- Home
- Life
- Health
- ಬಾಳೆಹಣ್ಣಿನ ಮೇಲೆ ಒಂದು ಚಿಟಿಕೆ ಏಲಕ್ಕಿ ಪುಡಿ ಸಿಂಪಡಿಸಿ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಬಾಳೆಹಣ್ಣಿನ ಮೇಲೆ ಒಂದು ಚಿಟಿಕೆ ಏಲಕ್ಕಿ ಪುಡಿ ಸಿಂಪಡಿಸಿ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Banana and cardamom benefits: ಬಾಳೆಹಣ್ಣಿನ ಮೇಲೆ ಚಿಟಿಕೆ ಏಲಕ್ಕಿ ಪುಡಿ ಉದುರಿಸಿ ತಿನ್ನುವಂತೆ ಮುಂಬೈನ ಖ್ಯಾತ ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ಶ್ವೇತಾ ಶಾ ಸಲಹೆ ನೀಡಿದ್ದಾರೆ. ಈ ಸರಳ ಆಹಾರ ಕ್ರಮದ ಅದ್ಭುತ ಪ್ರಯೋಜನಗಳ ಮಾಹಿತಿ ಇಲ್ಲಿದೆ.
ನಟಿ ಕರಿಷ್ಮಾ ತನ್ನಾ ಕೂಡ ಹೀಗೆ ಮಾಡಿದ್ರು
ನಟಿ ಕರಿಷ್ಮಾ ತನ್ನಾ ಕೂಡ ಹೀಗೆ ಮಾಡಿದ್ರು
ಗರ್ಭಧಾರಣೆ ಎಂಬುದು ಪ್ರತಿಯೊಬ್ಬ ಮಹಿಳೆಯ ಜೀವನದ ಅತ್ಯಂತ ಮಧುರವಾದ ಹಾಗೂ ಜವಾಬ್ದಾರಿಯುತವಾದ ಹಂತ. ಈ ಸಮಯದಲ್ಲಿ ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅನಿವಾರ್ಯ. ಬಾಲಿವುಡ್ ನಟಿ ಕರಿಷ್ಮಾ ತನ್ನಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಮುಂಬೈನ ಖ್ಯಾತ ನ್ಯೂಟ್ರಿಷನಿಸ್ಟ್ ಶ್ವೇತಾ ಶಾ, ಗರ್ಭಿಣಿಯರಿಗಾಗಿ ಅತ್ಯುತ್ತಮ ಮತ್ತು ಸುಲಭವಾದ ಹೆಲ್ತ್ ಟಿಪ್ ಒಂದನ್ನು ಹಂಚಿಕೊಂಡಿದ್ದಾರೆ.
ದಿನವೂ ಒಂದು ಬಾಳೆಹಣ್ಣಿನ ಮೇಲೆ ಒಂದು ಚಿಟಿಕೆ ಏಲಕ್ಕಿ ಪುಡಿ ಉದುರಿಸಿ ತಿನ್ನುವುದರಿಂದ ಗರ್ಭಿಣಿಯರಿಗೆ ಅಪಾರ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂದು ಅವರು ತಿಳಿಸಿದ್ದಾರೆ. ನಟಿ ಕರಿಷ್ಮಾ ತನ್ನಾ ಕೂಡ ತಮ್ಮ ಗರ್ಭಾವಸ್ಥೆಯ ದಿನಗಳಲ್ಲಿ ಈ ಸಲಹೆ ತಮಗೆ ತುಂಬಾ ಸಹಾಯ ಮಾಡಿತ್ತು ಎಂದು ಹಂಚಿಕೊಂಡಿದ್ದಾರೆ.
ಏನಿದರ ಪ್ರಯೋಜನಗಳು?
ಏನಿದರ ಪ್ರಯೋಜನಗಳು?
1. ಮಾರ್ನಿಂಗ್ ಸಿಕ್‌ನೆಸ್‌ನಿಂದ ಮುಕ್ತಿ
ಗರ್ಭಧಾರಣೆಯ ಮೊದಲ ತಿಂಗಳುಗಳಲ್ಲಿ ಬಹುತೇಕ ಮಹಿಳೆಯರನ್ನು ವಾಕರಿಕೆ, ತಲೆಸುತ್ತು (Morning Sickness) ಕಾಡುತ್ತದೆ. ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಅಂಶವು ತಕ್ಷಣದ ಶಕ್ತಿ ನೀಡುವುದಲ್ಲದೆ, ವಾಕರಿಕೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ.
2. ಸ್ನಾಯು ಸೆಳೆತಕ್ಕೆ ಪರಿಹಾರ
2. ಸ್ನಾಯು ಸೆಳೆತಕ್ಕೆ ಪರಿಹಾರ
ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಾಲು ಹಿಡಿಯುವುದು ಅಥವಾ ಸ್ನಾಯು ಸೆಳೆತ (Muscle cramps) ಕಾಣಿಸಿಕೊಳ್ಳುತ್ತದೆ. ಬಾಳೆಹಣ್ಣಿನಲ್ಲಿ ಸಮೃದ್ಧವಾಗಿರುವ ಪೊಟ್ಯಾಶಿಯಂ ಸ್ನಾಯುಗಳ ಸೆಳೆತವನ್ನು ತಡೆಯಲು ಅತ್ಯಂತ ಸಹಕಾರಿ.
3. ಜೀರ್ಣಕ್ರಿಯೆ ಸುಧಾರಣೆ ಮತ್ತು ಎದೆಯುರಿ ನಿವಾರಣೆ
3. ಜೀರ್ಣಕ್ರಿಯೆ ಸುಧಾರಣೆ ಮತ್ತು ಎದೆಯುರಿ ನಿವಾರಣೆ
ಬಾಳೆಹಣ್ಣಿನಲ್ಲಿರುವ ಉತ್ತಮ ನಾರಿನಂಶ (Fiber) ಜೀರ್ಣಾಂಗವ್ಯೂಹವನ್ನು ಚುರುಕುಗೊಳಿಸುತ್ತದೆ. ಜೊತೆಗೆ ಏಲಕ್ಕಿಯು ಗರ್ಭಿಣಿಯರಲ್ಲಿ ಕಾಡುವ ಗ್ಯಾಸ್ಟ್ರಿಕ್, ಎದೆಯುರಿ ಮತ್ತು ಮಲಬದ್ಧತೆಯಂತಹ ಗಂಭೀರ ಸಮಸ್ಯೆಗಳನ್ನು ನೈಸರ್ಗಿಕವಾಗಿ ಶಮನ ಮಾಡುತ್ತದೆ.
4. ಮಾನಸಿಕ ಆತಂಕ ಮತ್ತು ಒತ್ತಡ ಕಡಿಮೆ ಮಾಡುತ್ತೆ
4. ಮಾನಸಿಕ ಆತಂಕ ಮತ್ತು ಒತ್ತಡ ಕಡಿಮೆ ಮಾಡುತ್ತೆ
ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಗಳಿಂದ ಮನಸ್ಸಿನಲ್ಲಿ ನಾನಾ ಬಗೆಯ ಭಯ, ಒತ್ತಡ ಕಾಡುವುದು ಸಹಜ. 'ಮಗು ಆರೋಗ್ಯವಾಗಿರುತ್ತದೆಯೇ?', 'ನನ್ನಿಂದ ಎಲ್ಲವೂ ಸರಿಯಾಗಿ ನಿಭಾಯಿಸಲು ಸಾಧ್ಯವೇ?', 'ಹೆರಿಗೆ ಹೇಗೆ ಆಗುವುದೋ?' ಎಂಬ ಆತಂಕ ವಿಶೇಷವಾಗಿ ಮೊದಲ ಬಾರಿ ತಾಯಿಯಾಗುತ್ತಿರುವವರಲ್ಲಿ ಹೆಚ್ಚಾಗಿರುತ್ತದೆ. ಬಾಳೆಹಣ್ಣು ಮತ್ತು ಏಲಕ್ಕಿಯ ಸಂಯೋಜನೆಯು ಮನಸ್ಸನ್ನು ಪ್ರಶಾಂತವಾಗಿರಿಸಲು (Soothing effect) ಹಾಗೂ ಒತ್ತಡವನ್ನು ನಿವಾರಿಸಲು ನೆರವಾಗುತ್ತದೆ ಎಂದು ಶ್ವೇತಾ ಶಾ ತಿಳಿಸಿದ್ದಾರೆ.
ತಜ್ಞರ ಸಲಹೆ
ತಜ್ಞರ ಸಲಹೆ
ಇದು ಅತ್ಯಂತ ಆರೋಗ್ಯಕರವಾದ ಮತ್ತು ಸುರಕ್ಷಿತವಾದ ಆಹಾರ ಪದ್ಧತಿಯಾಗಿದ್ದು, ಇದನ್ನು ಪ್ರತಿದಿನದ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬಹುದು.
(ಸೂಚನೆ: ಈ ಮಾಹಿತಿಯು ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ. ಗರ್ಭಿಣಿಯರು ಯಾವುದೇ ಹೊಸ ಆಹಾರ ಪದ್ಧತಿಯನ್ನು ಆರಂಭಿಸುವ ಮುನ್ನ ತಮ್ಮ ಸ್ತ್ರೀರೋಗ ತಜ್ಞರನ್ನು (Gynecologist) ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ).
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
