ಐಪಿಎಲ್ ಟೈಟಲ್ ಸ್ಪಾನ್ಸರ್ ನೀಡುವ ಕಂಪನಿಗೆ ತಟ್ಟುವ ಶಾಪ ಮುಂದುವರಿದಿದೆ. ಟೈಟಲ್ ಸ್ಪಾನ್ಸರ್ ನೀಡಿದ ಕಂಪನಿಗಳೆಲ್ಲಾ ಮಕಾಡೆ ಮಲಗಿದೆ, ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಟಾಟಾ ಬಡುವು ಅಲ್ಲಾಡುತ್ತಿದೆ.

ಮುಂಬೈ (ಸೆ.20) ಐಪಿಎಲ್ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್. ಸ್ಪಾನ್ಸರ್, ಜಾಹೀರಾತು ನೀಡಲು ಕಂಪನಿಗಳು ಮುಗಿ ಬೀಳುತ್ತವೆ. ದುಬಾರಿ ಬೆಲೆ ನೀಡಿ ಪ್ರಾಯೋಜಕತ್ವ ನೀಡುತ್ತದೆ. ಜೊತೆಗೆ ಅದ್ದೂರಿ ಪ್ರಚಾರವನ್ನು ಪಡೆಯುತ್ತವೆ. ಐಪಿಎಲ್ ಆರಂಭಗೊಂಡು ಇಲ್ಲೀವರೆಗೆ ಹಲವು ಕಂಪನಿಗಳು ಪ್ರಾಯೋಜಕಕತ್ವಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಹಣ ಬಿಸಿಸಿಗೆ ನೀಡಿದೆ. ಪ್ರಮುಖವಾಗಿ ಐಪಿಎಲ್ ಟೈಟಲ್ ಸ್ಪಾನ್ಸರ್ ನೀಡುವ ಕಂಪನಿ ಒಂದೆರಡು ವರ್ಷಕ್ಕೆ ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚು ಮಾಡುತ್ತಿದೆ. ಆದರೆ ಟೈಟಲ್ ಸ್ಪಾನ್ಸರ್ ನೀಡುವ ಕಂಪನಿಗೆ ಐಪಿಎಲ್ ಶಾಪ ಬಿಡುತ್ತಿಲ್ಲ. ಐಪಿಎಲ್ ಟೈಟಲ್ ಸ್ಪಾನ್ಸರ್ ನೀಡಿದ ಕಂಪನಿಗಳು ಒಂದಲ್ಲಾ ಒಂದು ಸಮಸ್ಯೆಗೆ ತುತ್ತಾಗುತ್ತಿದೆ. ಇದೀಗ ಟಾಟಾ ಸರದಿ ಆರಂಭಗೊಂಡಿದೆ.

ಐಪಿಎಲ್ ಟೈಟಲ್ ಸ್ಪಾನ್ಸರ್ ಆತಂಕ

ಡಿಎಲ್ಎಫ್ ಐಪಿಎಲ್‌ನಿಂದ ಆರಂಭಗೊಂಡ ಟೈಟಲ್ ಸ್ಪಾನ್ಸರ್ ಇದೀಗ ಟಾಟಾ ಐಪಿಎಲ್ ವರೆಗೂ ಹಲವು ಕಂಪನಿಗಳು ಐಪಿಎಲ್ ಟೈಟಲ್ ಪ್ರಾಯೋಜಕತ್ವ ನೀಡಿದೆ. ಈ ಪೈಕಿ ಬಹುತೇಕ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದೆ. ಆರ್ಥಿಕ ಸಂಕಷ್ಟಗಳಿಂದ ಕೆಲ ಕಂಪನಿಗಳು ಸಾಲದಲ್ಲಿ ಸಿಲುಕಿ ಒದ್ದಾಡಿದೆ. ಟಾಟಾ ಗ್ರೂಪ್ ಕಳೆದ ಕೆಲ ವರ್ಷಗಳಿಂದ ಐಪಿಎಲ್ ಟೈಟಲ್ ಸ್ಪಾನ್ಸರ್ ಆಗಿದೆ. ಆದರೆ ಟಾಟಾ ಆದಾಯದಲ್ಲಿ ಭಾರಿ ಕುಸಿತ ಕಂಡಿದೆ. ಟಾಟಾ ಷೇರು ಮೌಲ್ಯಗಳು ಕುಸಿತ ಕಂಡಿದೆ. ಜೊತೆಗೆ ಟಾಟಾದಲ್ಲಿ ಆಂತರಿಕ ಕಲಹ ತೀವ್ರಗೊಂಡಿದೆ. ಟಾಟಾ ಸನ್ಸ್ ಚೇರ್ಮನ್ ಚಂದ್ರಶೇಖರನ್ ರಾಜೀನಾಮೆ ನೀಡಿ ಬಳಿಕ ಪಾಲುದಾರರ ಒತ್ತಾಯದ ಮೇರೆಗೆ ಮತ್ತೆ ಮರು ನೇಮಕಗೊಂಡಿದ್ದಾರೆ. ಇಷ್ಟಾದರೂ ಟಾಟಾದ ಸಮಸ್ಯೆಗಳು ಬಗೆಹರಿದಿಲ್ಲ. ಆಂತರಿಕ ಸಮಸ್ಯೆಗಳಿಂದ ಷೇರು ಮೌಲ್ಯ, ಆದಾಯ ಭಾರಿ ಕುಸಿತ ಕಾಣುತ್ತಿದೆ. ಭಾರತದ ಹೆಮ್ಮೆಯ ಹಾಗೂ ಸಧೃಡ ಕಂಪನಿಯಾಗಿ ಗುರುತಿಸಿಕೊಂಡಿದ್ದ ಟಾಟಾದ ಬುಡ ಇದೀಗ ಅಲ್ಲಾಡುತ್ತಿದೆ.

2022ರಲ್ಲಿ ಟಾಟಾ ಕಂಪನಿ ಐಪಿಎಲ್ ಟೈಟಲ್ ಸ್ಪಾನ್ಸರ್ ಪಡೆದುಕೊಂಡಿತು. ಬಳಿಕ 2028ರ ವರೆಗೆ ಟಾಟಾ ಟೈಟಲ್ ಸ್ಪಾನ್ಸರ್ ವಿಸ್ತರಣೆ ಮಾಡಿದೆ. ಆದರೆ ಟಾಟಾ ಗ್ರೂಪ್ ತೀವ್ರ ಸಮಸ್ಯೆಯಲ್ಲಿ ಸುಲಿಕಿಕೊಂಡಿದೆ. ಟಾಟಾ ಸನ್ಸ್ ಸೇರಿದಂತೆ ಟಾಟಾ ಗ್ರೂಪ್‌ನ ಹಲವು ಕಂಪನಿಗಳ ಆಂತರಿಕ ಕಚ್ಚಾಟ ತೀವ್ರಗೊಂಡಿದೆ.

ಐಪಿಎಲ್ ಟೈಟಲ್ ಸ್ಪಾನ್ಸರ್ ಕಂಪನಿಗಳ ಸ್ಥಿತಿ

2008ರಲ್ಲಿ ಐಪಿಎಲ್ ಆರಂಭಗೊಂಡ ದಿನದಿಂದ ಇಲ್ಲೀವರೆಗೆ ಹಲವು ಕಂಪನಿಗಳು ಟೈಟಲ್ ಸ್ಪಾನ್ಸರ್‌ಶಿಪ್ ನೀಡಿದೆ. ಡಿಎಲ್ಎಫ್, ಪೆಪ್ಸಿ, ವಿವೋ, ಡ್ರೀಮ್11 ಹಾಗೂ ಟಾಟಾ. ಈ ಪೈಕಿ ಬಹುತೇಕ ಎಲ್ಲಾ ಕಂಪನಿಗಳು ಒಂದಲ್ಲಾ ಒಂದು ಸಂಕಷ್ಟಕ್ಕೆ ಸಿಲುಕಿದೆ. ಆದರೆ ಈ ಎಲ್ಲಾ ಕಂಪನಿಗಳಿಗೆ ಐಪಿಎಲ್ ಟೈಟಲ್‌ ಸ್ಪಾನ್ಸರ್‌ನಿಂದಾಗಲಿ, ಐಪಿಎಲ್ ಟೂರ್ನಯಿಂದಾಗಲಿ ಸಮಸ್ಯೆಯಾಗಿಲ್ಲ. ಆದರೆ ಈ ಕಂಪನಿಗಳು ತಮ್ಮದೇ ವೈಯುಕ್ತಿಕ ಸಮಸ್ಯೆಗಳಿಂದ ಬಳಲಿದೆ.

2008ರಿಂದ 2012ರ ವರೆಗೆ ಡಿಎಲ್‌ಎಫ್ ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್ ನೀಡಿತ್ತು. ಬಳಿಕ ಡಿಎಲ್‌ಎಫ್ ಆರ್ಥಿಕ ಸಮಸ್ಯೆ , ಮಾರಾಟ ಸಮಸ್ಯೆ ಎದುರಿಸಿತು. ಪೆಪ್ಸಿ ಬಳಿಕ ಪ್ರಾಯೋಜಕತ್ವ ಪಡೆದುಕೊಂಡಿತು. ಇತ್ತ ಪೆಪ್ಸಿಗೆ ಉದ್ಯಮದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ, ಜೊತೆಗೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ಗಳಿಂದ ಹೊಡೆತ ಬಿದ್ದಿತು. 2016ರಲ್ಲಿ ವಿವೋ ಪ್ರಾಯೋಜಕತ್ವ ನೀಡಿತ್ತು. ಆದರೆ ಭಾರತ ಚೀನಾ ಗಡಿ ಸಮಸ್ಯೆಯಿಂದ ಹಿಂಪಡೆಯಬೇಕಾಯಿತು. 2022ರಲ್ಲಿ ಟಾಟಾ ಟೈಟಲ್ ಸ್ಪಾನ್ಸರ್‌ಶಿಪ್ ಹಕ್ಕು ಪಡೆದುಕೊಂಡಿತು. ಇದೀಗ ಟಾಟಾದಲ್ಲಿ ತಳಮಳ ಶುರುವಾಗಿದೆ.