MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Horoscope Today
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Life
  • Food
  • ಉದ್ದಿನ ಬೇಳೆ, ಬೇಕಿಂಗ್ ಸೋಡಾ ಹಾಕದೇ ಅನ್ನಭಾಗ್ಯ ಅಕ್ಕಿಯಿಂದ ಮಾಡಿ ರುಚಿಯಾದ ದೋಸೆ!

ಉದ್ದಿನ ಬೇಳೆ, ಬೇಕಿಂಗ್ ಸೋಡಾ ಹಾಕದೇ ಅನ್ನಭಾಗ್ಯ ಅಕ್ಕಿಯಿಂದ ಮಾಡಿ ರುಚಿಯಾದ ದೋಸೆ!

ಉದ್ದಿನಬೇಳೆ, ಅವಲಕ್ಕಿ ಮತ್ತು ಅಡುಗೆ ಸೋಡಾ ಬಳಸದೆ, ಕೇವಲ ಅನ್ನಭಾಗ್ಯ ಅಕ್ಕಿ ಬಳಸಿ ಮೃದುವಾದ ದೋಸೆಯನ್ನು ಸುಲಭವಾಗಿ ತಯಾರಿಸಬಹುದು. ಕಾವಲಿಯಲ್ಲಿ ಒಂದೇ ಬದಿ ಬೇಯಿಸಿದರೆ ರುಚಿಕರವಾದ ದೋಸೆ ಸಿದ್ಧವಾಗುತ್ತದೆ.

1 Min read
Author : Mahmad Rafik
Published : Sep 02 2026, 12:48 PM IST
Share this Photo Gallery
  • FB
  • TW
  • Linkdin
  • Whatsapp
15
ಉದ್ದಿನಬೇಳೆ, ಸೋಡಾ ಹಾಕದೇ ಮಾಡಿ ದೋಸೆ
Image Credit : Gemini

ಉದ್ದಿನಬೇಳೆ, ಸೋಡಾ ಹಾಕದೇ ಮಾಡಿ ದೋಸೆ

ಉದ್ದಿನಬೇಳೆ, ಅವಲಕ್ಕಿ, ಅಡುಗೆಸೋಡಾ ಬಳಸದೇ ರುಚಿಯಾಗಿರೋ ಮೃದುವಾದ ದೋಸೆಯನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಮೊದಲ ಬಾರಿ ದೋಸೆ ಮಾಡುತ್ತಿದ್ರೆ ಈ ರೀತಿಯಾಗಿ ಮಾಡಬಹುದು. ಸರ್ಕಾರ ನೀಡೋ ಅನ್ನಭಾಗ್ಯ ಅಕ್ಕಿಯಿಂದಲೇ ಈ ದೋಸೆಗಳನ್ನು ಮಾಡಿಕೊಳ್ಳಬಹುದಾಗಿದೆ. ಈ ದೋಸೆ ಮಾಡೋದು ಹೇಗೆ? ಬೇಕಾಗುವ ಸಾಮಾಗ್ರಿಗಳು ಯಾವವು ಎಂದು ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬೇಕಾಗುವ ಸಾಮಾಗ್ರಿಗಳು
Image Credit : Gemini

ಬೇಕಾಗುವ ಸಾಮಾಗ್ರಿಗಳು

ಅಕ್ಕಿ: 2 ಕಪ್, ತೆಂಗಿನಕಾಯಿ ತುರಿ: ಒಂದು ಕಪ್, ರುಚಿಗೆ ತಕ್ಕಷ್ಟು ಉಪ್ಪು (ಹಸಿ ತೆಂಗಿನಕಾಯಿ ತುರಿದುಕೊಳ್ಳಿ ಅಥವಾ ಹಿಂಭಾಗದ ಸಿಪ್ಪೆಯನ್ನು ತೆಂಗಿನಕಾಯಿಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ). ಅಕ್ಕಿಯನ್ನು ರುಬ್ಬಿಕೊಳ್ಳುವ ಮುನ್ನ ಮೂರರಿಂದ ನಾಲ್ಕು ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕು.

Related Articles

Related image1
ಅನ್ನ ಮಿಕ್ಕಿಬಿಡ್ತೆಂದು ಚಿಂತೆನಾ? ಚಿತ್ರಾನ್ನ ಬಿಟ್ಟಾಕಿ- ಟೇಸ್ಟಿ ಟೇಸ್ಟಿ ದೋಸೆ ಹೀಗೆ ಮಾಡಿ ನೋಡಿ
Related image2
ದೋಸೆ ತಿಂದ್ರೆ ಶುಗರ್ ಜಾಸ್ತಿ ಆಗುತ್ತಾ ಅನ್ನೋ ಭಯನಾ? ಇದು ಮಧುಮೇಹಿ ಸ್ನೇಹಿ ರೆಸಿಪಿ
35
ದೋಸೆ ಮಾಡುವ ವಿಧಾನ
Image Credit : Gemini

ದೋಸೆ ಮಾಡುವ ವಿಧಾನ

ಮೊದಲಿಗೆ ನೆನೆಸಿಟ್ಟುಕೊಂಡಿರುವ ಅಕ್ಕಿಯನ್ನು ತೆಂಗಿನಕಾಯಿ ತುರಿ ಅಥವಾ ತುಂಡುಗಳನ್ನು ಸೇರಿಸಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ರುಬ್ಬಿದ ಹಿಟ್ಟಿ ಕ್ರೀಮ್‌ನಷ್ಟು ಸಾಫ್ಟ್ ಆಗಿರಬೇಕು. ರುಬ್ಬಿಕೊಂಡ ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಪಾತ್ರೆಗೆ ಮುಚ್ಚಳ ಮುಚ್ಚಿ 7 ರಿಂದ 8 ಗಂಟೆಗಳ ಕಾಲ ಎತ್ತಿಟ್ಟುಕೊಳ್ಳಿ.

45
ಕಾವಲಿ ಬಿಸಿ ಮಾಡಿಕೊಳ್ಳಿ
Image Credit : Gemini

ಕಾವಲಿ ಬಿಸಿ ಮಾಡಿಕೊಳ್ಳಿ

ದೋಸೆ ಸಿದ್ಧತೆ ಮಾಡಿಕೊಳ್ಳಲು ಆರಂಭಿಸುತ್ತಿದ್ದಂತೆ ಒಲೆ ಮೇಲೆ ಕಾವಲಿ ಇಟ್ಟುಕೊಳ್ಳಿ. ಪಾತ್ರೆಯ ಮುಚ್ಚಳ ತೆಗೆದು ಮತ್ತೊಮ್ಮೆ ಎಲ್ಲಾ ದೋಸೆಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಕಾವಲಿ ಸಂಪೂರ್ಣವಾಗಿ ಬಿಸಿಯಾಗುತ್ತಿದ್ದಂತೆ ಹಿಟ್ಟನ್ನು ಹಾಕಿಕೊಳ್ಳಿ. ಸುಮಾರು ಎರಡರಿಂದ ಮೂರು ನಿಮಿಷ ಬೇಯಿಸಿಕೊಂಡ್ರೆ ರುಚಿಯಾದ ದೋಸೆ ಸವಿಯಲು ಸಿದ್ಧವಾಗುತ್ತದೆ.

55
ಎರಡೂ ಬದಿಯಲ್ಲಿ ಬೇಯಿಸುವ ಅಗತ್ಯ ಇಲ್ಲ
Image Credit : Gemini

ಎರಡೂ ಬದಿಯಲ್ಲಿ ಬೇಯಿಸುವ ಅಗತ್ಯ ಇಲ್ಲ

ದೋಸೆ ಹಿಟ್ಟನ್ನು ಹಾಕುತ್ತಿದ್ದಂತೆ ಕಾವಲಿಯನ್ನು ಪ್ಲೇಟ್‌ನಿಂದ ಮುಚ್ಚಬೇಕು. ಹೀಗೆ ಮಾಡೋದರಿಂದ ದೋಸೆ ಮೃದುವಾಗುತ್ತೆ ಮತ್ತು ಎರಡೂ ಬದಿಯಲ್ಲಿ ಬೇಯಿಸುವ ಅಗತ್ಯ ಇರಲ್ಲ. ಈ ದೋಸೆಯನ್ನು ಕಡ್ಲೆ, ತೆಂಗಿನಕಾಯಿ ಚಟ್ನಿ ಜೊತೆ ಸವಿಯಬಹುದು. ತೆಂಗಿನಕಾಯಿ ಬಳಕೆ ಮಾಡಿರೋದರಿಂದ ದೋಸೆ ರುಚಿ ಡಬಲ್ ಆಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರೆಸಿಪಿ
ಆಹಾರ

Latest Videos
Recommended Stories
Recommended image1
ಅಜ್ಜಿ-ಮುತ್ತಜ್ಜಿಯರ ಕಾಲದ ಟ್ರಿಕ್.. ಮೊಸರು ಡಬ್ಬಿಯಲ್ಲಿ ಈ ಒಂದು ಸಣ್ಣ ತುಂಡು ಇಡಿ.. ವಾರವಾದ್ರೂ ಹುಳಿಯಾಗಲ್ಲ
Recommended image2
Yeast Protein: ಶೇಕ್‌, ಬಾರ್‌ ಯುಗ ಮುಗೀತಾ? ಇನ್ಮುಂದೆ ದೋಸೆ, ಚಪಾತಿಯಲ್ಲೂ ಸಿಗಲಿದೆ ಹೈ-ಕ್ವಾಲಿಟಿ ಪ್ರೊಟೀನ್!
Recommended image3
ಬೆಂಗಳೂರು ವ್ಯಕ್ತಿಗೆ Zomato ಶಾಕ್: ಪಾವ್ ಭಾಜಿ ಜೊತೆ ಫ್ರೀಯಾಗಿ ಬಂತು ಸೇದಿ ಎಸೆದ ಬೀಡಿ!
Related Stories
Recommended image1
ಅನ್ನ ಮಿಕ್ಕಿಬಿಡ್ತೆಂದು ಚಿಂತೆನಾ? ಚಿತ್ರಾನ್ನ ಬಿಟ್ಟಾಕಿ- ಟೇಸ್ಟಿ ಟೇಸ್ಟಿ ದೋಸೆ ಹೀಗೆ ಮಾಡಿ ನೋಡಿ
Recommended image2
ದೋಸೆ ತಿಂದ್ರೆ ಶುಗರ್ ಜಾಸ್ತಿ ಆಗುತ್ತಾ ಅನ್ನೋ ಭಯನಾ? ಇದು ಮಧುಮೇಹಿ ಸ್ನೇಹಿ ರೆಸಿಪಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved