ಐಐಟಿ ರೂರ್ಕಿಯ ಘಟಿಕೋತ್ಸವದಲ್ಲಿ ಅಜಿತ್ ದೋವಲ್ ಅವರು ಸಿಕ್ಕಿಂ ಗಡಿಯಲ್ಲಿ ನಡೆದ ತಮ್ಮ ವೃತ್ತಿಜೀವನದ ಆರಂಭಿಕ ಘಟನೆಯನ್ನು ಸ್ಮರಿಸಿದರು. ತಪ್ಪು ನಕ್ಷೆಯಿಂದಾಗಿ ತಮ್ಮ ತಂಡವನ್ನು ಚೀನಾ ಸೈನಿಕರು ವಶಕ್ಕೆ ಪಡೆದಾಗ ವೃತ್ತಿಜೀವನವೇ ಮುಗಿಯಿತು ಎಂದು ಅವರು ಭಾವಿಸಿದ್ದರು. ಆದರೆ ವಿಚಾರಣೆಯಲ್ಲಿ ಅವರು ನಿರ್ದೋಷಿ ಎಂದು ಸಾಬೀತಾಗಿದ್ದು, ಶೆರ್ಪಾ ಒಬ್ಬರ ಮಾತುಗಳು ಅವರ ಜೀವನದ ಸೂತ್ರವಾಯಿತು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಒಂದು ಸಂಚಲನಾತ್ಮಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಸಿಕ್ಕಿಂನಲ್ಲಿ ಅಧಿಕಾರ ಸ್ವೀಕರಿಸುತ್ತಿರುವ ಸಮಯದಲ್ಲಿ, ಚೀನಾಗೆ ತನ್ನ ಏಜೆಂಟ್‌ಗಳು ಸಿಕ್ಕಿಬಿದ್ದರು. ಆ ಘಟನೆಯೊಂದಿಗೆ ನನ್ನ ವೃತ್ತಿಜೀವನ ಮುಗಿಯಿತು ಎಂದು ಅನಿಸಿತ್ತು ಎಂದು ದೇವಾಲ್ ಶಾಕಿಂಗ್ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಆದರೆ ಕೊನೆಗೆ ವಿಚಾರಣೆಯ ಸಂದರ್ಭದಲ್ಲಿ ತಮ್ಮ ತಪ್ಪು ಏನು ಇಲ್ಲ ಎಂದು ತಿಳಿದು ಬಂದಿತ್ತು ಎಂದು ಅವರು ಹೇಳಿದ್ದಾರೆ.

ಅಜಿತ್ ದೋವಲ್ ವೃತ್ತಿಜೀವನ ಮುಗಿಯುವ ಹಂತಕ್ಕೆ ತಂದಿದ್ದ ಆ ಘಟನೆ!

ಐಐಟಿ ರೂರ್ಕಿಯ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಜಿತ್ ದೋವಲ್ ಅವರು ಭಾಗಿಯಾಗಿ ಮಾತನಾಡಿದ್ದರು. ಈ ವೇಳೆ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ನಡೆದ ಘಟನೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದರು. ಆ ಸಂದರ್ಭದಲ್ಲಿ ಸಿಕ್ಕಿಂನಲ್ಲಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ, ಚೀನಾ ಗಡಿ ಪ್ರದೇಶದಲ್ಲಿ ಪಿಪುಲ್ಸ್ ಲಿಬರೇಷನ್ ಆರ್ಮಿ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು, ಮಾಹಿತಿ ಕಲೆ ಹಾಕುವುದು ಪ್ರಮುಖ ಕೆಲಸ ಆಗಿತ್ತು. ಒಂದು ಬಾರಿ ಗಡಿಯಲ್ಲಿ ಮಾಹಿತಿ ಸಂಗ್ರಹಿಸಲು ತಮ್ಮ ಟೀಂ ಅನ್ನು ದೋವಲ್ ಕಳುಹಿಸಿದ್ದರಂತೆ.

ಆದರೆ, ಸಿಕ್ಕಿಂ ಗಡಿಗೆ ತೆರಳಿ ಮಾಹಿತಿ ಕಲೆ ಹಾಕಿ 8 ದಿನಗಳ ಬಳಿಕ ತಂಡ ವಾಪಸ್ ಬರಬೇಕಿತ್ತು. ಆದರೆ 15 ದಿನ ಆದರೂ ವಾಪಸ್ ಬಂದಿರಲಿಲ್ಲ. ಅವರ ಬಗ್ಗೆ ಸಣ್ಣ ಮಾಹಿತಿ ಸಿಕ್ಕಿರಲಿಲ್ಲ. ಇದರಿಂದ ದೋವಲ್ ಅವರಿಗೆ ಆತಂಕ ಎದುರಾಗಿತ್ತಂತೆ. ಈ ವೇಳೆ ಹೆಡ್ ಕ್ವಾಟರ್ಸ್‌ನಿಂದ ಫೋನ್ ಬಂದಿತ್ತು. ಆದ ಗಡಿಯಲ್ಲಿ ಏನಾಗಿತ್ತು ಎಂದು ತಿಳಿದುಬಂದಿತ್ತು. ಅವರ ಟೀಂ ಅನ್ನು ಚೀನಾ ಸೈನಿಕರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರಂತೆ.

'ಈ ಘಟನೆಯ ಕುರಿತು ವಿಚಾರಣೆ ಆರಂಭವಾಗಿತ್ತಂತೆ. ಆದರೆ, ವಿಚಾರಣೆಯಲ್ಲಿ ನನ್ನ ತಪ್ಪು ಇಲ್ಲ ಎಂದು ತಿಳಿದು ಬಂದಿತ್ತು. ನನ್ನ ಟೀಂಗೆ ಹೆಡ್ ಕ್ವಾಟರ್ಸ್ನಿಂದ ನೀಡಿದ್ದ ಮ್ಯಾಪ್, ಸ್ಕೆಚ್‌ನಲ್ಲಿಯೇ ತಪ್ಪು ಮಾಹಿತಿ ಇತ್ತು. ಇದರಿಂದ ತನ್ನ ಟೀಂ ಅನ್ನು ಚೀನಾ ಸೈನಿಕರು ವಶಕ್ಕೆ ಪಡೆದುಕೊಂಡಿದ್ದರು. ಆದರೆ ನಾನು ಮಾಡಬೇಕಾದ ಕೆಲಸ ಸರಿಯಾಗಿಯೇ ಮಾಡಿದ್ದೆ. ಆದರೂ ಈ ಘಟನೆ ನನಗೆ ತೀವ್ರವಾಗಿ ಕಾಡುತ್ತಿತ್ತು' ಎಂದು ಅಜಿತ್ ದೋವಲ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತನ್ನೊಂದಿಗೆ ಕೆಲಸ ಮಾಡಿದ್ದ ಟಿಬೆಟಿಯನ್ ಶೆರ್ಪಾ ಹೇಳಿದ ಮಾತು ಅವರಿಗೆ ಬಹಳ ಉತ್ತಮವಾಗಿ ಕೆಲಸ ಮಾಡಿತ್ತು. ಮ್ಯಾಪ್‌ಅನ್ನು ಸರಿಯಾಗಿ ಓದುವುದು ಎಷ್ಟು ಮುಖ್ಯವೋ ಹೇಳಿದ್ದ ಅವರು, ಮೂರು ವಿಚಾರಗಳನ್ನು ನೆನಪಿನಲ್ಲಿಡ್ಡಲು ಸೂಚನೆ ನೀಡಿದ್ದರಂತೆ. ಆ ಸೂಚನೆಗಳು ಇಂದಿಗೂ ನೆನಪಿದೆ. ಮೊದಲು ನೀವು ಎಲ್ಲಿದ್ದೀಯಾ ತಿಳಿದುಕೊಳ್ಳಬೇಕು, ಎಲ್ಲಿಗೆ ಹೋಗಬೇಕು ಅಂತ ತಿಳಿದುಕೊಳ್ಳಬೇಕು, ಅಲ್ಲಿಗೆ ಹೋಗಲು ಯಾವ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳಬೇಕಂತೆ. ಈ ಮಾರ್ಗದರ್ಶಕ ಮಾತುಗಳೇ ತಮ್ಮ ಜೀವನದ ಸೂತ್ರಗಳಾಯಿತು ಎಂದು ಅಜಿತ್ ದೋವಲ್ ಹೇಳಿದ್ದರು.