ಪಾಕ್‌ಗೆ ಕರೆಂಟ್ ಶಾಕ್ ಕೊಟ್ಟ ವೈಭವ್ ಸೂರ್ಯವಂಶಿ, ಗಿಲ್, ಉನ್ಮುಕ್ತ್ ಚಾಂದ್ ದಾಖಲೆ ಉಡೀಸ್
ಪಾಕ್‌ಗೆ ಕರೆಂಟ್ ಶಾಕ್ ಕೊಟ್ಟ ವೈಭವ್ ಸೂರ್ಯವಂಶಿ, ಯೂತ್ ಏಕದಿನ ಪಂದ್ಯದಲ್ಲಿ ಸೂರ್ಯವಂಶಿ ಹೊಡೆತಕ್ಕೆ ಪಾಕಿಸ್ತಾನ ತಲೆ ತಿರುಗಿದ್ದು ಮಾತ್ರವಲ್ಲ, ಶುಭಮನ್ ಗಿಲ್, ಉನ್ಮುಕ್ತ್ ಚಾಂದ್ ದಾಖಲೆ ಪುಡಿ ಪುಡಿಯಾಗಿದೆ.

ಪಾಕಿಸ್ತಾನ ವಿರುದ್ದ ದಾಖಲೆ
ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಯೂತ್ ಏಕದಿನ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಹಲವು ದಾಖಲೆಗಳು ಪುಡಿ ಪುಡಿಯಾಗಿದೆ. 14ರ ಹರೆಯದ ವೈಭವ್ ಸೂರ್ಯವಂಶಿ, ಪಾಕ್ ವಿರುದ್ಧ ಮಿಂಚಿನ ಆಟವಾಡಿ ಶುಬಮನ್ ಗಿಲ್ ಮತ್ತು ಉನ್ಮುಕ್ತ್ ಚಾಂದ್ ಅವರ ದಾಖಲೆಗಳನ್ನು ಮುರಿದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಪಾಕ್ ವಿರುದ್ಧ ವೈಭವ್ 22 ಎಸೆತಗಳಲ್ಲಿ 30 ರನ್ ಗಳಿಸಿದರು. ಈ ಮೂಲಕ ಯೂತ್ ಏಕದಿನದಲ್ಲಿ 1149 ರನ್ ಗಳಿಸಿದ್ದ ಗಿಲ್ ಮತ್ತು ಉನ್ಮುಕ್ತ್ ಚಂದ್ ಅವರನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದಿದ್ದಾರೆ. ಈಗಾಗಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿರುವ ವೈಭವ್ ಸೂರ್ಯವಂಶಿ ಪಾಕಿಸ್ತಾನ ವಿರುದ್ದದ ಅಬ್ಬರದ ಆಟ ಭಾರತೀಯ ಅಭಿಮಾನಿಗಳನ್ನು ಮತ್ತಷ್ಟು ಖುಷಿಪಡಿಸಿದೆ.
ಯೂತ್ ಎಕದಿನದಲ್ಲಿ ಟಾಪ್ ಸ್ಕೋರರ್
ವೈಭವ್ 23 ಯೂತ್ ಏಕದಿನಗಳಲ್ಲಿ 1169 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ, 6 ಅರ್ಧಶತಕ ಸೇರಿವೆ. ಯೂತ್ ಏಕದಿನದಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ದಿಗ್ಗಜರ ಸಾಲಿನಲ್ಲಿ ವೈಭವ್ ಸೂರ್ಯವಂಶಿ ಗುರುತಿಸಿಕೊಂಡಿದ್ದಾರೆ.
ವೈಭವ್ ಐಪಿಎಲ್ ದಾಖಲೆ
ಐಪಿಎಲ್‌ನಲ್ಲೂ ವೈಭವ್ ಮಿಂಚಿದ್ದಾರೆ. ಗುಜರಾತ್ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿ, ವೇಗದ ಶತಕ ಬಾರಿಸಿದ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ಇವರನ್ನು 1.10 ಕೋಟಿಗೆ ಖರೀದಿಸಿತ್ತು.
12ನೇ ವಯಸಿಗೆ ರಣಜಿ ಕ್ರಿಕೆಟ್
ಬಿಹಾರದವರಾದ ವೈಭವ್ 2011ರಲ್ಲಿ ಜನಿಸಿದರು. ಇವರ ತಂದೆಯೂ ಮಾಜಿ ಕ್ರಿಕೆಟಿಗ. 12ನೇ ವಯಸ್ಸಿಗೆ ರಣಜಿಗೆ ಪಾದಾರ್ಪಣೆ ಮಾಡಿ ಇತಿಹಾಸ ನಿರ್ಮಿಸಿದ್ದರು. ಬ್ರಿಯಾನ್ ಲಾರಾ ಇವರ ರೋಲ್ ಮಾಡೆಲ್.
ಶೀಘ್ರದಲ್ಲೇ ಟೀಂ ಇಂಡಿಯಾಗೆ
ವೈಭವ್ ಪ್ರದರ್ಶನ ನೋಡಿದರೆ, ಅವರು ಶೀಘ್ರದಲ್ಲೇ ಟೀಂ ಇಂಡಿಯಾ ಸೀನಿಯರ್ ತಂಡಕ್ಕೆ ಪಾದಾರ್ಪಣೆ ಮಾಡುವ ದಿನಗಳು ದೂರವಿಲ್ಲ. ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಬೌಲಿಂಗ್ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

