Poori: ಶೆಫ್ ಸೇಠಿ ಹೇಳಿದಂತೆ ಪೂರಿ ಮಾಡಿದ್ರೆ ಸಂಜೆಯವರೆಗೂ ಅಂಚು ಕ್ರಿಸ್ಪಿಯಾಗಿರುತ್ತೆ
ಹೋಟೆಲ್ ಶೈಲಿಯಲ್ಲಿ ಉಬ್ಬಿದ ಮತ್ತು ಕ್ರಿಸ್ಪಿಯಾದ ಪೂರಿ ಮಾಡಲು ಹಿಟ್ಟನ್ನು ಹೇಗೆ ಕಲಿಸಬೇಕು ಎಂದು ಶೆಫ್ ಅನಿರುದ್ಧ ಸೇಠಿ ತಿಳಿಸಿದ್ದಾರೆ. ಪೂರಿಯ ಮೇಲೆ ಬಿಸಿ ಎಣ್ಣೆ ಹಾಕುವುದರಿಂದ ಅದು ಚೆನ್ನಾಗಿ ಅರಳುತ್ತದೆ ಎಂದು ವಿವರಿಸಿದ್ದಾರೆ.

ಕ್ರಿಸ್ಪಿ ಪೂರಿಯ ಟ್ರಿಕ್ಸ್
ಪೂರಿ ಮಾಡೋದು ಸಹ ಒಂದು ಸುಂದರವಾದ ಕಲೆಯಾಗಿದೆ. ಹೋಟೆಲ್‌ನಲ್ಲಿ ಮಾಡುವ ಪೂರಿ ಉಬ್ಬಿಕೊಂಡು ಬಂದಿರುತ್ತದೆ. ಆದ್ರೆ ಮನೆಯಲ್ಲಿ ಮಾಡುವ ಪೂರಿ ಹೆಚ್ಚು ಎಣ್ಣೆ ಹೀರಿಕೊಂಡು ದಪ್ಪವಾಗುತ್ತದೆ. ನಂತರ ಅದು ಮೃದುವಾಗಿ ಅಂಚು ಬಿರುಸು ಆಗುತ್ತದೆ. ಇಂದು ನಾವು ನಿಮಗೆ ಹೋಟೆಲ್ ಶೈಲಿಯಲ್ಲಿ ಕ್ರಿಸ್ಪಿಯಾಗಿ ಪೂರಿ ಮಾಡುವ ವಿಧಾನ ಹೇಗೆಂದು Chef Anirudh Sethi ತಿಳಿಸಿದ್ದಾರೆ.
ಪೂರಿ ಮಾಡುವ ವಿಧಾನ
ಮೊದಲಿಗೆ ಪೂರಿ ಹಿಟ್ಟನ್ನು ಕಲಿಸಬೇಕಾದ್ರೆ ಕೆಲವು ಸಲಹೆಗಳನ್ನು ಪಾಲನೆ ಮಾಡಬೇಕು. ಕ್ರಿಸ್ಪಿ ಪೂರಿ ಬೇಕಾದ್ರೆ ಹಿಟ್ಟನ್ನು ಗಟ್ಟಿಯಾಗಿ ಕಲಿಸಿಕೊಳ್ಳಬೇಕು. ಗೋಧಿ ಹಿಟ್ಟು ಕಲಿಸಿಕೊಳ್ಳುವಾಗ ಸಣ್ಣ ರವೆ ಸೇರಿಸಿಕೊಳ್ಳಬೇಕು ಎಂದು ಅನಿರುದ್ಧ ಸೇಠಿ ಹೇಳುತ್ತಾರೆ.
ಹಿಟ್ಟಿನಲ್ಲಿ ನೀರು ಹೆಚ್ಚಾದ್ರೆ ಪೂರಿ ಅರಳಲ್ಲ
ಒಂದು ವೇಳೆ ಹಿಟ್ಟು ಕಲಿಸಿಕೊಳ್ಳುವಾಗ ನೀರು ಹೆಚ್ಚಾದ್ರೆ ಪೂರಿ ಅರಳಲು ಕಷ್ಟವಾಗುತ್ತದೆ. ಹಾಗಾಗಿ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿಕೊಳ್ಳುತ್ತಾ ಕಲಿಸಿಕೊಳ್ಳಬೇಕು. ಇದೇ ವೇಳೆ ಗಿರಣಿಗೆ ಹೋದ ಸಂದರ್ಭದಲ್ಲಿ ಹಿಟ್ಟು ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆಯೂ ಅನಿರುದ್ಧ ಮಾಹಿತಿ ನೀಡಿದ್ದಾರೆ. ರೆಡಿಮೇಡ್ ಹಿಟ್ಟು ಬಳಸೋರಿಗೆ ಮೇಲಿನ ಟಿಪ್ಸ್ ಫಾಲೋ ಮಾಡಬಹುದು.
ಹಿಟ್ಟು ಬೀಸೋದು ಹೇಗೆ?
ನೀವು ಗಿರಣಿಗೆ ಹೋದಾಗ ಹಿಟ್ಟು ಬೀಸುವಾಗ ಸ್ವಲ್ಪ ದಪ್ಪವಾಗಿ ಹಾಕಿಸಿಕೊಳ್ಳಬೇಕು. ಪೂರಿಗಾಗಿ ಪ್ರತ್ಯೇಕವಾಗಿ ಹಿಟ್ಟು ಬೀಸಿಕೊಂಡ್ರೆ ಉತ್ತಮ. ಈ ರೀತಿಯಾಗಿ ಹಿಟ್ಟು ಬೀಸಿಕೊಂಡ್ರೆ ಇದಕ್ಕಾಗಿ ಸೂಜಿ ರವೆ ಸೇರಿಸಿಕೊಳ್ಳುವ ಅಗತ್ಯವಿರಲ್ಲ. ಪೂರಿಗಾಗಿ ಹಿಟ್ಟು ಕಲಿಸಿಕೊಳ್ಳೋದರಲ್ಲಿ ಜಾಣತನವಿರಬೇಕು ಎಂದು ಅನಿರುದ್ಧ ಸೇಠಿ ಹೇಳುತ್ತಾರೆ.
ಡೀಪ್ ಫ್ರೈ
ಪೂರಿಯನ್ನು ಯಾವಾಗಲೂ ಡೀಪ್ ಫ್ರೈ ಮಾಡಿಕೊಳ್ಳಬೇಕು. ಎಣ್ಣೆ ಸಂಪೂರ್ಣವಾಗಿ ಬಿಸಿಯಾದ ನಂತರವೇ ಪೂರಿ ಎಲೆಗಳನ್ನು ಹಾಕಿಕೊಳ್ಳಬೇಕು. ಇದೇ ವೇಳೆ ಪೂರಿ ಮೇಲೆ ಬಾಣಲೆಯಲ್ಲಿರುವ ಬಿಸಿಎಣ್ಣೆಯನ್ನು ಹಾಕಬೇಕು. ಮೇಲಿಂದ ಬಿಸಿಎಣ್ಣೆ ಹಾಕೋದರಿಂದ ಪೂರಿ ಅರಳುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

