ನೀವು ನಿಮ್ಮ ಅಡುಗೆಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ, ಎಣ್ಣೆ ಮತ್ತು ತುಪ್ಪದ ಬಾಟಲಿಗಳು ಅಥವಾ ಡಬ್ಬಿಗಳಲ್ಲಿನ ಜಿಡ್ಡು ಮಾತ್ರ ಹೋಗುವುದಿಲ್ಲ. ಅಡುಗೆ ಮಾಡುವಾಗ ಈ ಜಿಡ್ಡಿನ ಬಾಟಲಿಗಳು ಕೈಗೆ ಅಂಟಿಕೊಂಡು ಕಿರಿಕಿರಿ ಉಂಟುಮಾಡುತ್ತವೆ. ಅದಕ್ಕೆ ಇಲ್ಲಿದೆ ಸರಳ ಉಪಾಯ.
ಅಡುಗೆ ಮನೆ ಎಷ್ಟೇ ಕ್ಲೀನ್ ಇದ್ದರೂ ಸಾಕಾಗಲ್ಲ. ಉತ್ತಮ ಆರೋಗ್ಯಕ್ಕೆ ಆಡುಗೆ ಮನೆಯ ಸ್ವಚ್ಛತೆ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಅಡುಗೆ ಮನೆ ಫಳ ಫಳ ಅಂತಾ ಹೊಳೆಯುವ ಹಾಗೆ ಇಟ್ಟುಕೊಳ್ಳಿ. ಸರಿ, ಅಡುಗೆ ಮನೆಯೇನೋ ಕ್ಲೀನಾಗಿ ಇಟ್ಟುಕೊಳ್ತೀವಿ, ಈ ಎಣ್ಣೆ ಜಿಡ್ಡಿಗೆ ಏನು ಮಾಡೋದು ಅನ್ನೋ ಪ್ರಶ್ನೆ ತುಂಬಾ ದಿನದಿಂದ ಕಾಡ್ತಿದ್ಯಾ? ಅದಕ್ಕೆ ಉತ್ತರ ಇಲ್ಲಿದೆ.
ಹೌದು, ನೀವು ನಿಮ್ಮ ಅಡುಗೆಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ, ಎಣ್ಣೆ ಮತ್ತು ತುಪ್ಪದ ಬಾಟಲಿಗಳು ಅಥವಾ ಡಬ್ಬಿಗಳಲ್ಲಿನ ಜಿಡ್ಡು ಮಾತ್ರ ಹೋಗುವುದಿಲ್ಲ. ಅಡುಗೆ ಮಾಡುವಾಗ ಈ ಜಿಡ್ಡಿನ ಬಾಟಲಿಗಳು ಕೈಗೆ ಅಂಟಿಕೊಂಡು ಕಿರಿಕಿರಿ ಉಂಟುಮಾಡುತ್ತವೆ. ಎಣ್ಣೆ ಮತ್ತು ಗ್ರೀಸ್ ಅವುಗಳ ಮೇಲೆ ಮತ್ತು ಒಳಭಾಗದಲ್ಲಿ ಗಟ್ಟಿಯಾಗಿ ಸಂಗ್ರಹವಾಗಿರುತ್ತದೆ.
ನೀವು ಎಷ್ಟೇ ಸ್ಕ್ರಬ್ ಮಾಡಿ ತೊಳೆದರೂ ಈ ಜಿಡ್ಡನ್ನು ತೆಗೆಯುವುದು ಕಷ್ಟದ ಕೆಲಸ.ಆದರೆ, ಕೆಲವು ಸುಲಭ ಮನೆಮದ್ದುಗಳಿಂದ ಈ ಸಮಸ್ಯೆಯನ್ನು ನಿವಾರಿಸಬಹುದು.
ಕುದಿಯುವ ನೀರಿನ ಸಂಸ್ಕರಣೆ
ಮೊದಲು ನೀವು ಮಾಡಬೇಕಾಗಿರೋದು ಇಷ್ಟೇ. ಬಾಟಲಿಯೊಳಗಿನ ಎಣ್ಣೆಯನ್ನು ಸಂಪೂರ್ಣವಾಗಿ ಖಾಲಿ ಮಾಡಿ. ನಂತರ ಕುದಿಯುವ ಬಿಸಿ ನೀರನ್ನು ಬಾಟಲಿಗೆ ಸುರಿದು 10 ನಿಮಿಷ ಹಾಗೆಯೇ ಬಿಡಬೇಕು. ಇದರಿಂದ ಒಳಗಿನ ಗಟ್ಟಿಯಾದ ಜಿಡ್ಡು ಕರಗುತ್ತದೆ. ಆಗ ಸೋಪಿನಿಂದ ಮತ್ತೊಮ್ಮೆ ತೊಳೆಯಿರಿ.
ಅಡಿಗೆ ಸೋಡಾ ಮತ್ತು ಪಾತ್ರೆ ತೊಳೆಯುವ ದ್ರವ
ಬಿಸಿ ನೀರನ್ನು ಚೆಲ್ಲಿ ನಂತರ, ಒಂದು ಚಮಚ ಅಡಿಗೆ ಸೋಡಾ ಮತ್ತು ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ ಹಾಕಿ ತೊಳೆಯಬೇಕು. ಬಾಟಲ್ ಬ್ರಷ್‌ನಿಂದ ಚೆನ್ನಾಗಿ ಉಜ್ಜಿ. ಅಡಿಗೆ ಸೋಡಾ ಜಿಡ್ಡನ್ನು ಸಂಪೂರ್ಣವಾಗಿ ತೆಗೆದುಹಾಕಿ ಬಾಟಲಿಯನ್ನು ಹೊಳೆಯುವಂತೆ ಮಾಡುತ್ತದೆ.
ಅನ್ನದಿಂದ ಒಳಭಾಗ ಸ್ವಚ್ಛ
ಸಣ್ಣ ಬಾಯಿ ಇರುವ ಬಾಟಲಿಗಳ ಒಳಭಾಗವನ್ನು ಕೈಯಿಂದ ಸ್ವಚ್ಛ ಮಾಡೋದು ತುಂಬಾ ಕಷ್ಟ. ಅಂತಹ ಸಮಯದಲ್ಲಿ ಬಾಟಲಿಯೊಳಗೆ ಸ್ವಲ್ಪ ಬಿಸಿ ನೀರು, ಒಂದು ಚಮಚ ಅನ್ನ ಮತ್ತು ಡಿಶ್ ವಾಷ್ ಹಾಕಿ ಬಾಟಲಿಯನ್ನು ಬಿಗಿಯಾಗಿ ಮುಚ್ಚಿ ಚೆನ್ನಾಗಿ ಅಲ್ಲಾಡಿಸಬೇಕು. ಅನ್ನವು ಸ್ಕ್ರಬ್ಬರ್ ರೀತಿ ಕೆಲಸ ಮಾಡಿ ಒಳಗಿನ ಎಲ್ಲಾ ಜಿಡ್ಡನ್ನು ಹೊರತೆಗೆದು ಸ್ವಚ್ಛ ಮಾಡುತ್ತದೆ.
ವಿನೆಗರ್ ಮತ್ತು ನಿಂಬೆ ರಸ
ಬಾಟಲಿಯನ್ನು ತೊಳೆದ ನಂತರವೂ ಎಣ್ಣೆಯ ವಾಸನೆ ಹೋಗದಿದ್ದರೆ, ವಿನೆಗರ್ ಅಥವಾ ನಿಂಬೆ ರಸವನ್ನು ಬಳಸಿ. ಅರ್ಧ ಕಪ್ ಬಿಳಿ ವಿನೆಗರ್ ಅಥವಾ ನಿಂಬೆ ರಸವನ್ನು ನೀರಿನೊಂದಿಗೆ ಬೆರೆಸಿ ಬಾಟಲಿಯೊಳಗೆ ಹಾಕಿ 15 ನಿಮಿಷ ಬಿಡಿ. ಇದು ದುರ್ವಾಸನೆ ಸಂಪೂರ್ಣವಾಗಿ ನಿವಾರಿಸಿ, ಬಾಟಲಿಗೆ ಫ್ರೆಶ್ ಪರಿಮಳ ನೀಡುತ್ತದೆ.
ಎಣ್ಣೆ ಪಾತ್ರೆಗಳು, ಬಾಟಲ್‌ಗಳು ಸಚ್ಛಚಾಗಿದ್ರೆ ಅಡುಗೆ ಮನೆಯೂ ಚೆಂದವಾಗಿರುತ್ತದೆ. ಆಗಾಗ ಹೋಗಿ ಅಡುಗೆ ಮಾಡಲು ಹ್ಯಾಪಿ ಮೂಡ್ ಬರುತ್ತದೆ. ನಿಮಗೆ ಬೇಕಾದ ಅಡುಗೆಯನ್ನ ಮಾಡಿಕೊಳ್ಳಬಹುದು.


