Teacher misconduct with minor: ಆಸ್ಟ್ರೇಲಿಯಾದಲ್ಲಿ 37 ವರ್ಷದ ಪ್ರೌಢಶಾಲಾ ಶಿಕ್ಷಕಿಯೊಬ್ಬರು, 15 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಗಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಡಿಟೇಲ್ ಸ್ಟೋರಿ ಇಲ್ಲಿದೆ.

15 ವರ್ಷದ ಅಪ್ರಾಪ್ತ ವಿದ್ಯಾರ್ಥಿಯನ್ನು ಬಳಸಿಕೊಂಡ ಶಿಕ್ಷಕಿ:

15 ವರ್ಷದ ಶಾಲಾ ಬಾಲಕನನ್ನು ಲೈಂ*ಗಿಕ ಸಂಬಂಧಕ್ಕಾಗಿ ಪ್ರೇರೆಪಿಸಿದ್ದಲ್ಲದೇ ಆತನ ಜೊತೆ ನಿರಂತರ ಸಂಬಂಧ ಇರಿಸಿಕೊಂಡಿದ್ದಕ್ಕಾಗಿ ಪ್ರೌಢಶಾಲಾ ಶಿಕ್ಷಕಿ ತಪ್ಪಿತಸ್ಥೆ ಎನಿಸಿದ್ದು, ಮಾರ್ಚ್‌ನಲ್ಲಿ ಆರೋಪಿತ ಶಿಕ್ಷಕಿಗೆ ಶಿಕ್ಷೆಯಾಗಲಿದೆ. ನ್ಯಾಯಾಲಯದ ವಿಚಾರಣೆ ವೇಳೆ 37 ವರ್ಷದ ಶಿಕ್ಷಕಿ ಕಾರ್ಲಿ ರೇ ತಾನು ವಿದ್ಯಾರ್ಥಿಯನ್ನು ಲೈಂಗಿಕ ಸಂಬಂಧಕ್ಕಾಗಿ ಪ್ರೇರೆಪಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆಸ್ಟ್ರೇಲಿಯಾದಲ್ಲಿ ಈ ಘಟನೆ ನಡೆದಿದೆ. 15 ವರ್ಷದ ಅಪ್ರಾಪ್ತ ವಿದ್ಯಾರ್ಥಿ ಜೊತೆ ಹಲವು ಹಲವು ಬಾರಿ ಸಂಬಂಧ ಬೆಳೆಸಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ.

15 ವರ್ಷದ ಬಾಲಕನೊಂದಿಗೆ ಲೈಂ*ಗಿಕ ಸಂಪರ್ಕ

ಪ್ರಕರಣಕ್ಕೆ ಸಂಬಂಧಿಸಿದಂತೆ 37 ವರ್ಷದ ಕಾರ್ಲಿ ರೇ ಗುರುವಾರ ತನ್ನ ಎಂಟು ವಾರಗಳ ನವಜಾತ ಶಿಶುವಿನೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಬಾಲಕನ ಮೇಲೆ ನಡೆಸಿದ ಲೈಂಗಿಕ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಆಕೆಗೆ ನ್ಯಾಯಾಲಯವೂ ಮಾರ್ಚ್‌ನಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಅಕ್ಟೋಬರ್ 2024 ರಲ್ಲಿ ಶಿಕ್ಷಕಿ ಕಾರ್ಲಿ ರೇಯನ್ನು ಬಂಧಿಸಲಾಗಿತ್ತು. ಅದೇ ತಿಂಗಳಲ್ಲಿ 15 ವರ್ಷದ ಬಾಲಕನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ರೇ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ಈ ಘಟನೆಗಳು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ನ್ಯೂಕ್ಯಾಸಲ್‌ನ ವಿವಿಧ ಸ್ಥಳಗಳಲ್ಲಿ ನಡೆದಿದೆ. ಅಲ್ಲೇ ಆಕೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು.

ಸ್ನ್ಯಾಪ್‌ಚಾಟ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶ

ಸೋಶಿಯಲ್ ಮೀಡಿಯಾಗಳಾದ ಸ್ನ್ಯಾಪ್‌ಚಾಟ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಆರೋಪಿ ಶಿಕ್ಷಕಿಯೂ, ಬಾಲಕನಿಗೆ ಲೈಂಗಿಕ ಸಂಬಂಧಕ್ಕಾಗಿ ಪ್ರೇರೆಪಿಸಿದ್ದಾಳೆ. ಶಾಲೆಗೆ ಹೋಗುವ ಮೊದಲು ನಾವು ಭೇಟಿಯಾಗಬಹುದು. ನಾನು ನನ್ನ ಆಟಿಕೆ ತರುತ್ತೇನೆ ಎಂದು ಆಕೆ ಹುಡುಗನಿಗೆ ಸಂದೇಶ ಕಳುಹಿಸಿದ್ದಳು ಆತನ ಸಂಪರ್ಕಿಸಲು ಮನಸ್ಸು ಸಾಕಷ್ಟು ಸೆಳೆಯುತ್ತಿತ್ತು ಎಂದು ಆಕೆ ಹೇಳಿದ್ದಾಳೆ. ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ನಿಂದ ಪರಸ್ಪರರನ್ನು ಡಿಲೀಟ್ ಮಾಡಲು ಸೂಚಿಸುವ ವಿದ್ಯಾರ್ಥಿಯ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಾ, ಇದು ನನ್ನ ತಪ್ಪು. ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ನಿನಗೆ ಬೇಕಾದುದನ್ನು ಮಾಡು ಎಂದು ಆಕೆ ಮರು ಸಂದೇಶ ಕಳುಹಿಸಿದ್ದರು.

ಅಲ್ಲದೇ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ರೇ, ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷ್ಯವನ್ನು ನೀಡುವಂತೆ ವಿದ್ಯಾರ್ಥಿಯನ್ನು ಒತ್ತಾಯಿಸಲು ಹಲವಾರು ಬಾರಿ ಕರೆ ಮಾಡಿದ್ದಳು. ಆ ಕರೆಗಳ ಸಂದರ್ಭದಲ್ಲಿ, ದೂರುದಾರರಿಗೆ ಘಟನೆಗಳ ಬಗ್ಗೆ ಸುಳ್ಳು ಹೇಳಿಕೆ ನೀಡುವಂತೆ ಮನವೊಲಿಸಲು ಪ್ರಯತ್ನಿಸಿದ್ದಳು ಎಂದು ಆರೋಪ ಕೇಳಿ ಬಂದಿತ್ತು ಎಂದು ಜೂನ್‌ನಲ್ಲಿ ನಡೆದ ಜಾಮೀನು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಹ್ಯಾಮೆಂಟ್ ಧಂಜಿ ಹೇಳಿದರು ಎಂದು ಅಲ್ಲಿನ 7ನ್ಯೂಸ್ ವರದಿ ಮಾಡಿದೆ. ಆ ಹದಿಹರೆಯದ ತರುಣ ಶಿಕ್ಷಕಿಯ ಕರೆಗಳ ಬಗ್ಗೆ ತಮ್ಮ ತಾಯಿಗೆ ತಿಳಿಸಿದ್ದರು. ಅಲ್ಲದೇ ಶಿಕ್ಷಕಿ ಬಾಲಕನಿಗೆ ಕಳುಹಿಸಿದ ಕೆಲವು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ನೋಡಿದ ಸೋದರ ಸಂಬಂಧಿಯೊಬ್ಬರು ಅವರ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ನಮ್ಮ ಪೋಷಕರು ಮದ್ವೆ ಮಾಡೋದಾಗಿ ನಂಬಿಸಿ ದ್ರೋಹ ಮಾಡಿದ್ರು

ರೇ ಗರ್ಭಿಣಿಯಾಗಿದ್ದ ಕಾರಣ ಜೂನ್‌ನಲ್ಲಿ ಆಕೆಗೆ ಜಾಮೀನು ಸಿಕ್ಕಿತ್ತು. ಆರಂಭದಲ್ಲಿ ಅವರು ತಪ್ಪಿತಸ್ಥರಲ್ಲ ಎಂದು ಹೇಳಿಕೊಂಡ ನಂತರ ಆಗಸ್ಟ್ 2026 ರಲ್ಲಿ ವಿಚಾರಣೆ ಎದುರಿಸಲು ನಿರ್ಧರಿಸಲಾಗಿತ್ತು. ಆದರೆ ಕಳೆದ ವಾರ ಆಕೆಯೇ ಸ್ವತಃ ತಾನು ತಪ್ಪಿತಸ್ಥೆ ಎಂದು ಹೇಳಿಕೊಂಡಿದ್ದಳು.ರೇ ತನ್ನ ಎಂಟು ವಾರಗಳ ಮಗುವಿನೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಈ ವಿಷಯದಲ್ಲಿ ಸ್ವಲ್ಪ ಸಡಿಲಿಕೆನೀಡಬೇಕೆಂದು ಅವರ ವಕೀಲ ಮಾರ್ಕ್ ರ‍್ಯಾಮ್ಸ್‌ಲ್ಯಾಂಡ್ ಕೋರ್ಟ್‌ಗೆ ವಿನಂತಿಸಿದರು ಎಂದು ಎಬಿಸಿ ವರದಿ ಮಾಡಿದೆ.

ಇದನ್ನೂ ಓದಿ: ಪ್ರೇಯಸಿ ಮನೆ ಮಾರಿ ಸ್ವಂತ ಮನೆ ಖರೀದಿಸಿದ: ಹಣ ಕೇಳಿದ್ದಕ್ಕೆ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ವಿವಾಹಿತ

ತನ್ನ ಶಾಲೆಗೆ ಆ ವಿದ್ಯಾರ್ಥಿಯನ್ನು ಸೇರಿಸಿಕೊಂಡಿದ್ದರೂ, ಆ ವಿದ್ಯಾರ್ಥಿ ಅಪ್ರಾಪ್ತ ವಯಸ್ಕ ಎಂದು ನನಗೆ ತಿಳಿದಿರಲಿಲ್ಲ ಎಂದು ರೇ ಹೇಳಿಕೊಂಡಿದ್ದಾಳೆ. ಅಲ್ಲದೇ ತನ್ನ ತಪ್ಪನ್ನು ಆಕೆ ಒಪ್ಪಿಕೊಂಡ ನಂತರ ಆಕೆಯನ್ನು ಬೋಧನಾ ವೃತ್ತಿಯಿಂದ ತೆಗೆದು ಹಾಕಲಾಗಿದೆ. ಅಲ್ಲದೇ 16 ವರ್ಷದೊಳಗಿನ ಯಾರೊಂದಿಗೂ ಒಂಟಿಯಾಗಿರಬಾರದೆಂದು ನ್ಯಾಯಾಲಯವು ಆದೇಶಿಸಿದೆ.