Asianet Suvarna News Asianet Suvarna News

ಆ.15ಕ್ಕೆ ಕಲಘಟಗಿಯಲ್ಲಿ 9 ಕಿಮೀ ಉದ್ದದ ತ್ರಿವರ್ಣ ಧ್ವಜದ ಜಾಥಾ: ಸಂತೋಷ್ ಲಾಡ್‌

ಸಂತೋಷ್ ಲಾಡ್‌ ಫೌಂಡೇಶನ್‌ ವತಿಯಿಂದ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದಲ್ಲಿ ಕಲಘಟಗಿ ಪಟ್ಟಣದಲ್ಲಿ 9 ಕಿಮೀ ಉದ್ದದ, 9 ಅಡಿ ಅಗಲದ ತ್ರಿವರ್ಣ ಧ್ವಜದ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಸಂತೋಷ್ ಲಾಡ್‌ ತಿಳಿಸಿದರು.

Santosh Lad Preparations Have Been Made For A 9 Kilometer Long National Flag Parade gvd
Author
Bangalore, First Published Aug 9, 2022, 4:45 AM IST

ಕಲಘಟಗಿ (ಆ.09): ಸಂತೋಷ್ ಲಾಡ್‌ ಫೌಂಡೇಶನ್‌ ವತಿಯಿಂದ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದಲ್ಲಿ ಕಲಘಟಗಿ ಪಟ್ಟಣದಲ್ಲಿ 9 ಕಿಮೀ ಉದ್ದದ, 9 ಅಡಿ ಅಗಲದ ತ್ರಿವರ್ಣ ಧ್ವಜದ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಸಂತೋಷ್ ಲಾಡ್‌ ತಿಳಿಸಿದರು. ಮಡಕಿಹೊನ್ನಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 15ರಂದು ತ್ರಿವಣ ಧ್ವಜದ ಜಾಥಾ ಬೆಳಗ್ಗೆ 9.30ಕ್ಕೆ ಕಲಘಟಗಿ ಹೊರವಲಯದ ದಾಸ್ತಿಕೂಪ್ಪ ಬ್ರಿಡ್ಜ್‌ನಿಂದ ಪ್ರಾರಂಭಗೊಂಡು ಪಟ್ಟಣದ ಮೂಲಕ ಗಳಗಿನಕಟ್ಟಿಕ್ರಾಸ್‌ ವರೆಗೊ ನಡೆಯಲಿದೆ. 

10 ಸಾವಿರ ಮಹಿಳೆಯರು ಕುಂಭಮೇಳ ನಡೆಸಲಿದ್ದು, 1 ಲಕ್ಷ ಜನರಿಗೆ ಊಟ ಹಾಗೂ 2500 ವಾಹನ ವ್ಯವಸ್ಥೆ ಮಾಡಲಾಗಿದೆ. ಇದು ಬಹುತೇಕ ಗಿನ್ನಿಸ್‌ ದಾಖಲೆ ಆಗಲಿದೆ ಎಂದ ಅವರು, ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 6 ವೇದಿಕೆಗಳಲ್ಲಿ ನೃತ್ಯ ಮತ್ತು ದೇಶ ಭಕ್ತಿಗೀತೆಗಳು ನಡೆಯಲಿದ್ದು ಸ್ಥಳೀಯ 1000 ಜನರಿಗೆ ಸನ್ಮಾನ ಸೇರಿದಂತೆ ಭಾರತ ಮಾತೆಗೆ ಗೌರವ ನಮನಗಳು ಸಲ್ಲಿಸುವ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಕಲಘಟಗಿ ಮತ ಕ್ಷೇತ್ರದಲ್ಲಿ 75 ಕಿಮೀ ಪಾದಾಯಾತ್ರೆ ಮೂಲಕ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 

ಮಳೆ ಹಾನಿ ಪರಿಹಾರಕ್ಕೆ ಸರ್ಕಾರ ನಿರ್ಲಕ್ಷ್ಯ: ಎಚ್‌.ಕೆ.ಪಾಟೀಲ್‌ ಟೀಕೆ

ಮತ ಕ್ಷೇತ್ರದ ಯುವಕರು, ವಿದ್ಯಾರ್ಥಿಗಳು, ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾಥಾ ಯಶ್ವಸಿಗೊಳಿಸಬೇಕು ಎಂದು ಮನವಿ ಮಾಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲಾಡ್‌, ಮಳೆಯಿಂದ ಬಿದ್ದ ಮನೆಗಳಿಗೆ ಹಾಗೂ ಅಪಘಾತದಲ್ಲಿ ಮೃತರಾದ ಕುಟುಂಬದವರಿಗೆ ತಕ್ಷಣ ಸರ್ಕಾರ ಪರಿಹಾರ ನೀಡಬೇಕು. ಸರ್ಕಾರದಿಂದ ಬೆಳೆ ವಿಮೆ, ಬೆಳೆಹಾನಿ ಮಂಜೂರ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್‌.ಆರ್‌. ಪಾಟೀಲ್‌, ಮಂಜುನಾಥ್‌ ಮುರಳ್ಳಿ, ನರೀಶ ಮಲೆನಾಡು, ಲಿಂಗರಡ್ಡಿ ನಡುವಿನಮನಿ, ಆನಂದ ಕಲಾಲ್‌ ಇದ್ದರು.

ಸಿದ್ದರಾಮಯ್ಯ ಸಾಧನೆಯಿಂದಲೇ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ: ಕರ್ನಾಟಕದ ರಾಜಕಾರಣದಲ್ಲಿ ಸೈದ್ಧಾಂತಿಕ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ವ್ಯಕ್ತಿ ಎಂದರೆ ಅದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರ ಆಡಳಿತ ಸಾಧನೆಯಿಂದಲೇ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್‌ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಜೀವನದ ಆಲ್ಬಮ್‌ ಸಾಂಗ್‌ ಬಿಡುಗಡೆ ಹಾಗೂ ಕರ್ನಾಟಕ ರಾಜ್ಯ ಸಿದ್ದರಾಮಯ್ಯನವರ ಅಭಿಮಾನಿ ಬಳಗ ಸಂಘಟನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ದೇಶಕ್ಕೆ ಬಿಜೆಪಿ ಕೊಡುಗೆಯಾದರೂ ಏನು?: ಸಿದ್ದರಾಮಯ್ಯ ಪ್ರಶ್ನೆ

ಸಿದ್ದರಾಮಯ್ಯ ಹಾಗೂ ಎಂ.ಪಿ. ಪ್ರಕಾಶ್‌ ಅವರ ಗರಡಿಯಲ್ಲಿ ನಾನು ಬೆಳೆದಿದ್ದೇನೆ. ಸಿದ್ದರಾಮಯ್ಯ ಅವರು ಎಲ್ಲ ಬಡವರಿಗಾಗಿ ನೂರಾರು ಯೋಜನೆ ಜಾರಿಗೆ ತಂದಿದ್ದಾರೆ. ಬಸವ ತತ್ವದಂತೆ ಆಡಳಿತ ನೀಡಿದ್ದಾರೆ. ನೀರಾವರಿ ಇಲಾಖೆಗೆ ಪ್ರತಿವರ್ಷ . 50 ಸಾವಿರ ಕೋಟಿ ನೀಡಿದ್ದಾರೆ. ರೈತರಿಗಾಗಿ ಬಡ್ಡಿರಹಿತ ಸಾಲ ನೀಡಲು ಆರಂಭಿಸಿದರು. ಅದನ್ನು ಈಗ ಗುಜರಾತ್‌ನಲ್ಲಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು. ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯಾವ ಯೋಜನೆಗಳು ಬಡವರನ್ನು ತಲುಪುತ್ತಿಲ್ಲ. ಇಂದು ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳು ಹದಗೆಟ್ಟಿವೆ. ಸಮಾಜದಲ್ಲಿ ಪ್ರೀತಿ, ವಿಶ್ವಾಸ ಎಂಬುದು ಕಾಣೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

Follow Us:
Download App:
  • android
  • ios