ಮನೆಯಲ್ಲಿ ಪೂರಿ ಮಾಡಿದರೆ ಹಪ್ಪಳದಂತೆ ಮೆತ್ತಗಾಗುತ್ತಿದೆಯಾ? ಹಾಗಾದರೆ ಹಿಟ್ಟು ಕಲಸುವಾಗ ಈ ಒಂದು ಸಣ್ಣ ಟ್ರಿಕ್ ಫಾಲೋ ಮಾಡಿ!
ಹೋಟೆಲ್‌ಗಳಲ್ಲಿ ಪೂರಿ ದೀರ್ಘಕಾಲ ಉಬ್ಬಿರಲು ಪ್ರಮುಖ ಕಾರಣ ಅವರು ಗೋಧಿ ಹಿಟ್ಟಿನ ಜೊತೆ ಸೂಜಿ ರವೆಯನ್ನು ಮಿಕ್ಸ್ ಮಾಡುತ್ತಾರೆ.
ರವೆ ಸೇರಿಸುವುದರಿಂದ ಪೂರಿಯ ಒಳಗೆ ಬಿಸಿ ಗಾಳಿ ಹೆಚ್ಚು ಸಮಯ ಉಳಿಯುತ್ತದೆ. ಇದು ಪೂರಿ ಎಣ್ಣೆಯಿಂದ ತೆಗೆದ ನಂತರವೂ ಮೆತ್ತಗಾಗದಂತೆ ತಡೆಯುತ್ತದೆ.
ಹಿಟ್ಟಿನಲ್ಲಿರುವ ಹೆಚ್ಚುವರಿ ನೀರನ್ನು ರವೆ ಹೀರಿಕೊಳ್ಳುತ್ತದೆ. ಇದರಿಂದ ಪೂರಿ ಕರೆಯುವಾಗ ಎಣ್ಣೆ ಬಳಕೆ ಕಡಿಮೆಯಾಗಿ, ಆರೋಗ್ಯಕ್ಕೂ ಒಳ್ಳೆಯದು.
ಒಂದು ಕೆಜಿ ಗೋಧಿ ಹಿಟ್ಟಿಗೆ 3-4 ಸ್ಪೂನ್ ರವೆ ಸಾಕು. ರವೆ ಹೆಚ್ಚಾದರೆ ಪೂರಿಗಳು ಮೃದುವಾಗುವ ಬದಲು ವಡೆಯಂತೆ ಗಟ್ಟಿಯಾಗುತ್ತವೆ.
ಹಿಟ್ಟು ಕಲಸಿದ ಬಳಿಕ 15-20 ನಿಮಿಷ ತೇವವಿರುವ ಬಟ್ಟೆಯಿಂದ ಮುಚ್ಚಿಡಿ. ಇದು ರವೆಯು ಹಿಟ್ಟಿನ ತೇವಾಂಶವನ್ನು ಚೆನ್ನಾಗಿ ಹೀರಿಕೊಳ್ಳಲು ನೆರವಾಗುತ್ತದೆ.
ಪೂರಿ ಬೇಯಿಸುವ ಮುನ್ನ ಎಣ್ಣೆ ಸರಿಯಾಗಿ ಕಾಯ್ದಿರಬೇಕು. ಆಗಲೇ ಪೂರಿಗಳು ಎಣ್ಣೆಗೆ ಹಾಕಿದ ತಕ್ಷಣ ಬಲೂನ್‌ನಂತೆ ಉಬ್ಬಿ ಬರುತ್ತವೆ.
ಮೀನನ್ನು ಫ್ರಿಡ್ಜ್‌ನಲ್ಲಿ ಇಡ್ತೀರಾ? ಅದಕ್ಕೂ ಮುನ್ನ ಇದನ್ನ ತಿಳ್ಕೊಳ್ಳಿ
Diabetes Fruits: ಸಕ್ಕರೆ ಕಾಯಿಲೆ ಕಂಟ್ರೋಲ್ ಮಾಡುವ 9 ಹಣ್ಣುಗಳಿವು!
ಹಿಟ್ಟು ಹುಳಿಯಾಗದಂತೆ ಹೂವಿನಂತೆ ಮೃದುವಾದ ಇಡ್ಲಿ ಮಾಡಲು ಈ ಟಿಪ್ಸ್ ಫಾಲೋ ಮಾಡಿ
ಪ್ರತಿದಿನ ಈ ಆಹಾರ ತಗೋತಿದ್ರೆ ಕೂದಲು ಉದುರೋದು ಪಕ್ಕಾ ನಿಲ್ಲುತ್ತೆ!