MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಟೀಂ ಇಂಡಿಯಾದಲ್ಲಿ ಬಿಗಡಾಯಿಸಿದ ಸಮಸ್ಯೆ, ಗಂಭೀರ್ ಬಳಗದ ಸಹಾಯಕ ಕೋಚ್ ಶೀಘ್ರದಲ್ಲೇ ರಾಜೀನಾಮೆ

ಟೀಂ ಇಂಡಿಯಾದಲ್ಲಿ ಬಿಗಡಾಯಿಸಿದ ಸಮಸ್ಯೆ, ಗಂಭೀರ್ ಬಳಗದ ಸಹಾಯಕ ಕೋಚ್ ಶೀಘ್ರದಲ್ಲೇ ರಾಜೀನಾಮೆ

ಸತತ ಸರಣಿ ಸೋಲಿನಿಂದ ಟೀಂ ಇಂಡಿಯಾದಲ್ಲಿ ಸಮಸ್ಯೆ ತೀವ್ರಗೊಂಡಿದೆ. ಗೌತಮ್ ಗಂಭೀರ್ ಪಾಳಯದ ಕೆಲ ಸಹಾಯಕ ಕೋಚ್‌ಗಳು ರಾಜೀನಾಮೆಗೆ ಸಜ್ಜಾಗಿದ್ದಾರೆ. ಇತ್ತ ಐಪಿಎಲ್ ತಂಡದ ಜೊತೆಗೆ ಮಾತುಕತೆಯೂ ನಡೆಸಿದ್ದಾರೆ.

2 Min read
Author : Chethan Kumar
Published : Jul 11 2026, 06:33 PM IST
Share this Photo Gallery
  • FB
  • TW
  • Linkdin
  • Whatsapp
16
ಗಂಭೀರ್ ಕೋಚಿಂಗ್ ಪಾಳಯದಲ್ಲಿ ಕೋಲಾಹಲ
Image Credit : Getty

ಗಂಭೀರ್ ಕೋಚಿಂಗ್ ಪಾಳಯದಲ್ಲಿ ಕೋಲಾಹಲ

ಐರ್ಲೆಂಡ್ ಹಾಗೂ ಇಂಗ್ಲೆಂಡ್ ಸರಣಿ ಸೋಲು ಟೀಂ ಇಂಡಿಯಾದಲ್ಲಿ ಕೋಲಾಹಲ ಎಬ್ಬಿಸಿದೆ. ಪ್ರಮುಖವಾಗಿ ಟೀಂ ಮ್ಯಾನೇಜ್ಮೆಂಟ್ ಹಾಗೂ ಕೋಚ್ ಗಂಭೀರ್ ಮೇಲೆ ಗಂಭೀರ ಟೀಕೆಗಳು ಎದುರಾಗಿದೆ. ಟಿ20 ಚಾಂಪಿಯನ್ ತಂಡವನ್ನು ತಮ್ಮ ವೈಯುಕ್ತಿಕ ನಿರ್ಧಾರಗಳಿಂದ ಹಳ್ಳ ಹಿಡಿಸಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ. ಇದರ ಬೆನ್ನಲ್ಲೇ ಮತ್ತೊಂದು ಕೋಲಾಹಲ ಎದ್ದಿದೆ. ಟೀಂ ಇಂಡಿಯಾ ಪಾಳಯದಲ್ಲಿ ಸಮಸ್ಯೆಗಳು ತೀವ್ರಗೊಂಡಿದ್ದು, ಶೀಘ್ರದಲ್ಲೇ ಕೋಚ್ ಗೌತಮ್ ಗಂಭೀರ್ ಸಹಾಯ ಕೋಚ್‌ಗಳು ರಾಜೀನಾಮೆ ನೀಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸಪೋರ್ಟ್ ಸ್ಟಾಫ್ ರಾಜೀನಾಮೆಗೆ ಸಿದ್ದತೆ
Image Credit : bcci

ಸಪೋರ್ಟ್ ಸ್ಟಾಫ್ ರಾಜೀನಾಮೆಗೆ ಸಿದ್ದತೆ

ಗೌತಮ್ ಗಂಭೀರ್ ಟೀಂ ಇಂಡಿಯಾ ಪ್ರಧಾನ ಕೋಚ್. ಇನ್ನು ಬ್ಯಾಟಿಂಗ್ ಕೋಚ್, ಬೌಲಿಂಗ್ ಸೇರಿದಂತೆ ಸಹಾಯಕ ಸಿಬ್ಬಂದಿಗಳಿದ್ದಾರೆ. ಇದೀಗ ಕೋಚಿಂಗ್ ಪಾಳಯದಲ್ಲಿ ಸಮಸ್ಯೆ ತೀವ್ರಗೊಂಡಿದೆ. ಪರಿಣಾಮ ಸಪೋರ್ಟ್ ಸ್ಟಾಫ್ ಅವಧಿಗೂ ಮೊದಲೇ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Related Articles

Related image1
14, 13, 15 ವೈಭವ್‌ ಸೂರ್ಯವಂಶಿ ಮೊದಲ 3 ಪಂದ್ಯದ ಸ್ಕೋರ್‌ ಇದಾದ್ರೆ, ಕೊಹ್ಲಿ-ರೋಹಿತ್‌ ಶರ್ಮ ಮೊದಲ 3 ಪಂದ್ಯಗಳ ರನ್ ಎಷ್ಟು?
Related image2
ಸೂರ್ಯಕುಮಾರ್ ವಾಪಸ್, ರಜತ್ ಪಾಟೀದಾರ್ ಉಪನಾಯಕ; ಪರ್ಯಾಯ ಟಿ20 ತಂಡ ಪ್ರಕಟಿಸಿದ ಚೋಪ್ರಾ
36
ಅವಧಿಗೂ ಮೊದಲೇ ತಂಡ ತೊರೆಯುವ ನಿರ್ಧಾರ
Image Credit : Getty

ಅವಧಿಗೂ ಮೊದಲೇ ತಂಡ ತೊರೆಯುವ ನಿರ್ಧಾರ

ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ಟಿ ದಿಲೀಪ್, ರ್ಯಾನ್ ಟೆನ್ ಡೊಶೆಟ್ ಮಾರ್ಗದರ್ಶನ ನೀಡುತ್ತಿದ್ದಾರೆ. ಇತ್ತ ಮಾರ್ನೆ ಮಾರ್ಕೆಲ್ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂವರು 2 ವರ್ಷದ ಒಪ್ಪಂದ ಹಾಗೂ ಒಂದು ವರ್ಷ ಅವಧಿ ವಿಸ್ತರಣೆ ಮಾಡುವ ಆಯ್ಕೆಯನ್ನು ಹೊಂದಿದ್ದಾರೆ. ಆದರೆ ಈ ಪೈಕಿ ಸಹಾಯಕ ಸ್ಟಾಫ್‌ಗಳು ಅವಧಿಗೂ ಮೊದಲೇ ತಂಡ ತೊರೆಯುವ ಮಾತುಗಳು ನೆಡೆದಿದೆ ಎನ್ನಲಾಗುತ್ತಿದೆ.

46
ಐಪಿಎಲ್ ತಂಡದ ಜೊತೆ ಮಾತುಕತೆ
Image Credit : Getty

ಐಪಿಎಲ್ ತಂಡದ ಜೊತೆ ಮಾತುಕತೆ

ಮೂಲಗಳ ಪ್ರಕಾರ ಟೀಂ ಇಂಡಿಯಾ ಸಪೋರ್ಟ್ ಸ್ಟಾಫ್ ಐಪಿಎಲ್ ಫ್ರಾಂಚೈಸಿ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಾಲಾಗಿದೆ. ಐಪಿಎಲ್ ಹಾಗೂ ಇತರ ವಿದೇಶಿ ಲೀಗ್‌ಗಳಲ್ಲಿ ತಂಡ ಹೊಂದಿರುವ ಫ್ರಾಂಚೈಸಿ ಜೊತೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಶೀಘ್ರದಲ್ಲೇ ಟೀಂ ಇಂಡಿಯಾ ಸಪೋರ್ಟ್ ಸ್ಟಾಫ್ ಸ್ಥಾನಕ್ಕೆ ರಾಜೀನಾಮೆ ನೀಡಿ ಫ್ರಾಂಚೈಸಿ ಸೇರಿಕೊಳ್ಳುವ ಸಾಧ್ಯತೆ ಇದೆ.

56
ಗಂಭೀರ್ ತಲೆದಂಡಕ್ಕೆ ಆಗ್ರಹ
Image Credit : Gambhir\BCCI

ಗಂಭೀರ್ ತಲೆದಂಡಕ್ಕೆ ಆಗ್ರಹ

ಟೀಂ ಇಂಡಿಯಾ ಕಳಪೆ ಪ್ರದರ್ಶನ, ಆಟಗಾರರ ಸ್ಥಾನ, ಅವಕಾಶಗಳ ಕುರಿತು ಕೋಚ್ ಗೌತಮ್ ಗಂಭೀರ್ ವಿರುದ್ಧ ಆರೋಪಗಳು ಕೇಳಿಬರುತ್ತಿದೆ. ಟೀಂ ಇಂಡಿಯಾ ಕೋಚಿಂಗ್ ಸ್ಥಾನದಿಂದ ಗಂಭೀರ್ ವಜಾ ಮಾಡಿ ಅನ್ನೋ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇತ್ತ ಬಿಸಿಸಿಐ ಸೋಲಿನ ಪರಾಮರ್ಶೆ ನಡೆಸಲು ಮುಂದಾಗಿದೆ.

66
ಟೀಂ ಇಂಡಿಯಾದಲ್ಲೂ ಬದಲಾವಣೆಗೆ ಆಗ್ರಹ
Image Credit : X/BCCI

ಟೀಂ ಇಂಡಿಯಾದಲ್ಲೂ ಬದಲಾವಣೆಗೆ ಆಗ್ರಹ

2026ರಲ್ಲಿ ಟೀಂ ಇಂಡಿಯಾ ಟಿ20 ಚಾಂಪಿಯನ್ ಆಗಿತ್ತು. ಆದರೆ ಕೇವಲ ನಾಲ್ಕು ತಿಂಗಳಿಗೆ ಭಾರತ ತಂಡ ಇದೀ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ದ ಮುಗ್ಗರಿಸಿ ಮುಖಭಂಗ ಅನುಭವಿಸಿದೆ. ಹೀಗಾಗಿ ತಂಡದಲ್ಲೂ ಕೆಲ ಬದಲಾವಣೆ ಮಾಡಲು ಮುಂದಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಟೀಮ್ ಇಂಡಿಯಾ
ಕ್ರಿಕೆಟ್
ಗೌತಮ್ ಗಂಭೀರ್

Latest Videos
Recommended Stories
Recommended image1
ಮತ್ತೆ ಮತ್ತೆ ಅದೇ ತಪ್ಪು ಮಾಡ್ತಿದ್ದಾರೆ ವೈಭವ್ ಸೂರ್ಯವಂಶಿ! ಈ 3 ತಪ್ಪು ತಿದ್ದಿಕೊಳ್ಳದಿದ್ರೆ, ಟೀಂ ಇಂಡಿಯಾದಿಂದ ಗೇಟ್‌ಪಾಸ್ ಗ್ಯಾರಂಟಿ!
Recommended image2
ವಿಂಬಲ್ಡನ್‌ ರಾಯಲ್‌ ಬಾಕ್ಸ್‌ನಲ್ಲಿ ಬ್ರಿಯಾನ್‌ ಲಾರಾ ಜೊತೆ ಕುಳಿತ ಸುಂದರಿ ಯಾರು? ಹೆಂಡ್ತಿಯೋ, ಮಗಳೋ?
Recommended image3
Gill: ಶುಭಮನ್ ಗಿಲ್ ಜೊತೆಗಿರುವ ಆ ಬೆಡಗಿ ಯಾರು? ಸಾರಾ ತೆಂಡೂಲ್ಕರ್‌ಗೇ ಟಕ್ಕರ್ ಕೊಡುವಂತಿದ್ದಾಳೆ ಈ ಹೊಸ ಕ್ರಶ್!
Related Stories
Recommended image1
14, 13, 15 ವೈಭವ್‌ ಸೂರ್ಯವಂಶಿ ಮೊದಲ 3 ಪಂದ್ಯದ ಸ್ಕೋರ್‌ ಇದಾದ್ರೆ, ಕೊಹ್ಲಿ-ರೋಹಿತ್‌ ಶರ್ಮ ಮೊದಲ 3 ಪಂದ್ಯಗಳ ರನ್ ಎಷ್ಟು?
Recommended image2
ಸೂರ್ಯಕುಮಾರ್ ವಾಪಸ್, ರಜತ್ ಪಾಟೀದಾರ್ ಉಪನಾಯಕ; ಪರ್ಯಾಯ ಟಿ20 ತಂಡ ಪ್ರಕಟಿಸಿದ ಚೋಪ್ರಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved