11:42 PM (IST) Nov 01

India Latest News Live 1 November 2026 ಟುಕ್ ಟುಕ್ ಪ್ರೇಮ! ಭಾರತದ ಆಟೋವನ್ನು ಬಿಟ್ಟಿರಲಾರದೆ ಲಂಡನ್‌ಗೇ ಹೊತ್ತೊಯ್ದ ವಿದೇಶಿ ದಂಪತಿ ಮನಮಿಡಿಯುವ ಕಥೆ

ಬ್ರಿಟನ್ ಮೂಲದ ಹೆಲೆನ್ ಮತ್ತು ಮಿಕ್ ದಂಪತಿ ಭಾರತ ಪ್ರವಾಸಕ್ಕಾಗಿ 'ಟಿಮ್ಮಿ' ಎಂಬ ಹೆಸರಿನ ಆಟೋರಿಕ್ಷಾವನ್ನು ಖರೀದಿಸಿದ್ದರು. 75 ದಿನಗಳ ಕಾಲ 4218 ಕಿ.ಮೀ ಪ್ರಯಾಣಿಸಿದ ನಂತರ ಆಟೋದ ಮೇಲಿನ ಭಾವನಾತ್ಮಕ ನಂಟಿನಿಂದಾಗಿ ಅದನ್ನು ಹಡಗಿನ ಮೂಲಕ ಲಂಡನ್‌ಗೆ ಕೊಂಡೊಯ್ದಿದ್ದಾರೆ. ಉದ್ಯಮಿ ಹರ್ಷ ಗೋಯೆಂಕಾ ಈ ಸುಂದರ ಕಥೆಯನ್ನು ಹಂಚಿಕೊಂಡಿದ್ದಾರೆ.
Read Full Story
09:30 PM (IST) Nov 01

India Latest News Live 1 November 2026 ODI ಪಂದ್ಯಕ್ಕೂ ಮೊದಲು ಕೊಹ್ಲಿ ಕುರಿತ ರಹಸ್ಯವನ್ನ ಬಹಿರಂಗಪಡಿಸಿದ RCB ಸ್ಟಾರ್ ಡಫಿ

ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆದ್ದಿದ್ದು, ನವೆಂಬರ್ 4ರಿಂದ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ವಿರಾಟ್ ಕೊಹ್ಲಿ ಅಭ್ಯಾಸ ಆರಂಭಿಸಿದ್ದು, ಕಿವೀಸ್ ವೇಗಿ ಜಾಕೋಬ್ ಡಫಿ ಕೊಹ್ಲಿಯ ಸರಳತೆಯನ್ನು ಕೊಂಡಾಡಿದ್ದಾರೆ. ಮೊದಲ ಮೂರು ಪಂದ್ಯಗಳಿಗೆ ಶುಭಮನ್ ಗಿಲ್ ಮತ್ತು ಉಳಿದ ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ನಾಯಕರಾಗಲಿದ್ದಾರೆ.
Read Full Story
09:13 PM (IST) Nov 01

India Latest News Live 1 November 2026 ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡಿಗರ ಹೃದಯ ಗೆದ್ದ ದಿನೇಶ್ ಕಾರ್ತಿಕ್ ಶುಭಾಶಯ..! RCB ಮನೆಮಗನ ಕನ್ನಡ ಪ್ರೀತಿಗೆ ಫ್ಯಾನ್ಸ್‌ ಫಿದಾ!

ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಅವರು ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ಕೋರುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ತಮಿಳುನಾಡಿನವರಾದರೂ ತಮ್ಮನ್ನು ಕರ್ನಾಟಕದ ದತ್ತುಪುತ್ರ ಎಂದು ಕರೆದುಕೊಂಡಿರುವ ಅವರು, ಭಾಷೆ ಮತ್ತು ಗಡಿಯ ಮಿತಿಗಳನ್ನು ಮೀರಿದ್ದಾರೆ. ಅಲ್ಲದೆ, ಆರ್‌ಸಿಬಿಯ ಸತತ ಎರಡು ಐಪಿಎಲ್ ಗೆಲುವಿನಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
Read Full Story
08:57 PM (IST) Nov 01

India Latest News Live 1 November 2026 ಬಾಯ್‌ಫ್ರೆಂಡ್ ಕೊಟ್ಟ ನೋವು ಅಷ್ಟಿಷ್ಟಲ್ಲ - ಬ್ರೇಕಪ್ ಕಥೆ ಬಿಚ್ಚಿಟ್ಟ ‘ಸೂರ್ಯಕಾಂತಿ’ ನಟಿ ರೆಜಿನಾ

ನಟಿ ರೆಜಿನಾ ಕ್ಯಾಸಂಡ್ರಾ ತಮ್ಮ ಪ್ರೇಮ ಜೀವನದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. 2020ರಲ್ಲಿ ಕೊನೆಯ ಸಂಬಂಧ ಅಂತ್ಯಗೊಂಡಿದ್ದು, ಅದರಲ್ಲಿ ನಂಬಿಕೆ ದ್ರೋಹಕ್ಕೆ ಒಳಗಾಗಿದ್ದೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

Read Full Story
08:26 PM (IST) Nov 01

India Latest News Live 1 November 2026 'ನಿಮ್ಮೊಂದಿಗೆ ಉತ್ತಮ ಕ್ಷಣ ಕಳೆದೆ..' - ಇಟಲಿ ಟ್ರಿಪ್‌ನಲ್ಲಿ ಸಾರಾ ತೆಂಡೂಲ್ಕರ್ ಜತೆ ಕಾಣಿಸಿಕೊಂಡ ಖ್ಯಾತ ಉದ್ಯಮಿ..! ಯಾರೀತ?

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಇತ್ತೀಚೆಗೆ ತಮ್ಮ ಇಟಲಿ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದು, ಉದ್ಯಮಿ ಆಕಾಶ್ ಮೆಹ್ತಾ ಜೊತೆಗಿನ ಚಿತ್ರಗಳು ಕುತೂಹಲ ಮೂಡಿಸಿವೆ. ಇದರ ಜೊತೆಗೆ ಅವರು ಮುಂಬೈನಲ್ಲಿ ಫಿಟ್‌ನೆಸ್ ಅಕಾಡೆಮಿ ನಡೆಸುತ್ತಿದ್ದು, ಹಲವು ಪ್ರಮುಖ ಬ್ರ್ಯಾಂಡ್‌ಗಳ ರಾಯಭಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ.
Read Full Story
08:08 PM (IST) Nov 01

India Latest News Live 1 November 2026 'ಈ ಐಡಿಯಾ ಆವತ್ತೇ ಇತ್ತು' ಎಲಾನ್ ಮಸ್ಕ್ ಹಾರುವ ಕಾರಿಗೆ ರಾಮಾಯಣ 'ಲಿಂಕ್' ಕೊಟ್ಟ ರಣಬೀರ್ ಕಪೂರ್

ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಚಿತ್ರದ ಪುಷ್ಪಕ ವಿಮಾನವು ತೀವ್ರ ಕುತೂಹಲ ಮೂಡಿಸಿದೆ. ನಟ ರಣಬೀರ್ ಕಪೂರ್ ಈ ಪೌರಾಣಿಕ ವಿಮಾನವನ್ನು ಎಲಾನ್ ಮಸ್ಕ್ ಅವರ ಹಾರುವ ಕಾರಿಗೆ ಹೋಲಿಸಿದ್ದಾರೆ. ಏನಂದ್ರು ರಣಬೀರ್ ಕಪೂರ್?

Read Full Story
07:42 PM (IST) Nov 01

India Latest News Live 1 November 2026 Suriya - 'ಸೀನ್' ಟ್ರೇಲರ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟ ಸೂರ್ಯ ಅಬ್ಬರ; ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್!

ತಮಿಳು ನಟ ಸೂರ್ಯ ನಟನೆಯ ‘ಸೀನ್’ ಬಿಡುಗಡೆಯ ಹಾದಿಯಲ್ಲಿದೆ. ಹಿಂದಿನ ಎರಡು ಸಿನಿಮಾಗಳಿಗಿಂತ ವಿಭಿನ್ನವಾದ ಪೊಲೀಸ್ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಟ್ರೇಲರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ ಚಿತ್ರತಂಡಕ್ಕೆ ಹೊಸ ಹುಮ್ಮಸ್ಸು ನೀಡಿದೆ.

Read Full Story
07:25 PM (IST) Nov 01

India Latest News Live 1 November 2026 ರಾಮಾಯಣದ ಸೀತೆಯಾಗಲು ಸಾಯಿ ಪಲ್ಲವಿ ಪಡೆದ ಸಂಭಾವನೆ ಎಷ್ಟು ಕೋಟಿ? ಒಂದೊಂದು ಭಾಗಕ್ಕೂ ಭರ್ಜರಿ ಪೇಮೆಂಟ್!

ನಿತೇಶ್ ತಿವಾರಿ ನಿರ್ದೇಶನದ ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ನಟಿಸುತ್ತಿರುವ ರಾಮಾಯಣ ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ? ತಿಳಿಯಿರಿ.

Read Full Story
07:03 PM (IST) Nov 01

India Latest News Live 1 November 2026 'ನಿನ್ನಷ್ಟು ನೀಚ ಯಾರೂ ಇಲ್ಲ' ಎಂದು ಕಿಡಿಕಾರಿದ್ದೇಕೆ ಸಲ್ಮಾನ್ ಖಾನ್‌? ಯಾರ ವಿರುದ್ಧ ಭಾಯ್‌ಜಾನ್‌ಗೆ ಗರಂ ಆಗಿದ್ದು?

ಲವ್‌ನನ್ನು ಸಹೋದರಿಯಂತೆ ನೋಡುತ್ತೇನೆ ಎಂದು ಹೇಳುವ ಸ್ಕೌಟ್, ತನ್ನ ಗೆಳತಿ ಕಾಶ್ವಿ ಎದುರು ಈ ಸಂಬಂಧದ ಬಗ್ಗೆ ಸ್ಪಷ್ಟವಾಗಿ ಯಾಕೆ ಮಾತನಾಡಲಿಲ್ಲ? ಕಾಶ್ವಿಯ ಅಸಮಾಧಾನಕ್ಕೆ ಕಾರಣವೇನು? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಏನು ವಿಷಯ? ಸಲ್ಲೂ ಕೋಪಕ್ಕೆ ಕಾರಣವೇನು?

Read Full Story
06:06 PM (IST) Nov 01

India Latest News Live 1 November 2026 World Vegan day 2026 - ಸಂಪೂರ್ಣ ಸಸ್ಯಾಹಾರ ಸೇವನೆ ಆರೋಗ್ಯಕ್ಕೆ ಅದೆಷ್ಟು ಪ್ರಯೋಜನಕಾರಿ? ಇಲ್ಲಿದೆ ಉಪಯುಕ್ತ ಮಾಹಿತಿ

ಇತ್ತೀಚಿನ ವರ್ಷಗಳಲ್ಲಿ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ. ಅದರಲ್ಲೂ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಹಲವರು ಆಸಕ್ತಿ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೇಗನ್ (Vegan) ಆಹಾರ ಪದ್ಧತಿ ಹೆಚ್ಚು ಜನಪ್ರಿಯವಾಗುತ್ತಿದೆ.

Read Full Story
05:52 PM (IST) Nov 01

India Latest News Live 1 November 2026 ಸಿಗರೇಟ್ ಚಟಕ್ಕೆ ಬಹಳಷ್ಟು ಬಾಲಿವುಡ್ ನಟಿಯರು ಬಲಿ - ಈ ಲಿಸ್ಟ್‌ನಲ್ಲಿ ಯಾರೆಲ್ಲಾ ಸ್ಟಾರ್ ಹೀರೋಯಿನ್ಸ್‌ ಇದ್ದಾರೆ?

ಸೋನಂ ಕಪೂರ್, ಕಂಗನಾ ರನೌತ್, ಸುಶ್ಮಿತಾ ಸೇನ್ ಸೇರಿದಂತೆ ಧೂಮಪಾನದ ಅಭ್ಯಾಸದ ವಿಚಾರವಾಗಿ ಸುದ್ದಿಯಾದ ಬಾಲಿವುಡ್ ನಟಿಯರು ಯಾರು? ಅವರ ಬಗ್ಗೆ ಪ್ರಕಟವಾದ ವರದಿಗಳು ಮತ್ತು ಬಹಿರಂಗ ಹೇಳಿಕೆಗಳ ಮಾಹಿತಿ ಇಲ್ಲಿದೆ.

Read Full Story
05:18 PM (IST) Nov 01

India Latest News Live 1 November 2026 ಆಮ್ ಆದ್ಮಿ ಪಾರ್ಟಿಯಲ್ಲಿ ತಳಮಳ, ದಿಢೀರ್ ರಾಜೀನಾಮೆ ನೀಡಿದ ಇಬ್ಬರು ಶಾಸಕರು ಬಿಜೆಪಿ ಸೇರಲು ಸಿದ್ಧತೆ

ಆಮ್ ಆದ್ಮಿ ಪಾರ್ಟಿಯಲ್ಲಿ ಕೋಲಾಹಲ ಶುರುವಾಗಿದೆ. ಇಬ್ಬರು ಶಾಸಕರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಂದಿದ್ದಾರೆ. ಇದೀಗ ಈ ಇಬ್ಬರು ಬಿಜೆಪಿ ಸೇರಲು ತಯಾರಿ ನಡೆಸಿದ್ದಾರೆ. ಇಬ್ಬರು ನಾಯಕರ ನಡೆ ಆಪ್ ಪಾರ್ಟಿಗೆ ತೀವ್ರ ಹಿನ್ನಡೆ ತಂದಿದೆ.

Read Full Story
05:16 PM (IST) Nov 01

India Latest News Live 1 November 2026 ರಾವಣನ ಆ ಒಂದು ಫೈಟ್‌ಗಾಗಿ ಆರುವರೆ ವರ್ಷಗಳ ಪರಿಶ್ರಮ - ಥಿಯೇಟರ್‌ನಲ್ಲಿ ಮೈ ಜುಮ್ಮೆನ್ನಿಸುವ ದೃಶ್ಯವಂತೆ!

ರಾವಣ ಮತ್ತು ಜಟಾಯು ನಡುವಿನ ಕಾಳಗದ ದೃಶ್ಯವನ್ನು ಪೂರ್ಣಗೊಳಿಸಲು ಆರುವರೆ ವರ್ಷ ಬೇಕಾಯಿತು ಎಂದು ನಿರ್ದೇಶಕ ನಿತೇಶ್ ತಿವಾರಿ ಹೇಳಿದ್ದಾರೆ. ಪುಷ್ಪಕ ವಿಮಾನದ ವಿನ್ಯಾಸ, ಚಿತ್ರದ ಮೇಕಿಂಗ್ ಮತ್ತು ವಿಶೇಷ ಸಂಗತಿಗಳ ಮಾಹಿತಿ ಇಲ್ಲಿದೆ.

Read Full Story
04:55 PM (IST) Nov 01

India Latest News Live 1 November 2026 'ಚಂದ್ರಮುಖಿ 2' ಬಳಿಕ ಮತ್ತೆ ಹಾರರ್ ಲೋಕಕ್ಕೆ ಕಂಗನಾ ಎಂಟ್ರಿ - ಈ ಬಾರಿ ಬಾಹುಬಲಿ ನಟ ಸಾಥ್!

ರಾಣಾ ದಗ್ಗುಬಾಟಿ ನಿರ್ಮಾಣದ 'ಸ್ಕೇರಿ ಪಿಕ್ಚರ್' ಹಾರರ್ ಸಿನಿಮಾದಲ್ಲಿ ಕಂಗನಾ ರನೌತ್ ನಟಿಸುತ್ತಿದ್ದಾರೆ. ಹಾರರ್‌ಕಾನ್ ಇಂಡಿಯಾ 2026ರಲ್ಲಿ ಸಿನಿಮಾ ಘೋಷಣೆಯಾಗಿದ್ದು, ತೆಲುಗು ನಿರ್ದೇಶಕ ರವಿ ಬಾಬು ಮೊದಲ ಬಾರಿಗೆ ಹಿಂದಿ ಚಿತ್ರ ನಿರ್ದೇಶಿಸುತ್ತಿದ್ದಾರೆ.

Read Full Story
04:45 PM (IST) Nov 01

India Latest News Live 1 November 2026 ಎಲ್ಲರನ್ನೂ ಖುಷಿ ಪಡಿಸೋದು ನನ್ನ ಕೆಲಸ ಅಲ್ಲ -ಸೂರ್ಯವಂಶಿ ವಿಚಾರಕ್ಕೆ ಕೋಪಿಸಿಕೊಂಡ ಗಂಭೀರ್

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಸೋಲಿನ ಬಳಿಕ ಕೋಚ್ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಾರ್ಮ್‌ನಲ್ಲಿದ್ದ ವೈಭವ್ ಸೂರ್ಯವಂಶಿ ಬದಲು ಇಶಾನ್ ಕಿಶನ್‌ಗೆ ಅವಕಾಶ ನೀಡಿದ್ದೇ ಸೋಲಿಗೆ ಕಾರಣ ಎಂಬ ಟೀಕೆಗಳು ಕೇಳಿಬಂದಿವೆ. ಇದಕ್ಕೆ ಗಂಭೀರ್, ಜನಪ್ರಿಯ ನಿರ್ಧಾರಗಳಿಗಿಂತ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ತಮ್ಮ ಕೆಲಸ ಎಂದು ತಿರುಗೇಟು ನೀಡಿದ್ದಾರೆ.

Read Full Story
04:39 PM (IST) Nov 01

India Latest News Live 1 November 2026 'ರಾಮಾಯಣ'ದ ಸೀತಾ ಪಾತ್ರಧಾರಿಗಿದೆ ಈ ಅಪರೂಪದ ಕಾಯಿಲೆ - ಸಾಯಿ ಪಲ್ಲವಿ ಹೇಳಿದ ಆ ಸಮಸ್ಯೆ ಏನು?

ಬಹುಭಾಷಾ ನಟಿ ಸಾಯಿ ಪಲ್ಲವಿ ತಮ್ಮನ್ನು ಕಾಡುತ್ತಿರುವ ರೋಸೇಶಿಯಾ ಚರ್ಮದ ಸಮಸ್ಯೆ ಕುರಿತು ಮಾತನಾಡಿದ್ದಾರೆ. ಏನಿದು ರೋಸೇಶಿಯಾ? ಸಾಮಾನ್ಯ ಮೊಡವೆಗೂ ಇದಕ್ಕೂ ಏನು ವ್ಯತ್ಯಾಸ? ಇದರ ಲಕ್ಷಣಗಳೇನು?

Read Full Story
04:15 PM (IST) Nov 01

India Latest News Live 1 November 2026 ಈ ಸ್ಟಾರ್ ನಟಿ ಮಾಡೆಲಿಂಗ್‌ಗೆ ಪಡೆದಿದ್ದು ಕೇವಲ 1500 ರೂ., ಇಂದು 900 ಕೋಟಿ ರೂ. ಒಡತಿ - ಯಾರೀಕೆ!

ಮಾಡೆಲಿಂಗ್‌ಗಾಗಿ ಕೇವಲ 1,500 ರೂ. ಸಂಭಾವನೆ ಪಡೆದಿದ್ದ ಐಶ್ವರ್ಯಾ ರೈ ಬಚ್ಚನ್, ಇಂದು ಬರೋಬ್ಬರಿ 900 ಕೋಟಿ ರೂ. ಒಡೆಯಾಗಿದ್ದಾರೆ. ಅವರ ಮೊದಲ ಸಂಪಾದನೆ, ಸಿನಿಮಾ ಸಂಭಾವನೆ ಹಾಗೂ ಆಸ್ತಿಯ ವಿವರ ಇಲ್ಲಿದೆ.

Read Full Story
04:02 PM (IST) Nov 01

India Latest News Live 1 November 2026 ಪತಿ IAS, ಪತ್ನಿ IPS - 40 ವಿಲ್ಲಾ, ವರ್ಷಕ್ಕೆ 1.8 ಕೋಟಿ ಕಮಾಯಿ; ಸಂಚಲನ ಮೂಡಿಸಿದ ಭ್ರಷ್ಟಾಚಾರ ಆರೋಪ

ಐಎಎಸ್‌ ಅಧಿಕಾರಿ ಶಿಖರ್ ಅಗರ್ವಾಲ್ ಮತ್ತು ಐಪಿಎಸ್‌ ಅಧಿಕಾರಿ ಪ್ರಶಾಖಾ ಮಾಥುರ್ ದಂಪತಿ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಇವರು 6.16 ಕೋಟಿ ರೂ. ಮೌಲ್ಯದ 40 ವಿಲ್ಲಾಗಳನ್ನು ಖರೀದಿಸಿ, ಮತ್ತೆ ಅದೇ ಕಂಪನಿಗೆ ಗುತ್ತಿಗೆ ನೀಡಿ ಕೋಟಿಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ಆರಂಭಿಸಿದೆ.
Read Full Story
04:01 PM (IST) Nov 01

India Latest News Live 1 November 2026 ಯಶ್ 'ರಾಮಾಯಣ' ನೋಡಿ ಹಾಲಿವುಡ್ ವಿಮರ್ಶಕರು ಹೇಳಿದ್ದೇನು? ಮೆಚ್ಚುಗೆ ಜೊತೆಗೆ ಬಂತು ಶಾಕಿಂಗ್ ಕಾಮೆಂಟ್

ಯಶ್ ನಟನೆಯ 'ರಾಮಾಯಣ' ಸಿನಿಮಾದ ಗ್ರಾಫಿಕ್ಸ್ ಮತ್ತು ಮೇಕಿಂಗ್‌ಗೆ ಹಾಲಿವುಡ್ ವಿಮರ್ಶಕರು ಫಿದಾ ಆಗಿದ್ದಾರೆ. ಆದರೆ ನವೆಂಬರ್ 5ರಂದು ರಿಲೀಸ್ ಆಗಲಿರುವ ಈ ಚಿತ್ರದ ಉದ್ದ, ಕಥೆ ಹೇಳಿದ ರೀತಿ ಹಾಗೂ ನಿರೂಪಣೆ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ.

Read Full Story
03:54 PM (IST) Nov 01

India Latest News Live 1 November 2026 195 ಕಿ.ಮೀ ಪ್ರಯಾಣಕ್ಕೆ ಕೇವಲ 59 ನಿಮಿಷ, ಬುಲೆಟ್ ರೈಲು ಕಾರಿಡಾರ್‌ಗೆ ಪ್ರಧಾನಿ ಮೋದಿ ಅನುಮೋದನೆ

195 ಕಿಲೋಮೀಟರ್ ಪ್ರಯಾಣಕ್ಕೆ ಕೇವಲ 59 ನಿಮಿಷ ಸಾಕು. ದೆಹಲಿಯಿಂದ ಪ್ರಮುಖ ನಗರಗಳ ಸಂಪರ್ಕಿಸುವು ಬುಲೆಟ್ ರೈಲು ಕಾರಿಡಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದಾರೆ.

Read Full Story