MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
CM DK Shivakumar vs HD Devegowda
CM Visits APMC
Today's Horoscope in Kannada
Mekedatu Project Cost
CWRC Meeting Today
KPSC Scam
Ganesh Idol Theft
Mandya Children Wedding
Swachh Vayu Survekshan
108 Ambulance Services
LPG Booking Rules
National Film Awards Ceremony
  • Home
  • Life
  • Health
  • ಎದೆನೋವು ಮಾತ್ರವಲ್ಲ! ಮಹಿಳೆಯರಲ್ಲಿ ಹೃದಯಾಘಾತದ ಮುನ್ಸೂಚನೆ ಹೀಗೂ ಇರುತ್ತೆ.. ನಿರ್ಲಕ್ಷ್ಯ ಬೇಡ

ಎದೆನೋವು ಮಾತ್ರವಲ್ಲ! ಮಹಿಳೆಯರಲ್ಲಿ ಹೃದಯಾಘಾತದ ಮುನ್ಸೂಚನೆ ಹೀಗೂ ಇರುತ್ತೆ.. ನಿರ್ಲಕ್ಷ್ಯ ಬೇಡ

Heart disease prevention: ಹೃದಯಾಘಾತ ಎಂದರೆ ಕೇವಲ ಎದೆನೋವಲ್ಲ, ವಿಶೇಷವಾಗಿ ಮಹಿಳೆಯರಲ್ಲಿ ಇದರ ಲಕ್ಷಣಗಳು ಸಾಮಾನ್ಯ ಅಸ್ವಸ್ಥತೆಯಂತೆ ಕಾಣಿಸಿಕೊಳ್ಳುವುದರಿಂದ ಹಲವರು ಇದನ್ನು ಕಡೆಗಣಿಸುತ್ತಾರೆ. ಸಕಾಲಕ್ಕೆ ಗುರುತಿಸದಿದ್ದರೆ ಜೀವಕ್ಕೇ ಕುತ್ತು ತರಬಹುದಾದ ಆ ಅಪಾಯಕಾರಿ ಲಕ್ಷಣಗಳ ವಿವರ ಇಲ್ಲಿದೆ.

2 Min read
Author : Ashwini HR
Published : Sep 08 2026, 06:37 PM IST
Share this Photo Gallery
  • FB
  • TW
  • Linkdin
  • Whatsapp
15
ಮಹಿಳೆಯರಲ್ಲೂ ಹೆಚ್ಚುತ್ತಿದೆ ಹೃದಯಾಘಾತದ ಪ್ರಕರಣಗಳು
Image Credit : Getty

ಮಹಿಳೆಯರಲ್ಲೂ ಹೆಚ್ಚುತ್ತಿದೆ ಹೃದಯಾಘಾತದ ಪ್ರಕರಣಗಳು

ಮಹಿಳೆಯರಲ್ಲೂ ಹೆಚ್ಚುತ್ತಿದೆ ಹೃದಯಾಘಾತದ ಪ್ರಕರಣಗಳು
ಇಂದಿನ ಒತ್ತಡದ ಜೀವನಶೈಲಿ, ಪೌಷ್ಟಿಕವಲ್ಲದ ಆಹಾರ ಪದ್ಧತಿಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಿಂದೆಲ್ಲಾ ಹಾರ್ಟ್ ಅಟ್ಯಾಕ್ ಕೇವಲ ಪುರುಷರಿಗೆ ಮಾತ್ರ ಹೆಚ್ಚು ಬರುತ್ತಿತ್ತು ಎಂಬ ಭಾವನೆ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲೂ ಹೃದಯಾಘಾತದ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪ್ರಾಣಾಪಾಯ ತಂದುಕೊಳ್ಳುತ್ತಾರೆ ಮಹಿಳೆಯರು
Image Credit : Getty

ಪ್ರಾಣಾಪಾಯ ತಂದುಕೊಳ್ಳುತ್ತಾರೆ ಮಹಿಳೆಯರು

ಪ್ರಾಣಾಪಾಯ ತಂದುಕೊಳ್ಳುತ್ತಾರೆ ಮಹಿಳೆಯರು
ಹೃದಯಾಘಾತ ಎಂದರೆ ನಮಗೆ ಮೊದಲು ನೆನಪಾಗುವುದು ಎದೆಯ ಮಧ್ಯಭಾಗದಲ್ಲಿ ಬರುವ ತೀವ್ರವಾದ ನೋವು. ಆದರೆ, ಮಹಿಳೆಯರ ವಿಷಯದಲ್ಲಿ ಇದು ಸಂಪೂರ್ಣವಾಗಿ ನಿಜವಲ್ಲ. ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಪುರುಷರಿಗಿಂತ ತೀರಾ ಭಿನ್ನವಾಗಿದ್ದು, ಸಾಮಾನ್ಯ ಸಣ್ಣಪುಟ್ಟ ಕಾಯಿಲೆಗಳಂತೆ ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಬಹುತೇಕ ಮಹಿಳೆಯರು ಇದನ್ನು ಸರಿಯಾದ ಸಮಯಕ್ಕೆ ಗುರುತಿಸದೆ ಪ್ರಾಣಾಪಾಯ ತಂದುಕೊಳ್ಳುತ್ತಾರೆ.

Related Articles

Related image1
ಹೃದಯಾಘಾತ ಆಗ್ತಿದ್ದಂತೆ ನಾಲಿಗೆ ಮೇಲೆ ಈ ಎಲೆಯ ರಸ ಹಿಂಡಿ.. ವೈದ್ಯರೇ ಹೇಳೋ ಏಕೈಕ ಮದ್ದು ಇದು!
Related image2
Heart Attack Causes: ಹಾಲು ಕುಡಿಯುವುದರಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆಯೇ?
35
ಮಹಿಳೆಯರಲ್ಲಿ ಕಂಡುಬರುವ ಪ್ರಮುಖ ಎಚ್ಚರಿಕೆಯ ಲಕ್ಷಣಗಳು
Image Credit : Getty

ಮಹಿಳೆಯರಲ್ಲಿ ಕಂಡುಬರುವ ಪ್ರಮುಖ ಎಚ್ಚರಿಕೆಯ ಲಕ್ಷಣಗಳು

ಮಹಿಳೆಯರಲ್ಲಿ ಕಂಡುಬರುವ ಪ್ರಮುಖ ಎಚ್ಚರಿಕೆಯ ಲಕ್ಷಣಗಳು
ಅತಿಯಾದ ಆಯಾಸ ಮತ್ತು ನಿಶ್ಯಕ್ತಿ: ಯಾವುದೇ ಕಠಿಣ ಪರಿಶ್ರಮ ಮಾಡದಿದ್ದರೂ, ಸಾಕಷ್ಟು ವಿಶ್ರಾಂತಿ ಪಡೆದಿದ್ದರೂ ಅತಿಯಾದ ಸುಸ್ತು, ಕೈಕಾಲು ಸೋತು ಹೋದಂತೆ ಅನಿಸುವುದು ಹೃದಯಾಘಾತದ ಮೊದಲ ಮುನ್ಸೂಚನೆ ಆಗಿರಬಹುದು.

ಉಸಿರಾಟದ ತೊಂದರೆ (ಉಬ್ಬಸ): ಎದೆಯಲ್ಲಿ ಯಾವುದೇ ನೋವು ಇಲ್ಲದಿದ್ದರೂ ಇದ್ದಕ್ಕಿದ್ದಂತೆ ಉಸಿರಾಡಲು ಕಷ್ಟವಾಗುವುದು ಅಥವಾ ಸ್ವಲ್ಪ ದೂರ ನಡೆದರೂ ಓಡಿದವರಂತೆ ಆಯಾಸವಾಗುವುದು ಮಹಿಳೆಯರಲ್ಲಿ ಕಾಡುವ ಮುಖ್ಯ ಲಕ್ಷಣ.

ದವಡೆ, ಕುತ್ತಿಗೆ ಮತ್ತು ಬೆನ್ನು ನೋವು: ಮಹಿಳೆಯರಲ್ಲಿ ಹೃದಯಾಘಾತದ ನೋವು ಕೇವಲ ಎದೆಗೆ ಸೀಮಿತವಾಗಿರುವುದಿಲ್ಲ. ಇದು ದವಡೆ, ಕುತ್ತಿಗೆ, ಭುಜಗಳು ಹಾಗೂ ಬೆನ್ನಿನ ಮೇಲ್ಭಾಗಕ್ಕೂ ಹರಡಬಹುದು.

ಅಜೀರ್ಣ, ವಾಂತಿ ಮತ್ತು ಗ್ಯಾಸ್ಟ್ರಿಕ್ ಭ್ರಮೆ: ವಾಕರಿಕೆ, ವಾಂತಿ ಬರುವಂತಾಗುವುದು, ಹೊಟ್ಟೆಯುರಿ ಅಥವಾ ಹೊಟ್ಟೆ ತೊಳೆಸಿದಂತಾಗುವುದನ್ನು ಹಲವರು ಸಾಮಾನ್ಯ 'ಗ್ಯಾಸ್ಟ್ರಿಕ್' ಅಥವಾ 'ಅಸಿಡಿಟಿ' ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ ಇದು ಹೃದಯದ ತೊಂದರೆಯ ಲಕ್ಷಣವೂ ಆಗಿರಬಹುದು.

ತಣ್ಣನೆಯ ಬೆವರು ಮತ್ತು ತಲೆತಿರುಗುವಿಕೆ: ವಾತಾವರಣ ತಂಪಾಗಿದ್ದರೂ ಇದ್ದಕ್ಕಿದ್ದಂತೆ ಮೈಯೆಲ್ಲಾ ತಣ್ಣನೆಯ ಬೆವರು ಸುರಿಯುವುದು, ತಲೆತಿರುಗಿದಂತಾಗುವುದು ಅಥವಾ ಪ್ರಜ್ಞೆ ತಪ್ಪುವಂತೆ ಭಾಸವಾಗುವುದು ಅತ್ಯಂತ ಅಪಾಯಕಾರಿ ಸಂಕೇತ.

45
ಮಹಿಳೆಯರು ಇದನ್ನು ಏಕೆ ನಿರ್ಲಕ್ಷಿಸುತ್ತಾರೆ?
Image Credit : Getty

ಮಹಿಳೆಯರು ಇದನ್ನು ಏಕೆ ನಿರ್ಲಕ್ಷಿಸುತ್ತಾರೆ?

ಮಹಿಳೆಯರು ಇದನ್ನು ಏಕೆ ನಿರ್ಲಕ್ಷಿಸುತ್ತಾರೆ?
ಮಹಿಳೆಯರು ಸಾಮಾನ್ಯವಾಗಿ ತಮ್ಮ ಆರೋಗ್ಯಕ್ಕಿಂತ ಕುಟುಂಬದ ಸದಸ್ಯರ ಆರೈಕೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಸಣ್ಣಪುಟ್ಟ ನೋವು ಅಥವಾ ಅಸ್ವಸ್ಥತೆ ಕಾಣಿಸಿಕೊಂಡಾಗ ‘ಏನೂ ಆಗಲ್ಲ ಬಿಡು’ ಎಂದು ಸುಮ್ಮನಾಗುತ್ತಾರೆ. ಆದರೆ ಹೃದಯಾಘಾತದ ವಿಷಯದಲ್ಲಿ ಪ್ರತಿಯೊಂದು ನಿಮಿಷವೂ ಅತ್ಯಂತ ಅಮೂಲ್ಯ. ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದರೆ ಹೃದಯದ ಸ್ನಾಯುಗಳು ಶಾಶ್ವತವಾಗಿ ಹಾನಿಗೊಳಗಾಗಬಹುದು.

55
ಯಾರು ಹೆಚ್ಚು ಎಚ್ಚರಿಕೆಯಿಂದ ಇರಬೇಕು?
Image Credit : Getty

ಯಾರು ಹೆಚ್ಚು ಎಚ್ಚರಿಕೆಯಿಂದ ಇರಬೇಕು?

ಯಾರು ಹೆಚ್ಚು ಎಚ್ಚರಿಕೆಯಿಂದ ಇರಬೇಕು?
ಮಧುಮೇಹ (ಶುಗರ್), ಅಧಿಕ ರಕ್ತದೊತ್ತಡ (ಬಿಪಿ), ಕೊಲೆಸ್ಟ್ರಾಲ್ ಮತ್ತು ಬೊಜ್ಜು ಇರುವ ಮಹಿಳೆಯರು ಹೆಚ್ಚು ಜಾಗರೂಕರಾಗಿರಬೇಕು. ವಿಶೇಷವಾಗಿ 40 ವರ್ಷ ದಾಟಿದ ಮಹಿಳೆಯರು ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಮೇಲ್ಕಂಡ ಯಾವುದೇ ಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ, ತಡಮಾಡದೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಜೀವನಶೈಲಿ
ಮಹಿಳೆಯರು

Latest Videos
Recommended Stories
Recommended image1
ಎದ್ದು ನಿಲ್ಲುವಾಗ, ಕೂರುವಾಗ ಪದೇ ಪದೇ ತಲೆ ಸುತ್ತುತ್ತಾ? ಇದಕ್ಕೆ ಕಾರಣ ಏನ್ ಗೊತ್ತಾ?
Recommended image2
ಮಕ್ಕಳು ಯದ್ವಾತದ್ವಾ ಟೂತ್ ಪೇಸ್ಟ್ ಬಳಸ್ತಾರಾ? ದಂತ ವೈದ್ಯರೇ ಹೇಳಿಕೊಟ್ಟ ಈ ಟ್ರಿಕ್‌ನಿಂದ 2 ಸಮಸ್ಯೆ ಮಾಯ!
Recommended image3
ಟೈಟ್ ಜೀನ್ಸ್ ಧರಿಸೋ ಅಭ್ಯಾಸ ಇದೆಯೇ? ಹುಷಾರಮ್ಮ ಆರೋಗ್ಯಕ್ಕೆ ಡೇಂಜರ್
Related Stories
Recommended image1
ಹೃದಯಾಘಾತ ಆಗ್ತಿದ್ದಂತೆ ನಾಲಿಗೆ ಮೇಲೆ ಈ ಎಲೆಯ ರಸ ಹಿಂಡಿ.. ವೈದ್ಯರೇ ಹೇಳೋ ಏಕೈಕ ಮದ್ದು ಇದು!
Recommended image2
Heart Attack Causes: ಹಾಲು ಕುಡಿಯುವುದರಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆಯೇ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved