software engineer arrested for harassing air hostess: ದುಬೈನಿಂದ ಹೈದರಾಬಾದ್‌ಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಾಫ್ಟ್‌ವೇರ್ ಎಂಜಿನಿಯರ್ ಓರ್ವನನ್ನು ಬಂಧಿಸಲಾಗಿದೆ.
ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಸಾಫ್ಟ್‌ವೇರ್ ಎಂಜಿನಿಯರ್
ಹೈದರಾಬಾದ್: ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಸಾಫ್ಟ್‌ವೇರ್ ಎಂಜಿನಿಯರ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವಂಬರ್ 29ರಂದು ಈ ಘಟನೆ ನಡೆದಿದೆ. ದುಬೈನಿಂದ ಹೈದರಾಬಾದ್‌ಗೆ ಆಗಮಿಸುತ್ತಿದ್ದ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಕೇರಳ ಮೂಲದ ಬೆನ್ಯಂ ನಜರ್ ಎಂದು ಗುರುತಿಸಲಾಗಿದೆ. ನಜರ್ ಸೌದಿ ಅರೇಬಿಯಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ವಿಮಾನ ಇಳಿಯುತ್ತಿದ್ದಂತೆ ಏರ್‌ಪೋರ್ಟ್ ಭದ್ರತಾ ಅಧಿಕಾರಿಗಳು ಆರೋಪಿ ನಜರ್‌ನನ್ನು ಬಂಧಿಸಿದ್ದಾರೆ. ನವಂಬರ್ 28ರಂದು ಈ ಘಟನೆ ನಡೆದಿದೆ.
ವಿಮಾನ ಲ್ಯಾಂಡ್ ಆದ ನಂತರವೂ ಆರೋಪಿಯ ಅಸಭ್ಯ ವರ್ತನೆ:
ಏರ್ ಇಂಡಿಯಾ ವಿಮಾನದ ಮಹಿಳಾ ಕ್ಯಾಬಿನ್ ಸಿಬ್ಬಂದಿ ನೀಡಿದ ದೂರಿನ ಪ್ರಕಾರ ಆರೋಪಿ ಮದ್ಯಪಾನ ಮಾಡಿದ್ದು, ವಿಮಾನ ಪ್ರಯಾಣದ ಸಮಯದಲ್ಲೇ ವಿಮಾನದ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಆಕೆಯನ್ನು ದೈಹಿಕವಾಗಿ ಅಸಭ್ಯವಾಗಿ ಸ್ಪರ್ಶಿಸಿದ್ದ. ಆರಂಭದಲ್ಲಿ ಮಹಿಳಾ ಸಿಬ್ಬಂದಿ ಇದೊಂದು ಆಕಸ್ಮಿಕ ಘಟನೆ ನಡೆದಿದೆ ಎಂದು ಸುಮ್ಮನಾಗಿದ್ದರು. ಆದರೆ ವಿಮಾನ ಹೈದರಾಬಾದ್‌ನಲ್ಲಿ ಲ್ಯಾಂಡ್ ಆದ ನಂತರವೂ ಆರೋಪಿ ಅಸಭ್ಯವಾಗಿ ವರ್ತಿಸಿದ್ದಾನೆ.
ಇದನ್ನೂ ಓದಿ: 15 ವರ್ಷದ ವಿದ್ಯಾರ್ಥಿ ಜೊತೆ ನಿರಂತರ ರಿಲೇಷನ್‌ಶಿಪ್: ಮಹಿಳಾ ಶಿಕ್ಷಕಿ ಅರೆಸ್ಟ್
ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ತನಿಖಾ ಅಧಿಕಾರಿ ಹರಿಕಾ, ದುಬೈನಿಂದ ಬಂದ ಏರ್ ಇಂಡಿಯಾ ವಿಮಾನವೂ ಹೈದರಾಬಾದ್‌ನಲ್ಲಿ ಲ್ಯಾಂಡ್ ಆದ ನಂತರ ಆರೋಪಿ ನಜರ್ ತಾನು ಪಾಸ್‌ಪೋರ್ಟನ್ನು ವಿಮಾನದಲ್ಲೇ ಬಿಟ್ಟು ಬಂದಿದ್ದಾಗಿ ಹೇಳಿದ್ದಾನೆ. ಆತನ ಮಾತು ಕೇಳಿ ಆ ಮಹಿಳಾ ಸಿಬ್ಬಂದಿ ಮತ್ತೆ ವಿಮಾನದ ಕ್ಯಾಬಿನ್‌ಗ ಬಂದಿದ್ದಾರೆ. ಈ ವೇಳೆ ಆರೋಪಿ ಕುಳಿತಿದ್ದ ಜಾಗದಲ್ಲಿ ಪಾಸ್‌ಪೋರ್ಟ್ ಇರಲಿಲ್ಲ, ಬದಲಾಗಿ ಅಶ್ಲೀಲ ಬರಹಗಳಿದ್ದ ಟಿಶ್ಯು ಪೇಪರ್ ಇತ್ತು. ಹೀಗಾಗಿ ಆರೋಪಿ ವಿರುದ್ಧ ಗಗನಸಖಿ ದೂರು ದಾಖಲಿಸಿದ್ದಾರೆ. ನಂತರ ಏರ್‌ಪೋರ್ಟ್ ಅಧಿಕಾರಿಗಳು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ನಮ್ಮ ಪೋಷಕರು ಮದ್ವೆ ಮಾಡೋದಾಗಿ ನಂಬಿಸಿ ದ್ರೋಹ ಮಾಡಿದ್ರು: ಪ್ರಿಯಕರನ ಶವವನ್ನೇ ಮದ್ವೆಯಾದ ಯುವತಿಯ ಗೋಳು


