Kitchen Hacks: ಅಡುಗೆಮನೆಯ ಪ್ರತಿದಿನದ ಸಮಸ್ಯೆ; ಹಾಲು ಉಕ್ಕೋದನ್ನು ತಡೆಯೋದು ಹೇಗೆ?
ಹಾಲು ಬಿಸಿ ಮಾಡುವಾಗ ಉಕ್ಕಿ ಚೆಲ್ಲುವುದು ಸಾಮಾನ್ಯ ಸಮಸ್ಯೆ. ಹಾಲಿನ ಮೇಲ್ಭಾಗದಲ್ಲಿ ಕೆನೆ ಕಟ್ಟಿ ಅದು ಪಾತ್ರೆಯಿಂದ ಹೊರಬರುವುದರಿಂದ ಹೀಗಾಗುತ್ತದೆ. ಇದನ್ನು ತಡೆಯಲು ಸುಲಭ ಉಪಾಯಗಳನ್ನು ಅನುಸರಿಸಬಹುದು.

ಹಾಲು ಬಿಸಿ ಮಾಡೋದು
ಬೆಳಗ್ಗೆ ಏಳುತ್ತಿದ್ದಂತೆ ಕಾಫಿ/ಟೀ ಕುಡಿಬೇಕಾದ್ರೆ ಹಾಲು ಬಿಸಿ ಮಾಡಬೇಕಾಗುತ್ತದೆ. ಕೆಲವೊಮ್ಮೆ ಹಾಲು ಬಿಸಿ ಮಾಡುವಾಗ ಉಕ್ಕಿದ್ರೆ ಅರ್ಧ ಹಾಲೆಲ್ಲಾ ಚೆಲ್ಲುತ್ತದೆ. ಹಾಲು ಬಿಸಿ ಮಾಡೋದು ಪ್ರತಿದಿನದ ಕೆಲಸ. ಕೆಲವೊಮ್ಮೆ ಕ್ರಮಬದ್ಧವಾಗಿ ಬಿಸಿ ಮಾಡದಿದ್ರೆ ಹಾಲು ಕೆಡುತ್ತದೆ. ಕಣ್ಣಿನ ರಪ್ಪೆ ಬಡಿಯುವಷ್ಟರಲ್ಲಿ ಹಾಲು ಬಿಸಿಯಾಗಿ ಪಾತ್ರೆಯಿಂದ ಹೊರಗೆ ಬಂದು ಚೆಲ್ಲುತ್ತದೆ.
ಪಾತ್ರೆಯಿಂದ ಹೊರಗೆ ಹಾಲು ಏಕೆ ಚೆಲ್ಲುತ್ತೆ?
ಹಾಲು ಬಿಸಿಯಾಗುತ್ತಿದ್ದಂತೆ ಮೇಲ್ಭಾಗದಲ್ಲಿ ಕೆನೆ ಕಟ್ಟಿಕೊಳ್ಳುತ್ತದೆ. ಈ ಕೆನೆ ಹಂತ ಹಂತವಾಗಿ ಮೇಲೆ ಬರಲು ಆರಂಭಿಸುತ್ತದೆ. ಈ ಕೆನೆ ಪಾತ್ರೆಯಿಂದ ಹೊರಗೆ ಬರುತ್ತಿದ್ದಂತೆ ಹಾಲು ಚೆಲ್ಲುತ್ತದೆ. ಇದರಿಂದ ಹಾಲು ನಷ್ಟವಾಗುತ್ತದೆ ಮತ್ತು ಗ್ಯಾಸ್ ಸ್ಟೊವ್ ಸ್ವಚ್ಛ ಮಾಡಬೇಕಾಗುತ್ತದೆ. ಹೈಫ್ಲೇಮ್‌ನಲ್ಲಿ ಬಿಸಿ ಮಾಡುತ್ತಿದ್ರೆ ಹಾಲು ಚೆಲ್ಲುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಡಿಮೆ ಉರಿಯಲ್ಲಿಯೇ ಹಾಲನ್ನು ಬಿಸಿ ಮಾಡಬೇಕೆಂದು ಅಮ್ಮಂದಿರು ಹೇಳುತ್ತಿರುತ್ತಾರೆ. ಹಾಲು ಚೆಲ್ಲದಂತೆ ಮಾಡಲು ಕೆಳಗಿನ ಈ ಉಪಾಯಗಳನ್ನು ಬಳಸಿ.
ದೊಡ್ಡ ಪಾತ್ರೆಯಲ್ಲಿ ಬಿಸಿ ಮಾಡಿ
ಹಾಲನ್ನು ಸಾಮಾನ್ಯವಾಗಿ ದೊಡ್ಡಪಾತ್ರೆಯಲ್ಲಿ ಬಿಸಿ ಮಾಡಬೇಕು. ಕೆನೆ ಮೇಲ್ಭಾಗಕ್ಕೆ ಬರುತ್ತಿದ್ದಂತೆ ಒಲೆ ಆಫ್ ಮಾಡಬಹುದು. ಉದಾಹರಣೆಗೆ ಒಂದು ಲೀಟರ್ ಹಾಲನ್ನು ಎರಡು ಲೀಟರ್ ಸಾಮರ್ಥ್ಯದ ಪಾತ್ರೆಯಲ್ಲಿ ಬಿಸಿ ಮಾಡೋದು ಒಳ್ಳೆಯದು.
ಕಡಿಮೆ ಉರಿಯಲ್ಲಿ ಬಿಸಿ ಮಾಡಿ
ಹಾಲನ್ನು ಯಾವಗಲೂ ಕಡಿಮೆ ಉರಿಯಲ್ಲಿ ಬಿಸಿ ಮಾಡಬೇಕು. ಈ ರೀತಿ ಮಾಡೋದರಿಂದ ಹಾಲು ಚೆಲ್ಲುವ ಸಾಧ್ಯತೆ ತುಂಬಾ ಕಡಿಮೆ. ಗ್ಯಾಸ್‌ನಲ್ಲಾದ್ರೆ ಮಧ್ಯಮ/ಕಡಿಮೆ ಉರಿಯಲ್ಲಿರಲಿ. ಸೌದೆ ಒಲೆಯಾಗಿದ್ರೆ ಕೇವಲ ಕಿಚ್ಚಿನ ಮೇಲೆಯೇ ಹಾಲನ್ನು ಬಿಸಿ ಮಾಡಬಹುದು. ಒಲೆ ಮೇಲೆ ಹಾಲು ಹದವಾಗಿ ಬಿಸಿಯಾಗುತ್ತದೆ. ಹಾಲು ಉಕ್ಕುತ್ತಿದ್ದಂತೆ ಉರಿಯನ್ನು ಕಡಿಮೆ ಮಾಡಿ.
ಕಟ್ಟಿಗೆ ಚಮಚದ ಟ್ರಿಕ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಕಟ್ಟಿಗೆ ಚಮಚದ ಟ್ರಿಕ್ ಸಹ ಬಳಸಬಹುದು. ಹಾಲಿನ ಪಾತ್ರೆ ಮೇಲೆ ಕಟ್ಟಿಗೆ ಚಮಚವನ್ನು ಅಡ್ಡಲಾಗಿ ಇರಿಸಬೇಕು. ಬಿಸಿಯಾದ ಹಾಲು ಮೇಲೆ ಬರುತ್ತಿದ್ದಂತೆ ಇದು ಪಾತ್ರೆಯಿಂದ ಹೊರಗಡೆ ಚೆಲ್ಲದಂತೆ ನೋಡಿಕೊಳ್ಳುತ್ತದೆ.
ಹಾಲು ಬಿಸಿ ಮಾಡುವಾಗ ಗಮನಿಸಬೇಕಾದ ಅಂಶಗಳು
ಯಾವುದೇ ಸಲಹೆ ಪಾಲನೆ ಮಾಡುವ ಮುಂಚೆ ಅವುಗಳನ್ನು ಕ್ರಮಬದ್ಧವಾಗಿ ಅನುಸರಿಸಬೇಕು. ಹಾಲು ಬಿಸಿ ಮಾಡುವಾಗ ಒಲೆ ಮುಂದೆಯೇ ನಿಂತುಕೊಳ್ಳಿ. ಹಾಲು ಬಿಸಿಯಾಗಿ ಮೇಲೆ ಬರುತ್ತಿದಂತೆ ಕೂಡಲೇ ಒಲೆ ಆಫ್ ಮಾಡಿ. ಹಾಲು ಚೆಲ್ಲೋದನ್ನು ನಿಲ್ಲಿಸಿದ್ರೆ ಗ್ಯಾಸ್ ಸ್ಟೌವ್ ಕೊಳೆಯುವ ಸಮಸ್ಯೆ ಕಡಿಮೆ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
