಮಾ ಎಂಟ್ರಿ ಕೊಟ್ಟಿತ್ತು. ಈಗ ರಾಮಾಯಣ ಸಿನಿಮಾ ಪ್ರವೇಶಿಸಿದೆ. ಸುಮಾರು 4,800 ಜನರು ಕುಳಿತುಕೊಳ್ಳಬಹುದಾದ ಬೃಹತ್ ಸಭಾಂಗಣದಲ್ಲಿ ಈ ಚಿತ್ರದ ಝಲಕ್ ಅನಾವರಣಗೊಳ್ಳಲಿದೆ.
ಒಂದ್ ಕಡೆ ಟಾಕ್ಸಿಕ್ (Toxic) ಸಿನಿಮಾ ಗುಂಗು ಹೆಚ್ಚಾಗಿದೆ. ಯಶ್ (Yash) ರನ್ನ ವಿಶ್ವ ಸಿನಿಜಗತ್ತಿನ ಉಪ್ಪರಿಗೆ ಮೇಲೆ ಕೂರಿಸಲಾಗಿದೆ. ಇದೇ ಟೈಮ್ ಗೆ ರಾಮಾಯಣ ರಂಗು ರಾರಾಜಿಸೋಕೆ ಶುರುವಾಗಿದೆ. ರಾಮಾಯಣ ಸಿನಿಮಾದಲ್ಲಿ ಯಶ್ರಣಬೀರ್ ಕಪೂರ್ (Ranbir Kapoor) ಜುಗಲ್ಬಂದಿ ಹೇಗಿರುತ್ತೆ ಅನ್ನೋ ಕಾತರದ ಮಧ್ಯೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಮಾಯಣದ ಹೊಸದೊಂದು ಅಧ್ಯಾಯ ತೆರೆದುಕೊಳ್ತಿದೆ. ಈ ಬಗ್ಗೆ ನೋಡೋಣ ಬನ್ನಿ..
ಜಾಗತೀಕ ವೇದಿಕೆಯಲ್ಲಿ ‘ರಾಮಾಯಣ’ ಫಸ್ಟ್ ಲುಕ್..! ಒಂದೇ ದಿನ ಸಿಗುತ್ತಾರೆ ಯಶ್ - ರಣಬೀರ್
ನಟ ಯಶ್ಟಾಕ್ಸಿಕ್ನ ಹಬ್ಬ ಮಾಡೋದಕ್ಕೆ ಹಗಲು ರಾತ್ರಿ ಅಂತ ಕೆಲಸ ಮಾಡುತ್ತಿದ್ದಾರೆ. ಆದ್ರೆ ಇದರ ಮಧ್ಯೆ ಯಶ್ಗೆ ಅಂತರಾಷ್ಟ್ರೀಯ ವೇದಿಕೆಯೊಂದು ಕೈ ಬೀಸಿ ಕರೆಯುತ್ತಿದೆ. ಅದು ರಾಮಾಯಣ ಸಿನಿಮಾಕ್ಕಾಗಿ.. ಯಾಕಂದ್ರೆ ಜಾಗತೀಕ ವೇದಿಕೆ ಒಂದರಲ್ಲಿ ಯಶ್-ರಣಬೀರ್ ನಟನೆಯ ರಾಮಾಯಣ ಸಿನಿಮಾದ ಫಸ್ಟ್ ಲುಕ್ ಅನಾವರಣ ಆಗುತ್ತಿದೆ.
ರಾಮಾಯಣ.. ಈಗ ಭಾರತೀಯ ಚಿತ್ರರಂಗದಲ್ಲಿ ಸಖತ್ ಆಗಿ ಹಲ್ ಚೆಲ್ಎಬ್ಬಿಸೋ ಮತ್ತೊಂದು ಪಾರಾಯಣ ಇದು. ಪಾರಾಯಣ ಅಂದ್ರೆ ಏಕಾಗ್ರತೆ ಹೆಚ್ಚಿಸುವುದು ಅನ್ನೋ ಅರ್ಥ.. ಸೋ ರಾಮಾಯಣ ಸಿನಿಮಾದ ಏಕಾಗ್ರತೆಯಲ್ಲಿ ಈಗ ಸಿನಿ ಜಗತ್ತು ಮುಳುಗೋ ಟೈಮ್ ಬಂದಿದೆ. ಯಾಕಂದ್ರೆ ಈ ಸಿನಿಮಾದ ಫಸ್ಟ್ ಲುಕ್ ಹೊರ ಬರ್ತಾ ಇದೆ.
ಸ್ಯಾನ್ ಡಿಯಾಗೋ ಕಾಮಿಕ್ ಕಾನ್‌ನಲ್ಲಿ 'ರಾಮಾಯಣ' ಆರ್ಭಟ!
ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಈ ಸಿನಿಮಾ ಪ್ರತಿಷ್ಠಿತ ‘ಸ್ಯಾನ್ ಡಿಯಾಗೋ ಕಾಮಿಕ್ ಕಾನ್’ 2026ರಲ್ಲಿಸ್ಥಾನ ಪಡೆದಿದೆ. ಜುಲೈ 23 ರಂದು ಸಿನಿಮಾದ ಫಸ್ಟ್ ಲುಕ್ ಜಾಗತಿಕ ವೇದಿಕೆಯಲ್ಲಿ ಬಿಡುಗಡೆ ಆಗಲಿದೆ. ಈ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಟರಾದ ರಣಬೀರ್ ಕಪೂರ್ ಮತ್ತು ಯಶ್ ಭಾಗವಹಿಸಲಿದ್ದಾರೆ.
ಕಾಮಿಕ್ ಕಾನ್‌ನಲ್ಲಿ ಭಾರತೀಯ ಸಿನಿಮಾ ದಾಖಲೆ.!
ಜುಲೈ 18ಕ್ಕೆ ಬರಲಿದೆ ರಾಮಾಯಣ ಮೊದಲ ಟ್ರೈಲರ್..!
ಹಾಲಿವುಡ್ ಸಿನಿಮಾಗಳೇ ಹೆಚ್ಚಾಗಿ ರಾರಾಜಿಸುವ ಕಾಮಿಕ್ ಕಾನ್ (Comic Con) ವೇದಿಕೆಗೆ ಈ ಹಿಂದೆ ಪ್ರಭಾಸ್ ನಟನೆಯ' ಕಲ್ಕಿ 2898 ಎಡಿ' ಸಿನಿಮಾ ಎಂಟ್ರಿ ಕೊಟ್ಟಿತ್ತು. ಈಗ ರಾಮಾಯಣ ಸಿನಿಮಾ ಪ್ರವೇಶಿಸಿದೆ. ಸುಮಾರು 4,800 ಜನರು ಕುಳಿತುಕೊಳ್ಳಬಹುದಾದ ಬೃಹತ್ ಸಭಾಂಗಣದಲ್ಲಿ ಈ ಚಿತ್ರದ ಝಲಕ್ ಅನಾವರಣಗೊಳ್ಳಲಿದೆ. ಇನ್ನು ರಾಮಾಯಣ ಸಿನಿಮಾದ ಮೊದಲ ಟ್ರೈಲರ್ಬರೋದಕ್ಕೆ ಸಜ್ಜಾಗಿದೆ. ಜುಲೈ 18 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಭವ್ಯವಾದ ಟ್ರೈಲರ್ ಬಿಡುಗಡೆ ಆಗುತ್ತಿದೆ. ಒಟ್ಟಿನಲ್ಲಿ, ಭಾರತೀಯ ಚಿತ್ರರಂಗದಲ್ಲಿ ಟಾಕ್ಸಿಕ್ ಹಾಗು ರಾಮಾಯಣ ಸಿನಿಮಾಗಳ ಅಬ್ಬರ ಹೆಚ್ಚಾಗಿದೆ.
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..


