- Home
- Astrology
- Vaastu
- ವಾಸ್ತು ಶಾಸ್ತ್ರದಲ್ಲಿ ಕಡ್ಲೆಬೇಳೆ ಮಹತ್ವ: ಗುರುದೋಷ ನಿವಾರಣೆಗೆ, ಧನಪ್ರಾಪ್ತಿಗೆ ಹೀಗೆ ಮಾಡಿ
ವಾಸ್ತು ಶಾಸ್ತ್ರದಲ್ಲಿ ಕಡ್ಲೆಬೇಳೆ ಮಹತ್ವ: ಗುರುದೋಷ ನಿವಾರಣೆಗೆ, ಧನಪ್ರಾಪ್ತಿಗೆ ಹೀಗೆ ಮಾಡಿ
ಕಡ್ಲೆಬೇಳೆಯು ಪ್ರೋಟೀನ್ ಮತ್ತು ಫೈಬರ್‌ನಿಂದ ಸಮೃದ್ಧವಾಗಿದ್ದು, ಮಧುಮೇಹ ನಿಯಂತ್ರಣ ಹಾಗೂ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಇದಲ್ಲದೆ, ವಾಸ್ತು ಶಾಸ್ತ್ರದ ಪ್ರಕಾರ ಗುರುವಾರದಂದು ಕಡ್ಲೆಬೇಳೆಯಿಂದ ಮಾಡುವ ಕೆಲವು ಪರಿಹಾರಗಳು ಆರ್ಥಿಕ ಸಮಸ್ಯೆಗಳನ್ನು ದೂರಮಾಡಿ, ಮನೆಯಲ್ಲಿ ಸುಖ-ಸಮೃದ್ಧಿ ತರುತ್ತವೆ.

ಕಡ್ಲೆಬೇಳೆ ಮಹತ್ವ
ಕಡಲೆ ಬೇಳೆಯು ಅತ್ಯುತ್ತಮ ಪೋಷಕಾಂಶಗಳನ್ನು ಹೊಂದಿರುವ ಆರೋಗ್ಯಕರ ಆಹಾರವಾಗಿದ್ದು, ಕಡ್ಲೆಬೇಳೆಯಲ್ಲಿ ಹಲವಾರು ಔಷಧಯುಕ್ತ ಅಂಶಗಳು ಇವೆ. ಇದು ಪ್ರೋಟೀನ್ ಮತ್ತು ಆಂಟಿಆಕ್ಸಿಡೆಂಟ್‌ಗಳ ಉತ್ತಮ ಮೂಲವಾಗಿದೆ. ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದು. ನಾರು ಅಥವಾ ಫೈಬರ್ ಅಂಶವಿರುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಇದು ಸಹಕಾರಿ.ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಕಡ್ಲೆಬೇಳೆ ಕೇವಲ ಔಷಧಕ್ಕೆ ಮಾತ್ರವಲ್ಲದೇ, ವಾಸ್ತು ಶಾಸ್ತ್ರದಲ್ಲಿಯೂ ಮಹತ್ವವನ್ನು ಹೊಂದಿದೆ ಎನ್ನುವುದು ನಿಮಗೆ ಗೊತ್ತಾ?
ಗುರುವಾರದಂದು ಹೀಗೆ ಮಾಡಿ
ಕಡ್ಲೆಬೇಳೆಯನ್ನು ಗುರುವಾರವಂದು ಸ್ವಲ್ಪ ಅರಿಶಿಣದ ಪುಡಿ ಸೇರಿಸಿ ಹರಿಯುವ ನೀರಿಗೆ ಬಿಟ್ಟರೆ, ಇದರಿಂದ ಗುರುದೋಷ ನಿವಾರಣೆಯಾಗಿ, ತಡೆಯಾಗಿದ್ದ ಕಾರ್ಯಗಳು ಮುಂದುವರೆಯುವುದು
ಬೆಲ್ಲದ ಜೊತೆ ಹಸುಗಳಿಗೆ ತಿನ್ನಿಸಿ
ಕಡ್ಲೆಬೇಳೆಯನ್ನು ಬೆಲ್ಲದ ಜೊತೆ ಸೇರಿಸಿ ಹಸುಗಳಿಗೆ ತಿನ್ನಿಸಿದರೆ, ಆರ್ಥಿಕ ಸಮಸ್ಯೆ ದೂರವಾಗಿ, ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗುವಿರಿ.
ಭಿಕ್ಷುಕರಿಗೆ ದಾನ
ಭಿಕ್ಷುಕರಿಗೆ ಕಡ್ಲೆಬೇಳೆಯನ್ನು ದಾನವಾಗಿ ನೀಡಿದರೆ ಗುರುಗ್ರಹದ ಕೃಪೆಗೆ ಪಾತ್ರರಾಗಿ, ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ.
ತಿಜೋರಿಯಲ್ಲಿ ಇಟ್ಟರೆ...
ಗುರುವಾರದಂದು ಒಂದು ಮುಷ್ಟಿ ಕಡ್ಲೆಬೇಳೆಯನ್ನು ಹಳದಿ ವಸ್ತ್ರದಲ್ಲಿ ಒಂದು ನಾಣ್ಯದ ಜೊತೆ ಮಡಚಿ ಅದನ್ನು ತಿಜೋರಿಯಲ್ಲಿ ಇಟ್ಟರೆ ಇದರಿಂದ ಹಣದ ಪ್ರಾಪ್ತಿಯಾಗುತ್ತದೆ.

