MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Horoscope Today
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Life
  • Food
  • ಅಜ್ಜಿ-ಮುತ್ತಜ್ಜಿಯರ ಕಾಲದ ಟ್ರಿಕ್.. ಮೊಸರು ಡಬ್ಬಿಯಲ್ಲಿ ಈ ಒಂದು ಸಣ್ಣ ತುಂಡು ಇಡಿ.. ವಾರವಾದ್ರೂ ಹುಳಿಯಾಗಲ್ಲ

ಅಜ್ಜಿ-ಮುತ್ತಜ್ಜಿಯರ ಕಾಲದ ಟ್ರಿಕ್.. ಮೊಸರು ಡಬ್ಬಿಯಲ್ಲಿ ಈ ಒಂದು ಸಣ್ಣ ತುಂಡು ಇಡಿ.. ವಾರವಾದ್ರೂ ಹುಳಿಯಾಗಲ್ಲ

Prevent curd from souring: ಕೆಲವೊಮ್ಮೆ ಮೊಸರು ಕೆಲವೇ ಗಂಟೆಯಲ್ಲಿ ಹುಳಿಯಾಗುವುದು ಸಾಮಾನ್ಯ. ಇದರಿಂದಾಗಿ ಮೊಸರನ್ನು ತಿನ್ನಲು ಅಸಾಧ್ಯವಾಗಿ ಅನೇಕರು ಅದನ್ನು ಎಸೆಯುತ್ತಾರೆ. ಆದರೆ ಅಡುಗೆ ಮನೆಯಲ್ಲಿರುವ ಕೇವಲ ಒಂದು ಪದಾರ್ಥ ಬಳಸಿಕೊಂಡು ಮೊಸರು ಹುಳಿಯಾಗದಂತೆ ತಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

2 Min read
Author : Ashwini HR
Published : Sep 02 2026, 11:07 AM IST
Share this Photo Gallery
  • FB
  • TW
  • Linkdin
  • Whatsapp
16
ಅದ್ಭುತ ಕಿಚನ್ ಟಿಪ್ಸ್
Image Credit : Getty

ಅದ್ಭುತ ಕಿಚನ್ ಟಿಪ್ಸ್

ಅದ್ಭುತ ಕಿಚನ್ ಟಿಪ್ಸ್
ಕೆಲವೊಮ್ಮೆ ಮನೆಯಲ್ಲಿ ಮಾಡಿದ ಮೊಸರು ಅಥವಾ ಅಂಗಡಿಯಿಂದ ತಂದ ಮೊಸರು ಕೆಲವೇ ಗಂಟೆಗಳಲ್ಲಿ ಹುಳಿಯಾಗಲು ಪ್ರಾರಂಭಿಸುತ್ತದೆ. ಹುಳಿಯಾದ ಮೊಸರನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ, ಆಗ ಇದನ್ನು ಎಸೆಯುವವರೇ ಹೆಚ್ಚು. ಆದರೆ ಇನ್ನು ಮುಂದೆ ಆ ತಪ್ಪು ಮಾಡಬೇಡಿ. ಮೊಸರು ಹುಳಿಯಾಗದಂತೆ ತಡೆಯಲು ಮತ್ತು ಹುಳಿಯಾದ ಮೊಸರನ್ನು ಮತ್ತೆ ರುಚಿಯಾಗಿಸಲು ಇಲ್ಲಿವೆ ಕೆಲವು ಅದ್ಭುತ ಕಿಚನ್ ಟಿಪ್ಸ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸಣ್ಣ ತೆಂಗಿನಕಾಯಿ ತುಂಡು
Image Credit : Instagram

ಸಣ್ಣ ತೆಂಗಿನಕಾಯಿ ತುಂಡು

ಸಣ್ಣ ತೆಂಗಿನಕಾಯಿ ತುಂಡು
ಒಂದು ವೇಳೆ ನೀವು ಅಂಗಡಿಯಿಂದ ತಂದ ಮೊಸರನ್ನು ಎರಡು-ಮೂರು ದಿನ ಇಟ್ಟುಕೊಳ್ಳಬೇಕೆಂದು ಅಂದುಕೊಂಡಿದ್ದರೆ, ಆ ಮೊಸರಿನ ಡಬ್ಬಕ್ಕೆ ಒಂದು ಸಣ್ಣ ತೆಂಗಿನಕಾಯಿ ತುಂಡನ್ನು(ಹಸಿ ಅಥವಾ ಒಣಗಿದ) ಹಾಕಿಡಿ. ಇದು ಮೊಸರು ಮತ್ತಷ್ಟು ಹುಳಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ. ಇನ್ನು ಹಾಲಿಗೆ ಹೆಪ್ಪು ಹಾಕುವಾಗಲೂ ಅದರಲ್ಲಿ ಒಂದು ಸಣ್ಣ ತೆಂಗಿನಕಾಯಿ ತುಂಡನ್ನು ಹಾಕಿಡಿ. ಹೀಗೆ ಮಾಡುವುದರಿಂದ ಮೊಸರು ಮಾರುಕಟ್ಟೆಯಲ್ಲಿ ಸಿಗುವಂತೆ ಗಟ್ಟಿಯಾಗಿ ಬರುತ್ತದೆ ಮತ್ತು ಬೇಗನೆ ಹುಳಿಯಾಗುವುದಿಲ್ಲ. ಇದು ಮೊಸರಿಗೆ ಒಂದು ವಿಶೇಷ ರುಚಿಯನ್ನೂ ನೀಡುತ್ತದೆ.

Related Articles

Related image1
Store coconut fresh: ಒಡೆದ ತೆಂಗಿನಕಾಯಿ ತಿಂಗಳಾದರೂ ಕೆಡಲ್ಲ! ಈ ಒಂದು ಕೆಲಸ ಮಾಡಿದ್ರೆ ಸಾಕು
Related image2
ಈ ಬಾಕ್ಸ್‌ನಲ್ಲಿಟ್ರೆ ಸಾಕು ಕೊತ್ತಂಬರಿ-ಪುದೀನಾ ಒಂದು ವಾರ ಫ್ರೆಶ್ ಆಗಿರುತ್ತೆ
36
ಹೆಚ್ಚು ಹುಳಿಯಾಗಿದ್ದರೆ
Image Credit : chatgpt.com

ಹೆಚ್ಚು ಹುಳಿಯಾಗಿದ್ದರೆ

ಹೆಚ್ಚು ಹುಳಿಯಾಗಿದ್ದರೆ
ಈ ಟಿಪ್ಸ್ ನೀವು ಮನೆಯಲ್ಲಿ ಮಾಡಿದ ಮೊಸರು ಇರಬಹುದು ಅಥವಾ ಅಂಗಡಿಯಿಂದ ತಂದ ಮೊಸರಿರಬಹುದು ಎರಡಕ್ಕೂ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಒಂದು ವೇಳೆ ಮೊಸರು ಈಗಾಗಲೇ ಹೆಚ್ಚು ಹುಳಿಯಾಗಿದ್ದರೆ, ಅದನ್ನು ಎಸೆಯುವ ಬದಲು ಅದಕ್ಕೆ 2-3 ಚಮಚ ತಣ್ಣನೆಯ ಕಾಯಿಸಿ ಆರಿಸಿದ ಹಾಲು ಅಥವಾ ತಾಜಾ ಹಾಲನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹಾಲು ಮೊಸರಿನ ಅಸಿಡಿಟಿಯನ್ನು ಸಮತೋಲನಗೊಳಿಸುತ್ತದೆ ಮತ್ತು ಮೊಸರು ಮತ್ತೆ ಕ್ರೀಮಿಯಾಗಿ, ರುಚಿಯಾಗಿ ಬದಲಾಗುತ್ತದೆ.

46
ಬಟ್ಟೆಯಲ್ಲಿ ಕಟ್ಟಿ ಹಾಕಿ
Image Credit : Gemini AI

ಬಟ್ಟೆಯಲ್ಲಿ ಕಟ್ಟಿ ಹಾಕಿ

ಬಟ್ಟೆಯಲ್ಲಿ ಕಟ್ಟಿ ಹಾಕಿ
ಮೊಸರಿನಲ್ಲಿರುವ ಹುಳಿ ನೀರನ್ನು ತೆಗೆಯಲು ಅದನ್ನು ಒಂದು ತೆಳುವಾದ ಮಸ್ಲಿನ್ ಬಟ್ಟೆ(ಹಗುರವಾದ ಶುದ್ಧ ಕಾಟನ್ ಬಟ್ಟೆ)ಯಲ್ಲಿ ಕಟ್ಟಿ ಸ್ವಲ್ಪ ಹೊತ್ತು ನೇತು ಹಾಕಿ. ಕೇವಲ ಗಟ್ಟಿ ಮೊಸರು ಮಾತ್ರ ಬಟ್ಟೆಯಲ್ಲಿ ಉಳಿಯುತ್ತದೆ ಮತ್ತು ಹುಳಿ ನೀರೆಲ್ಲಾ ಹೊರಹೋಗುತ್ತದೆ. ನಂತರ ಇದಕ್ಕೆ ಸ್ವಲ್ಪ ಹಾಲು ಅಥವಾ ಕೆನೆ ಸೇರಿಸಿದರೆ ಮೊಸರು ಹೊಸದರಂತೆ ರುಚಿ ನೀಡುತ್ತದೆ.

56
ಇತರ ಪದಾರ್ಥಗಳ ಬಳಕೆ
Image Credit : stockPhoto

ಇತರ ಪದಾರ್ಥಗಳ ಬಳಕೆ

ಇತರ ಪದಾರ್ಥಗಳ ಬಳಕೆ
ಮನೆಯಲ್ಲಿ ಹಾಲಿಲ್ಲದಿದ್ದರೆ, ಹುಳಿ ಮೊಸರಿಗೆ ಸ್ವಲ್ಪ ತಾಜಾ ಮೊಸರು ಅಥವಾ ಸ್ವಲ್ಪ ಕೆನೆ ಸೇರಿಸಿ ಮಿಕ್ಸ್ ಮಾಡಿ. ಲಸ್ಸಿ ಅಥವಾ ಸಿಹಿ ಮೊಸರು ಮಾಡಬೇಕಿದ್ದರೆ ಸ್ವಲ್ಪ ಸಕ್ಕರೆ ಅಥವಾ ಕಲ್ಲು ಸಕ್ಕರೆ ಪುಡಿ ಸೇರಿಸುವುದರಿಂದಲೂ ಹುಳಿ ಕಡಿಮೆಯಾಗುತ್ತದೆ.

66
ಹುಳಿ ಮೊಸರನ್ನು ಹೀಗೆ ಬಳಸಿ
Image Credit : chatgpt.com

ಹುಳಿ ಮೊಸರನ್ನು ಹೀಗೆ ಬಳಸಿ

ಹುಳಿ ಮೊಸರನ್ನು ಹೀಗೆ ಬಳಸಿ
ಒಂದು ವೇಳೆ ಮೊಸರು ಅತಿಯಾಗಿ ಹುಳಿಯಾಗಿದ್ದರೆ ಅದನ್ನು ಢೋಕ್ಲಾ, ಇಡ್ಲಿ ಅಥವಾ ದೋಸೆ ಹಿಟ್ಟಿಗೆ ಬಳಸಿ. ಇದು ಹಿಟ್ಟು ಬೇಗ ಹುದುಗು ಬರಲು (Ferment) ಸಹಾಯ ಮಾಡುತ್ತದೆ ಮತ್ತು ತಿಂಡಿಗಳು ಸ್ಪಂಜಿನಂತೆ ಮೃದುವಾಗಿ ಬರುತ್ತವೆ. ಬಟೂರೆ ಅಥವಾ ಕುಲ್ಚಾ ಹಿಟ್ಟನ್ನು ಕಲಸುವಾಗಲೂ ಇದನ್ನು ಬಳಸಬಹುದು.

ನೆನಪಿರಲಿ: ಮೊಸರು ಗಟ್ಟಿಯಾದ ತಕ್ಷಣ ಅದನ್ನು ಫ್ರಿಜ್‌ನಲ್ಲಿ ಇಡಿ. ಹೊರಗೆ ದೀರ್ಘಕಾಲ ಬಿಟ್ಟರೆ ತಾಪಮಾನದಿಂದಾಗಿ ಅದು ಬೇಗ ಹುಳಿಯಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆಹಾರ
ಜೀವನಶೈಲಿ
ಅಡುಗೆಮನೆ ಸಲಹೆಗಳು
ಮಹಿಳೆಯರು

Latest Videos
Recommended Stories
Recommended image1
Yeast Protein: ಶೇಕ್‌, ಬಾರ್‌ ಯುಗ ಮುಗೀತಾ? ಇನ್ಮುಂದೆ ದೋಸೆ, ಚಪಾತಿಯಲ್ಲೂ ಸಿಗಲಿದೆ ಹೈ-ಕ್ವಾಲಿಟಿ ಪ್ರೊಟೀನ್!
Recommended image2
ಬೆಂಗಳೂರು ವ್ಯಕ್ತಿಗೆ Zomato ಶಾಕ್: ಪಾವ್ ಭಾಜಿ ಜೊತೆ ಫ್ರೀಯಾಗಿ ಬಂತು ಸೇದಿ ಎಸೆದ ಬೀಡಿ!
Recommended image3
ನಿಮ್ಮ ಮೆಡಿಕಲ್‌ ಬಿಲ್‌ನಲ್ಲಿ ಡಿಸ್ಕೌಂಟ್ ಆಗ್ಬೇಕಾ? ಹಾಗಿದ್ರೆ ಅಡುಗೆಮನೆಯಲ್ಲೇ ಇದೆ ಆ 'ರಹಸ್ಯ ಚಿನ್ನ'
Related Stories
Recommended image1
Store coconut fresh: ಒಡೆದ ತೆಂಗಿನಕಾಯಿ ತಿಂಗಳಾದರೂ ಕೆಡಲ್ಲ! ಈ ಒಂದು ಕೆಲಸ ಮಾಡಿದ್ರೆ ಸಾಕು
Recommended image2
ಈ ಬಾಕ್ಸ್‌ನಲ್ಲಿಟ್ರೆ ಸಾಕು ಕೊತ್ತಂಬರಿ-ಪುದೀನಾ ಒಂದು ವಾರ ಫ್ರೆಶ್ ಆಗಿರುತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved