ಶನಿ ಮತ್ತು ಕೇತುವಿನ ಕಾಟಕ್ಕೆ ಸುಲಭ ಪರಿಹಾರ, ಮನೆ ಸುತ್ತಮುತ್ತ ಇರಲಿ ಈ ವಿಶೇಷ ಮರ
ಹಿಂದೂ ಸಂಪ್ರದಾಯದಲ್ಲಿ ಬೇವಿನ ಮರಕ್ಕೆ ವಿಶೇಷ ಸ್ಥಾನವಿದೆ. ಅದನ್ನು ಯಾಕೆ ಮನೆಯ ಸುತ್ತಮುತ್ತ ಬೆಳೆಸಬೇಕು ಅಂತಾರೆ? ಯಾಕೆ ಶಕ್ತಿ ದೇವೆತಗಳು ಇರುವ ಜಾಗದಲ್ಲಿ ಇರುತ್ತದೆ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ..

ಬೇವಿನ ಗಿಡಕ್ಕೆ ಭಾರತದಲ್ಲಿ ವಿಶೇಷ ಸ್ಥಾನ
ಭಾರತದಲ್ಲಿ ಬೇವಿನ ಮರಕ್ಕೆ ವಿಶೇಷ ಸ್ಥಾನವಿದೆ. ಆಯುರ್ವೆದಲ್ಲಿ ಮಾತ್ರವಲ್ಲದೇ ಹಿಂದೂ ಸಂಪ್ರದಾಯಗಳು, ವಾಸ್ತು ಶಿಲ್ಪ, ಜ್ಯೋತಿಷ್ಯ ನಂಬಿಕೆಗಳಲ್ಲಿ ಬೇವಿನ ಮರಕ್ಕೆ ವಿಶೇಷ ಸ್ಥಾನವಿದೆ. ಬೇವಿನ ಮರ ಆರೋಗ್ಯ ಮತ್ತು ಶುಭದ ಸಂಕೇತ ಎಂದು ನಂಬಲಾಗಿದೆ. ಅದು ಮನೆಯ ಆವರಣದಲ್ಲಿ ಇದ್ದರೆ ಪಾಸಿಟೀವ್ ವಾತಾವರಣ ಸೃಷ್ಟಿಸುತ್ತದೆ. ಕುಟುಂಬಕ್ಕೆ ಅದೃಷ್ಟ ತರುತ್ತದೆ ಎಂದು ಹೇಳಲಾಗುತ್ತದೆ. ಪೂಜೆಗಳಲ್ಲಿ, ಸಾಂಪ್ರದಾಯಿಕ ಆಚರಣೆಗಳಲ್ಲಿ ಬೇವಿನ ಎಲೆಗಳಿಗೆ ವಿಶೇಷ ಗೌರವ ಇದೆ.
ಅಂದರೆ ಬೇವಿನ ಮರ ಬೆಳೆಸೋದ್ರಿಂದ ನಕರಾತ್ಮಕ ಪ್ರಭಾವಗಳು ಕಡಿಮೆ ಆಗಿ ಸಕರಾತ್ಮಕ ಬೆಳವಣಿಗೆ ಆಗಲಿದೆ. ಕುಟುಂಬದಲ್ಲಿ ಸಮೃತ್ತಿ, ನೆಮ್ಮದಿ ಬರುತ್ತದೆ ಎಂದು ನಂಬಲಾಗುತ್ತದೆ.
ಶನಿ ಮತ್ತು ಕೇತುವಿನ ಪ್ರಭಾವ ಕಡಿಮೆ
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ.. ಬೇವಿನ ಮರವು ಶನಿ ಮತ್ತು ಕೇತು ಗ್ರಹಗಳೊಂದಿಗೆ ಸಂಬಂಧ ಹೊಂದಿದೆ. ಬೇವಿನ ಮರ ಪೂಜಿಸುವುದರಿಂದ, ಸಾಂಪ್ರದಾಯಿಕ ರೀತಿಯಲ್ಲಿ ಅದರ ಎಲೆಗಳನ್ನು ಬಳಸೋದ್ರಿಂದ ದೋಷದ ಪರಿಣಾಮ ಕಡಿಮೆ ಮಾಡಬಹುದು ಎನ್ನಲಾಗುತ್ತದೆ. ಅದೇ ಕಾರಣಕ್ಕೆ ಸ್ನಾನದ ನೀರಿಗೆ ಬೇವಿನ ಎಲೆಗಳನ್ನ ಸೇರಿಸಿ ಸ್ನಾನ ಮಾಡಲಾಗುತ್ತದೆ. ಇದರಿಂದ ಮಾನಸಿಕ ನೆಮ್ಮದಿ ಸಿಗಲಿದೆ ಎಂದು ಹೇಳಲಾಗುತ್ತದೆ.
ನಕಾರಾತ್ಮಕ ಶಕ್ತಿಗಳು ಮಾಯ
ಹಿಂದಿನಿಂದಲೂ ನಾವು ಅನೇಕ ಆಚರಣೆಗಳಿಗೆ ಬೇವಿನ ಎಲೆಗಳನ್ನ ಬಳಸುತ್ತೇವೆ. ಇದು ಶುದ್ಧೀಕರಣದ ಸಂಕೇತ. ಮನೆಯ ಬಾಗಿಲಿಗೆ ಬೇವಿನ ಎಲೆಗಳ ಕಟ್ಟುವುದು, ಒಣಗಿದ ಬೇವಿನ ಎಲೆಗಳನ್ನು ಧೂಪದ್ರವ್ಯವಾಗಿ ಬಳಸುವುದು ನಕಾರಾತ್ಮಕ ಪ್ರಭಾವಗಳನ್ನು ತೆಗೆದುಹಾಕಲು.
ದುರ್ಗಾ ದೇವಿಯ ರೂಪ
ಪುರಾಣಗಳಲ್ಲಿ ಬೇವಿನ ಮರವನ್ನು ಶಕ್ತಿ ದೇವತೆ ಎನ್ನಲಾಗಿದೆ. ಅದು ಪವಿತ್ರ ಹೇಳುತ್ತೇವೆ. ಇದೇ ಕಾರಣಕ್ಕೆ ಶಕ್ತಿ ದೇವತೆಯ ದೇವಾಲಯಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಬೇವಿನ ಮರಗಳು ಕಂಡುಬರುತ್ತವೆ. ಮನೆಯ ಅಂಗಳದಲ್ಲಿ ಭಕ್ತಿಯಿಂದ ಬೇವಿನ ಮರ ಬೆಳೆಸುವುದರಿಂದ ದೇವಿಯ ಆಶೀರ್ವಾದ ಸಿಗಲಿದೆ. ಕುಟುಂಬಕ್ಕೆ ಸಂಪತ್ತು, ಸಮೃದ್ಧಿ ಮತ್ತು ಅಭಿವೃದ್ಧಿ ಸಿಗಲಿದೆ. ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಮನೆ ಸ್ವಚ್ಛಗೊಳಿಸುವಾಗ ಬೇವಿನ ಎಲೆ ಹಾಕಿ ಕ್ಲೀನ್ ಮಾಡೋದನ್ನೂ ನಾವು ನೋಡಬಹುದು.
ಮನೆಯ ಸುತ್ತಲೂ ಬೇವಿನ ಮರ
ನಂಬಿಕೆಗಳ ಪ್ರಕಾರ, ಮನೆಯ ಸುತ್ತಮುತ್ತ ಬೇವಿನ ಮರಗಳಿದ್ದರೆ ಅದು ಶುಭ ಎಂದು ಹೇಳಲಾಗುತ್ತದೆ. ಬೇವಿನ ಮರದ ನೆರಳು, ನೈಸರ್ಗಿಕ ವಾತಾವರಣವು ಮನೆಯ ಹಸಿರನ್ನು ಹೆಚ್ಚಿಸುತ್ತದೆ. ಜೊತೆಗೆ ಕುಟುಂಬಕ್ಕೆ ಸಂತೋಷವನ್ನು ನೀಡುತ್ತದೆ.
ಶಾಂತಿ ಮತ್ತು ಸಾಮರಸ್ಯ
ವಾಸ್ತು ನಂಬಿಕೆಗಳ ಪ್ರಕಾರ.. ಮನೆಯ ಆವರಣದಲ್ಲಿ ಬೇವಿನ ಮರವಿದ್ದರೆ ಕುಟುಂಬ ಸದಸ್ಯರ ನಡುವಿನ ಘರ್ಷಣೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುತ್ತದೆ ಮತ್ತು ಶಾಂತಿಯನ್ನು ತರುತ್ತದೆ ಎಂದು ನಂಬುತ್ತಾರೆ. ಮರಗಳು ಸುತ್ತಮುತ್ತಲಿನ ಪ್ರದೇಶಗಳಿಗೆ ಹಸಿರು ಒದಗಿಸುತ್ತವೆ, ಆಹ್ಲಾದಕರ ವಾತಾವರಣ ಸೃಷ್ಟಿಸುತ್ತವೆ.
ಆರೋಗ್ಯಕ್ಕೆ ವಿಶೇಷ ಮನ್ನಣೆ
ಔಷಧದಲ್ಲಿ ಬೇವಿಗೆ ವಿಶೇಷ ಸ್ಥಾನವಿದೆ. ಎಲೆಗಳು, ತೊಗಟೆ ಮತ್ತು ಬೀಜಗಳಂತಹ ಸಸ್ಯದ ಭಾಗಗಳನ್ನು ವಿವಿಧ ಸಾಂಪ್ರದಾಯಿಕ ಬಳಕೆಗಳಲ್ಲಿ ಬಳಸಲಾಗುತ್ತದೆ. ಬೇವನ್ನು ಬಹಳ ಹಿಂದಿನಿಂದಲೂ ನೈಸರ್ಗಿಕ ಆರೋಗ್ಯ ಉಡುಗೊರೆ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಬೇವು ಬೆಳೆಸುವುದರಿಂದ ಎಲ್ಲಾ ಕಾಯಿಲೆಗಳು ಗುಣವಾಗುತ್ತವೆ. ಹೀಗಿದ್ದೂ ಮರವನ್ನು ನೆಡುವಾಗ, ಮನೆಯ ರಚನೆ, ಸ್ಥಳ ಮತ್ತು ಅದು ಬೆಳೆಯುವ ಮರದ ಗಾತ್ರದಂತಹ ಪ್ರಾಯೋಗಿಕ ಅಂಶಗಳನ್ನು ಪರಿಗಣಿಸಬೇಕು.

