ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ವ್ಯಕ್ತವಾದ ಬೆನ್ನಲ್ಲೇ ನಟ ಯಶ್ ಅವರ ಪುಷ್ಪಾ ಅರುಣ್‌ಕುಮಾರ್ ಅವರು ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ತಂದೆ ನಿರ್ಮಾಪಕ ಅಲ್ಲೂ ಅರವಿಂದ್ ಹಳೆಯ ಹೇಳಿಕೆಗೆ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಅದಕ್ಕೀಗ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ.
RGV on Yash Controversy-Allu Aravind Statement on Yash-ಯಶ್ ಅಮ್ಮ ಪುಷ್ಪಾ ಮಾತಿಗೆ ರಾಮ್‌ಗೋಪಾಲ್ ವರ್ಮಾ ಕಿಡಿಕಿಡಿ.
ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಈಗ ಟಾಕ್ಸಿಕ್ ಸಿನಿಮಾ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ಅವರ ನಟನೆ-ನಿರ್ಮಾಣದ 'ಟಾಕ್ಸಿಕ್'ಗೆ ಹಲವು ಕಡೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಒಂದೇ ಒಂದು ವಾರದೊಳಗೆ ಈ ಚಿತ್ರವು 300 ಕೋಟಿ ಕಲೆಕ್ಷನ್ ಗಡಿ ದಾಟಿದೆ. ಆದರೆ, ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ವ್ಯಕ್ತವಾದ ಬೆನ್ನಲ್ಲೇ ನಟ ಯಶ್ ಅವರ ಪುಷ್ಪಾ ಅರುಣ್‌ಕುಮಾರ್ ಅವರು ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ತಂದೆ ನಿರ್ಮಾಪಕ ಅಲ್ಲೂ ಅರವಿಂದ್ ಹಳೆಯ ಹೇಳಿಕೆಗೆ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಅದಕ್ಕೀಗ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ. ಅದೇನು ಅಂತ ನೋಡಿ..
"#ಯಶ್ ಬಗ್ಗೆ #ಅಲ್ಲುಅರವಿಂದ್ ಅವರು ನೀಡಿದ ಹೇಳಿಕೆಯ ಕುರಿತು ನಡೆಯುತ್ತಿರುವ ವಿವಾದವು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಏಕೆಂದರೆ, ಅಪರಿಚಿತ ನಟರನ್ನು ಇಟ್ಟುಕೊಂಡು ದೊಡ್ಡ ಸಿನಿಮಾಗಳನ್ನು ಮಾಡುವುದು ಮತ್ತು ಕೆಜಿಎಫ್‌ಗಿಂತ ಮೊದಲು ತಮಗೆ ಯಶ್ ಬಗ್ಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದಾಗ, ಅವರು ಯಾವ ಸಂದರ್ಭದಲ್ಲಿ ಆ ಮಾತು ಹೇಳಿದ್ದರು ಎಂಬುದು ಸಾಮಾನ್ಯ ಬುದ್ಧಿವಂತಿಕೆ ಇರುವವರಿಗೂ ಅರ್ಥವಾಗುತ್ತದೆ.
ಬಾಹುಬಲಿ ಬರುವ ಮುನ್ನ ಹಿಂದಿ ಪ್ರೇಕ್ಷಕರಿಗೆ ಪ್ರಭಾಸ್ ಯಾರೆಂದು ಗೊತ್ತಿರಲಿಲ್ಲ, ಕಾಂತಾರ ಬರುವವರೆಗೂ ಅವರಿಗೆ ರಿಷಬ್ ಶೆಟ್ಟಿ ಪರಿಚಯವಿರಲಿಲ್ಲ. ಹಾಗೆಯೇ 'ಗಾಡ್ ಫಾದರ್' ಸಿನಿಮಾ ನೋಡುವ ಮೊದಲು ನನಗೆ ಬ್ರಾಂಡೊ ಯಾರೆಂದು ತಿಳಿದಿರಲಿಲ್ಲ.. ಬಹುಶಃ ಅವರು ಅದಕ್ಕೂ ಮುನ್ನ 'ಎ ಸ್ಟ್ರೀಟ್ ಕಾರ್ ನೇಮ್ಡ್ ಡಿಸೈರ್', 'ಆನ್ ದಿ ವಾಟರ್ ಫ್ರಂಟ್' ಅಂತಹ ಸಿನಿಮಾಗಳ ಮೂಲಕ ಸ್ಟಾರ್ ಆಗಿರಬಹುದು (ಆ ಸಿನಿಮಾಗಳು ಭಾರತದಲ್ಲಿ ಬಿಡುಗಡೆಯಾಗಿದ್ದವೋ ಇಲ್ಲವೋ ನನಗೆ ಗೊತ್ತಿಲ್ಲ).. ಆದರೆ ಆ ಸಿನಿಮಾಗಳೇ ಅವರನ್ನು ದೊಡ್ಡ ಸ್ಟಾರ್‌ಗಳನ್ನಾಗಿ ಮಾಡಿದವು ಹೊರತು, ಅವರು ಸ್ಟಾರ್ ಆಗಿದ್ದರಿಂದ ಆ ಸಿನಿಮಾಗಳು ದೊಡ್ಡದಾಗಲಿಲ್ಲ. ಹಾಲಿವುಡ್ ಯಾವಾಗಲೂ ಸ್ಟಾರ್‌ಗಳಿಗಿಂತ ಹೆಚ್ಚಾಗಿ 'ಕಾನ್ಸೆಪ್ಟ್' (ಕಥೆ) ಆಧಾರಿತ ಸಿನಿಮಾಗಳ ಮೇಲೆ ಹಣ ಹೂಡುತ್ತದೆ. ಕ್ರಿಸ್ಟೋಫರ್ ನೋಲನ್ ಅಂತಹ ನಿರ್ದೇಶಕರು ಕೂಡ ನಟರನ್ನು ಅವರ ನಟನಾ ಕೌಶಲಕ್ಕಾಗಿ ಬಳಸಿಕೊಳ್ಳುತ್ತಾರೆಯೇ ಹೊರತು ಅವರ ಸ್ಟಾರ್‌ಗಿರಿ ಮೇಲೆ ಅವಲಂಬಿತರಾಗುವುದಿಲ್ಲ. ಅದು 'ಒಪ್ಪನ್‌ಹೈಮರ್' ಇರಲಿ ಅಥವಾ 'ಒಡಿಸ್ಸಿ' ಇರಲಿ, ಅದರಲ್ಲಿ ಯಾರು ನಟಿಸಿದ್ದಾರೆ ಎಂಬುದಕ್ಕಿಂತ ಆ ಕಥೆಯೇ ಮುಖ್ಯವಾಗುತ್ತದೆ.
ಇನ್ನು ಅಲ್ಲು ಅರವಿಂದ್ ವಿಷಯಕ್ಕೆ ಬರುವುದಾದರೆ, ಇಂತಹ ಒಂದು ಸಾಮಾನ್ಯವಾದ ಮತ್ತು ಸ್ಪಷ್ಟವಾದ ಆಲೋಚನೆಯನ್ನು ಕೇವಲ ಅತಿಯಾದ ಅಹಂಕಾರ ಇರುವವರು ಮಾತ್ರ ವೈಯಕ್ತಿಕವಾಗಿ ಅಥವಾ ತಪ್ಪಾಗಿ ತೆಗೆದುಕೊಳ್ಳಲು ಸಾಧ್ಯ. ವಾಸ್ತವವಾಗಿ, ಇಂತಹ ಪ್ರತಿಕ್ರಿಯೆಗಳೇ ಅವರು ಅಂತಹ ಸಿನಿಮಾಗಳನ್ನು ಯಾಕೆ ಮಾಡುತ್ತಿದ್ದಾರೆ ಎಂಬುದನ್ನು ವಿವರಿಸುತ್ತವೆ." ಎಂದು ರಾಮ್ ಗೋಪಾಲ್ ವರ್ಮಾ ಯಶ್ ಅಮ್ಮ ಪುಷ್ಪಾ ಅವರ ಮಾತಿಗೆ ಛಾಟಿ ಬೀಸಿದ್ದಾರೆ. ಇನ್ಮುಂದೆ ಈ ವಿವಾದ ಎಲ್ಲಿಗೆ ಹೋಗಿ ತಲುಪುತ್ತೆ ಎಂಬುದನ್ನು ಕಾದು ನೋಡಬೇಕಿದೆ.


