- Home
- Entertainment
- Movie Reviews
- ಬಿಡುಗಡೆಯಾಗಿ 6 ವರ್ಷದ ನಂತ್ರ ಸದ್ದು ಮಾಡ್ತಿದೆ ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ
ಬಿಡುಗಡೆಯಾಗಿ 6 ವರ್ಷದ ನಂತ್ರ ಸದ್ದು ಮಾಡ್ತಿದೆ ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ
ಒಟಿಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ಸಿಗ್ತಿರೋ ರೆಸ್ಪಾನ್ಸ್ ದಿನೇ ದಿನೇ ಹೆಚ್ಚಾಗ್ತಿದೆ. ಡಿಫರೆಂಟ್ ಕಥೆ, ಗಟ್ಟಿಯಾದ ಚಿತ್ರಕಥೆ ಇರೋ ಸಿನಿಮಾಗಳಿಗೆ ಬೇರೆ ಭಾಷೆಯ ಪ್ರೇಕ್ಷಕರು ಕೂಡ ಫಿದಾ ಆಗ್ತಿದ್ದಾರೆ. ಇದೇ ಕಾರಣಕ್ಕೆ ಸಾಕಷ್ಟು ಮಲಯಾಳಂ ಸಿನಿಮಾಗಳು ಡಬ್ ಆಗಿ ಒಟಿಟಿಗೆ ಬರ್ತಿವೆ.

ಮಲಯಾಳಂ ಸಿನಿಮಾ
ಒಟಿಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ಸಿಗ್ತಿರೋ ರೆಸ್ಪಾನ್ಸ್ ದಿನೇ ದಿನೇ ಹೆಚ್ಚಾಗ್ತಿದೆ. ಡಿಫರೆಂಟ್ ಕಥೆ, ಗಟ್ಟಿಯಾದ ಚಿತ್ರಕಥೆ ಇರೋ ಸಿನಿಮಾಗಳಿಗೆ ಬೇರೆ ಭಾಷೆಯ ಪ್ರೇಕ್ಷಕರು ಕೂಡ ಫಿದಾ ಆಗ್ತಿದ್ದಾರೆ. ಇದೇ ಕಾರಣಕ್ಕೆ ಸಾಕಷ್ಟು ಮಲಯಾಳಂ ಸಿನಿಮಾಗಳು ಡಬ್ ಆಗಿ ಒಟಿಟಿಗೆ ಬರ್ತಿವೆ.
ಇನಿ ಉತ್ತರಂ
ಈ ಸಾಲಿನಲ್ಲಿ ಈಗ ಎಲ್ಲರ ಗಮನ ಸೆಳೆಯುತ್ತಿರೋ ಸಿನಿಮಾ 'ಇನಿ ಉತ್ತರಂ' (Ini Utharam). ಸಸ್ಪೆನ್ಸ್ ಹಾಗೂ ಇನ್ವೆಸ್ಟಿಗೇಶನ್ ಹಿನ್ನೆಲೆಯ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಿತ್ತು. ಈಗ ಇದರ ತಮಿಳು ವರ್ಷನ್ ಒಟಿಟಿಗೆ ಬಂದಿದೆ. ಶುರುವಿನಿಂದ ಕೊನೆಯವರೆಗೂ ಸಖತ್ ಟ್ವಿಸ್ಟ್‌ಗಳಿರೋ ಈ ಸಿನಿಮಾ ಕ್ರೈಮ್ ಥ್ರಿಲ್ಲರ್ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.
ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ
2020ರಲ್ಲಿ ರಿಲೀಸ್ ಆದ ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾವೊಂದು ಆರು ವರ್ಷಗಳ ನಂತರವೂ ಒಟಿಟಿಯಲ್ಲಿ ಸಖತ್ ಸೌಂಡ್ ಮಾಡ್ತಿದೆ. ಆ ಸಿನಿಮಾ ಯಾವುದು, ಅದರ ಕಥೆ ಏನು ಅನ್ನೋದನ್ನ ಇಲ್ಲಿ ನೋಡೋಣ.
ಜಾನಕಿ
ಜಾನಕಿ ಅನ್ನೋ ವೈದ್ಯೆ ಒಂದು ದಿನ ಪೊಲೀಸ್ ಠಾಣೆಗೆ ಬಂದು, ತಾನು ಕೊ*ಲೆ ಮಾಡಿದ್ದಾಗಿ ಹೇಳ್ತಾಳೆ. ಆದರೆ ಪೊಲೀಸರು ಆಕೆಯ ಮಾತನ್ನು ಗಂಭೀರವಾಗಿ ಪರಿಗಣಿಸಲ್ಲ. ಮಾಧ್ಯಮಗಳು ಈ ಬಗ್ಗೆ ಪ್ರಶ್ನೆ ಮಾಡಿದಾಗ, ಜಾನಕಿಗೆ ಮಾನಸಿಕ ಸ್ಥಿಮಿತ ಇಲ್ಲ ಅಂತ ಪೊಲೀಸರು ಹೇಳ್ತಾರೆ.ಆದರೆ ಜಾನಕಿ ತನ್ನ ಮಾತಿಗೆ ಅಂಟಿಕೊಳ್ತಾಳೆ. ತಾನು ಕೊಂದಿರೋ ಶವಗಳನ್ನು ಹೂತಿಟ್ಟಿರೋ ಜಾಗವನ್ನು ತೋರಿಸ್ತೀನಿ ಅಂತಾಳೆ. ಆಕೆ ಪೊಲೀಸರು ಹಾಗೂ ಮಾಧ್ಯಮದವರನ್ನು ಕಾಡಿಗೆ ಕರೆದುಕೊಂಡು ಹೋಗ್ತಾಳೆ. ಈ ಸುದ್ದಿ ಹರಡಿ ಊರಿನ ಜನ ಕೂಡ ಅಲ್ಲಿಗೆ ಬರ್ತಾರೆ.
ಜಾನಕಿ ಆರೋಪ
ಅಲ್ಲಿ ಅಗೆದು ನೋಡಿದಾಗ ಎರಡು ಶವಗಳು ಸಿಗುತ್ತವೆ. ಇದರಿಂದ ಕೇಸ್ ಗಂಭೀರವಾಗುತ್ತೆ. ಆದರೆ, ಆಮೇಲೆ ಜಾನಕಿ ಹೇಳೋ ಮಾತು ಇಡೀ ತನಿಖೆಯ ದಿಕ್ಕನ್ನೇ ಬದಲಾಯಿಸುತ್ತೆ. ಆ ಇಬ್ಬರನ್ನು ತಾನು ಕೊಂದಿಲ್ಲ, ಒಬ್ಬ ಪೊಲೀಸ್ ಅಧಿಕಾರಿಯೇ ಅವರನ್ನು ಕೊಂದಿದ್ದು ಅಂತ ಆಕೆ ಆರೋಪ ಮಾಡ್ತಾಳೆ.
ಜಾನಕಿ ಹೇಳ್ತಿರೋದು ನಿಜಾನಾ?
ಜಾನಕಿ ತನ್ನ ಆರೋಪಕ್ಕೆ ತಕ್ಕ ಸಾಕ್ಷಿಗಳನ್ನು ಕೂಡ ಕೊಡ್ತಾಳೆ. ಇದರಿಂದ ಈ ವಿಚಾರ ಮೇಲಧಿಕಾರಿಗಳ ಗಮನಕ್ಕೆ ಹೋಗುತ್ತೆ. ಎಸ್ಪಿ (SP) ನೇರವಾಗಿ ಎಂಟ್ರಿ ಕೊಟ್ಟು ತನಿಖೆ ಶುರು ಮಾಡ್ತಾರೆ. ತನಿಖೆ ಚುರುಕಾದಾಗ, ಈ ಕೊಲೆ ಕೇಸ್ ಹಿಂದೆ ಒಬ್ಬ ಸಚಿವರ ಕೈವಾಡ ಇರೋದು ಕೂಡ ಬಯಲಾಗುತ್ತೆ. ಹಾಗಾದ್ರೆ ಕೊ*ಲೆಯಾದ ಆ ಇಬ್ಬರು ಯಾರು? ಅವರಿಗೂ ಜಾನಕಿಗೂ ಏನು ಸಂಬಂಧ? ಜಾನಕಿ ಹೇಳ್ತಿರೋದು ನಿಜಾನಾ? ಪೊಲೀಸ್ ಅಧಿಕಾರಿಯ ಮೇಲಿನ ಆರೋಪದಲ್ಲಿ ಹುರುಳಿದೆಯಾ? ರಾಜಕಾರಣಿಯೊಬ್ಬನ ಪಾತ್ರ ಇದರಲ್ಲಿ ಏನಿದೆ? ಕೊನೆಗೆ ಅಸಲಿ ಅಪರಾಧಿಗಳನ್ನು ಹೇಗೆ ಪತ್ತೆ ಮಾಡ್ತಾರೆ? ಅನ್ನೋ ಪ್ರಶ್ನೆಗಳಿಗೆ ಉತ್ತರವೇ ಈ ಸಿನಿಮಾದ ಉಳಿದ ಕಥೆ.
ನಟಿ ಅಪರ್ಣಾ ಬಾಲಮುರಳಿ
'ಸೂರರೈ ಪೋಟ್ರು' ಸಿನಿಮಾ ಮೂಲಕ ನ್ಯಾಷನಲ್ ಲೆವೆಲ್‌ನಲ್ಲಿ ಗಮನ ಸೆಳೆದ ನಟಿ ಅಪರ್ಣಾ ಬಾಲಮುರಳಿ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಸುಧೀಶ್ ರಾಮಚಂದ್ರನ್ ನಿರ್ದೇಶನದ ಈ ಸಿನಿಮಾದಲ್ಲಿ ಕಲಾಭವನ್ ಶಾಜೋನ್, ಹರೀಶ್ ಉತ್ತಮನ್, ಸಿದ್ದಿಕ್, ಚಂದುನಾಥ್ ಜಿ. ನಾಯರ್, ಜಾಫರ್ ಇಡುಕ್ಕಿ, ಸಿದ್ಧಾರ್ಥ್ ಮೆನನ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿನಿಮಾಗೆ ಹೇಶಾಮ್ ಅಬ್ದುಲ್ ವಹಾಬ್ ಮ್ಯೂಸಿಕ್ ಕೊಟ್ಟಿದ್ದಾರೆ. 'ಖುಷಿ', 'ಹಾಯ್ ನಾನ್ನ' ಸಿನಿಮಾಗಳಲ್ಲಿ ತಮ್ಮ ಮೆಲೋಡಿ ಹಾಡುಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಇವರು, ಈ ಸಿನಿಮಾಗೂ ಅದ್ಭುತ ಸಂಗೀತ ನೀಡಿದ್ದಾರೆ.
ಯಾವ OTT ಪ್ಲಾಟ್‌ಫಾರಂ?
'ಇನಿ ಉತ್ತರಂ' ಸಿನಿಮಾ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಜೀ5 (ZEE5) ನಲ್ಲಿ ಸ್ಟ್ರೀಮ್ ಆಗ್ತಿದೆ. ಸಸ್ಪೆನ್ಸ್, ಪೊಲೀಸ್ ಇನ್ವೆಸ್ಟಿಗೇಶನ್, ಪೊಲಿಟಿಕಲ್ ಬ್ಯಾಕ್‌ಡ್ರಾಪ್ ಹಾಗೂ ಊಹಿಸಲಾಗದ ಟ್ವಿಸ್ಟ್‌ಗಳಿರೋ ಸಿನಿಮಾಗಳನ್ನು ಇಷ್ಟಪಡೋರು ಈ ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾವನ್ನು ಮಿಸ್ ಮಾಡ್ದೆ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

