
ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
ವಿದ್ಯಾರ್ಥಿಗಳ ಭವಿಷ್ಯ ತುಂಬಾ ಮುಖ್ಯ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರೀಯಾಂಕ ಉಪೇಂದ್ರ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಮಾತನಾಡಿದ್ದಾರೆ. ನಿಜಕ್ಕೂ ಈ ಒಂದು ವಿಚಾರ ತುಂಬಾ ಬೇಸರ ತರುವಂತದ್ದು. ನೋವುಂಟು ಮಾಡಿರುವ ವಿಚಾರ ಎಂದು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿಮಾತನಾಡಿದ್ದಾರೆ. ನಿಜಕ್ಕೂ ಈ ಒಂದು ವಿಚಾರ ತುಂಬಾ ಬೇಸರ ತರುವಂತದ್ದು.ದೇಶಾದ್ಯಂತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು. ವಿದ್ಯಾರ್ಥಿಗಳ ಈ ಪರಿಸ್ಥಿಯನ್ನ ನೋಡಿದ್ರೆ ನಿಜಕ್ಕೂ ನೋವಾಗತ್ತೆ. ಜೊತೆಗೆ ಈ ಒಂದು ವಿಚಾರ ರಾಜಕೀಯ ತಿರುವನ್ನ ಪಡೆದುಕೊಳ್ಳುತ್ತಿದೆ ಎಂಬ ವಿಚಾರವೂ ಕೂಡ ನೋವನ್ನ ಉಂಟು ಮಾಡತ್ತೆ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ದಕ್ಕಬೇಕು. ವಿದ್ಯಾರ್ಥಿಗಳಿಗೆ ಒಳಿತಾಗಬೇಕು ಎಂದಿದ್ದಾರೆ.