- Home
- Entertainment
- Sandalwood
- ಯಶ್‌ಗೆ ರಾಖಿ ಕಟ್ಟಲು ಹೋದಾಗ KGF ಸಿನಿಮಾಗೆ ಆಯ್ಕೆಯಾದ ಜನಪ್ರಿಯ ನಟಿ ಯಾರೆಂದು ಗೆಸ್ ಮಾಡ್ತೀರಾ?
ಯಶ್‌ಗೆ ರಾಖಿ ಕಟ್ಟಲು ಹೋದಾಗ KGF ಸಿನಿಮಾಗೆ ಆಯ್ಕೆಯಾದ ಜನಪ್ರಿಯ ನಟಿ ಯಾರೆಂದು ಗೆಸ್ ಮಾಡ್ತೀರಾ?
KGF Casting Story: ಕನ್ನಡದ ಆ ಜನಪ್ರಿಯ ನಟಿ ರಾಕಿಂಗ್ ಸ್ಟಾರ್ ಯಶ್‌ಗೆ ಪ್ರತಿ ವರ್ಷ ತಪ್ಪದೇ ರಾಖಿ ಕಟ್ಟುತ್ತಾರೆ. ಅಷ್ಟಕ್ಕೂ ಅವರು ಯಾರು ? ಯಾಕೆ ಕಟ್ಟುತ್ತಾರೆ ಗೊತ್ತಾ? ಇಲ್ಲಿದೆ ನೋಡಿ ಸ್ಟೋರಿ..
ರಾಖಿ ಕಟ್ಟುವುದರ ಹಿಂದಿನ ಆ ವಿಶೇಷ ಕಾರಣವೇನು?
ರಾಖಿ ಕಟ್ಟುವುದರ ಹಿಂದಿನ ಆ ವಿಶೇಷ ಕಾರಣವೇನು?
ಕನ್ನಡದ ಜನಪ್ರಿಯ ನಟಿಯೊಬ್ಬರು ಪ್ರತಿ ವರ್ಷ ರಾಕಿಂಗ್ ಸ್ಟಾರ್ ಯಶ್‌ಗೆ ತಪ್ಪದೇ ರಾಖಿ ಕಟ್ಟುತ್ತಾರೆ. ಅಷ್ಟಕ್ಕೂ ಆ ನಟಿ ಯಾರು ಗೊತ್ತಾ? ಮತ್ತು ಅವರು ಯಶ್‌ಗೆ ರಾಖಿ ಕಟ್ಟುವುದರ ಹಿಂದಿನ ಆ ವಿಶೇಷ ಕಾರಣವೇನು? ಇಲ್ಲಿದೆ ನೋಡಿ ಮಾಹಿತಿ..
ಕುತೂಹಲಕಾರಿ ಘಟನೆ
ಕುತೂಹಲಕಾರಿ ಘಟನೆ
ಅವರು ಮತ್ಯಾರೂ ಅಲ್ಲ, ಖ್ಯಾತ ನಟಿ ಮಾಳವಿಕಾ ಅವಿನಾಶ್. ತಮಗೆ ಒಡಹುಟ್ಟಿದ ಸಹೋದರರಿಲ್ಲದ ಕಾರಣ, ಅವರು ನಟ ಯಶ್ ಅವರನ್ನೇ ತಮ್ಮ ಸ್ವಂತ ತಮ್ಮನಂತೆ ಭಾವಿಸಿ ಅನೇಕ ವರ್ಷಗಳಿಂದ ರಕ್ಷಾಬಂಧನ ಆಚರಿಸುತ್ತಾ ಬಂದಿದ್ದಾರೆ. ಈ ರಾಖಿ ಕಟ್ಟುವ ವಾಡಿಕೆಯೇ ಮಾಳವಿಕಾ ಅವರು 'ಕೆಜಿಎಫ್' (KGF) ಸಿನಿಮಾದ ಪವರ್‌ಫುಲ್ ಪಾತ್ರಕ್ಕೆ ಆಯ್ಕೆಯಾಗಲು ಕಾರಣವಾಯಿತು ಅಂದರೆ ನೀವು ನಂಬಲೇಬೇಕು! ಆ ಕುತೂಹಲಕಾರಿ ಘಟನೆ ಇಲ್ಲಿದೆ.
"ಇದರಲ್ಲಿ ಲೇಡೀಸ್ ಕ್ಯಾರೆಕ್ಟರ್‌ಗಳೇ ಇಲ್ಲ"
“ಇದರಲ್ಲಿ ಲೇಡೀಸ್ ಕ್ಯಾರೆಕ್ಟರ್‌ಗಳೇ ಇಲ್ಲ”
2017ರಲ್ಲಿ ರಕ್ಷಾಬಂಧನದ ದಿನ ಮಾಳವಿಕಾ ಅವರು ಯಶ್‌ಗೆ ಫೋನ್ ಮಾಡಿ "ನಾನು ರಾಖಿ ಕಟ್ಟಬೇಕು, ಎಲ್ಲಿ ಬರಲಿ?" ಎಂದು ಕೇಳುತ್ತಾರೆ. ಆಗ ಯಶ್ ಅವರು ಸೋಲೂರು ಹತ್ತಿರ ನಡೆಯುತ್ತಿದ್ದ ಶೂಟಿಂಗ್ ಸೆಟ್‌ಗೆ ಕರೆಯುತ್ತಾರೆ. ಮಾಳವಿಕಾ ಅಲ್ಲಿಗೆ ಹೋದಾಗ ಕಂಡಿದ್ದು ಬರೀ ಕತ್ತಲೆ ಮತ್ತು ಮಸಿ ಮೆತ್ತಿಕೊಂಡಿದ್ದ ಮನುಷ್ಯರು! ಅದು ಕೆಜಿಎಫ್ ಸಿನಿಮಾದ ಸೆಟ್ ಆಗಿತ್ತು. ಅಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಮಾಳವಿಕಾ ತಮಾಷೆಯಾಗಿ "ನನ್ನನ್ನು ಬಿಟ್ಟು ಸಿನಿಮಾ ಮಾಡ್ತಾ ಇದ್ದೀಯಾ? ನನಗೇನು ಪಾತ್ರ ಇಲ್ವಾ?" ಎಂದು ಕೇಳಿದ್ದರು. ಆಗ ಪ್ರಶಾಂತ್ "ಮ್ಯಾಮ್, ಇದರಲ್ಲಿ ಲೇಡೀಸ್ ಕ್ಯಾರೆಕ್ಟರ್‌ಗಳೇ ಇಲ್ಲ" ಎಂದು ನಕ್ಕಿದ್ದರು.
"ನಿಮಗಿಂತ ದುರಹಂಕಾರಿ ಇನ್ಯಾರಿದ್ದಾರೆ?" ತಮಾಷೆ ಮಾಡಿದ ಯಶ್
"ನಿಮಗಿಂತ ದುರಹಂಕಾರಿ ಇನ್ಯಾರಿದ್ದಾರೆ?" ತಮಾಷೆ ಮಾಡಿದ ಯಶ್
ಅಲ್ಲಿಂದ ಒಂದು ವರ್ಷ ಕಳೆದ ಮೇಲೆ ಪ್ರಶಾಂತ್ ನೀಲ್ ಮಾಳವಿಕಾ ಅವರಿಗೆ ಫೋನ್ ಮಾಡುತ್ತಾರೆ. ಒಬ್ಬರು ಪವರ್‌ಫುಲ್ ಇಂಗ್ಲಿಷ್ ನ್ಯೂಸ್ ಆಂಕರ್ ಪಾತ್ರವಿದೆ, ಅತಿಯಾದ ದುರಹಂಕಾರದಿಂದ ಮಾತನಾಡುವ ವ್ಯಕ್ತಿತ್ವ ಅವರದ್ದು ಎಂದು ವಿವರಿಸುತ್ತಾರೆ. ಆಗ ಪಕ್ಕದಲ್ಲೇ ಇದ್ದ ಯಶ್, "ಅಕ್ಕ, ನಿಮಗಿಂತ ದುರಹಂಕಾರ ಇನ್ಯಾರಿಗಿದೆ? ಈ ಪಾತ್ರಕ್ಕೆ ನೀವೇ ಬೆಸ್ಟ್!" ಎಂದು ಕಾಲೆಳೆಯುತ್ತಾರೆ. ತಮ್ಮನ ಮಾತಿನಲ್ಲಿದ್ದ ತಮಾಷೆ ಮತ್ತು ಪಾತ್ರದ ಗಂಭೀರತೆಯನ್ನು ಮೆಚ್ಚಿ ಮಾಳವಿಕಾ 'ದೀಪಾ ಹೆಗ್ಡೆ' ಪಾತ್ರಕ್ಕೆ ಸಹಿ ಹಾಕುತ್ತಾರೆ.
ಅನಂತ್ ನಾಗ್ ಅವರೊಂದಿಗೆ ನಟಿಸುವ ಸೌಭಾಗ್ಯ
ಅನಂತ್ ನಾಗ್ ಅವರೊಂದಿಗೆ ನಟಿಸುವ ಸೌಭಾಗ್ಯ
ಈ ಪಾತ್ರ ಒಪ್ಪಿಕೊಳ್ಳಲು ಮತ್ತೊಂದು ದೊಡ್ಡ ಕಾರಣ ಹಿರಿಯ ನಟ ಅನಂತ್ ನಾಗ್. "ಅನಂತ್ ನಾಗ್ ಅವರಂತಹ ಅದ್ಭುತ ನಟ ಭಾರತದಲ್ಲೇ ಇಲ್ಲ. ಅವರ ದೊಡ್ಡ ಫ್ಯಾನ್ ಆಗಿರುವ ನನಗೆ, ಅವರ ಜೊತೆ ತೆರೆ ಹಂಚಿಕೊಳ್ಳುವುದು ಒಂದು ಸೌಭಾಗ್ಯ" ಎಂದು ಮಾಳವಿಕಾ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ವಿಶೇಷ ಕಾಕತಾಳೀಯ
ಹೀಗೆ, ರಾಖಿ ಕಟ್ಟಲು ಹೋದ ಸಂದರ್ಭವು ಭಾರತೀಯ ಚಿತ್ರರಂಗದ ಇತಿಹಾಸ ಬರೆದ 'ಕೆಜಿಎಫ್' ಸಿನಿಮಾದ ಭಾಗವಾಗುವಂತೆ ಮಾಡಿದ್ದು ನಿಜಕ್ಕೂ ಒಂದು ವಿಶೇಷ ಕಾಕತಾಳೀಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
