ಲವ್‌ನನ್ನು ಸಹೋದರಿಯಂತೆ ನೋಡುತ್ತೇನೆ ಎಂದು ಹೇಳುವ ಸ್ಕೌಟ್, ತನ್ನ ಗೆಳತಿ ಕಾಶ್ವಿ ಎದುರು ಈ ಸಂಬಂಧದ ಬಗ್ಗೆ ಸ್ಪಷ್ಟವಾಗಿ ಯಾಕೆ ಮಾತನಾಡಲಿಲ್ಲ? ಕಾಶ್ವಿಯ ಅಸಮಾಧಾನಕ್ಕೆ ಕಾರಣವೇನು? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಏನು ವಿಷಯ? ಸಲ್ಲೂ ಕೋಪಕ್ಕೆ ಕಾರಣವೇನು?

ಬಿಗ್‌ಬಾಸ್ ಮನೆಯಲ್ಲಿ ಸ್ಕೌಟ್ ಒಪಿ-ಲವ್ ಗಿಲ್ ಆತ್ಮೀಯತೆ ಚರ್ಚೆ; ವೀಕೆಂಡ್ ಕಾ ವಾರ್‌ನಲ್ಲಿ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್!

Salman Khan got engry in Hindi Bigg Boss Show- ಬಿಗ್‌ಬಾಸ್ ಮನೆಯೊಳಗೆ ನಡೆಯುತ್ತಿರುವ ಸ್ನೇಹ, ಪ್ರೀತಿ ಮತ್ತು ಸಂಬಂಧಗಳ ಆಟ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳ ನಡುವಿನ ಆತ್ಮೀಯತೆ, ಮನಸ್ತಾಪ, ಮುನಿಸುಗಳು ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿವೆ. ಅದರಲ್ಲೂ ಸ್ಕೌಟ್ ಒಪಿ ಅಲಿಯಾಸ್ ತನ್ಮಯ್ ಸಿಂಗ್ ಮತ್ತು ಲವ್ ಗಿಲ್ ನಡುವಿನ ಸ್ನೇಹ ಇದೀಗ ಮನೆಯ ಪ್ರಮುಖ ಚರ್ಚೆಯ ವಿಷಯವಾಗಿದೆ. ಇವರಿಬ್ಬರ ನಿಕಟತೆಯಿಂದ ಸ್ಕೌಟ್ ಗೆಳತಿ ಕಾಶ್ವಿ ಹಿರಾನಂದಾನಿ ಕೂಡ ಅಸಮಾಧಾನಗೊಂಡಿದ್ದಾರೆ. ಈ ವಿಚಾರ ಈಗ ವೀಕೆಂಡ್ ಕಾ ವಾರ್ ವೇದಿಕೆಯಲ್ಲೂ ಸದ್ದು ಮಾಡಿದ್ದು, ಬಾಲಿವುಡ್ ನಟ ಹಾಗೂ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಇಬ್ಬರಿಗೂ ಖಡಕ್ ಪ್ರಶ್ನೆಗಳನ್ನು ಕೇಳಿದ್ದಾರೆ.

ಸ್ಕೌಟ್‌ಗೆ ನೇರ ಪ್ರಶ್ನೆ ಕೇಳಿದ ಸಲ್ಲು!

ಸ್ಕೌಟ್ ಮತ್ತು ಲವ್ ತಮ್ಮ ನಡುವಿನ ಸಂಬಂಧವನ್ನು ಸಹೋದರ-ಸಹೋದರಿಯರ ನಡುವಿನ ಸ್ನೇಹ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರ ವರ್ತನೆ ಮತ್ತು ಆತ್ಮೀಯತೆಯನ್ನು ಗಮನಿಸಿದ ವೀಕ್ಷಕರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಲವ್‌ಗೆ ಸ್ಕೌಟ್ ಮಸಾಜ್ ಮಾಡುವುದು, ಇಬ್ಬರೂ ಬಹಳ ಹತ್ತಿರವಾಗಿ ವರ್ತಿಸುವುದು ಸೇರಿದಂತೆ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ಈ ಕಾರಣದಿಂದ ಇಬ್ಬರೂ ಟ್ರೋಲ್‌ಗೂ ಒಳಗಾಗಿದ್ದರು.

ಇದೀಗ ವೀಕೆಂಡ್ ಕಾ ವಾರ್‌ನಲ್ಲಿ ಇದೇ ವಿಚಾರವನ್ನು ಪ್ರಸ್ತಾಪಿಸಿದ ಸಲ್ಮಾನ್ ಖಾನ್, ಸ್ಕೌಟ್‌ಗೆ ನೇರವಾಗಿಯೇ ಪ್ರಶ್ನೆ ಹಾಕಿದ್ದಾರೆ. ಲವ್‌ನನ್ನು ಸಹೋದರಿಯಂತೆ ನೋಡುತ್ತೇನೆ ಎಂದು ಹೇಳುವ ಸ್ಕೌಟ್, ತನ್ನ ಗೆಳತಿ ಕಾಶ್ವಿ ಎದುರು ಈ ಸಂಬಂಧದ ಬಗ್ಗೆ ಸ್ಪಷ್ಟವಾಗಿ ಯಾಕೆ ಮಾತನಾಡಲಿಲ್ಲ? ಕಾಶ್ವಿಯ ಅಸಮಾಧಾನಕ್ಕೆ ಕಾರಣವೇನು? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಲವ್ ನಿನ್ನನ್ನು ಭಾವನಾತ್ಮಕವಾಗಿ ಬಳಸಿಕೊಂಡಿದ್ದಾಳೆಯೇ ಎಂದು ಕೇಳಿದಾಗ ಸ್ಕೌಟ್ ಅದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಲವ್ ಗಿಲ್‌ಗೂ ಸಲ್ಮಾನ್ ಖಾನ್ ಕ್ಲಾಸ್!

ಸ್ಕೌಟ್‌ನ ನಡವಳಿಕೆಯ ಬಗ್ಗೆ ಪ್ರಶ್ನಿಸಿದ ಸಲ್ಮಾನ್, ಲವ್ ಗಿಲ್ ಅವರನ್ನೂ ಸುಮ್ಮನೆ ಬಿಡಲಿಲ್ಲ. ಸ್ಕೌಟ್‌ಗೆ ಈಗಾಗಲೇ ಗೆಳತಿ ಇದ್ದಾಳೆ ಎಂಬುದು ತಿಳಿದಿದ್ದರೂ ಆತನೊಂದಿಗೆ ಇಷ್ಟೊಂದು ಆತ್ಮೀಯವಾಗಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿರಬೇಕು ಎಂದು ಸಲ್ಮಾನ್ ಹೇಳಿದ್ದಾರೆ.

ಸ್ಕೌಟ್‌ಗೆ ಗೆಳತಿ ಇದ್ದಾಳೆ ಎಂಬುದು ಗೊತ್ತಿದ್ದರೂ ಈಗ ಯಾವ ವಿವರಣೆಯನ್ನು ನಿರೀಕ್ಷಿಸುತ್ತಿದ್ದೀರಿ? ಮನವೊಲಿಸುವ ನೆಪದಲ್ಲಿ ಸುಳ್ಳು ಭರವಸೆ ಅಥವಾ ಬದ್ಧತೆ ನೀಡುವುದು ಸರಿಯಲ್ಲ ಎಂದು ಲವ್‌ಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಭಾವನೆಗಳ ಹೆಸರಿನಲ್ಲಿ ಮತ್ತೊಬ್ಬರನ್ನು ಗೊಂದಲಕ್ಕೆ ಸಿಲುಕಿಸುವುದು ಸರಿಯಲ್ಲ ಎಂಬ ಸಂದೇಶವನ್ನು ಸಲ್ಮಾನ್ ನೀಡಿದ್ದಾರೆ.

ಕಾಶ್ವಿ ಅಸಮಾಧಾನವೇ ವಿವಾದಕ್ಕೆ ಕಾರಣ?

ಈ ಹಿಂದೆ ನಡೆದ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಸ್ಕೌಟ್ ಗೆಳತಿ ಕಾಶ್ವಿ ಹಿರಾನಂದಾನಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸ್ಕೌಟ್ ಮತ್ತು ಲವ್ ನಡುವಿನ ಆತ್ಮೀಯತೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ತಮ್ಮ ಸಂಬಂಧದ ಬಗ್ಗೆ ಸ್ಕೌಟ್ ಯಾವ ರೀತಿಯ ನಿಲುವು ಹೊಂದಿದ್ದಾರೆ ಎಂಬುದರ ಕುರಿತು ಕಾಶ್ವಿ ಪ್ರಶ್ನೆಗಳನ್ನು ಎತ್ತಿದ್ದರು. ಅವರ ಈ ಮಾತುಗಳು ಬಿಗ್‌ಬಾಸ್ ಮನೆಯೊಳಗಿನ ಸಂಬಂಧದ ವಿಚಾರವನ್ನು ಮತ್ತಷ್ಟು ಚರ್ಚೆಗೆ ತಂದಿದ್ದವು.

ಇದೀಗ ಸಲ್ಮಾನ್ ಖಾನ್ ಕೂಡ ಇದೇ ವಿಷಯವನ್ನು ಪ್ರಸ್ತಾಪಿಸಿರುವುದರಿಂದ ಸ್ಕೌಟ್ ಮತ್ತು ಲವ್ ಮೇಲೆ ವೀಕ್ಷಕರ ಗಮನ ಹೆಚ್ಚಾಗಿದೆ. ಸಂಬಂಧಗಳಲ್ಲಿ ಸ್ಪಷ್ಟತೆ ಮತ್ತು ಜವಾಬ್ದಾರಿ ಇರಬೇಕು ಎಂಬ ವಿಚಾರವನ್ನು ಸಲ್ಮಾನ್ ಒತ್ತಿಹೇಳಿದ್ದಾರೆ. ಅವರ ಪ್ರಶ್ನೆಗಳಿಗೆ ಸ್ಕೌಟ್ ಮೌನವಾಗಿದ್ದರೆ, ಲವ್ ಕೂಡ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಅಂದಹಾಗೆ, ಬಿಗ್‌ಬಾಸ್ ಮನೆಯಲ್ಲಿ ಸ್ನೇಹದ ಹೆಸರಿನಲ್ಲಿ ಆರಂಭವಾದ ಈ ಆತ್ಮೀಯತೆ ಈಗ ದೊಡ್ಡ ಸಂಬಂಧದ ಸಂಘರ್ಷವಾಗಿ ಬದಲಾಗುತ್ತಿದೆ. ಸಲ್ಮಾನ್ ಖಾನ್ ನೀಡಿದ ಎಚ್ಚರಿಕೆಯಿಂದ ಸ್ಕೌಟ್ ತನ್ನ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾನಾ? ಲವ್ ಗಿಲ್ ಈ ಸಂಬಂಧದ ಬಗ್ಗೆ ಯಾವ ಸ್ಪಷ್ಟನೆ ನೀಡುತ್ತಾರೆ? ಕಾಶ್ವಿ ಮತ್ತು ಸ್ಕೌಟ್ ನಡುವಿನ ಸಂಬಂಧಕ್ಕೆ ಮುಂದೇನು ಎಂಬ ಪ್ರಶ್ನೆಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸಿವೆ. ಮುಂದಿನ ಸಂಚಿಕೆಗಳಲ್ಲಿ ಈ ವಿವಾದ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.