vastu tips: ಮನೆಯ ಹೆಬ್ಬಾಗಿಲಿನಲ್ಲಿ ಯಾವ ದೇವರ ಫೋಟೋ ಇಡಬೇಕು? ಅಪಾಯ ತಂದ್ಕೋಬೇಡಿ
ಮನೆಯ ಮುಖ್ಯದ್ವಾರದಲ್ಲಿ ದೇವರ ಫೋಟೋಗಳನ್ನ ಇಡೋದು ಶುಭ ಎಂದು ನಂಬಲಾಗುತ್ತದೆ. ವಾಸ್ತು ಪ್ರಕಾರ ಅದಕ್ಕೆ ಅದರದ್ದೇ ಆದ ನಿಯಮಗಳಿವೆ. ನಿಯಮ ಮೀರಿದ್ರೆ ನೀವು ಬೆಲೆ ತೆರಬೇಕಾಗಬಹುದು ಎಚ್ಚರ. ಈ ಕುರಿತ ಸ್ಟೋರಿ ಇಲ್ಲಿದೆ.

ಯಾವೆಲ್ಲ ದೇವರ ಫೋಟೋಗಳನ್ನ ಇಡಬಹುದು?
ಮನೆಯ ಹೆಬ್ಬಾಗಿಲು ಒಂದು ದ್ವಾರವಲ್ಲ. ಅದೇ ಕಾರಣಕ್ಕೆ ಮನೆ ಕಟ್ಟುವ ಮೊದಲು ಗುರು ಹಿರಿಯ ಕೇಳಿಯೇ ಬಾಗಿಲನ್ನು ಬಿಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಇದು ತುಂಬಾನೇ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಂದಿಗೂ ಕೂಡ ಮನೆಯ ಮುಖ್ಯದ್ವಾರಕ್ಕೆ ಅಥವಾ ಪ್ರಧಾನ್ ಬಾಗಿಲಿಗೆ ವಿಶೇಷ ಪೂಜೆ ನಡೆಯುತ್ತದೆ. ಪೂಜೆ ಮಾಡುವುದರ ಜೊತೆಗೆ ಅದರ ಮೇಲ್ಬಾಗದಲ್ಲಿ ದೇವರ ಫೋಟೋಗಳನ್ನ ಇಡುತ್ತಾರೆ. ಹಾಗಿದ್ದರೆ ಇಲ್ಲಿ ಯಾವೆಲ್ಲ ದೇವರ ಫೋಟೋಗಳನ್ನ ಇಡಬಹುದು?
ಗಣೇಶ
ಗಣೇಶನ ಫೋಟೋ ಇಡೋದು ವಾಸ್ತುಶಾಸ್ತ್ರದಲ್ಲಿ ಶುಭವೆಂದು ನಂಬಲಾಗಿದೆ. ವಿಘ್ನನಿವಾರಕ ಸಂಕಷ್ಟಗಳನ್ನ ದೂರ ಮಾಡಿ, ಮನೆಯಲ್ಲಿ ಸುಖ, ಸಂತೋಷ, ನೆಮ್ಮದಿಯನ್ನ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಅದಕ್ಕೆ ಗಣೇಶನ ವಿಗ್ರಹ, ಫೋಟೋಗಳನ್ನ ನೀವು ಯಾವುದೇ ಚಿಂತೆಯಿಲ್ಲದೇ ಇಡಬಹುದು. ಆದರೆ ಇಲ್ಲೊಂದು ನಿಯಮ ಇದೆ. ಗಣೇಶನ ಬೆನ್ನು ಮನೆಯ ಕಡೆಗೆ ಇರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹಾಗಿದ್ದರೆ ಅಶುಭ ಎಂದು ಪರಿಗಣಿಸಲಾಗುತ್ತದೆ.
ಲಕ್ಷ್ಮೀ ಮತ್ತು ಕುಬೇರ
ಮುಖ್ಯದ್ವಾರವನ್ನು ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿ ಶುಭ ಚಿಹ್ನೆಗಳನ್ನು ಇಡಲು ನಿರ್ಧರಿಸೋದಾದ್ರೆ ಲಕ್ಷ್ಮೀ ದೇವತೆ ಮತ್ತು ಕುಬೇರ ಫೋಟೋವನ್ನು ಇಡಬಹುದು. ವಾಸ್ತು ನಂಬಿಕೆ ಪ್ರಕಾರ ಇವು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದೆ. ಆದರೆ ಲಕ್ಷ್ಮೀ ದೇವಿಯ ಫೋಟೋ ಇಡುವಾಗ, ನಿಂತಿರುವ ಲಕ್ಷ್ಮೀ ದೇವಿಯ ಫೋಟೋ ಇಡಬಾರದು. ಕೂತಿರುವ ಲಕ್ಷ್ಮೀ ದೇವಿಯ ಫೋಟೋವನ್ನು ಇಡಬೇಕು.
ಇನ್ನು ಲಕ್ಷ್ಮೀ ದೇವಿಯ ಪಾದದ ಗುರುತನ್ನೂ ಕೂಡ ಶುಭ ಎಂದು ಹೇಳಲಾಗುತ್ತದೆ. ಹೆಚ್ಚುವರಿಯಾಗಿ ಮುಖ್ಯ ಬಾಗಿಲಿನ ಮೇಲೆ ಸ್ವಸ್ತಿಕ್ ಅಥವಾ ಶುಭ ಚಿಹ್ನೆಯನ್ನು ಇಡಬಹುದು.
ಯಾವೆಲ್ಲ ದೇವರ ಫೋಟೋ ಇಡಬಾರದು?
ಹೆಬ್ಬಾಗಿಲಿನ ಮೇಲ್ಭಾಗದಲ್ಲಿ ಶಿವನ ಉಗ್ರ ರೂಪವಾದ ಶನಿದೇವ, ಕಾಳಿ ದೇವಿಯ ಚಿತ್ರಗಳನ್ನ ಮುಖ್ಯದ್ವಾರದಲ್ಲಿ ಇಡಬಾರದು. ಧಾರ್ಮಿಕ ಫೋಟೋಗಳನ್ನ ಆಯ್ಕೆ ಮಾಡುವಾಗ ಅವುಗಳ ರೂಪ ತುಂಬಾ ಮುಖ್ಯವಾಗುತ್ತದೆ. ಅದು ಮನೆಯ ಬಾಗಿಲಲ್ಲಿ ಇಡುವಾಗ.
ಫೋಟೋ ಇಟ್ಟ ನಂತರ ಏನು ಮಾಡಬೇಕು?
ಮುಖ್ಯದ್ವಾರದಲ್ಲಿ ದೇವರ ಚಿತ್ರವನ್ನು ಇಟ್ಟು ಸುಮ್ಮನಾದರೆ ಸಾಲದು. ಅಲ್ಲಿ ಸದಾಕಾಲ ಸ್ವಚ್ಛತೆಯನ್ನ ಕಾಪಾಡಿಕೊಳ್ಳಬೇಕು. ಧೂಳು ಕೂರದಂತೆ ನೋಡಿಕೊಳ್ಳಬೇಕು. ಫೋಟೋಗಳನ್ನ ಒರೆಸಿ ನಿತ್ಯ ಪೂಜೆ ಮಾಡಬೇಕು. ಬಾಗಿಲಲ್ಲಿರುವ ಫೋಟೋಗಳು ನಿತ್ಯವೂ ಬೆಳಗಬೇಕು. ಅಂದರೆ ದೀಪ ಹಚ್ಚಿ ಪೂಜೆ ಮಾಡಬೇಕು. ಬೆಳಕು ಕೂಡ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.

