ಜಾಂಬಿಯಾದಲ್ಲಿ ಆಫ್ರಿಕನ್ ಕಾಡು ನಾಯಿಗಳು ಸಂಗಾತಿಯನ್ನು ಹುಡುಕಿಕೊಂಡು ಬರೋಬ್ಬರಿ 4 ಸಾವಿರ ಕಿಲೋಮೀಟರ್‌ಗಳ ಸುದೀರ್ಘ ಪ್ರಯಾಣವನ್ನು ಪೂರ್ಣಗೊಳಿಸಿವೆ. ಎಂಟು ತಿಂಗಳ ಈ ಪಯಣದಲ್ಲಿ ಅವು ಮನುಷ್ಯರ ಸಂಪರ್ಕಕ್ಕೆ ಸಿಗದೆ, ಬೇಟೆಗಾರರ ಬಲೆಗಳಂತಹ ಸವಾಲುಗಳನ್ನು ಎದುರಿಸಿವೆ.

ಜಾಂಬಿಯಾದಲ್ಲಿ ಆಫ್ರಿಕನ್ ಕಾಡು ನಾಯಿಗಳ ಗುಂಪು ಬರೋಬ್ಬರಿ 2,485 ಮೈಲಿ ಅಂದರೆ ಸುಮಾರು 4 ಸಾವಿರ ಕಿಲೋ ಮೀಟರ್ ಪ್ರಯಾಣ ಪೂರ್ಣಗೊಳಿಸಿದೆ. ಆಫ್ರಿಕಾದಲ್ಲಿ ಇದುವರೆಗೂ ದಾಖಲಾದ ಘಟನೆಯಲ್ಲಿ ಇದೇ ಮೊದಲು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದರಲ್ಲೂ ಸಂಗಾತಿಯನ್ನು ಹುಡುಕಿಕೊಂಡು ಭೂಮಿಯ ಮೇಲೆ ಪ್ರಾಣಿಗಳು ನಡೆದ ಅತ್ಯಂತ ಸುದೀರ್ಘ ಪ್ರಯಾಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆಫ್ರಿಕನ್ ಕಾಡು ನಾಯಿಗಳ ನಿಗೂಢ ಪಯಣ!

ಕಾಡಿನಲ್ಲಿ ಮನುಷ್ಯನ ಚಟುವಟಿಕೆಗಳು ಹೆಚ್ಚಾಗುತ್ತಿದ್ದರು ಸಹ ವನ್ಯಪ್ರಾಣಿಗಳು ಯಾವ ರೀತಿ ಜೀವನ ಸಾಗಿಸುತ್ತಿದೆ ಎನ್ನುವುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ಈ ಪ್ರಯಾಣವನ್ನು ಆರಂಭಿಸಿದ ಮೂರು ಆಫ್ರಿನ್ ಕಾಡು ನಾಯಿಗಳು, ಬರೋಬ್ಬರಿ ಎಂಟು ತಿಂಗಳಿನಲ್ಲಿ ಈ ಜರ್ನಿಯನ್ನು ಪೂರ್ಣಗೊಳಿಸಿದೆ. ಇವು ಜರ್ನಿ ಆರಂಭಿಸಿದ ಪ್ರದೇಶದಿಂದ ತೆರಳಿದ ಸ್ಥಳಕ್ಕೆ ಬರೋಬ್ಬರಿ 418 ಕಿಲೋ ಮೀಟರ್ ದೂರವಿದೆ. ಆದರೆ ಈ ಕಾಡು ನಾಯಿಗಳು ನೇರವಾಗಿ ತೆರಳದೆ, ಮಾರ್ಗದಲ್ಲಿ ವಿವಿಧ ಪ್ರದೇಶಗಳ ಮೂಲಕ ಸಾಗಿದೆ. ಇದರಿಂದ ಒಟ್ಟಾರೆ ದೂರ ಶೇಖಡಾ 10ರಷ್ಟು ಹೆಚ್ಚಾಗಿದೆ. ಜಾಂಬಿಯಾ ರಾಜಧಾನಿ ಲುಸಾಕಾದಿಂದ ಹಿಡಿದು ನಗರ ಪ್ರದೇಶಗಳಾಗಿ ಅಭಿವೃದ್ಧಿ ಹೊಂದಿದ ಪ್ರದೇಶಗಳ ನಡುವೆ ಈ ಕಾಡು ನಾಯಿಗಳು ಚಾಣಕ್ಯದಿಂದ ಮನುಷ್ಯನ ಸಂಪರ್ಕಕ್ಕೆ ಸಿಗದೆ ಸಾಗಿದೆ.

ಇಂತಹ ಪ್ರಯಾಣವನ್ನು 'ಡಿಸ್ಪರ್ಸಲ್' ಎಂದು ಕರೆಯುತ್ತಾರೆ. ಏಕೆಂದರೆ ಆಹಾರ ಅಥವಾ ವಾತಾವರಣ ಕಾರಣದಿಂದ ನಡೆಯುವ ವಲಸೆಗಿಂತ ಭಿನ್ನವಾಗಿ ಅಂದರೆ ಸಂಗಾತಿಗಾಗಿ ಈ ಕಾಡು ನಾಯಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಿದೆ. ಆಫ್ರಿಕನ್ ಕಾಡು ನಾಯಿಗಳು ಸಾಮಾನ್ಯವಾಗಿ ಗುಂಪು ಗುಂಪಾಗಿ ಜೀವನ ನಡೆಸುತ್ತವೆ. ಹೊಸ ಹೊಸ ಭೂಪ್ರದೇಶಗಳನ್ನು ಹುಡುಕುತ್ತಾ ಸಾಗುತ್ತವೆ. ಆದರೆ ಇದು ತಮ್ಮ ಗುಂಪಿನಲ್ಲಿ ಸಂಗತಿಯನ್ನು ಹುಡುಕಿಕೊಳ್ಳುವುದಿಲ್ಲ. ಆದ್ದರಿಂದ ಹೊಸ ಗುಂಪಿನ ಸಂಗತಿಗಳನ್ನು ಹುಡುಕಿ ಸಾಗುತ್ತವೆ. ಆದರೆ ಈ ಅಧ್ಯಯನದಲ್ಲಿ ಕಾಡು ನಾಯಿಗಳಿಗೆ ಎದುರಾಗುವ ಸವಾಲುಗಳು ಕೂಡ ಕಂಡು ಬಂದಿದೆ.

ಸಂಗತಿಗಾಗಿ ಕಾಡು ನಾಯಿಗಳ ಜರ್ನಿ

ಜಿಪಿಎಸ್ ಟ್ರಾಕಿಂಗ್ ಮೂಲ ನಡೆದ ಸಂಶೋಧನೆಯಲ್ಲಿ ಕೆಲವು ಕಾಡು ನಾಯಿಗಳು ಬೇಟೆಗಾರರು ಅಕ್ರಮವಾಗಿ ಅಳವಿಡಿದ್ದ ಬಲೆಗೆ ಸಿಲುಕಿ ಸಾವನ್ನಪ್ಪಿರುವುದು ಕಂಡು ಬಂದಿದೆ. ಮೂರು ಕಾಡು ನಾಯಿಗಳು ಇಂತಹ ಸಾಹಸ ಪ್ರಯಾಣವನ್ನು ಮಾಡಿದ್ದು, ಇದರಲ್ಲಿ ಒಂದು ಕಾಡು ನಾಯಿ ಬಲೆ ಸಿಲುಕಿ ಪ್ರಯಾಣದಲ್ಲಿ ಮಧ್ಯದಲ್ಲಿಯೇ ಸಾವನ್ನಪ್ಪಿದರೆ. ಉಳಿದ ಕಾಡು ನಾಯಿಗಳು ಪದೇ ಪದೇ ಆ ಪ್ರದೇಶದಕ್ಕೆ ವಾಪಸ್ ಬರುತ್ತಿರುವುದು ಕಂಡು ಬಂದಿದೆ ಎಂದು ಪರಿಶೋಧಕರು ತಿಳಿಸಿದ್ದಾರೆ.

ಆಫ್ರಿಕನ್ ಕಾಯಿ ನಾಯಿಗಳು ಜಗತ್ತಿನಲ್ಲಿ ಅತ್ಯಂತ ಅಪರೂಪದ ವನ್ಯಜೀವಿಗಳಾಗಿದ್ದು, ಸದ್ಯ ಆಫ್ರಿಕನ್ ಕಾಡುಗಳಲ್ಲಿ ಸುಮಾರು 6 ಸಾವಿರ ಕಾಡು ನಾಯಿಗಳು ಉಳಿದುಕೊಂಡಿದೆ. ಮೊಂಟಾನಾ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕರು ಮತ್ತು ಈ ಸಂಶೋಧನಾ ಪ್ರಬಂಧದ ಪ್ರಮುಖ ಲೇಖಕರಾದ ಸ್ಕಾಟ್ ಕ್ರೀಲ್ ಅವರು 1991 ರಿಂದ ಆಫ್ರಿಕನ್ ಕಾಡು ನಾಯಿಗಳ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಈ ಇತ್ತೀಚಿನ ಅಧ್ಯಯನವು ಹೊಸ ಭರವಸೆಯನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.