ಬಾಳೇ ಹಣ್ಣು ತಿಂದು ಸಿಪ್ಪೆ ಎಸೆಯುತ್ತೀರಾ? ಹೀಗೆ ಮಾಡಿದರೆ ಮನೆಯಲ್ಲಿ ಹೂವು ಹಣ್ಣು ತುಂಬಿರುತ್ತೆ
ಬಾಳೇ ಹಣ್ಣು ತಿಂದು ಅದರ ಸಿಪ್ಪೆ ಕಸದ ಬುಟ್ಟಿಗೆ ಹಾಕಿ ಬಿಡುವುದು ಸಾಮಾನ್ಯ. ಆದರೆ ನೀವು ಬಾಳೆ ಹಣ್ಣಿನ ಸಿಪ್ಪೆಯನ್ನು ಈ ರೀತಿ ಬಳಸಿದರೆ ನಿಮ್ಮ ಮನೆಯಲ್ಲಿ ಹಣ್ಣುಗಳಿಂದ ತುಂಬಿರುತ್ತೆ. ಅಷ್ಟಕ್ಕೂ ಏನಿದು ಮ್ಯಾಜಿಕ್

ಬಾಳೆ ಹಣ್ಣಿನ ಸಿಪ್ಪೆ ಎಸೆಯಬೇಡಿ
ಊಟದ ಬಳಿಕ ಬಾಳೇ ಹಣ್ಣು ಬಹುತೇಕರ ಮನೆಯಲ್ಲಿ ಇದ್ದೇ ಇರುತ್ತೆ. ಬಾಳೇ ಹಣ್ಣು ತಿಂದ ಬಳಿಕ ಸಿಪ್ಪೆ ಎಸೆಯುವುದು ಸಾಮಾನ್ಯ. ಆದರೆ ಇನ್ಮುಂದೆ ಸಿಪ್ಪೆಯನ್ನು ಹೀಗೆ ಬಳಸಿದರೆ ನಿಮ್ಮ ಮನೆಯಲ್ಲಿ ಹಣ್ಣುಗಳು, ಹೂವುಗಳು ತುಂಬಿರುತ್ತದೆ. ಬಾಳೇ ಹಣ್ಣು ನಮ್ಮ ಆರೋಗ್ಯಕ್ಕೆ ಉತ್ತಮ ಪೌಷ್ಠಿಕಾಂಶ ನೀಡುವುದರ ಜೊತೆಗೆ ಮನೆಯಲ್ಲಿ ಹಣ್ಣು ತುಂಬಿಕೊಳ್ಳುವಂತೆ ಮಾಡುತ್ತದೆ.
ಬಾಳೇ ಹಣ್ಣಿನ ಸಿಪ್ಪೆ ಮ್ಯಾಜಿಕ್
ಬಾಳೇ ಹಣ್ಣಿನ ಸಿಪ್ಪೆ ಮನೆಯಲ್ಲಿನ ಹೂವಿನ ಗಿಡ, ಹಣ್ಣಿನ ಗಿಡಗಳಿಗೆ ಉತ್ತಮ ಪೋಷಾಂಶ ಸಿಗಲಿದೆ. ಬಾಳೆ ಹಣ್ಣಿನ ಸಿಪ್ಪೆಯಲ್ಲಿ ಪೊಟಾಶಿಯಂ ಹಾಗೂ ಮೆಗ್ನಿಶಿಯಂ ಖನಿಜಗಳಿರುವ ಕಾರಣ ಸಸ್ಯಗಳ ಬೆಳವಣಿಗೆ, ಇಳುವರಿಗೆ ನೆರವಾಗಲಿದೆ. ನೈಸರ್ಗಿಕವಾಗಿ ಸಸ್ಯಗಳಿಗೆ ಪೋಷಕಾಂಶಗಳು ಲಭ್ಯವಾಗುವಂತೆ ಮಾಡುತ್ತದೆ. ಅಡುಗೆ ಮನೆಯ ಕಸದಿಂದ ಮನೆಯ ಹೂವು, ಹಣ್ಣಿನ ಗಿಡಗಳಿಗೆ ಉತ್ತಮ ಗೊಬ್ಬರವಾಗಿ ಬಳಸಬಹುದು.
ಮನೆಯಲ್ಲಿ ಹೂವು, ಹಣ್ಣುಗಳು ಇಳುವರಿ ಹೆಚ್ಚು
ಮನೆಯಲ್ಲಿ ನೆಟ್ಟಿರುವ ಹೂವಿನ ಗಿಡ, ಹಣ್ಣಿನ ಗಿಡಗಳಿಗೆ ಈ ಬಾಳೆ ಹಣ್ಣಿನ ಸಿಪ್ಪೆಯನ್ನು ಗೊಬ್ಬರದ ರೂಪದಲ್ಲಿ ಬಳಸುವುದರಿಂದ ಗಿಡಗಳು ಉತ್ತಮವಾಗಿ ಬೆಳೆಯಲಿದೆ. ಜೊತೆಗೆ ಇಳುವರಿ ಹೆಚ್ಚಾಗಲಿದೆ. ಹೂವಿನ ಗಿಡದಲ್ಲಿ ಹೂವು ತುಂಬಿಕೊಂಡರೆ, ಹಣ್ಣುಗಳು ಬೆಳೆಯಲು ಆರಂಭಿಸುತ್ತದೆ. ಯಥೇಚ್ಚವಾಗಿ ಹಣ್ಣುಗಳು ಲಭ್ಯವಾಗಲಿದೆ. ಸೀಬೆ ಕಾಯಿ ಸೇರಿದಂತೆ ಮನೆಯಲ್ಲಿರುವ ಹಣ್ಣುಗಳ ಗಾತ್ರ, ಗುಣಮಟ್ಟ ಹಾಗೂ ಇಳುವರಿಗಳು ಹೆಚ್ಚಾಗಲಿದೆ.
ಬಾಳೆ ಹಣ್ಣಿನ ಸಿಪ್ಪೆ ನೀರು
ಬಾಳೆ ಹಣ್ಣಿನ ಸಿಪ್ಪೆಯನ್ನು ನೇರವಾಗಿ ಸಸ್ಯಗಳ ಬುಡಕ್ಕೆ ಹಾಕುವ ಬದಲು ಅದನ್ನು ವಿನೂತನ ವಿಧಾನವಾಗಿ ಬಳಸಿದರೆ ಉತ್ತಮ. ಬಾಳೆ ಹಣ್ಣಿನ ಸಿಪ್ಪೆಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ ಬ್ಲೆಂಡರ್ ಮಾಡಬೇಕು. ಬಳಿಕ ನೀರಿನೊಂದಿಗೆ ಕಲಸಿದರೆ ಇಳುವರಿ ನೀಡುವ ಮ್ಯಾಜಿಕ್ ಬೂಸ್ಟ್ ರೆಡಿ. ದ್ರಾವಣ ಗಟ್ಟಿಯಾಗಿದ್ದರೆ ನೀರು ಹೆಚ್ಚು ಬಳಸಬಹುದು. ಬಳಿಕ ಈ ಬಾಳೇ ಹಣ್ಣಿನ ನೀರನ್ನು ಗಿಡ, ಸಸ್ಯಗಳಿಗೆ ಬಳಸಬೇಕು.
ಗೊಬ್ಬರಕ್ಕೆ ಪರ್ಯಾಯವಲ್ಲ
ಈ ದ್ರಾವಣವನ್ನು ಸಸ್ಯ, ಗಿಡಿಗಳ ಎಲೆಗಳಿಗೆ ಹಾಕಬೇಡಿ, ಕುಂಡದಲ್ಲಿರುವ ಅಥವಾ ನೆಟ್ಟಿರುವ ಗಿಡಗಳ ಬುಡದ ಸುತ್ತಲೂ ಹಾಕಿ. ನೀರು ಹರಿದು ಹೋಗದಂತೆ ನೋಡಿಕೊಳ್ಳಿ. ಮನೆಯ ಒಳಗಡೆ ಇರುವ ಸಸ್ಯಗಳಿಗೂ ಬಳಸಬಹುದು. ಈ ಬಾಳೇ ಹಣ್ಣಿನ ಸಿಪ್ಪೆ ನೀರು ಗೊಬ್ಬರಕ್ಕೆ ಪರ್ಯಾಯವಲ್ಲ. ಆದರೆ ಇದು ನೈಸರ್ಗಿಕವಾಗಿ ಗಿಡಗಳಿಗೆ ಪೋಷಾಕಾಂಶಗಳನ್ನು ನೀಡುತ್ತದೆ. ಖನಿಜಗಳ ಪ್ರಮಾಣ ಹೆಚ್ಚಿರುವ ಕಾರಣ ಬೆಳವಣಿಗೆಗೆ ಸಹಾಕಾರಿಯಾಗಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
