MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
Teacher's Day Wishes 2026
ISRO GSLV F17 Launch
Bengaluru Suburban Rail
Bike Taxi Approval
Karnataka KPSC Scam
Bengaluru Airport Flyover
Mysuru Dasara 2026 Scehdule
Rohit Sharma Retirement Rumors
Gowri Ganesha Festival
Yeshwantpur Mangaluru Vande Bharat
India Iran Relationship
  • Home
  • Life
  • Food
  • ಮನೆಯಲ್ಲಿ ಕರಿಬೇವಿನ ಎಲೆಗಳನ್ನು ಹೀಗೂ ಬಳಸಬಹುದು, ಇಲ್ಲಿದೆ ಐದು ಸೂಪರ್ ಟಿಪ್ಸ್

ಮನೆಯಲ್ಲಿ ಕರಿಬೇವಿನ ಎಲೆಗಳನ್ನು ಹೀಗೂ ಬಳಸಬಹುದು, ಇಲ್ಲಿದೆ ಐದು ಸೂಪರ್ ಟಿಪ್ಸ್

ಮನೆಯಲ್ಲಿ ಕರಿಬೇವಿನ ಎಲೆಗಳನ್ನು ಹೇಗೆಲ್ಲಾ ಬಳಸುತ್ತೀರೀ? ಒಗ್ಗರಣೆ ಹಾಕಲು, ಚಟ್ನಿ ಹೀಗೆ ಒಂದಷ್ಟು ತಿನಿಸುಗಳಿಗೆ ಬಳಸುತ್ತಾರೆ. ಆದರೆ ಕರಿಬೇವಿನ ಎಲೆಗಳನ್ನು ಹೀಗೂ ಬಳಸಹುದು, ಇಲ್ಲಿದೆ ಐದು ಸೂಪರ್ ಟಿಪ್ಸ್

2 Min read
Author : Chethan Kumar
Published : Sep 04 2026, 05:13 PM IST
Share this Photo Gallery
  • FB
  • TW
  • Linkdin
  • Whatsapp
16
ಕರಿಬೇವಿನ ಹೀಗೂ ಬಳಸಬಹುದು
Image Credit : stockPhoto

ಕರಿಬೇವಿನ ಹೀಗೂ ಬಳಸಬಹುದು

ತಾಜಾ ಕರಿಬೇವಿನ ಎಲೆಗಳ ಸುವಾಸನೆಯೇ ಅದ್ಭುತ. ನಿಮ್ಮ ಮನೆಯಲ್ಲಿ ಬೆಳೆದ ಈ ಎಲೆಗಳನ್ನು ಕೇವಲ ಒಗ್ಗರಣೆಗೆ ಮಾತ್ರವಲ್ಲ, ಬೇರೆ ಹಲವು ಬುದ್ಧಿವಂತಿಕೆಯ ಹಾಗೂ ಪ್ರಾಯೋಗಿಕ ವಿಧಾನಗಳಲ್ಲಿ ಬಳಸಬಹುದು. ಕರಿಬೇವಿನ ಎಲೆಯನ್ನು ಹಲವು ಕಾರಣಗಳಿಗೆ ಬಳಸಲು ಸಾಧ್ಯ. ಇನ್ನು ಹಲವು ರೀತಿಯಲ್ಲಿ ಶೇಖರಿಸಿಡಲು ಸಾಧ್ಯವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕರಿಬೇವು ಪೇಸ್ಟ್
Image Credit : Getty

ಕರಿಬೇವು ಪೇಸ್ಟ್

ಕರಿಬೇವಿನ ಎಲೆಗಳನ್ನು ಸ್ವಲ್ಪ ಎಣ್ಣೆ ಮತ್ತು ಉಪ್ಪಿನೊಂದಿಗೆ ಸೇರಿಸಿ ನಯವಾದ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಫ್ರೀಜರ್ ಟ್ರೇಗಳಲ್ಲಿ ಹಾಕಿಟ್ಟುಕೊಂಡರೆ, ಅಡುಗೆಗೆ ತಕ್ಷಣ ಬಳಸಬಹುದು. ಹಲವು ದಿನಗಳ ಕಾಲ ಈ ಕರಿಬೇವು ಪೆಸ್ಟ್ ಬಳಸಲು ಸಾಧ್ಯವಿದೆ. ಅಡುಗೆ ಮಾಡುವಾಗ, ಒಗ್ಗರಣೆಗ, ಚಟ್ನಿ ಸೇರಿದಂತೆ ಹಲವು ರೀತಿಯಲ್ಲಿ ಈ ಪೇಸ್ಟ್ ಬಳಕೆ ಮಾಡಬಹುದು. ಇದರಿಂದ ಸಮಯವೂ ಉಳಿತಾಯವಾಗುತ್ತದೆ. ಅಡುಗೆಯಲ್ಲಿ ಕರಿಬೇವಿನ ತಾಜಾತನವೂ ಇರಲಿದೆ.

Related Articles

Related image1
ಮನೆಗೆ ಬೇಕಾದ ಕರಿಬೇವು ಖರೀದಿಸಲೇಬೇಡಿ; ಸಣ್ಣ ಜಾಗದಲ್ಲಿ ಹೀಗೆ ಬೆಳೆಸಿ ನೋಡಿ!
Related image2
ಕರಿಬೇವಿನ ಗಿಡ ಬೆಳೆಯಲು ಜೀರೋ ಇನ್ವೆಸ್ಟ್‌ಮೆಂಟ್, ವರ್ಷಪೂರ್ತಿ ಕಟಾವು!
36
ಕರಿಬೇವು ಪೋಷಣೆ
Image Credit : Getty

ಕರಿಬೇವು ಪೋಷಣೆ

ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆಯಂತಹ ಕ್ಯಾರಿಯರ್ ಆಯಿಲ್‌ನಲ್ಲಿ ತಾಜಾ ಕರಿಬೇವಿನ ಎಲೆಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಇದು ನಿಮ್ಮ ಕೂದಲಿಗೆ ಪೋಷಣೆ ನೀಡುವ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ. ಕರಿಬೇವು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದೆ. ಹೀಗಾಗಿ ಕೂದುಲು ಉದುರುವಿಕೆ ಸೇರಿದಂತೆ ಇತರ ಸಮಸ್ಯೆಗಳಿರುವ ವ್ಯಕ್ತಿಗಳು ಕರಿಬೇವು ನಿಯಮಿತ ಪ್ರಮಾಣದಲ್ಲಿ ಸೇವನೆ ಉತ್ತಮ.

46
ಕರಿಬೇವು ಪುಡಿ
Image Credit : Getty

ಕರಿಬೇವು ಪುಡಿ

ಹೆಚ್ಚು ಕರಿಬೇವಿನ ಎಲೆಗಳು ಸಿಕ್ಕಾಗ ಗೊಂದಲಕ್ಕೆ ಸಿಲುಕಬೇಡಿ. ಹಲವು ದಿನ ಫ್ರಿಡ್ಜ್‌ನಲ್ಲಿಡಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ಅವುಗಳನ್ನು ಬೇಳೆ, ಜೀರಿಗೆ ಮತ್ತು ಒಣಮೆಣಸಿನಕಾಯಿಯೊಂದಿಗೆ ಡ್ರೈ-ರೋಸ್ಟ್ ಮಾಡಿ. ನಂತರ ಇದನ್ನು ಪುಡಿ ಮಾಡಿದರೆ, ನಿಮ್ಮ ರುಚಿಕರವಾದ ಕರಿಬೇವು ಪುಡಿ ಸಿದ್ಧವಾಗಲಿದೆ. ಇದನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಲು ಸಾಧ್ಯವಿದೆ.

56
ತುಪ್ಪದಲ್ಲಿ ಹುರಿದ ಕರಿಬೇವು
Image Credit : Getty

ತುಪ್ಪದಲ್ಲಿ ಹುರಿದ ಕರಿಬೇವು

ಬಿಸಿ ತುಪ್ಪ ಅಥವಾ ಎಣ್ಣೆಯಲ್ಲಿ ತಾಜಾ ಕರಿಬೇವಿನ ಎಲೆಗಳನ್ನು ಹುರಿಯುವುದರಿಂದ, ಅವುಗಳಲ್ಲಿರುವ ಸುವಾಸನೆಯುಕ್ತ ಸಾರಭೂತ ತೈಲಗಳು ಬಿಡುಗಡೆಯಾಗುತ್ತವೆ ಎಂದು ಹೆಲ್ತ್‌ಲೈನ್ ಹೇಳುತ್ತದೆ. ಇದು ಅಡುಗೆಯ್ಲಲಿ ಬಳಸಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ. ಸುದೀರ್ಘ ದಿನಗಳ ಬಳಿಕ ಕರಿಬೇವು ಬಳಸಲು ಸಾಧ್ಯವಿದೆ.

66
ದೈನಂದಿನ ಆರೋಗ್ಯ
Image Credit : Getty

ದೈನಂದಿನ ಆರೋಗ್ಯ

ಆ್ಯಂಟಿಆಕ್ಸಿಡೆಂಟ್ ಹೆಚ್ಚಿಸಲು ನಿಮ್ಮ ದೈನಂದಿನ ಆರೋಗ್ಯ ದಿನಚರಿಯಲ್ಲಿ ಹಸಿ ಎಲೆಗಳನ್ನು ಬಳಸಬಹುದು. '8-10 ತಾಜಾ ಎಲೆಗಳನ್ನು ಬಿಸಿ ನೀರಿನೊಂದಿಗೆ ಜಗಿದು ತಿನ್ನಿ' ಎಂದು ಹಲವರು ಸಲಹೆ ನೀಡುತ್ತಾರೆ. ನಿಯಮಿತವಾಗಿ ಕರಿಬೇವು ಎಲೆಗಳನ್ನು ಜಗಿದು ತಿನ್ನುವುದರಿಂದ ಆರೋಗ್ಯ ವೃದ್ಧಿಸಲಿದೆ.

ಸೂಚನೆ: ಆರೋಗ್ಯದ ಕುರಿತು ಯಾವುದೇ ಆಹಾರ, ಇತರ ವಸ್ತುಗಳ ಸೇವನೆಗೂ ಮೊದಲು ವೈದ್ಯರ ಸಂಪರ್ಕಿಸಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆಹಾರ
ಜೀವನಶೈಲಿ
ಆಹಾರ ಸಂಸ್ಕೃತಿ

Latest Videos
Recommended Stories
Recommended image1
ಸಂಜೆಗೆ ಮಾಡ್ಕೊಳ್ಳಿ ಸೂರ್ಯವಂಶ ಸಿನಿಮಾ ಶೈಲಿಯ ತಿಂಡಿ; ಇದು ಮಕ್ಕಳಿಗೂ ಇಷ್ಟ ಆಗುತ್ತೆ
Recommended image2
ಹಿಟ್ಟು, ಹಂಚು ಎಲ್ಲಾ ಸರಿಯಿದ್ರೂ ದೋಸೆ ಅಂಟಿಕೊಳ್ಳುತ್ತಿದೆಯೇ? ಬಾಣಸಿಗರ ಈ ಟ್ರಿಕ್ಸ್ ಫಾಲೋ ಮಾಡಿ
Recommended image3
ಪ್ರತಿದಿನವೂ ಅನ್ನ ಜಾಸ್ತಿ ತಿಂತೀರಾ? ಬಿಳಿ ಅಕ್ಕಿ ಅನ್ನದಿಂದಾಗೋ 5 ಸಮಸ್ಯೆಗಳಿವು..!
Related Stories
Recommended image1
ಮನೆಗೆ ಬೇಕಾದ ಕರಿಬೇವು ಖರೀದಿಸಲೇಬೇಡಿ; ಸಣ್ಣ ಜಾಗದಲ್ಲಿ ಹೀಗೆ ಬೆಳೆಸಿ ನೋಡಿ!
Recommended image2
ಕರಿಬೇವಿನ ಗಿಡ ಬೆಳೆಯಲು ಜೀರೋ ಇನ್ವೆಸ್ಟ್‌ಮೆಂಟ್, ವರ್ಷಪೂರ್ತಿ ಕಟಾವು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved