11:45 PM (IST) Feb 01

India Latest News Live 1 February 2026ಟ್ರಂಪ್ ಬೆದರಿಕೆಗೆ ಜಗ್ಗದ ಖಮೇನಿ - 'ನಮ್ಮ ಬೆರಳು ಟ್ರಿಗರ್ ಮೇಲಿದೆ' ಎಂದ ಇರಾನ್!

ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಗಳಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ. ಅಮೆರಿಕ ದಾಳಿ ನಡೆಸಿದರೆ ಅದು ಪ್ರಾದೇಶಿಕ ಯುದ್ಧಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದು, ಇರಾನ್ ಸೇನೆಯು ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧ!.

Read Full Story
10:41 PM (IST) Feb 01

India Latest News Live 1 February 2026Budget 2026 ದೇಶದ ಆರ್ಥಿಕತೆಯನ್ನೇ ನಾಶಪಡಿಸುವ ಬಜೆಟ್; ಮಮತಾ ಬ್ಯಾನರ್ಜಿ ಆಕ್ರೋಶ

ಕೇಂದ್ರ ಬಜೆಟ್ 2026 ಅನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಟೀಕಿಸಿದ್ದಾರೆ. ಇದೊಂದು ಪ್ರಾಯೋಗಿಕವಲ್ಲದ, ಮಹಿಳಾ ವಿರೋಧಿ ಮತ್ತು ಬಂಗಾಳಕ್ಕೆ ತಾರತಮ್ಯ ಮಾಡಿದ ಬಜೆಟ್ ಎಂದು ಆರೋಪಿಸಿದ್ದಾರೆ. 

Read Full Story
10:15 PM (IST) Feb 01

India Latest News Live 1 February 2026ಅಂಡರ್-19 ವಿಶ್ವಕಪ್ - ಪಾಕ್‌ ತಂಡವನ್ನು ಬಗ್ಗುಬಡಿದು ಸೆಮೀಸ್‌ಗೆ ಎಂಟ್ರಿಕೊಟ್ಟ ಯಂಗಿಸ್ತಾನ್! ಸೋಲಿನ ಲೆಕ್ಕ ಚುಕ್ತಾ

ಅಂಡರ್ 19 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು 58 ರನ್‌ಗಳಿಂದ ಸೋಲಿಸಿ ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಈ ಮೂಲಕ ಏಷ್ಯಾಕಪ್ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಯುವಪಡೆ ಸೇಡು ತೀರಿಸಿಕೊಂಡಿದ್ದು, ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ.
Read Full Story
08:34 PM (IST) Feb 01

India Latest News Live 1 February 2026Big Breaking News - ಟಿ20 ವಿಶ್ವಕಪ್‌ನಲ್ಲಿ ಭಾರತ ಎದುರಿನ ಮ್ಯಾಚ್ ಬಾಯ್ಕಾಟ್ ಮಾಡಿದ ಪಾಕಿಸ್ತಾನ!

ಬಹುನಿರೀಕ್ಷಿತ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ತಂಡವು ಬಹಿಷ್ಕರಿಸಿದೆ ಎಂದು ಪಾಕ್ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಈ ನಿರ್ಧಾರದಿಂದ ಭಾರತಕ್ಕೆ ವಾಕ್‌ಓವರ್ ಸಿಗಲಿದ್ದು, ಐಸಿಸಿ ಹಾಗೂ ಪ್ರಸಾರಕರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ.
Read Full Story
08:25 PM (IST) Feb 01

India Latest News Live 1 February 2026Union Budget ಬಗ್ಗೆ ಸುಳ್ಳು ಹಬ್ಬಿಸಬೇಡಿ; ಅಂಕಿ-ಅಂಶಗಳಿದ್ದರೆ ಚರ್ಚೆಗೆ ಬನ್ನಿ ರಾಹುಲ್ ಗಾಂಧಿಗೆ ಸೀತಾರಾಮನ್ ಸವಾಲು!

ಕೇಂದ್ರ ಬಜೆಟ್ 2026 ಮಂಡನೆಯ ನಂತರ, ನಿರುದ್ಯೋಗದ ಕುರಿತು ರಾಹುಲ್ ಗಾಂಧಿ ಮಾಡಿದ ಟೀಕೆಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ಸಮರ್ಥಿಸಿಕೊಂಡರು.

Read Full Story
07:44 PM (IST) Feb 01

India Latest News Live 1 February 2026ಮೇ ಬಳಿಕ ಮೋದಿ ರಾಜೀನಾಮೆ? ಯೋಗಿ ಆಗಲ್ಲ ಪಿಎಂ- 10 ರೋಚಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

ಖ್ಯಾತ ಜ್ಯೋತಿಷಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆ ಮತ್ತು ಮುಂದಿನ ಪ್ರಧಾನಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದರೊಂದಿಗೆ, ಅಮಿತಾಭ್ ಬಚ್ಚನ್, ಐಶ್ವರ್ಯ-ಅಭಿಷೇಕ್, ವಿರಾಟ್-ಅನುಷ್ಕಾ ಸೇರಿದಂತೆ ಹಲವು ಸೆಲೆಬ್ರಿಟಿಗಳ ಭವಿಷ್ಯದ ಬಗ್ಗೆಯೂ ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

Read Full Story
07:09 PM (IST) Feb 01

India Latest News Live 1 February 2026ಭಾರತದ ಈ ಸಿಟಿ ರಸ್ತೆಯಲ್ಲಿ 50 ವರ್ಷದಿಂದ ಗುಂಡಿಯೇ ಇಲ್ಲ, ಹೊಟ್ಟೆ ಉರಿದುಕೊಳ್ತಿದ್ದಾರೆ ಬೆಂಗಳೂರಿಗರು

ಭಾರತದ ಈ ಸಿಟಿ ರಸ್ತೆಯಲ್ಲಿ 50 ವರ್ಷದಿಂದ ಗುಂಡಿಯೇ ಇಲ್ಲ, ಈ ರಸ್ತೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಬೆಂಗಳೂರಿಗರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಈ ರಸ್ತೆ ಮಾಡಿಸಿದ ನಾಯಕ, ಕಾಂಟ್ರಾಕ್ಟರ್ ಕರೆಸಿ ಇಲ್ಲಿ ರಸ್ತೆ ಮಾಡಿಸಿ ಎಂದು ಸಲಹೆ ನೀಡುತ್ತಿದ್ದಾರೆ.

Read Full Story
06:26 PM (IST) Feb 01

India Latest News Live 1 February 2026ಪಾಕ್‌ಗೆ ಕರೆಂಟ್ ಶಾಕ್ ಕೊಟ್ಟ ವೈಭವ್ ಸೂರ್ಯವಂಶಿ, ಗಿಲ್, ಉನ್ಮುಕ್ತ್ ಚಾಂದ್ ದಾಖಲೆ ಉಡೀಸ್

ಪಾಕ್‌ಗೆ ಕರೆಂಟ್ ಶಾಕ್ ಕೊಟ್ಟ ವೈಭವ್ ಸೂರ್ಯವಂಶಿ, ಯೂತ್ ಏಕದಿನ ಪಂದ್ಯದಲ್ಲಿ ಸೂರ್ಯವಂಶಿ ಹೊಡೆತಕ್ಕೆ ಪಾಕಿಸ್ತಾನ ತಲೆ ತಿರುಗಿದ್ದು ಮಾತ್ರವಲ್ಲ, ಶುಭಮನ್ ಗಿಲ್, ಉನ್ಮುಕ್ತ್ ಚಾಂದ್ ದಾಖಲೆ ಪುಡಿ ಪುಡಿಯಾಗಿದೆ.

Read Full Story
04:56 PM (IST) Feb 01

India Latest News Live 1 February 2026ಅವಳಿ ಮಕ್ಕಳು ಹುಟ್ಟಿದ್ಮೇಲೆ ಮೊದಲ ಪ್ರತಿಕ್ರಿಯೆ ಕೊಟ್ಟ ರಾಮ್ ಚರಣ್!

ರಾಮ್ ಚರಣ್ ಅವಳಿ ಮಕ್ಕಳಿಗೆ ತಂದೆಯಾದ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ಗೊತ್ತೇ ಇದೆ. ಈಗಾಗಲೇ ಚಿರಂಜೀವಿ ತಮ್ಮ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Read Full Story
04:55 PM (IST) Feb 01

India Latest News Live 1 February 2026ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ರಸ್ತೆ ಅಪಘಾತ ಸಂತ್ರಸ್ತರ ಪರಿಹಾರಕ್ಕೆ ಶೂನ್ಯ ತೆರಿಗೆ

ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಜನ ಸಾಮಾನ್ಯರಿಗೆ ಭರ್ಜರಿ ವಿನಾಯಿತಿ ನೀಡಿದೆ. ಈ ಪೈಕಿ ಸಂಕಷ್ಟದಲ್ಲಿರುವ ಕುಟುಂಬದ ನೆರವಿಗೂ ಹೊಸ ಪದ್ಧತಿ ಘೋಷಿಸಲಾಗಿದೆ.

Read Full Story
04:22 PM (IST) Feb 01

India Latest News Live 1 February 2026ನಾಳೆನೇ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ? ವೈರಲ್ ಆಯ್ತು ವಿಡಿಯೋ

ಟಾಲಿವುಡ್‌ನ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾಗಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಫೆಬ್ರವರಿ 2 ರಂದು ಅವರ ಮದುವೆ ನಡೆಯಲಿದ್ದು, ಉದಯಪುರ ಸಿಟಿ ಪ್ಯಾಲೇಸ್‌ನಲ್ಲಿ ಸಿದ್ಧತೆಗಳು ನಡೆಯುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ.

Read Full Story
04:01 PM (IST) Feb 01

India Latest News Live 1 February 2026ನೀವು ಮನಸ್ಸಲ್ಲಿ ಅಂದುಕೊಂಡಿದ್ದು ಇನ್‌ಸ್ಟಾಗ್ರಾಮ್‌ನಲ್ಲಿ ಜಾಹೀರಾತಾಗಿ ಬರುತ್ತಿದೆಯೇ? ತಪ್ಪಿಸಲು ಇಲ್ಲಿದೆ ಸಿಂಪಲ್ ದಾರಿ

ನಿಮ್ಮ ಕೆಲಸಕ್ಕೆ ಸಂಬಂಧಿಸಿದ ವಿಷಯಗಳು, ನೀವು ಪ್ರಸ್ತುತ ಎದುರಿಸುತ್ತಿರುವ ಮಾನಸಿಕ ಸ್ಥಿತಿ. ಇದಕ್ಕೆ ಸಂಬಂಧಿಸಿದ ಜಾಹೀರಾತುಗಳು ಮತ್ತು ರೀಲ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಮುಂದೆ ಪದೇ ಪದೇ ಕಾಣಿಸಿಕೊಳ್ಳುತ್ತಿರಬಹುದು. ಇದಕ್ಕೆ ಕಾರಣವೇನು? 

Read Full Story
03:37 PM (IST) Feb 01

India Latest News Live 1 February 2026ಭಾರತದ ಟಾಪ್ 10 ಶ್ರೀಮಂತ ಕ್ರಿಕೆಟಿಗರು - ಸಿರಿತನದಲ್ಲಿ ಸಚಿನ್, ಕೊಹ್ಲಿ, ಧೋನಿಗಿಂತ ಮೇಲಿದ್ದಾರೆ ಈ ಕ್ರಿಕೆಟಿಗ!

ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್ ಅವರಂತಹ ಪ್ರಮುಖರಿದ್ದಾರೆ. ಕ್ರಿಕೆಟ್, ಜಾಹೀರಾತುಗಳು ಮತ್ತು ಬ್ಯುಸಿನೆಸ್‌ಗಳು ಇವರ ಪ್ರಮುಖ ಆದಾಯದ ಮೂಲಗಳಾಗಿವೆ. ಆದರೆ ಅವರಿಗಿಂತ ಶ್ರೀಮಂತ ಕ್ರಿಕೆಟಿಗನಿದ್ದಾನೆ.

Read Full Story
03:20 PM (IST) Feb 01

India Latest News Live 1 February 2026ಕಡಿಮೆ ಬೆಲೆ, ಹೆಚ್ಚು ಆದಾಯ! ಒಳ್ಳೆಯ ರೀಸೇಲ್ ವ್ಯಾಲ್ಯೂ ಇರುವ ಬೈಕ್‌, ಸ್ಕೂಟರ್‌ಗಳು ಇವೇ ನೋಡಿ!

ಭಾರತದ ಮಾರುಕಟ್ಟೆಯಲ್ಲಿ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯ ಹಾಗೂ ಉತ್ತಮ ರೀ-ಸೇಲ್ ಮೌಲ್ಯವನ್ನು ನೀಡುವ ದ್ವಿಚಕ್ರ ವಾಹನಗಳ ಬಗ್ಗೆ ತಿಳಿಯೋಣ. ಹೀರೋ, ಹೋಂಡಾ, ಬಜಾಜ್‌ನಂತಹ ಬ್ರ್ಯಾಂಡ್‌ಗಳ ಆಕ್ಟಿವಾ, ಸ್ಪ್ಲೆಂಡರ್, ಶೈನ್‌ನಂತಹ ಮಾಡೆಲ್‌ಗಳು ಇಲ್ಲಿವೆ. 

Read Full Story
02:59 PM (IST) Feb 01

India Latest News Live 1 February 2026ಆತ್ಮಗೌರವ ಅಡವಿಟ್ಟು ಮಿತ್ರ ದೇಶಗಳ ಬಳಿ ಸಾಲ - ತಾವು ಬಿಕಾರಿಯಾಗಿದ್ದನ್ನು ಒಪ್ಪಿಕೊಂಡ ಪಾಕ್ ಪ್ರಧಾನಿ ಷರೀಫ್!

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ದೇಶದ ತೀವ್ರ ಆರ್ಥಿಕ ಸಂಕಷ್ಟವನ್ನು ಒಪ್ಪಿಕೊಂಡಿದ್ದಾರೆ. ಐಎಂಎಫ್ ಮತ್ತು ಮಿತ್ರ ದೇಶಗಳ ಮುಂದೆ ಸಾಲ ಕೇಳುವುದು ಆತ್ಮಗೌರವಕ್ಕೆ ಧಕ್ಕೆ ತಂದಂತೆ ಮತ್ತು ತಲೆಬಗ್ಗಿಸಿದಂತೆ ಎಂದು ಅವರು ತಮ್ಮ ಅಸಹಾಯಕತೆಯನ್ನು ಬಣ್ಣಿಸಿದ್ದಾರೆ.

Read Full Story
02:09 PM (IST) Feb 01

India Latest News Live 1 February 2026ಆಂಬುಲೆನ್ಸ್‌ನಲ್ಲಿ 2.6 ಕೋಟಿ ಮೌಲ್ಯದ ಗಾಂಜಾ ಸಾಗಣೆ - ಹಾವು ಹಿಡಿಯುವುದಕ್ಕೆ ಫೇಮಸ್ ಆಗಿದ್ದ ಯುಟ್ಯೂಬರ್‌ ಅಂದರ್

ಸಾಮಾಜಿಕ ಜಾಲತಾಣದಲ್ಲಿ ಹಾವುಗಳ ರಕ್ಷಣೆ ಮಾಡುವ ವೀಡಿಯೋಗಳಿಂದಲೇ ಖ್ಯಾತಿ ಗಳಿಸಿದ್ದ 'ಸರ್ಪಮಿತ್ರ' ಆಕಾಶ್ ಜಾಧವ್ ಎಂಬ ಯೂಟ್ಯೂಬರ್‌ನನ್ನು ಛತ್ತೀಸ್‌ಗಢ ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಸಾರ್ವಜನಿಕ ಇಮೇಜ್ ಬಳಸಿ ಆಂಬ್ಯುಲೆನ್ಸ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾ ಅಕ್ರಮವಾಗಿ ಸಾಗಿಸುತ್ತಿದ್ದ..

Read Full Story
02:00 PM (IST) Feb 01

India Latest News Live 1 February 2026ಅಚ್ಚರಿಯ ಬೆಳವಣಿಗೆ - ZUDIO ಶಾಪಿಂಗ್‌ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು!

ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳನ್ನು ನೀಡುತ್ತಿದ್ದ ಝುಡಿಯೋ, ಇದೀಗ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಒಂದೇ ರೀತಿಯ ಡಿಸೈನ್‌ಗಳಿಂದಾಗಿ ಗ್ರಾಹಕರು ಮುಜುಗರ ಅನುಭವಿಸುತ್ತಿದ್ದು, ಈ ಕಾರಣದಿಂದ ಝುಡಿಯೋದಿಂದ ದೂರ ಸರಿಯುತ್ತಿದ್ದಾರೆ.
Read Full Story
12:24 PM (IST) Feb 01

India Latest News Live 1 February 2026ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಅಪ್ಪ ಕ್ಯಾಪ್ಟನ್ ಸುಮಿತ್ ಕಪೂರ್ ಸ್ಮರಿಸಿ ಮಗಳ ಭಾವುಕ ಬರಹ

ಮಹಾರಾಷ್ಟ್ರದ ಡಿಸಿಎಂ ಆಗಿದ್ದ ಅಜಿತ್ ಪವಾರ್ ಬಲಿ ಪಡೆದ ಲಿಯರ್‌ಜೆಟ್ ವಿಮಾನದಲ್ಲಿದ್ದ ಕ್ಯಾಪ್ಟನ್ ಸುಮಿತ್ ಕಪೂರ್ ಕೂಡ ದುರಂತರದಲ್ಲಿ ಸಾವನ್ನಪ್ಪಿದ್ದು, ಅವರ ಪುತ್ರಿ ತಮ್ಮ ತಂದೆಯನ್ನು ಸ್ಮರಿಸಿಕೊಂಡು ಭಾವುಕರಾಗಿ ಪೋಸ್ಟ್ ಮಾಡಿದ್ದು, ಆ ಪೋಸ್ಟ್‌ ಅನೇಕರನ್ನು ಭಾವುಕರಾಗಿಸಿದೆ. 

Read Full Story
10:56 AM (IST) Feb 01

India Latest News Live 1 February 2026ಇರಾನ್‌ ಬದಲು ವೆನಜುವೇಲದಿಂದ ಭಾರತದ ತೈಲ ಖರೀದಿ ಎಂದ ಟ್ರಂಪ್‌, ಖಚಿತಪಡಿಸದ ಭಾರತ ಸರ್ಕಾರ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಾರ, ಭಾರತ ಇರಾನ್ ಬದಲಿಗೆ ವೆನುಜುವೇಲದಿಂದ ತೈಲ ಖರೀದಿಸಲಿದೆ. 2019ರಲ್ಲಿ ಅಮೆರಿಕದ ನಿರ್ಬಂಧಗಳಿಂದಾಗಿ ಭಾರತವು ವೆನುಜುವೇಲದಿಂದ ತೈಲ ಖರೀದಿ ನಿಲ್ಲಿಸಿತ್ತು. ಇದೀಗ ರಿಲಯನ್ಸ್ ಇಂಡಸ್ಟ್ರೀಸ್ ಮತ್ತೆ ಅಲ್ಲಿಂದ ಕಚ್ಚಾ ತೈಲ ಖರೀದಿಸಲು ಪ್ರಯತ್ನ ನಡೆಸುತ್ತಿದೆ.

Read Full Story
10:33 AM (IST) Feb 01

India Latest News Live 1 February 2026Union Budget 2026 - ಬಜೆಟ್‌ ದಿನ ಗಮನಸೆಳೆಯಬಹುದಾದ 11 ಷೇರುಗಳು!

NMDC, ಭಾರತ್ ಎಲೆಕ್ಟ್ರಾನಿಕ್ಸ್, ಲಾರ್ಸೆನ್ & ಟೂಬ್ರೊ, ಜುಪಿಟರ್ ವ್ಯಾಗನ್ಸ್, ಹಿಂದೂಸ್ತಾನ್ ಏರೋನಾಟಿಕ್ಸ್, ಟಿವಿಎಸ್ ಮೋಟಾರ್, ವಾರೀ ಎನರ್ಜಿಸ್ ಸೇರಿದಂತೆ 11 ಷೇರುಗಳ ಬಗ್ಗೆ ಗಮನವಿರಲಿ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

Read Full Story