MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bengaluru Weather Today
Kasturi Rangan Report
Karnataka Kodava Language
Wife Appreciation Day
Milk Price Hike Karnataka
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • Movie Reviews
  • 1957ರ ಕೇರಳ ಕಥೆ, ಭೂಮಿಗಾಗಿ ಹೋರಾಟ; ಗೂಸ್‌ಬಂಪ್ಸ್ ಕ್ಲೈಮ್ಯಾಕ್ಸ್ ಮಲಯಾಳಂ ಸಿನಿಮಾ

1957ರ ಕೇರಳ ಕಥೆ, ಭೂಮಿಗಾಗಿ ಹೋರಾಟ; ಗೂಸ್‌ಬಂಪ್ಸ್ ಕ್ಲೈಮ್ಯಾಕ್ಸ್ ಮಲಯಾಳಂ ಸಿನಿಮಾ

1957ರ ಕೇರಳದ ಕನಿಯಾರ್ ಪ್ರದೇಶದಲ್ಲಿ ನಡೆಯುವ ಸಿನಿಮಾವು ಭೂಮಿಗಾಗಿ ನಡೆಯುವ ಹೋರಾಟದ ಕಥೆಯಾಗಿದೆ. ನಂಬಿಯಾರ್‌ನ ಸಂಚಿನಿಂದ ಕನಿಯಾರ್ ಪ್ರದೇಶವನ್ನು ರಕ್ಷಿಸಲು ಕ್ರಿಸ್ಟೋಫರ್ ಹೇಗೆ ಹೋರಾಡುತ್ತಾನೆ ಎಂಬುದೇ ಇದರ ಕಥಾವಸ್ತು.

2 Min read
Author : Mahmad Rafik
Published : Sep 20 2026, 06:59 PM IST
Share this Photo Gallery
  • FB
  • TW
  • Linkdin
  • Whatsapp
17
1957ರ ಕೇರಳದ  ಕಥೆ
Image Credit : pallichattambi Trailer Clips

1957ರ ಕೇರಳದ ಕಥೆ

1957ರ ಕೇರಳದ ಕನಿಯಾರ್ ಪ್ರದೇಶದಲ್ಲಿ ಈ ಸಿನಿಮಾ ಕಥೆ ನಡೆಯುತ್ತದೆ. ಈ ಜಾಗದ ಮೇಲೆ ನಂಬಿಯಾರ್ ಕಣ್ಣಿಟ್ಟಿರುತ್ತಾನೆ. ಅಲ್ಲಿನ ಕಮ್ಯುನಿಸ್ಟರು ಮತ್ತು ಕ್ರಿಶ್ಚಿಯನ್ನರ ನಡುವೆ ಆಗಾಗ ಗಲಾಟೆ ನಡೆಯುತ್ತಿರುತ್ತದೆ. ಚರ್ಚ್ ರಕ್ಷಣೆಗಾಗಿ ಕ್ರಿಸ್ಟೋಫರ್ (ಟೊವಿನೊ ಥಾಮಸ್) ಎಂಟ್ರಿ ಕೊಡುತ್ತಾನೆ. ಅದೇ ಊರಿನಲ್ಲಿ ನಾಟಕ ಮಾಡುವ ರೆಬೆಕ್ಕಾ (ಕಯಾದು ಲೋಹರ್) ಮೇಲೆ ಕ್ರಿಸ್ಟೋಫರ್‌ಗೆ ಪ್ರೀತಿ ಹುಟ್ಟುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಸಿನಿಮಾದ ಒನ್ ಲೈನ್ ಕಥೆ
Image Credit : pallichattambi Trailer Clips

ಸಿನಿಮಾದ ಒನ್ ಲೈನ್ ಕಥೆ

ಈ ನಡುವೆ ಡೇಂಜರಸ್ ಪೊಲೀಸ್ ಆಫೀಸರ್ ರಾಮನ್ (ಶತ್ರು) ಎಂಟ್ರಿ ಕೊಡುತ್ತಾನೆ. ಕನಿಯಾರ್ ಪ್ರದೇಶವನ್ನು ನಾಶ ಮಾಡಲು ನಂಬಿಯಾರ್ (ಪೃಥ್ವಿರಾಜ್ ಸುಕುಮಾರನ್) ಪ್ಲಾನ್ ಮಾಡುತ್ತಾನೆ. ಆತನ ಸಂಚನ್ನು ಕ್ರಿಸ್ಟೋಫರ್ ಹೇಗೆ ಎದುರಿಸುತ್ತಾನೆ ಅನ್ನೋದೇ ಸಿನಿಮಾದ ಒನ್ ಲೈನ್ ಕಥೆ

Related Articles

Related image1
ಮಲಯಾಳಂ ಯಾಕೆ? ಕನ್ನಡದಲ್ಲಿಯೇ ಉಂಟು ಸೈಕಾಲಜಿಕಲ್, ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾ
Related image2
ಬಿಡುಗಡೆಯಾಗಿ 6 ವರ್ಷದ ನಂತ್ರ ಸದ್ದು ಮಾಡ್ತಿದೆ ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ
37
ಟೊವಿನೊ ಥಾಮಸ್ ಮತ್ತು ಕಯಾದು ಲೋಹರ್
Image Credit : pallichattambi Trailer Clips

ಟೊವಿನೊ ಥಾಮಸ್ ಮತ್ತು ಕಯಾದು ಲೋಹರ್

ಟೊವಿನೊ ಥಾಮಸ್ ಮತ್ತು ಕಯಾದು ಲೋಹರ್ ನಟನೆಯ 'ಪಳ್ಳಿಚಟ್ಟಂಬಿ' ಸಿನಿಮಾಗೆ ಡಿಜೊ ಜೋಸ್ ಆಂಟನಿ ಆಕ್ಷನ್ ಕಟ್ ಹೇಳಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಲ್ಡ್ ವೈಡ್ ಫಿಲ್ಮ್ಸ್ ಮತ್ತು ಸಿ ಕ್ಯೂಬ್ ಬ್ರೋಸ್ ಬ್ಯಾನರ್ ಅಡಿ ನೌಫಲ್, ಬ್ರಿಜೇಶ್, ಚಾಣಕ್ಯ, ಚೈತನ್ಯ ಹಾಗೂ ಚರಣ್ ಜೊತೆಯಾಗಿ ಪಳ್ಳಿಚಟ್ಟಂಬಿ ಸಿನಿಮಾವನ್ನು ನಿರ್ಮಿಸಿದ್ದಾರೆ.

47
ಕಯಾದು ಲೋಹರ್ ಎಂಟ್ರಿ
Image Credit : pallichattambi Trailer Clips

ಕಯಾದು ಲೋಹರ್ ಎಂಟ್ರಿ

1957ರಲ್ಲಿ ಕೇರಳದಲ್ಲಿ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಸಿನಿಮಾದ ಆರಂಭದಲ್ಲಿಯೇ ಕಮ್ಯುನಿಸ್ಟರು ಮತ್ತು ಕ್ರಿಶ್ಚಿಯನ್ನರ ನಡುವಿನ ಗಲಾಟೆಯನ್ನು ತೋರಿಸಲಾಗಿದೆ.

ಕಯಾದು ಲೋಹರ್ ಎಂಟ್ರಿ ನಂತರ ಕಥೆ ಇಂಟರೆಸ್ಟಿಂಗ್ ಆಗುತ್ತದೆ. ಇಂಟರ್ವಲ್ ಬ್ಯಾಂಗ್ ಸಖತ್ ಎಮೋಷನಲ್ ಆಗಿದ್ದು, ಮುಂದಿನ ದೃಶ್ಯಗಳು ಮತ್ತು ಆಕ್ಷನ್ ಸೀನ್‌ಗಳು ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳನ್ನು ನೆನಪಿಸುತ್ತವೆ. ಪೃಥ್ವಿರಾಜ್ ಸುಕುಮಾರನ್ ಎಂಟ್ರಿ ಮತ್ತು ಕ್ಲೈಮ್ಯಾಕ್ಸ್ ದೃಶ್ಯ ನೋಡುಗರಿಗೆ ಗೂಸ್‌ಬಂಪ್ಸ್ ಕೊಡುತ್ತವೆ.

57
ಕಲಾವಿದರ ನಟನೆ ಹೇಗಿದೆ?
Image Credit : pallichattambi Trailer Clips

ಕಲಾವಿದರ ನಟನೆ ಹೇಗಿದೆ?

ಕೃಷ್ಣ ಪಿಳ್ಳೈ ಅಲಿಯಾಸ್ ಕ್ರಿಸ್ಟೋಫರ್ ಪಾತ್ರದಲ್ಲಿ ಟೊವಿನೊ ಥಾಮಸ್ ಅದ್ಭುತವಾಗಿ ನಟಿಸಿದ್ದಾರೆ. ಆಕ್ಷನ್ ಮತ್ತು ಎಮೋಷನಲ್ ಸೀನ್‌ಗಳಲ್ಲಿ ಅವರ ನಟನೆ ಕಣ್ಣಿಗೆ ಕಟ್ಟುವಂತಿದೆ. ರೆಬೆಕ್ಕಾ ಪಾತ್ರದಲ್ಲಿ ಕಯಾದು ಲೋಹರ್ ಎಲ್ಲರ ಗಮನ ಸೆಳೆಯುತ್ತಾರೆ. ಪೊಲೀಸ್ ಆಫೀಸರ್ ಆಗಿ ಶತ್ರು ಎಂಟ್ರಿ ಸಖತ್ ಆಗಿದೆ. ಇನ್ನು ನಂಬಿಯಾರ್ ಆಗಿ ಪೃಥ್ವಿರಾಜ್ ಸುಕುಮಾರನ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗ ಥಿಯೇಟರ್‌ನಲ್ಲಿ ಶಿಳ್ಳೆ, ಚಪ್ಪಾಳೆ ಗ್ಯಾರಂಟಿ.

ಉಳಿದ ಕಲಾವಿದರು ಕೂಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.ಈ ನಡುವೆ ಡೇಂಜರಸ್ ಪೊಲೀಸ್ ಆಫೀಸರ್ ರಾಮನ್ (ಶತ್ರು) ಎಂಟ್ರಿ ಕೊಡುತ್ತಾನೆ. ಕನಿಯಾರ್ ಪ್ರದೇಶವನ್ನು ನಾಶ ಮಾಡಲು ನಂಬಿಯಾರ್ (ಪೃಥ್ವಿರಾಜ್ ಸುಕುಮಾರನ್) ಪ್ಲಾನ್ ಮಾಡುತ್ತಾನೆ. ಆತನ ಸಂಚನ್ನು ಕ್ರಿಸ್ಟೋಫರ್ ಹೇಗೆ ಎದುರಿಸುತ್ತಾನೆ ಅನ್ನೋದೇ ಸಿನಿಮಾದ ಒನ್ ಲೈನ್ ಕಥೆ

67
ಟಿಜೊ ಟೋಮಿ ಕ್ಯಾಮೆರಾ ವರ್ಕ್
Image Credit : pallichattambi Trailer Clips

ಟಿಜೊ ಟೋಮಿ ಕ್ಯಾಮೆರಾ ವರ್ಕ್

ಟಿಜೊ ಟೋಮಿ ಅವರ ಕ್ಯಾಮೆರಾ ವರ್ಕ್ ಸಿನಿಮಾದ ಹೈಲೈಟ್. ಕೇರಳದ ಪ್ರಕೃತಿ ಸೌಂದರ್ಯವನ್ನು ಅವರು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಜೇಕ್ಸ್ ಬಿಜೋಯ್ ಅವರ ಹಿನ್ನೆಲೆ ಸಂಗೀತ ಸಿನಿಮಾವನ್ನು ಬೇರೆಯದೇ ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತದೆ. ಶ್ರೀಜಿತ್ ಸಾರಂಗ್ ಅವರ ಎಡಿಟಿಂಗ್ ಫಸ್ಟ್ ಹಾಫ್‌ನಲ್ಲಿ ಇನ್ನಷ್ಟು ಶಾರ್ಪ್ ಆಗಿರಬೇಕಿತ್ತು. ನಿರ್ಮಾಣದ ಗುಣಮಟ್ಟ ತುಂಬಾ ರಿಚ್ ಆಗಿದೆ.

77
OTT?
Image Credit : X

OTT?

ನಿರ್ದೇಶಕ ಡಿಜೊ ಜೋಸ್ ಆಂಟನಿ ಸೆಕೆಂಡ್ ಹಾಫ್ ಅನ್ನು ತುಂಬಾ ಚೆನ್ನಾಗಿ ಹ್ಯಾಂಡಲ್ ಮಾಡಿದ್ದಾರೆ. ಭೂಮಿಗಾಗಿ ನಡೆಯುವ ಹೋರಾಟದ ಕಥೆಯನ್ನು ನಿರ್ದೇಶಕರು ತುಂಬಾ ಎಮೋಷನಲ್ ಆಗಿ ಹೇಳಿದ್ದಾರೆ. ಆಕ್ಷನ್ ಮತ್ತು ಎಮೋಷನ್ ಇಷ್ಟಪಡುವವರಿಗೆ ಪಳ್ಳಿಚಟ್ಟಂಬಿ ಸಿನಿಮಾ ಖಂಡಿತ ಇಷ್ಟವಾಗುತ್ತದೆ. Sony LIVನಲ್ಲಿ ನೋಡಬಹುದಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮಲಯಾಳಂ ಸಿನೆಮಾ
ಸಿನಿಮಾ
ಓಟಿಟಿ
ಮನರಂಜನಾ ಸುದ್ದಿ
 

Latest Videos
Recommended Stories
Recommended image1
'ಸಿಟಿ ಲೈಟ್ಸ್' ಜೀವನದಲ್ಲಿ ಹುಷಾರಾಗಿ ಇರಬೇಕು: ಬೀದಿ ದೀಪ ಅಯ್ಯೋ ಪಾಪ ಬದುಕು ಶಾಪ!
Recommended image2
ಹಳ್ಳಿಯಲ್ಲಿ ಶಾಲೆಯಿಲ್ಲ, ಮನುಷ್ಯರ ಅನಾಹುತಕ್ಕೆ ಪ್ರಾಣಿಗಳು ಹೊಣೆ: ಹೇಗಿದೆ 'ವಾರಿಯರ್' ಸಿನಿಮಾ?
Recommended image3
ಶಾಲಾ ದಿನಗಳ ಸ್ನೇಹ, ಪ್ರೇಮ, ತರ್ಲೆ ತಾಪತ್ರಯ: ಹೇಗಿದೆ ಶ್ರೀನಗರ ಕಿಟ್ಟಿ-ಮೇಘನಾ ರಾಜ್ ಸಿನಿಮಾ?
Related Stories
Recommended image1
ಮಲಯಾಳಂ ಯಾಕೆ? ಕನ್ನಡದಲ್ಲಿಯೇ ಉಂಟು ಸೈಕಾಲಜಿಕಲ್, ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾ
Recommended image2
ಬಿಡುಗಡೆಯಾಗಿ 6 ವರ್ಷದ ನಂತ್ರ ಸದ್ದು ಮಾಡ್ತಿದೆ ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved