ನೀವು ಈ ತರಹದ 'ನ್ಯೂ ಏಜ್ ಲವ್ ಸ್ಟೋರಿ' ಸಿನಿಮಾ ನೋಡೋಕೆ ಚಾನ್ಸೇ ಇಲ್ಲ.. ಊಹಿಸಲಾಗದ ಟ್ವಿಸ್ಟ್!
ಕಿರಣ್ ಅಬ್ಬವರಂ ಹಾಗೂ ಶ್ರೀ ಗೌರಿ ಪ್ರಿಯಾ ಅಭಿನಯದ ‘ಚೆನ್ನೈ ಲವ್ ಸ್ಟೋರಿ’ ಸಿನಿಮಾ ಇದೀಗ OTTಗೆ ಎಂಟ್ರಿ ಕೊಟ್ಟಿದೆ. ಥಿಯೇಟರ್‌ನಲ್ಲಿ ಸಕ್ಸಸ್ ಕಂಡ ಈ ನ್ಯೂ ಏಜ್ ಲವ್ ಸ್ಟೋರಿ 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದೆ.

ನ್ಯೂ ಏಜ್ ಲವ್ ಸ್ಟೋರಿ
ಓಟಿಟಿ ಪ್ರೇಕ್ಷಕರು ಬಹುದಿನಗಳಿಂದ ಕಾತರದಿಂದ ಕಾಯುತ್ತಿದ್ದ ‘ಚೆನ್ನೈ ಲವ್ ಸ್ಟೋರಿ’ ಸಿನಿಮಾ ಇದೀಗ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿದೆ. ಥಿಯೇಟರ್‌ನಲ್ಲಿ ಯುವ ಪ್ರೇಕ್ಷಕರನ್ನು ಸೆಳೆದಿದ್ದ ಈ ನ್ಯೂ ಏಜ್ ಲವ್ ಸ್ಟೋರಿ ಈಗಾಗಲೇ ಓಟಿಟಿಯಲ್ಲಿ ಲಭ್ಯವಾಗಿದೆ. ಹೀಗಾಗಿ ಈ ವೀಕೆಂಡ್‌ನಲ್ಲಿ ಒಂದು ವಿಭಿನ್ನ ಪ್ರೇಮಕಥೆ ನೋಡಬೇಕು ಎನ್ನುವವರಿಗೆ ‘ಚೆನ್ನೈ ಲವ್ ಸ್ಟೋರಿ’ ಉತ್ತಮ ಆಯ್ಕೆಯಾಗಬಹುದು.
ಥಿಯೇಟರ್‌ನಲ್ಲಿ ಸಕ್ಸಸ್ ಕಂಡ ಸಿನಿಮಾ
ಸತತ ಯಶಸ್ಸಿನಲ್ಲಿರುವ ನಟ ಕಿರಣ್ ಅಬ್ಬವರಂ ಅಭಿನಯದ ಇತ್ತೀಚಿನ ಸಿನಿಮಾ ‘ಚೆನ್ನೈ ಲವ್ ಸ್ಟೋರಿ’. ರವಿ ನಂಬೂರಿ ನಿರ್ದೇಶನದ ಈ ಪ್ರೇಮಕಥೆಯಲ್ಲಿ ತೆಲುಗು ನಟಿ ಶ್ರೀ ಗೌರಿ ಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಜುಲೈ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಸಕ್ಸಸ್ ಕಂಡಿತ್ತು. ಕಿರಣ್ ಅಬ್ಬವರಂ ಹಾಗೂ ಶ್ರೀ ಗೌರಿ ಪ್ರಿಯಾ ಅವರ ಅಭಿನಯ, ಕೆಮಿಸ್ಟ್ರಿ ಮತ್ತು ಸ್ಕ್ರೀನ್ ಪ್ರೆಸೆನ್ಸ್‌ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಜೊತೆಗೆ ಮಣಿಶರ್ಮ ಅವರ ಹಾಡುಗಳು ಹಾಗೂ ಹಿನ್ನೆಲೆ ಸಂಗೀತವೂ ಸಿನಿಮಾದ ಪ್ರಮುಖ ಆಕರ್ಷಣೆಯಾಗಿತ್ತು.
15 ಕೋಟಿ ಬಜೆಟ್.. 50 ಕೋಟಿಗೂ ಅಧಿಕ ಕಲೆಕ್ಷನ್!
ಕೇವಲ 15 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ‘ಚೆನ್ನೈ ಲವ್ ಸ್ಟೋರಿ’, ವಿಶ್ವಾದ್ಯಂತ 50 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ. ಥಿಯೇಟರ್‌ನಲ್ಲಿ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಓಟಿಟಿ ಬಿಡುಗಡೆಗಾಗಿ ಪ್ರೇಕ್ಷಕರು ಕಾದಿದ್ದರು. ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್ SonyLIV ಪಡೆದುಕೊಂಡಿದ್ದು, ಅದರಂತೆ ಸಿನಿಮಾ ಓಟಿಟಿಗೆ ಎಂಟ್ರಿ ಕೊಟ್ಟಿದೆ. ತೆಲುಗು, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿದೆ.
‘ಬೇಬಿ’ ಖ್ಯಾತಿಯ ಸಾಯಿ ರಾಜೇಶ್ ಕಥೆ
‘ಚೆನ್ನೈ ಲವ್ ಸ್ಟೋರಿ’ ಸಿನಿಮಾಗೆ ‘ಬೇಬಿ’ ಚಿತ್ರದ ಮೂಲಕ ಬ್ಲಾಕ್‌ಬಸ್ಟರ್ ಯಶಸ್ಸು ಕಂಡ ಸಾಯಿ ರಾಜೇಶ್ ಕಥೆ ಹಾಗೂ ಸ್ಕ್ರೀನ್‌ಪ್ಲೇ ಬರೆದಿದ್ದಾರೆ. ಖ್ಯಾತ ನಿರ್ಮಾಪಕರಾದ ಎಸ್‌ಕೆಎನ್ ಮತ್ತು ಸಾಯಿ ರಾಜೇಶ್ ಜಂಟಿಯಾಗಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಕಿರಣ್ ಅಬ್ಬವರಂ ಮತ್ತು ಶ್ರೀ ಗೌರಿ ಪ್ರಿಯಾ ಜೊತೆಗೆ ತ್ರಿಗುಣ್, ದೇವಿ ಪ್ರಸಾದ್, ಸಿರಿ ಹನುಮಂತು, ಪಿ. ವಾಸು ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚೆನ್ನೈ ಹಿನ್ನೆಲೆಯಲ್ಲೊಂದು ವಿಭಿನ್ನ ಪ್ರೇಮಕಥೆ
ಹೆಸರೇ ಹೇಳುವಂತೆ ಸಿನಿಮಾದ ಕಥೆ ಚೆನ್ನೈ ನಗರದ ಹಿನ್ನೆಲೆಯಲ್ಲೇ ಸಾಗುತ್ತದೆ. ನಿರ್ದೇಶಕನಾಗಬೇಕೆಂಬ ಕನಸು ಹೊತ್ತ ಅನಾಥ ಯುವಕನೊಬ್ಬ ಹಾಗೂ ಮದುವೆ ನಿಶ್ಚಯವಾಗಿ ಕೊನೆಯ ಕ್ಷಣದಲ್ಲಿ ಅದು ಮುರಿದುಬಿದ್ದ ಯುವತಿಯೊಬ್ಬಳ ನಡುವೆ ಮೂಡುವ ಸ್ನೇಹ, ಪ್ರೀತಿ ಹಾಗೂ ನಂತರ ಎದುರಾಗುವ ಭಾವನಾತ್ಮಕ ಸನ್ನಿವೇಶಗಳೇ ಕಥೆಯ ಪ್ರಮುಖ ಅಂಶ. ಸಾಮಾನ್ಯ ಪ್ರೇಮಕಥೆಗಳಿಗಿಂತ ವಿಭಿನ್ನವಾಗಿ ನಿರೂಪಿಸಲಾಗಿದೆ ಎಂಬ ಕಾರಣಕ್ಕೆ ಸಿನಿಮಾ ಥಿಯೇಟರ್ ಬಿಡುಗಡೆಯ ಸಂದರ್ಭದಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

