MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
CM DK Shivakumar vs HD Devegowda
Today's Horoscope in Kannada
Mekedatu Project Cost
CWRC Meeting Today
KPSC Scam
Ganesh Idol Theft
Mandya Children Wedding
Swachh Vayu Survekshan
108 Ambulance Services
LPG Booking Rules
National Film Awards Ceremony
  • Home
  • Entertainment
  • Movie Reviews
  • ತೆರೆ ಮೇಲೆ 'ಟಾಕ್ಸಿಕ್' ಜ್ವಾಲೆ: ರಾಕಿಂಗ್ ಸ್ಟಾರ್ ಯಶ್‌ನಿಂದಲೇ ಧುರಂದರ್ ಹಿಟ್ ಆಯ್ತು!

ತೆರೆ ಮೇಲೆ 'ಟಾಕ್ಸಿಕ್' ಜ್ವಾಲೆ: ರಾಕಿಂಗ್ ಸ್ಟಾರ್ ಯಶ್‌ನಿಂದಲೇ ಧುರಂದರ್ ಹಿಟ್ ಆಯ್ತು!

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರವು ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆಕ್ಷನ್ ದೃಶ್ಯಗಳು, ಕಿಯಾರಾ ಜೊತೆಗಿನ ಯಶ್ ಕೆಮಿಸ್ಟ್ರಿ ಹಾಗೂ ದೃಶ್ಯ ವೈಭೋಗಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಸಿನಿಮಾ ಬ್ಲಾಕ್‌ಬಸ್ಟರ್ ಆಗುವ ಸೂಚನೆ ನೀಡಿದೆ.

2 Min read
Author : Mahmad Rafik
Published : Aug 26 2026, 07:48 AM IST
Share this Photo Gallery
  • FB
  • TW
  • Linkdin
  • Whatsapp
16
ಟಾಕ್ಸಿಕ್ ಅಬ್ಬರ
Image Credit : X

ಟಾಕ್ಸಿಕ್ ಅಬ್ಬರ

ದೇಶದ ಮೂಲೆ ಮೂಲೆಯಲ್ಲಿಯೂ ಟಾಕ್ಸಿಕ್ ಅಬ್ಬರ ಶುರುವಾಗಿದ್ದು, ಫಸ್ಟ್ ಶೋ ನೋಡಿ ಬಂದಿರುವ ವೀಕ್ಷಕರು ಎರಡನೇ ಬಾರಿ ಟಿಕೆಟ್ ಖರೀದಿಗೆ ಮುಂದಾಗುತ್ತಿದ್ದಾರೆ. ವಿಶೇಷವಾಗಿ ಮಾಸ್ ಆಂಡ್ ಆಕ್ಷನ್ ಸಿನಿಮಾ ಪ್ರೇಕ್ಷಕರಿಗೆ ಹಬ್ಬದೂಟವನ್ನೇ ನೀಡಿದೆ. ನಾಲ್ಕು ವರ್ಷದ ಬಳಿಕ ಯಶ್ ಅವರನ್ನು ತೆರೆ ಮೇಲೆ ನೋಡಿ ಅಭಿಮಾನಿಗಳು ಖುಷಿಯಿಂದ ಕುಣಿದಾಡಿದ್ದಾರೆ. ಇಂದು ಬೆಳಗಿನ ಜಾವದಿಂದಲೇ ಸಿನಿಮಾ ಪ್ರಸಾರ ಆರಂಭಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸೌಥ್ ಸಿನಿಮಾ
Image Credit : Asianet News

ಸೌಥ್ ಸಿನಿಮಾ

ಭಾರತದ ಉತ್ತರ ಭಾಗಗಳಲ್ಲಿಯೂ ಥಿಯೇಟರ್‌ಗಳು ತುಂಬಿ ತುಳುಕಿವೆ. ಸಿನಿಮಾ ನೋಡಿ ಬಂದ ವೀಕ್ಷಕರು, ಇಡೀ ಬಾಲಿವುಡ್ ಒಂದ್ಕಡೆಯಾದ್ರೆ, ಸೌಥ್ ಸಿನಿಮಾಗಳು ಮತ್ತೊಂದು ತೂಕ ಹೊಂದಿವೆ. ಎನಿಮಲ್, ಧುರಂದರ್ ಸಿನಿಮಾಗಳ ದಾಖಲೆಯನ್ನು ಟಾಕ್ಸಿಕ್ ಬ್ರೇಕ್ ಮಾಡೋದು ಖಚಿತ ಅನ್ನೋದು ವೀಕ್ಷಕರು.

Related Articles

Related image1
ದಾವಣಗೆರೆ: ಅಭಿಮಾನಿಗಳಿಂದಲೇ ₹4.74 ಲಕ್ಷ ಮೊತ್ತದ ಟಾಕ್ಸಿಕ್ ಸಿನಿಮಾದ ಟಿಕೆಟ್ ಖರೀದಿ
Related image2
ಬಾಕ್ಸ್ ಆಫೀಸ್‌ನಲ್ಲಿ ‘ಟಾಕ್ಸಿಕ್’ ಸುನಾಮಿ! ಮೊದಲ ದಿನವೇ ₹100 ಕೋಟಿ ಕ್ಲಬ್? ಮುರಿದುಬಿತ್ತು ‘ಕಲ್ಕಿ-ಜವಾನ್’ ದಾಖಲೆ!
36
ಕಿಯಾರಾ ಜೊತೆಗಿನ ಯಶ್ ಕೆಮಿಸ್ಟ್ರಿ
Image Credit : others

ಕಿಯಾರಾ ಜೊತೆಗಿನ ಯಶ್ ಕೆಮಿಸ್ಟ್ರಿ

ಟಾಕ್ಸಿಕ್‌ ಚಿತ್ರದ ಪ್ರತಿಯೊಂದು ದೃಶ್ಯಗಳು ತೆರೆ ಮೇಲೆ ಪೇಟಿಂಗ್‌ನಂತೆ ಕಾಣಿಸುತ್ತಿವೆ ಅನ್ನೋದು ವೀಕ್ಷಕರ ಅಭಿಪ್ರಾಯವಾಗಿದೆ. ಚಿತ್ರದ ದೃಶ್ಯ ವೈಭೋಗ ನಮ್ಮನ್ನು ಅಲುಗಾಡದಂತೆ ಕುರ್ಚಿಗೆ ಕಟ್ಟಿ ಹಾಕುತ್ತೆ ಎಂಬುವುದು ವೀಕ್ಷಕರ ಮಾತಾಗಿದೆ. ಹಾಗೆಯೇ ಕಿಯಾರಾ ಜೊತೆಗಿನ ಯಶ್ ಕೆಮಿಸ್ಟ್ರಿಗೆ ಯುವ ಸಮುದಾಯ ಕ್ಲೀನ್ ಬೋಲ್ಡ್ ಆಗಿದೆ. ಇನ್ನುಳಿದ ನಾಲ್ವರು ನಟಿಯರ ಪಾತ್ರವೂ ಚಿತ್ರದಲ್ಲಿ ಅತ್ಯಂತ ಪ್ರಮುಖವಾಗಿದೆ ಎಂಬ ಮಾತುಗಳು ಸಹ ಅಭಿಮಾನಿಗಳ ವಲಯದಿಂದ ಕೇಳಿ ಬರುತ್ತಿವೆ.

46
ಪ್ರತಿಯೊಂದು ದೃಶ್ಯದಲ್ಲಿಯೂ ಯಶ್ ತುಂಬಾ ಆಕರ್ಷಕ
Image Credit : Youtube

ಪ್ರತಿಯೊಂದು ದೃಶ್ಯದಲ್ಲಿಯೂ ಯಶ್ ತುಂಬಾ ಆಕರ್ಷಕ

ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಟಾಕ್ಸಿಕ್ ಸಿನಿಮಾದ 'ವಾವ್ ಮೊಮೆಂಟ್‌'ಗಳ ಕ್ಲಿಪ್ ಸಹ ವೈರಲ್ ಆಗುತ್ತಿವೆ. ಬೆಂಕಿಯಿಂದ ಹಾರಿ ಬರುವ ಕಿಡಿಯಿಂದ ಸಿಗರೇಟ್‌ ಹಚ್ಚಿಕೊಳ್ಳುವ ಯಶ್ ಸ್ಟೈಲ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ. ಇಡೀ ವಿಶ್ವಕ್ಕಾಗಿಯೇ ಈ ಸಿನಿಮಾ ಮಾಡಲಾಗಿದೆ. ಚಿತ್ರದ ಪ್ರತಿಯೊಂದು ದೃಶ್ಯದಲ್ಲಿಯೂ ಯಶ್ ತುಂಬಾ ಆಕರ್ಷಕವಾಗಿ ಕಾಣಿಸುತ್ತಾರೆ. ಸಿನಿಮಾ ನೋಡಿ ಖುಷಿಯಾಯ್ತು ಎಂದಿದ್ದಾರೆ.

56
ಟೀಸರ್ ಮತ್ತು ಟ್ರೈಲರ್‌ನಲ್ಲಿ ತೋರಿಸಿದಕ್ಕಿಂತ ಆಕ್ಷನ್ ಸೀನ್‌ಗಳು ಚೆನ್ನಾಗಿವೆ.
Image Credit : Asianet News

ಟೀಸರ್ ಮತ್ತು ಟ್ರೈಲರ್‌ನಲ್ಲಿ ತೋರಿಸಿದಕ್ಕಿಂತ ಆಕ್ಷನ್ ಸೀನ್‌ಗಳು ಚೆನ್ನಾಗಿವೆ.

ಮೊದಲ ಶೋ ನೋಡಿರುವ ಮಹಿಳಾ ವೀಕ್ಷಕರು, ಟೀಸರ್ ಮತ್ತು ಟ್ರೈಲರ್‌ನಲ್ಲಿ ತೋರಿಸಿದಕ್ಕಿಂತ ಆಕ್ಷನ್ ಸೀನ್‌ಗಳು ಚೆನ್ನಾಗಿವೆ. ಚಿತ್ರದ ಕಥೆಯೂ ಚೆನ್ನಾಗಿದೆ. ಕಿಯಾರಾ ಜೊತೆಗಿನ ಯಶ್ ಅವರ ಕೆಮಿಸ್ಟ್ರಿ ಚಿತ್ರದ ಹೈಲೈಟ್. ಚಿತ್ರಮಂದಿರ ತುಂಬಿದ್ದು, ಕ್ರೇಜಿ ಸೀನ್‌ಗಳು ಅದ್ಭುತವಾಗಿವೆ. ಮತ್ತೊಮ್ಮೆ ಸಿನಿಮಾ ನೋಡಲು ಮತ್ತೊಮ್ಮೆ ಬರುವೆ. ಎಲ್ಲರಿಗೂ ಸಿನಿಮಾ ಖಂಡಿತ ಇಷ್ಟವಾಗುತ್ತದೆ ಎಂದು ಹೇಳುತ್ತಾರೆ.

66
ಧುರಂದರ್
Image Credit : social media

ಧುರಂದರ್

ಅಂದು ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿದ್ದರಿಂದ ರಣ್‌ವೀರ್ ಸಿಂಗ್ ಅವರ ಧುರಂದರ್ ಸರ್ವೈವ್ ಆಯ್ತು. ಟಾಕ್ಸಿಕ್‌ನಿಂದಲೇ ಧುರಂದರ್ ಸಿನಿಮಾ ಹಿಟ್ ಆಯ್ತು. ಒಂದು ವೇಳೆ ಎರಡೂ ಸಿನಿಮಾಗಳು ಜೊತೆಯಾಗಿ ಬಿಡುಗಡೆ ಆಗಿದ್ರೆ ಧುರಂದರ್‌ಗೆ ಸೋಲು ಆಗ್ತಿತ್ತು. ರೊಮ್ಯಾಂಟಿಕ್ ಸೀನ್‌ಗಳು ಸಹ ಚೆನ್ನಾಗಿವೆ ಎಂದು ಉತ್ತರ ಭಾರತೀಯರು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಯಶ್
ಟಾಕ್ಸಿಕ್
ಟಾಕ್ಸಿಕ್
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ರಣವೀರ್ ಸಿಂಗ್
ಬಾಲಿವುಡ್

Latest Videos
Recommended Stories
Recommended image1
ನೀವು ಈ ತರಹದ 'ನ್ಯೂ ಏಜ್ ಲವ್ ಸ್ಟೋರಿ' ಸಿನಿಮಾ ನೋಡೋಕೆ ಚಾನ್ಸೇ ಇಲ್ಲ.. ಊಹಿಸಲಾಗದ ಟ್ವಿಸ್ಟ್!
Recommended image2
ವಿದೇಶದಲ್ಲಿರುವ ಗಂಡ, ಮತ್ತೊಬ್ಬನ ಜೊತೆ ಹೆಂಡತಿಯ ಅಫೇರ್: ಮುಂದೈತೆ ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್!
Recommended image3
ಮಲಯಾಳಂನ ರೋಚಕ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ; ಕೇರಳ-ತಮಿಳುನಾಡು ಗಡಿಯ ಠಾಣೆ ಕಥೆ
Related Stories
Recommended image1
ದಾವಣಗೆರೆ: ಅಭಿಮಾನಿಗಳಿಂದಲೇ ₹4.74 ಲಕ್ಷ ಮೊತ್ತದ ಟಾಕ್ಸಿಕ್ ಸಿನಿಮಾದ ಟಿಕೆಟ್ ಖರೀದಿ
Recommended image2
ಬಾಕ್ಸ್ ಆಫೀಸ್‌ನಲ್ಲಿ ‘ಟಾಕ್ಸಿಕ್’ ಸುನಾಮಿ! ಮೊದಲ ದಿನವೇ ₹100 ಕೋಟಿ ಕ್ಲಬ್? ಮುರಿದುಬಿತ್ತು ‘ಕಲ್ಕಿ-ಜವಾನ್’ ದಾಖಲೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved