11:16 PM (IST) Dec 02

India Latest News Live 2 December 2025ಡಿ.4ರಂದು ಅಪರೂಪದ 'ಶೀತಲ ಚಂದ್ರ'ನ ದರ್ಶನ - ಯಾವ ರಾಶಿಯ ಮೇಲೆ ಏನು ಪ್ರಭಾವ? ಇಲ್ಲಿದೆ ನೋಡಿ

ಡಿಸೆಂಬರ್ 4 ರಂದು ವರ್ಷದ ಕೊನೆಯ ಹುಣ್ಣಿಮೆಯಾದ ಶೀತಲ ಚಂದ್ರನ ದರ್ಶನವಾಗಲಿದೆ. ಇದನ್ನು "ದೀರ್ಘ ರಾತ್ರಿ ಚಂದ್ರ" ಎಂದೂ ಕರೆಯುತ್ತಾರೆ, ಇದು ಚಳಿಗಾಲದ ಆರಂಭವನ್ನು ಸೂಚಿಸುತ್ತದೆ. ಈ ಅಪರೂಪದ ಹುಣ್ಣಿಮೆಯು ಮೇಷದಿಂದ ಮೀನದವರೆಗಿನ 12 ರಾಶಿಗಳ ಮೇಲೆ ಬೀರಲಿರುವ ಪರಿಣಾಮಗಳನ್ನು ಈ ಲೇಖನ ವಿವರಿಸುತ್ತದೆ.
Read Full Story
10:32 PM (IST) Dec 02

India Latest News Live 2 December 2025ಭಾರತಕ್ಕೆ ಬರುವ ಮುನ್ನ ತಮ್ಮ ಅಜೆಂಡಾ ತಿಳಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌!

ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿಗೂ ಮುನ್ನ ತಮ್ಮ ಕಾರ್ಯಸೂಚಿಯನ್ನು ಸ್ಪಷ್ಟಪಡಿಸಿದ್ದಾರೆ. ಆಮದು, ವ್ಯಾಪಾರ ಮತ್ತು ಆರ್ಥಿಕ ಸಹಕಾರದ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿವರವಾಗಿ ಚರ್ಚಿಸುವುದಾಗಿ ಅವರು ಹೇಳಿದ್ದಾರೆ. ಪಾಶ್ಚಿಮಾತ್ಯ ದೇಶಗಳ ವಿರುದ್ಧವೂ ಪುಟಿನ್ ಆರೋಪಗಳನ್ನು ಮಾಡಿದ್ದಾರೆ.

Read Full Story
09:50 PM (IST) Dec 02

India Latest News Live 2 December 2025ಕಾಂಗ್ರೆಸ್‌ಗೆ ಕೈತಪ್ಪುತ್ತಾ ಮತ್ತೊಂದು ರಾಜ್ಯ, ಎನ್‌ಡಿಎ ಜೊತೆ ಕೈಜೋಡಿಸಲು ಮುಂದಾದ ಜಾರ್ಖಂಡ್‌ ಸಿಎಂ?

Jharkhand CM Hemant Soren & JMM May Join NDA After High-Level Meetings with BJP ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಹಿರಿಯ ಬಿಜೆಪಿ ನಾಯಕರ ನಡುವಿನ ಹಿಮ್ಮುಖ ಸಭೆಗಳ ವರದಿಗಳು ಜಾರ್ಖಂಡ್‌ನಲ್ಲಿ ಪ್ರಮುಖ ಅಧಿಕಾರ ಬದಲಾವಣೆಯ ಊಹಾಪೋಹಗಳಿಗೆ ಕಾರಣವಾಗಿವೆ.

Read Full Story
08:59 PM (IST) Dec 02

India Latest News Live 2 December 2025ಸರಾಸರಿ ಮಾಸಿಕ ವೇತನ - ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ

ಫೋರ್ಬ್ಸ್ ಅಡ್ವೈಸರ್‌ ಇಂಡಿಯಾ ವರದಿಯ ಪ್ರಕಾರ, ಭಾರತದ ಸರಾಸರಿ ಮಾಸಿಕ ವೇತನ ₹28,000 ಆಗಿದೆ. ದೆಹಲಿ ₹35,000 ದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ₹33,000 ದೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಿಹಾರ, ಅರುಣಾಚಲ ಪ್ರದೇಶದಂತಹ ರಾಜ್ಯಗಳು ಅತಿ ಕಡಿಮೆ ವೇತನ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿವೆ.
Read Full Story
08:12 PM (IST) Dec 02

India Latest News Live 2 December 2025ಡಿ.07ಕ್ಕೆ ಸ್ಮೃತಿ ಮಂಧನಾ ಮದುವೆ ಪೋಸ್ಟ್‌ಗೆ ಸಹೋದರ ಸ್ಪಷ್ಟನೆ, ಏನಿದು ಹೊಸ ಬಾಂಬ್

ಡಿ.07ಕ್ಕೆ ಸ್ಮೃತಿ ಮಂಧನಾ ಮದುವೆ ಪೋಸ್ಟ್‌ಗೆ ಸಹೋದರ ಸ್ಪಷ್ಟನೆ, ಏನಿದು ಹೊಸ ಬಾಂಬ್, ಪಲಾಶ್ ಮುಚ್ಚಾಲ್ ಹಾಗೂ ಮಂಧನಾ ಮದುವೆ ಬಹುತೇಕ ರದ್ದಾಗಿದೆ ಎಂಬ ಮಾತುಗಳ ನಡುವೆ ಡಿಸೆಂಬರ್ 7ಕ್ಕೆ ಹೊಸ ದಿನಾಂಕ ಫಿಕ್ಸ್ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.

Read Full Story
08:02 PM (IST) Dec 02

India Latest News Live 2 December 2025ಸ್ನೇಹಿತರ ದೊಡ್ಡತನದಿಂದ ಮರೆಯಲಾರದ ಕ್ಷಣವಾಗಿ ಬದಲಾಯ್ತು ಬಡ ಯುವಕನ ಮದುವೆ

ಉತ್ತರಪ್ರದೇಶದಲ್ಲೊಂದು ವಿಶೇಷ ಮದುವೆ ನಡೆದಿದೆ. ಆರ್ಥಿಕ ಸಂಕಷ್ಟದಿಂದಾಗಿ ಕಂಗೆಟ್ಟಿದ್ದ ಯುವಕನೋರ್ವನ ಮದುವೆಯಲ್ಲಿ ಸ್ನೇಹಿತರು ದೊಡ್ಡತನ ಮೆರೆದಿದ್ದಾರೆ.

Read Full Story
07:32 PM (IST) Dec 02

India Latest News Live 2 December 2025ತನ್ನ ಜೀವಿತದ 3.4 ಕೋಟಿ ರೂಪಾಯಿ ಉಳಿತಾಯದ ಹಣ ಏಮ್ಸ್‌ಗೆ ದಾನ ಮಾಡಿದ 100 ವರ್ಷದ ವೈದ್ಯೆ!

100-Year-Old Doctor Donates ₹3.4 Crore Life Savings to AIIMS Bhubaneswarತಮ್ಮ 100ನೇ ಜನ್ಮದಿನದಂದು, ಒಡಿಶಾದ ಹಿರಿಯ ವೈದ್ಯೆ ಡಾ.ಕೆ.ಲಕ್ಷ್ಮೀಬಾಯಿ ಅವರು ತಮ್ಮ ಜೀವಮಾನದ ಉಳಿತಾಯವಾದ 3.4 ಕೋಟಿ ರೂಪಾಯಿಗಳನ್ನು ಭುವನೇಶ್ವರದ ಏಮ್ಸ್‌ ಆಸ್ಪತ್ರೆಗೆ ದಾನ ಮಾಡಿದ್ದಾರೆ. 

Read Full Story
07:15 PM (IST) Dec 02

India Latest News Live 2 December 2025ನುಸುಳುಕೋರ ರೋಹಿಂಗ್ಯ ಮುಸ್ಲಿಮರಿಗೆ ಭವ್ಯ ಸ್ವಾಗತ ಕೊಡಬೇಕೆ? ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಚಾಟಿ

ನುಸುಳುಕೋರ ರೋಹಿಂಗ್ಯ ಮುಸ್ಲಿಮರಿಗೆ ಭವ್ಯ ಸ್ವಾಗತ ಕೊಡಬೇಕೆ? ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಅಕ್ರಮವಾಗಿ ಭಾರತಕ್ಕೆ ಬರುತ್ತಾರೆ, ಅವರ ಮಕ್ಕಳಿಗೆ ಶಿಕ್ಷಣ, ಬೇಕು, ಆಹಾರ ಬೇಕು ಎಂದರೆ ಕೊಡಲು ಸಾಧ್ಯವೇ? ಎಂದು ಸುಪ್ರೀಂ ಗರಂ ಆಗಿದೆ.

Read Full Story
07:03 PM (IST) Dec 02

India Latest News Live 2 December 202514ನೇ ವಯಸ್ಸಿಗೆ 3 ಶತಕ! ಹೊಸ ಇತಿಹಾಸ ಬರೆದ ವೈಭವ್ ಸೂರ್ಯವಂಶಿ!

14 ವರ್ಷದ ವೈಭವ್ ಸೂರ್ಯವಂಶಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (SMAT) ಅತಿ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾನೆ. ಬಿಹಾರ ಪರ 108 ರನ್ (ಔಟಾಗದೆ) ಗಳಿಸಿ ದಾಖಲೆ ಬರೆದಿದ್ದಾನೆ.

Read Full Story
06:26 PM (IST) Dec 02

India Latest News Live 2 December 2025ಬ್ಲಿಂಕಿಟ್‌ಗಿಂತ ಫಾಸ್ಟ್, ಮದುವೆಯಾಗಿ ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಡಿವೋರ್ಸ್ ಕೊಟ್ಟ ಪತ್ನಿ

ಬ್ಲಿಂಕಿಟ್‌ಗಿಂತ ಫಾಸ್ಟ್, ಮದುವೆಯಾಗಿ ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಡಿವೋರ್ಸ್ ಕೊಟ್ಟ ಪತ್ನಿ, ಹಲವು ತಿಂಗಳಿನಿಂದ ಮದುವೆ ತಯಾರಿ ನಡೆದಿದೆ. ಅದ್ಧೂರಿಯಾಗಿ ಮದವೆಯೂ ಮುಗಿದಿದೆ. ಮಂಟಪದಿಂದ ಮದುವೆ ಮನೆಗೆ ಬಂದ 20 ನಿಮಿಷದಲ್ಲಿ ಎಲ್ಲವೂ ಉಲ್ಟಾ ಆಗಿದೆ.

Read Full Story
06:14 PM (IST) Dec 02

India Latest News Live 2 December 2025ಒಂದ್ವೇಳೆ ಗೌತಮ್ ಗಂಭೀರ್ ಸ್ಥಾನದಲ್ಲಿ ನಾನಿದ್ದಿದ್ದರೇ..? ಅಚ್ಚರಿ ಹೇಳಿಕೆ ಕೊಟ್ಟ ಮಾಜಿ ಕೋಚ್ ರವಿಶಾಸ್ತ್ರಿ!

ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ತಂಡವು ಟೆಸ್ಟ್ ಸರಣಿಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ವೈಟ್‌ವಾಷ್ ಸೋಲಿನ ಬಳಿಕ, ಮಾಜಿ ಕೋಚ್ ರವಿಶಾಸ್ತ್ರಿ ಗಂಭೀರ್ ಹಾಗೂ ಆಟಗಾರರ ಮೇಲೆ ಕಿಡಿಕಾರಿದ್ದಾರೆ. 

Read Full Story
06:08 PM (IST) Dec 02

India Latest News Live 2 December 2025ಆ*ತ್ಮಹತ್ಯೆಗೆ ಶರಣಾದ ಐಎಎಸ್‌ ಅಧಿಕಾರಿಯ ಪುತ್ರಿ, ಗಂಡನ ಮೇಲೆ ಆರೋಪ ಮಾಡಿದ ಕುಟುಂಬ

ಹಿರಿಯ ಐಎಎಸ್‌ ಅಧಿಕಾರಿಯ ಪುತ್ರಿ ಮಾಧುರಿ ಸಾಹಿತಿಬಾಯಿ, ಪತಿಯಿಂದ ವರದಕ್ಷಿಣೆ ಕಿರುಕುಳ ತಾಳಲಾರದೆ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ ವಿವಾಹವಾದ ಕೆಲವೇ ತಿಂಗಳುಗಳಲ್ಲಿ ಪತಿ ರಾಜೇಶ್ ನಾಯ್ಡು ಹೆಚ್ಚಿನ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ.

Read Full Story
06:08 PM (IST) Dec 02

India Latest News Live 2 December 20252029ರೊಳಗೆ ಭಾರತದ ನೌಕಾಪಡೆ ಮಡಿಲು ಸೇರಲಿದೆ ರಾಫೆಲ್ ಎಂ ಫೈಟರ್ ಜೆಟ್

ಭಾರತೀಯ ನೌಕಾಪಡೆಗೆ 2029ರೊಳಗೆ 26 ರಫೇಲ್-ಎಂ ಫೈಟರ್ ಜೆಟ್‌ಗಳು ಸೇರ್ಪಡೆಯಾಗಲಿವೆ. ಇವು ಐಎನ್ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್‌ನಿಂದ ಕಾರ್ಯನಿರ್ವಹಿಸಲಿವೆ. ಸ್ವದೇಶಿ TEDBF ಯುದ್ಧವಿಮಾನ ಸಿದ್ಧವಾಗುವವರೆಗೆ ಇದು ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

Read Full Story
05:49 PM (IST) Dec 02

India Latest News Live 2 December 2025ಮುನ್ನಾರ್ ಪಂಚಾಯತ್ ಚುನಾವಣೆಗೆ ಸೋನಿಯಾ ಗಾಂಧಿಗೆ ಟಿಕೆಟ್ ಕೊಟ್ಟ ಬಿಜೆಪಿ, ಸಂಕಷ್ಟದಲ್ಲಿ ಕಾಂಗ್ರೆಸ್

ಮುನ್ನಾರ್ ಪಂಚಾಯತ್ ಚುನಾವಣೆಗೆ ಸೋನಿಯಾ ಗಾಂಧಿಗೆ ಟಿಕೆಟ್ ಕೊಟ್ಟ ಬಿಜೆಪಿ, ಸಂಕಷ್ಟದಲ್ಲಿ ಕಾಂಗ್ರೆಸ್, ಇಷ್ಟೇ ಅಲ್ಲ ದೇಶಾದ್ಯಂತ ಇದು ಭಾರಿ ಸುದ್ದಿಯಾಗಿದೆ. ಸೋನಿಯಾ ಗಾಂಧಿಗೆ ಬಿಜೆಪಿ ಟಿಕೆಟ್ ಕೊಡಲು ಹೇಗೆ ಸಾಧ್ಯ? ಎಡವಟ್ಟೇ ಅಥವಾ ಹೈಡ್ರಾಮವೇ?

Read Full Story
05:20 PM (IST) Dec 02

India Latest News Live 2 December 2025ಲೈಸೆನ್ಸ್ ಎಕ್ಸ್‌ಫೈರಿ ಆಗಿದ್ರು 8 ಬಾರಿ ಹಾರಾಟ ನಡೆಸಿದ ಏರ್ ಇಂಡಿಯಾದ ವಿಮಾನ - ತನಿಖೆಗೆ ಡಿಜಿಸಿಎ ಆದೇಶ

ಲೈಸೆನ್ಸ್ ಅವಧಿ ಮೀರಿದ ನಂತರವೂ ಏರ್ ಇಂಡಿಯಾದ ಎ320 ವಿಮಾನವೊಂದು 8 ಬಾರಿ ಹಾರಾಟ ನಡೆಸಿ ಪ್ರಯಾಣಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿದ ಘಟನೆ ನಡೆದಿದೆ. ಈ ಗಂಭೀರ ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ.

Read Full Story
04:54 PM (IST) Dec 02

India Latest News Live 2 December 2025ಪ್ರಧಾನಮಂತ್ರಿ ಕಚೇರಿಗೆ ಇನ್ನು ಹೊಸ ವಿಳಾಸ, ಕಟ್ಟಡದ ಹೆಸರು ಸೇವಾ ತೀರ್ಥ!

Prime Minister Office New Building to be Named Sewa Teerth Under Central Vista Project ಸೇವಾ ಮನೋಭಾವವನ್ನು ಪ್ರತಿಬಿಂಬಿಸಲು ಮತ್ತು ರಾಷ್ಟ್ರೀಯ ಆದ್ಯತೆಗಳನ್ನು ರೂಪಿಸಲು ವಿನ್ಯಾಸಗೊಳಿಸಿದ ಕೆಲಸ ಸ್ಥಳ ಎನ್ನುವ ಅರ್ಥವನ್ನು ಸೇವಾ ತೀರ್ಥ ಎನ್ನುವ ಹೆಸರು ಹೊಂದಿದೆ.

Read Full Story
04:39 PM (IST) Dec 02

India Latest News Live 2 December 2025ಪ್ರಧಾನ ಮಂತ್ರಿ ಕಾರ್ಯಾಲಯ ಹೊಸ ಕಟ್ಟಡಕ್ಕೆ ಶಿಫ್ಟ್, ಸೇವಾ ತೀರ್ಥ್ ಆಫೀಸ್‌ನಿಂದ ಕೆಲಸ

ಪ್ರಧಾನ ಮಂತ್ರಿ ಕಾರ್ಯಾಲಯ ಹೊಸ ಕಟ್ಟಡಕ್ಕೆ ಶಿಫ್ಟ್, ಸೇವಾ ತೀರ್ಥ್ ಆಫೀಸ್‌ನಿಂದ ಕೆಲಸ, ಹೊಸ ಕಟ್ಟಡಕ್ಕೆ ಕಚೇರಿ ಸ್ಥಳಾಂತರ ಮಾತ್ರವಲ್ಲ ಪ್ರಧಾನಿ, ರಾಜ್ಯಪಾಲರು ಸೇರಿದಂತೆ ಹಲವು ಪ್ರಮುಖ ಕಚೇರಿಗಳ ಹೆಸರು ಮರುನಾಮಕರಣ ಮಾಡಲಾಗಿದೆ.

Read Full Story
04:11 PM (IST) Dec 02

India Latest News Live 2 December 2025ದುಬೈನಿಂದ ಬರ್ತಿದ್ದ ವಿಮಾನದಲ್ಲಿ ಗಗನಸಖಿಗೆ ಕಿರುಕುಳ - ಕೇರಳದ ಸಾಫ್ಟ್‌ವೇರ್ ಇಂಜಿನಿಯರ್ ಅರೆಸ್ಟ್

ದುಬೈನಿಂದ ಹೈದರಾಬಾದ್‌ಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಾಫ್ಟ್‌ವೇರ್ ಎಂಜಿನಿಯರ್‌ ಓರ್ವನನ್ನು ಬಂಧಿಸಲಾಗಿದೆ.

Read Full Story
03:59 PM (IST) Dec 02

India Latest News Live 2 December 2025ಐಪಿಎಲ್ ಮಿನಿ ಹರಾಜಿಗೂ ಮುನ್ನ ಶತಕ ಸಿಡಿಸಿ ಅಬ್ಬರಿಸಿದ ದೇವದತ್ ಪಡಿಕ್ಕಲ್‌; ಕರ್ನಾಟಕಕ್ಕೆ ಶರಣಾದ ತಮಿಳುನಾಡು

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ, ಕನ್ನಡಿಗ ದೇವದತ್ ಪಡಿಕ್ಕಲ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಅವರ ಅಜೇಯ 102 ರನ್‌ಗಳ ನೆರವಿನಿಂದ ಕರ್ನಾಟಕ ತಂಡವು ತಮಿಳುನಾಡು ವಿರುದ್ಧ 146 ರನ್‌ಗಳ ಭರ್ಜರಿ ಜಯ ಸಾಧಿಸಿತು.

Read Full Story
03:09 PM (IST) Dec 02

India Latest News Live 2 December 202515 ವರ್ಷದ ವಿದ್ಯಾರ್ಥಿ ಜೊತೆ ನಿರಂತರ ರಿಲೇಷನ್‌ಶಿಪ್ - ಮಹಿಳಾ ಶಿಕ್ಷಕಿ ಅರೆಸ್ಟ್

ಆಸ್ಟ್ರೇಲಿಯಾದಲ್ಲಿ 37 ವರ್ಷದ ಪ್ರೌಢಶಾಲಾ ಶಿಕ್ಷಕಿಯೊಬ್ಬರು, 15 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಗಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಡಿಟೇಲ್ ಸ್ಟೋರಿ ಇಲ್ಲಿದೆ.

Read Full Story