ವೈರಲ್ ಆಗಿರುವ ಈ ಚಿತ್ರದಲ್ಲಿನ ತಪ್ಪನ್ನು ಹುಡುಕಲು ನೆಟ್ಟಿಗರು ಪರದಾಡುತ್ತಿದ್ದಾರೆ. 1 ರಿಂದ 10 ರವರೆಗಿನ ಅಂಕಿಗಳತ್ತ ಎಲ್ಲರ ಗಮನ ಹರಿಯುತ್ತದೆ, ಆದರೆ ನಿಜವಾದ ತಪ್ಪು ಬೇರೆಲ್ಲೋ ಅಡಗಿದೆ. ಈ ಪಜಲ್ ನಿಮ್ಮ ಮೆದುಳು ಮತ್ತು ಕಣ್ಣಿನ ಶಕ್ತಿಯನ್ನು ಪರೀಕ್ಷಿಸುತ್ತದೆ.

ಬೆಂಗಳೂರು: ನಿಮ್ಮ ಕಣ್ಣುಗಳು ಎಷ್ಟು ಪವರ್ ಫುಲ್? ನಿಮ್ಮ ಮೆದುಳು ಎಷ್ಟು ವೇಗವಾಗಿ ಯೋಚಿಸುತ್ತದೆ? ಈ ಪ್ರಶ್ನೆಗೆ ಉತ್ತರ ಸಿಗಬೇಕು ಅಂದ್ರೆ ಈ ಮೇಲಿನ ಫೋಟೋವನ್ನ ಗಮನಕೊಟ್ಟು ನೋಡಿ.. ಅದರಲ್ಲಿ ಒಂದು ತಪ್ಪಿದೆ. ಅರೇ.. ಇಷ್ಟು ಸಿಂಪಲ್ ಲಾಜಿಕ್‌ನಲ್ಲಿ ಅದೇನು ತಪ್ಪಿದೆ ಎಂದು ಯೋಚಿಸುತ್ತ ಕೂರ್ತಿರಿ. ವಿಷಯ ಗೊತ್ತಾದಮೇಲೆ ಮೂಗಿನ ಮೇಲೆ ಬೆರಳು ಇಡೋದು ಗ್ಯಾರಂಟಿ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ಕೆಲವೊಮ್ಮೆ ಕಣ್ಮುಂದೆಯೇ ಸತ್ಯವಿದ್ದರೂ ಮೆದುಳು ಅದನ್ನು ಗುರುತಿಸಲು ವಿಫಲವಾಗುತ್ತದೆ. ಹ್ಯೂಮನ್ ಸೈಕಾಲಜಿ ಆಧಾರದ ಮೇಲೆ ರೂಪಿಸಲಾದ ಈ ಚಿತ್ರವು ಇಂಟರ್ನೆಟ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇವಲ ಮೇಧಾವಿಗಳು ಮಾತ್ರ ಇದಕ್ಕೆ ಉತ್ತರ ಹೇಳಬಲ್ಲರು ಎಂಬ ಸವಾಲಿನೊಂದಿಗೆ ಈ ಪೋಸ್ಟ್ ವೈರಲ್ ಆಗುತ್ತಿದೆ.

ಚಿತ್ರದಲ್ಲೇನಿದೆ?

ವೈರಲ್ ಆಗುತ್ತಿರುವ ಈ ಚಿತ್ರದಲ್ಲಿ ಒಂದು ಗೋಡೆಯ ಮೇಲೆ 1 ರಿಂದ 10 ರವರೆಗೆ ಅಂಕಿಗಳನ್ನು ದೊಡ್ಡದಾಗಿ ಬರೆಯಲಾಗಿದೆ. ಅದರ ಮುಂದೆ ಒಬ್ಬ ಯುವತಿ ನಿಂತು ಗೋಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾಳೆ. ಗೋಡೆಯ ಮೇಲ್ಭಾಗದಲ್ಲಿ ಒಂದು ಇಂಗ್ಲಿಷ್ ವಾಕ್ಯವಿದೆ. ಈ ಚಿತ್ರವನ್ನು ನೋಡಿದ ತಕ್ಷಣ 99 ಪ್ರತಿಶತ ಜನರು ನೇರವಾಗಿ 1 ರಿಂದ 10 ರವರೆಗೆ ಇರುವ ಅಂಕಿಗಳ ಕಡೆಗೆ ಗಮನ ಹರಿಸುತ್ತಾರೆ. ಯಾವುದಾದರೂ ನಂಬರ್ ಮಿಸ್ ಆಗಿದೆಯೇ? ಅಥವಾ ಅಂಕಿಗಳ ಕ್ರಮದಲ್ಲಿ ಏನಾದರೂ ಬದಲಾವಣೆ ಇದೆಯೇ? ಎಂದು ಹುಡುಕತೊಡಗುತ್ತಾರೆ. ಆದರೆ ಎಷ್ಟೇ ಹುಡುಕಿದರೂ ಅಲ್ಲಿ ಯಾವುದೇ ತಪ್ಪು ಕಾಣಿಸುವುದಿಲ್ಲ. ಏಕೆಂದರೆ ಅಸಲಿಯಾಗಿ ತಪ್ಪು ಇರುವುದು ಅಂಕಿಗಳಲ್ಲಿ ಅಲ್ಲ!

ಅಸಲಿ ತಪ್ಪು ಎಲ್ಲಿದೆ ಗೊತ್ತಾ?

ನೀವು ಕೂಡ ಅಂಕಿಗಳನ್ನೇ ಪರೀಕ್ಷಿಸುತ್ತಿದ್ದರೆ ನೀವು ಕೂಡ ಈ ಪಜಲ್‌ನಲ್ಲಿ ಸೋತಿದ್ದೀರಿ ಎಂದರ್ಥ. ನಿಜವಾದ ತಪ್ಪು ಇರುವುದು ಮೇಲಿರುವ ಇಂಗ್ಲಿಷ್ ವಾಕ್ಯದಲ್ಲಿ. ಅಲ್ಲಿ "Can You Find The Mitsake?" ಎಂದು ಬರೆಯಲಾಗಿದೆ. ಇಂಗ್ಲಿಷ್‌ನಲ್ಲಿ Mistake ಪದದ ಸರಿಯಾದ ಸ್ಪೆಲ್ಲಿಂಗ್ (M-I-S-T-A-K-E). ಆದರೆ ಚಿತ್ರದಲ್ಲಿ Mitsake (M-I-T-S-A-K-E) ಎಂದು ತಪ್ಪಾಗಿ ಬರೆಯಲಾಗಿದೆ.

ಮೆದುಳಿನ ಆಟವಿದು!

ನಮ್ಮ ಮೆದುಳು ಸಾಮಾನ್ಯವಾಗಿ ಅಂಕಿಗಳನ್ನು ಅಥವಾ ದೊಡ್ಡದಾಗಿ ಕಾಣುವ ವಸ್ತುಗಳನ್ನು ವೇಗವಾಗಿ ಸ್ಕ್ಯಾನ್ ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಸಣ್ಣ ಸಣ್ಣ ಸ್ಪೆಲ್ಲಿಂಗ್ ತಪ್ಪುಗಳನ್ನು (Spelling Mistakes) ಕಡೆಗಣಿಸುತ್ತದೆ. ಇದೇ ಕಾರಣಕ್ಕೆ ಹೆಚ್ಚಿನವರು ವಾಕ್ಯದ ಬದಲು ನಂಬರ್‌ಗಳನ್ನೇ ಹುಡುಕಿ ಸುಸ್ತಾಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ನಾನು ಕೂಡ ಮೊದಲು ನಂಬರ್‌ಗಳನ್ನೇ ಚೆಕ್ ಮಾಡಿದ್ದೆ! ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಂದು ವೇಳೆ ನೀವು ಮೊದಲ ನೋಟದಲ್ಲೇ ಈ ತಪ್ಪನ್ನು ಗುರುತಿಸಿದ್ದರೆ.. ನಿಮ್ಮ ಮೆದುಳು ಮತ್ತು ಕಣ್ಣುಗಳು ಸೂಪರ್ ಫಾಸ್ಟ್ ಆಗಿವೆ ಎಂದರ್ಥ!