- Home
- Sports
- IPL
- ಸಿಎಸ್‌ಕೆ ತಂಡದ ಜತೆಗಿರಲು ದೊಡ್ಡ ಬೇಡಿಕೆಯಿಟ್ಟ ಮಹೇಂದ್ರ ಸಿಂಗ್ ಧೋನಿ..! ಆದ್ರೆ ಚೆನ್ನೈ ಫ್ರಾಂಚೈಸಿ ಜತೆಗಿನ ಮಹಿ ಮಾತುಕತೆ ಫೇಲ್
ಸಿಎಸ್‌ಕೆ ತಂಡದ ಜತೆಗಿರಲು ದೊಡ್ಡ ಬೇಡಿಕೆಯಿಟ್ಟ ಮಹೇಂದ್ರ ಸಿಂಗ್ ಧೋನಿ..! ಆದ್ರೆ ಚೆನ್ನೈ ಫ್ರಾಂಚೈಸಿ ಜತೆಗಿನ ಮಹಿ ಮಾತುಕತೆ ಫೇಲ್
ನವದೆಹಲಿ: ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್‌ಗೆ ಐದು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ. ಆದರೆ ಮುಂದಿನ ಸೀಸನ್ ಟೂರ್ನಿಗೂ ಮುನ್ನ ಧೋನಿ ಹಾಗೂ ಸಿಎಸ್‌ಕೆ ಫ್ರಾಂಚೈಸಿ ನಡುವೆ ಮನಸ್ತಾಪ ಉಂಟಾಗಿದೆ ಎಂದು ವರದಿಯಾಗಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ.

ಸಿಎಸ್‌ಕೆ ಸಹ ಮಾಲೀಕರಾಗಲು ಧೋನಿ ಒಲವು
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವೆನಿಸಿರುವ ಎಂ.ಎಸ್.ಧೋನಿ, ಫ್ರಾಂಚೈಸಿಯ ಸಹ ಮಾಲಿಕನಾಗಲು ಇಚ್ಛಿಸಿದ್ದು, ತಂಡದಲ್ಲಿ ಶೇ.25ರಷ್ಟು ಪಾಲು ಕೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಧೋನಿ ಬೇಡಿಕೆ ರಿಜೆಕ್ಟ್?
ಆದರೆ ಧೋನಿಯ ಪ್ರಸ್ತಾಪಕ್ಕೆ ಒಪ್ಪದ ಸಿಎಸ್‌ಕೆ, ಆರಂಭದಲ್ಲಿ ಶೇ.3ರಷ್ಟು ಪಾಲು ನೀಡುವುದಾಗಿ ತಿಳಿಸಿತು ಎನ್ನಲಾಗಿದೆ. ಬಹಳಷ್ಟು ಮಾತುಕತೆ ಬಳಿಕ ಧೋನಿ ಶೇ.18ರಷ್ಟು ಪಾಲು ನೀಡಿ ಎಂದು ಸಿಎಸ್‌ಕೆ ಮಾಲಿಕರಾದ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಧೋನಿ-ಸಿಎಸ್‌ಕೆ ಮಾತುಕತೆ ಫೇಲ್
ಆದರೆ ಇದಕ್ಕೆ ಒಪ್ಪದ ಮಾಲಿಕರು, ಗರಿಷ್ಠ ಶೇ.5ರಷ್ಟು ಪಾಲು ಕೊಡಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಧೋನಿ ಹಾಗೂ ಸಿಎಸ್‌ಕೆ ನಡುವಿನ ಮಾತುಕತೆ ಫಲ ನೀಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಇದು ಧೋನಿ ಮುಂದಿನ ಸೀಸನ್‌ನಲ್ಲಿ ಸಿಎಸ್‌ಕೆ ಜತೆ ಇರುತ್ತಾರೋ ಅಥವಾ ಇಲ್ಲವೇ ಎನ್ನುವ ಕುತೂಹಲವನ್ನು ಹುಟ್ಟುಹಾಕಿದೆ.
ಸಿಎಸ್‌ಕೆ ಬ್ರ್ಯಾಂಡ್ ವ್ಯಾಲ್ಯೂ ₹11000 ಕೋಟಿ
ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳ ಪೈಕಿ ಸಿಎಸ್‌ಕೆ ಫ್ರಾಂಚೈಸಿ ಅಗ್ರಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ. 2026ರ ಐಪಿಎಲ್ ಮುಕ್ತಾಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಬ್ರ್ಯಾಂಡ್ ಮೌಲ್ಯ ಅಂದಾಜು ₹11000 ಕೋಟಿಯಿಂದ ₹13000 ಕೋಟಿ ಇದೆ ಎನ್ನಲಾಗಿದೆ.
ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 5 ಬಾರಿ ಚಾಂಪಿಯನ್
ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಧೋನಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಸಿಎಸ್‌ಕೆ ಫ್ರಾಂಚೈಸಿ, ಕಳೆದ ಮೂರು ಸೀಸನ್‌ನಿಂದ ದಯನೀಯ ವೈಫಲ್ಯ ಅನುಭವಿಸುತ್ತಾ ಬಂದಿದೆ.
ಕುತೂಹಲ ಹುಟ್ಟುಹಾಕಿದ ಧೋನಿ-ಸಿಎಸ್‌ಕೆ ಫ್ರಾಂಚೈಸಿ ತಿಕ್ಕಾಟ
ಹೀಗಿರುವಾಗಲೇ ಧೋನಿ-ಸಿಎಸ್‌ಕೆ ಫ್ರಾಂಚೈಸಿ ನಡುವಿನ ತಿಕ್ಕಾಟ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವಂತೆ ಮಾಡುವಂತೆ ಮಾಡಿರುವುದಂತೂ ಸುಳ್ಳಲ್ಲ. ಮುಂದಿನ ಸೀಸನ್‌ನಲ್ಲಿ ಧೋನಿ ಸಿಎಸ್‌ಕೆ ಪರ ಆಡ್ತಾರಾ ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

