Onion chopping science: ನಿಮ್ಮ ಅಡುಗೆ ಯಾಕೆ ಒಂದೊಂದು ದಿನ ಒಂದೊಂದು ತರಹ ರುಚಿ ಕೊಡುತ್ತೆ ಗೊತ್ತಾ? ಅದಕ್ಕೆ ನೀವು ಈರುಳ್ಳಿ ಕತ್ತರಿಸೋ ಸೈಜ್ ಕೂಡ ಒಂದು ಕಾರಣ! ತುರಿದ ಈರುಳ್ಳಿಗೂ, ಹೆಚ್ಚಿದ ಈರುಳ್ಳಿಗೂ ಇರೋ ಆ ಅಸಲಿ ವ್ಯತ್ಯಾಸ ಏನು ಅಂತ ನೀವೇ ನೋಡಿ...

ನಾವು ಪ್ರತಿದಿನ ಅಡುಗೆ ಮಾಡುವಾಗ ಈರುಳ್ಳಿಯನ್ನು ಕೆಲವೊಮ್ಮೆ ಸಣ್ಣಗೆ ಹೆಚ್ಚುತ್ತೇವೆ, ಇನ್ನು ಕೆಲವೊಮ್ಮೆ ದಪ್ಪಗೆ ಕತ್ತರಿಸುತ್ತೇವೆ, ಕೆಲವೊಮ್ಮೆ ಪೇಸ್ಟ್ ಅಥವಾ ತುರಿದು (Grate ಮಾಡಿ) ಹಾಕುತ್ತೇವೆ. ಆದರೆ ನಾವು ಈರುಳ್ಳಿಯನ್ನು ಯಾವ ಸೈಜ್‌ನಲ್ಲಿ ಕತ್ತರಿಸುತ್ತೇವೆ ಎಂಬುದು ಅಡುಗೆಯ ರುಚಿಯ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬ ಪ್ರಶ್ನೆ ನಿಮ್ಮಲ್ಲೂ ಕಾಡಿರಬಹುದು.

ಇದಕ್ಕೆ ಉತ್ತರ ಖಂಡಿತವಾಗಿಯೂ ಹೌದು. ಈರುಳ್ಳಿಯನ್ನು ಕತ್ತರಿಸುವ ಗಾತ್ರವೇ ನಿಮ್ಮ ಇಡೀ ಅಡುಗೆಯ ಸ್ವಾದ, ವಾಸನೆ ಮತ್ತು ಟೆಕ್ಸ್ಚರ್ ಅನ್ನು ನಿರ್ಧರಿಸುತ್ತದೆ ಎಂಬುದನ್ನು ಆಹಾರ ವಿಜ್ಞಾನ ಮತ್ತು ಪ್ರಾಯೋಗಿಕ ಪರೀಕ್ಷೆ ಸಾಬೀತುಪಡಿಸಿದೆ!

ಇದರ ಹಿಂದಿರುವ ವಿಜ್ಞಾನವೇನು?

ಈರುಳ್ಳಿಯಲ್ಲಿ ನೀರು, ಕಾರ್ಬೋಹೈಡ್ರೇಟ್ಸ್ (ನೈಸರ್ಗಿಕ ಸಕ್ಕರೆ), ಸಲ್ಫರ್ (ಘಾಟು ನೀಡುವ ಅಂಶ) ಮತ್ತು ಆರೊಮ್ಯಾಟಿಕ್ ಕಣಗಳಿರುತ್ತವೆ. ನಾವು ಈರುಳ್ಳಿಯನ್ನು ಚಾಕುವಿನಿಂದ ಎಷ್ಟು ಚಿಕ್ಕದಾಗಿ ಕತ್ತರಿಸುತ್ತೇವೆಯೋ, ಅಷ್ಟೂ ಹೆಚ್ಚಾಗಿ ಅದರ ಕಣಗಳು (Cells) ಒಡೆದುಕೊಳ್ಳುತ್ತವೆ. ಜೀವಕೋಶಗಳು ಒಡೆದಾಗ ಅದರೊಳಗಿರುವ ಸಕ್ಕರೆ ಅಂಶ ಮತ್ತು ರಸಗಳು ಹೊರಬಂದು ರಾಸಾಯನಿಕ ಕ್ರಿಯೆಗೆ ಒಳಗಾಗುತ್ತವೆ. ಇದರಿಂದ ಈರುಳ್ಳಿಯ ಮೂಲ ರುಚಿಯ ಲಕ್ಷಣಗಳೇ ಬದಲಾಗುತ್ತವೆ!

ಟೊಮೆಟೊ ಸಾಸ್ ಪ್ರಯೋಗ (Tomato Sauce Experiment)

ಈ ಸತ್ಯವನ್ನು ಪರೀಕ್ಷಿಸಲು ಶೆಫ್ ಒಬ್ಬರು ಒಂದೇ ರೀತಿಯ ಪದಾರ್ಥಗಳನ್ನು ಬಳಸಿ 3 ಬಗೆಯ ಟೊಮೆಟೊ ಸಾಸ್‌ಗಳನ್ನು ತಯಾರಿಸಿದರು..

ದೊಡ್ಡ ತುಂಡುಗಳು (Large Pieces / Halves): ಇದರಲ್ಲಿ ಈರುಳ್ಳಿಯನ್ನು ಕೇವಲ ಎರಡು ಭಾಗ ಮಾಡಿ ನೇರವಾಗಿ ಬೇಯಿಸಲಾಯಿತು.

ಮಧ್ಯಮ ಗಾತ್ರ (Medium Dice): ಸಾಮಾನ್ಯವಾಗಿ ನಾವು ಸಾಂಬಾರು ಅಥವಾ ಪಲ್ಯಕ್ಕೆ ಕತ್ತರಿಸುವಂತೆ ಸಣ್ಣದಾಗಿ ಕತ್ತರಿಸಿ ಹಾಕಲಾಯಿತು.

ತುರಿದ ಈರುಳ್ಳಿ (Grated / Minced): ಈರುಳ್ಳಿಯನ್ನು ಕ್ಯಾರೆಟ್ ತುರಿಯುವ ಮಣೆಯಲ್ಲಿ ನುಣ್ಣಗೆ ತುರಿದು ಸಾಸ್‌ಗೆ ಬೆರೆಸಲಾಯಿತು.

ಫಲಿತಾಂಶ ಹೇಗಿತ್ತು ಗೊತ್ತಾ?

ಮೂರು ಸಾಸ್‌ಗಳು ನೋಡಲು ಒಂದೇ ತರಹ ಕಂಡರೂ, ರುಚಿಯಲ್ಲಿ ಅಗಾಧ ವ್ಯತ್ಯಾಸವಿತ್ತು

ತುರಿದ ಈರುಳ್ಳಿಯ ಸಾಸ್ (Grated): ಇದು ಎಲ್ಲಕ್ಕಿಂತ ಅತ್ಯಂತ ಸಿಹಿಯಾಗಿತ್ತು (Sweetest)! ಏಕೆಂದರೆ ಈರುಳ್ಳಿ ತುರಿದಾಗ ಅದರ ನೈಸರ್ಗಿಕ ಸಕ್ಕರೆ ಮತ್ತು ರಸ ಪೂರ್ತಿಯಾಗಿ ಹೊರಬಂದು ಸಾಸ್‌ನೊಂದಿಗೆ ಬೆರೆತಿತ್ತು.

ದೊಡ್ಡ ತುಂಡುಗಳ ಸಾಸ್ (Large Pieces): ಇದರಲ್ಲಿ ಸಿಹಿ ಕಡಿಮೆ ಇತ್ತು, ಆದರೆ ಅಡುಗೆಗೆ ಒಂದು ಅದ್ಭುತವಾದ ಸುಗಂಧ ಹಾಗೂ ರಾಯಲ್ ಫ್ಲೇವರ್ (Perfumed Aroma) ಸಿಕ್ಕಿತ್ತು.

ನಿಮ್ಮ ಅಡುಗೆಗೆ ಈ ಟಿಪ್ಸ್ ಹೇಗೆ ಬಳಸಿಕೊಳ್ಳಬೇಕು?

ಗ್ರೇವಿ ಸಿಹಿಯಾಗಿ, ದಪ್ಪವಾಗಿ ಬರಬೇಕಾದರೆ: ಈರುಳ್ಳಿಯನ್ನು ತುಂಬಾ ಸಣ್ಣಗೆ ಹೆಚ್ಚಿ ಅಥವಾ ತುರಿದು (Grate ಮಾಡಿ) ಎಣ್ಣೆಯಲ್ಲಿ ಕ್ಯಾರಮೆಲೈಸ್ ಮಾಡಿ.

ಅಡುಗೆಗೆ ಕೇವಲ ಘಮ ಮತ್ತು ಲಘು ರುಚಿ ಬೇಕಾದರೆ: ಬಿರಿಯಾನಿ ಅಥವಾ ಸೂಪ್‌ಗಳಂತಹ ಖಾದ್ಯಗಳಿಗೆ ಈರುಳ್ಳಿಯನ್ನು ದೊಡ್ಡದಾಗಿ ಕತ್ತರಿಸಿ ಹಾಕಿ.

ಹಾಗಾದ್ರೆ ಯಾವುದು ಸರಿ?

ಯಾವುದೂ ತಪ್ಪು ಅಥವಾ ಸರಿಯಲ್ಲ. ನಿಮಗೆ ಅಡುಗೆಯಲ್ಲಿ ಎಂತಹ ರುಚಿ ಮತ್ತು ಹದ (Texture) ಬೇಕು ಎಂಬುದರ ಆಧಾರದ ಮೇಲೆ ಈರುಳ್ಳಿಯ ಸೈಜ್ ನಿರ್ಧಾರವಾಗುತ್ತದೆ. ಇನ್ಮುಂದೆ ಈರುಳ್ಳಿ ಹೆಚ್ಚುವಾಗ ನಿಮ್ಮ ಅಡುಗೆಯ ರುಚಿಯ ಸೀಕ್ರೆಟ್ ನಿಮ್ಮ ಕೈಯಲ್ಲೇ ಇದೆ ಎಂಬುದನ್ನು ಮರೆಯಬೇಡಿ!