MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
CM DK Shivakumar vs HD Devegowda
CM Visits APMC
Today's Horoscope in Kannada
Mekedatu Project Cost
CWRC Meeting Today
KPSC Scam
Ganesh Idol Theft
Mandya Children Wedding
Swachh Vayu Survekshan
108 Ambulance Services
LPG Booking Rules
National Film Awards Ceremony
  • Home
  • Life
  • ಮಕ್ಕಳು ಯದ್ವಾತದ್ವಾ ಟೂತ್ ಪೇಸ್ಟ್ ಬಳಸ್ತಾರಾ? ದಂತ ವೈದ್ಯರೇ ಹೇಳಿಕೊಟ್ಟ ಈ ಟ್ರಿಕ್‌ನಿಂದ 2 ಸಮಸ್ಯೆ ಮಾಯ!

ಮಕ್ಕಳು ಯದ್ವಾತದ್ವಾ ಟೂತ್ ಪೇಸ್ಟ್ ಬಳಸ್ತಾರಾ? ದಂತ ವೈದ್ಯರೇ ಹೇಳಿಕೊಟ್ಟ ಈ ಟ್ರಿಕ್‌ನಿಂದ 2 ಸಮಸ್ಯೆ ಮಾಯ!

Viral parenting hack: ಮಕ್ಕಳು ಬ್ರಷ್ ಮಾಡುವಾಗ ಹೆಚ್ಚು ಪೇಸ್ಟ್ ಹಾಕಿ ವ್ಯರ್ಥ ಮಾಡುವುದನ್ನು ತಡೆಯಲು ದಂತ ವೈದ್ಯರು ಹೇಳಿಕೊಟ್ಟ ಸರಳ ಟ್ರಿಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

1 Min read
Author : Ashwini HR
Published : Sep 08 2026, 04:03 PM IST
Share this Photo Gallery
  • FB
  • TW
  • Linkdin
  • Whatsapp
15
‘ಟೂತ್‌ಪಿಕ್ ಟ್ರಿಕ್’
Image Credit : Instagram

‘ಟೂತ್‌ಪಿಕ್ ಟ್ರಿಕ್’

‘ಟೂತ್‌ಪಿಕ್ ಟ್ರಿಕ್’
ಮಕ್ಕಳು ಬ್ರಷ್ ಮಾಡುವಾಗ ಅಗತ್ಯಕ್ಕಿಂತ ಹೆಚ್ಚು ಪೇಸ್ಟ್ ಹಾಕಿಕೊಂಡು ವ್ಯರ್ಥ ಮಾಡುವುದು ಬಹುತೇಕ ಪೋಷಕರಿಗೆ ದೊಡ್ಡ ತಲೆನೋವು. ಈ ಸಮಸ್ಯೆಗೆ ಪರಿಹಾರವಾಗಿ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಹಂಚಿಕೊಂಡಿರುವ ದಂತ ವೈದ್ಯರ ‘ಟೂತ್‌ಪಿಕ್ ಟ್ರಿಕ್’ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸರಳ ಜಾಣ್ಮೆ
Image Credit : Instagram

ಸರಳ ಜಾಣ್ಮೆ

ಸರಳ ಜಾಣ್ಮೆ
ಮಕ್ಕಳಿರುವ ಮನೆಗಳಲ್ಲಿ ಟೂತ್‌ಪೇಸ್ಟ್ ಬಹುಬೇಗ ಖಾಲಿಯಾಗುವುದು ಸಾಮಾನ್ಯ. ಹಲ್ಲುಜ್ಜುವಾಗ ಮಕ್ಕಳು ಟ್ಯೂಬ್ ಅನ್ನು ಜೋರಾಗಿ ಒತ್ತಿ, ಬ್ರಷ್ ತುಂಬಾ ಪೇಸ್ಟ್ ಹಾಕಿಕೊಳ್ಳುತ್ತಾರೆ. ಇದರಿಂದ ಪೇಸ್ಟ್ ಪೋಲಾಗುವುದಷ್ಟೇ ಅಲ್ಲದೆ, ಮಕ್ಕಳು ಅತಿಯಾಗಿ ಪೇಸ್ಟ್ ನುಂಗುವ ಸಾಧ್ಯತೆಯೂ ಇರುತ್ತದೆ. ಈ ಸಮಸ್ಯೆಗೆ ಸುಲಭ ಪರಿಹಾರವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಸರಳ ಜಾಣ್ಮೆಯ ವಿಡಿಯೋವೊಂದು ಸದ್ದು ಮಾಡುತ್ತಿದೆ.

Related Articles

Related image1
ವಿದೇಶದಲ್ಲಿ ಸೆಪ್ಟೆಂಬರ್‌ ಬರುತ್ತಿದ್ದಂತೆ ಕಿಟಕಿ ಮೇಲೆ ಉಪ್ಪಿನ ಬಟ್ಟಲು ಇಡಲು ಮನೆಮಂದಿಗೆ ಸೂಚನೆ ನೀಡೋದ್ಯಾಕೆ?
Related image2
ಎಣ್ಣೆ ಚೆಲ್ಲಿದಾಗ ಬಟ್ಟೆ, ಟಿಶ್ಯೂ ಪೇಪರ್ ಹುಡುಕ್ಬೇಡಿ.. ಒಂದೇ ನಿಮಿಷದಲ್ಲಿ ಕ್ಲೀನ್ ಆಗಲು ಇಲ್ಲಿದೆ ಸ್ಮಾರ್ಟ್ ಟ್ರಿಕ್
35
ಏನಿದು 'ಟೂತ್‌ಪಿಕ್' ಟ್ರಿಕ್?
Image Credit : Instagram

ಏನಿದು 'ಟೂತ್‌ಪಿಕ್' ಟ್ರಿಕ್?

ಏನಿದು ಐಡಿಯಾ?
ದಂತ ವೈದ್ಯರೊಬ್ಬರು ನೀಡಿದ ಸಲಹೆಯನ್ನು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಹೊಸ ಟೂತ್‌ಪೇಸ್ಟ್ ಟ್ಯೂಬ್ ತಂದಾಗ, ಅದರ ಮುಚ್ಚಳ ತೆಗೆದು ಒಳಗಿರುವ ಸಿಲ್ವರ್ ಸೀಲ್ (Seal) ಅನ್ನು ಸಂಪೂರ್ಣವಾಗಿ ಕಿತ್ತುಹಾಕಬೇಡಿ. ಬದಲಿಗೆ, ಒಂದು ಟೂತ್‌ಪಿಕ್ (Toothpick) ತೆಗೆದುಕೊಂಡು ಆ ಸೀಲ್‌ನ ಮಧ್ಯಭಾಗದಲ್ಲಿ ನಿಮಗೆ ಬೇಕಾದ ಸಣ್ಣ ಗಾತ್ರದ ರಂಧ್ರವನ್ನು ಮಾಡಿ.

45
ಇದರಿಂದಾಗುವ ಪ್ರಯೋಜನಗಳೇನು?
Image Credit : Instagram

ಇದರಿಂದಾಗುವ ಪ್ರಯೋಜನಗಳೇನು?

ಇದರಿಂದಾಗುವ ಪ್ರಯೋಜನಗಳೇನು?
ಪೇಸ್ಟ್ ಉಳಿತಾಯ: ಮಕ್ಕಳು ಟ್ಯೂಬ್ ಅನ್ನು ಎಷ್ಟೇ ಜೋರಾಗಿ ಒತ್ತಿದರೂ ಸಣ್ಣ ರಂಧ್ರದಿಂದಾಗಿ ಬಟಾಣಿ ಕಾಳಿನ ಗಾತ್ರದಷ್ಟು ಮಾತ್ರ ಪೇಸ್ಟ್ ಹೊರಬರುತ್ತದೆ. ಇದರಿಂದ ಪೇಸ್ಟ್ ಅನಗತ್ಯವಾಗಿ ಪೋಲಾಗುವುದು ತಪ್ಪುತ್ತದೆ.

ಮಕ್ಕಳಿಗೂ ಅನುಕೂಲ: ಮಕ್ಕಳಿಗೆ ತಮಗೆ ಎಷ್ಟು ಬೇಕೋ ಅಷ್ಟೇ ಪ್ರಮಾಣದಲ್ಲಿ ಪೇಸ್ಟ್ ಬಳಸಲು ಸುಲಭವಾಗುತ್ತದೆ.

ಆರೋಗ್ಯಕ್ಕೂ ಒಳ್ಳೆಯದು: ಮಕ್ಕಳು ಅತಿಯಾಗಿ ಪೇಸ್ಟ್ ಬಳಸುವುದನ್ನು ತಪ್ಪಿಸುವುದು ಆರೋಗ್ಯದ ದೃಷ್ಟಿಯಿಂದಲೂ ಸುರಕ್ಷಿತ ಎಂದು ವೈದ್ಯರು ಹೇಳುತ್ತಾರೆ.

55
ಬೆಸ್ಟ್ ಹ್ಯಾಕ್
Image Credit : Instagram

ಬೆಸ್ಟ್ ಹ್ಯಾಕ್

ಬೆಸ್ಟ್ ಹ್ಯಾಕ್
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ಸರಳ ಐಡಿಯಾ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ದಿನಬಳಕೆಯ ಖರ್ಚು ಕಡಿಮೆ ಮಾಡಲು ಇದೊಂದು ಬೆಸ್ಟ್ ಹ್ಯಾಕ್ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು
ಆರೋಗ್ಯ

Latest Videos
Recommended Stories
Recommended image1
ಟೈಟ್ ಜೀನ್ಸ್ ಧರಿಸೋ ಅಭ್ಯಾಸ ಇದೆಯೇ? ಹುಷಾರಮ್ಮ ಆರೋಗ್ಯಕ್ಕೆ ಡೇಂಜರ್
Recommended image2
ದಿನ ಬಳಕೆಗೆ ಕೇವಲ 2 ಗ್ರಾಂ ಚಿನ್ನದ ಹೂವಿನ ಡಾಲರ್ ಡಿಸೈನ್‌ಗಳು!
Recommended image3
ಎಷ್ಟೇ ಕ್ಲೀನ್ ಮಾಡಿದ್ರೂ ನೀರಿನ ಬಾಟಲಿಯಿಂದ ವಾಸನೆ ಬರ್ತಿದ್ಯಾ? ಈ ಹ್ಯಾಕ್ ಟ್ರೈ ಮಾಡಿ
Related Stories
Recommended image1
ವಿದೇಶದಲ್ಲಿ ಸೆಪ್ಟೆಂಬರ್‌ ಬರುತ್ತಿದ್ದಂತೆ ಕಿಟಕಿ ಮೇಲೆ ಉಪ್ಪಿನ ಬಟ್ಟಲು ಇಡಲು ಮನೆಮಂದಿಗೆ ಸೂಚನೆ ನೀಡೋದ್ಯಾಕೆ?
Recommended image2
ಎಣ್ಣೆ ಚೆಲ್ಲಿದಾಗ ಬಟ್ಟೆ, ಟಿಶ್ಯೂ ಪೇಪರ್ ಹುಡುಕ್ಬೇಡಿ.. ಒಂದೇ ನಿಮಿಷದಲ್ಲಿ ಕ್ಲೀನ್ ಆಗಲು ಇಲ್ಲಿದೆ ಸ್ಮಾರ್ಟ್ ಟ್ರಿಕ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved