ಟೀಂ ಇಂಡಿಯಾದ ಮಾಜಿ ಆಟಗಾರ 2027ರ ಏಕದಿನ ವಿಶ್ವಕಪ್‌ಗೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಕುರಿತು ಬಿಗ್ ಪ್ರಿಡಿಕ್ಷನ್ ನುಡಿದಿದ್ದಾರೆ. ಆ ನಿಟ್ಟಿನಲ್ಲಿ 2027ರ ಕುರಿತು ಅವರು ಹೇಳಿದ್ದೇನು ಗೊತ್ತಾ? ಇಲ್ಲಿದೆ ಅದಕ್ಕೆ ಉತ್ತರ!
ಭಾರತೀಯ ಕ್ರಿಕೆಟ್‌ನ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಕುರಿತು ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಖ್ಯಾತ ಕನ್ನಡಿಗ ಕ್ರಿಕೆಟಿಗರೊಬ್ಬರು ಆಡಿರುವ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. 2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಭುವನೇಶ್ವರ್ ಕುಮಾರ್‌ಗೆ ಖಂಡಿತವಾಗಿಯೂ ಅವಕಾಶ ನೀಡಬೇಕು ಎಂದು ಆ ಕನ್ನಡಿಗ ಸ್ಟಾರ್ ಪ್ಲೇಯರ್ ಬಲವಾಗಿ ವಾದಿಸಿದ್ದಾರೆ.
2020-22ರ ಹಿನ್ನಡೆ ಮತ್ತು ಐಪಿಎಲ್‌ನಲ್ಲಿ ಭರ್ಜರಿ ಕಂಬ್ಯಾಕ್!
2020 ಮತ್ತು 2022ರ ನಡುವೆ ಭುವನೇಶ್ವರ್ ಕುಮಾರ್ ಸಾಧಾರಣ ಪ್ರದರ್ಶನ ನೀಡಿದ್ದಾಗ ಅವರನ್ನು ಟೀಂ ಇಂಡಿಯಾದಿಂದ ಕಡೆಗಣಿಸಲಾಯಿತು. ಆದರೆ ತಾವು ಇನ್ನೂ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಮತ್ತು ಗೆಲುವಿಗಾಗಿ ತೀವ್ರ ಹಸಿದಿರುವುದನ್ನು ಅವರು ತಮ್ಮ ಶ್ರೇಷ್ಠ ಪ್ರದರ್ಶನದ ಮೂಲಕ ತೋರಿಸಿಕೊಟ್ಟಿದ್ದಾರೆ. ಐಪಿಎಲ್‌ನಲ್ಲಿ ತಂಡವನ್ನು ಸತತವಾಗಿ ಗೆಲುವಿನತ್ತ ಮುನ್ನಡೆಸಿ ಭರ್ಜರಿ ಫಾರ್ಮ್‌ನಲ್ಲಿರುವುದೇ ಇದಕ್ಕೆ ಸಾಕ್ಷಿ ಎಂದು ಆ ಮಾಜಿ ಕ್ರಿಕೆಟಿಗ ವಿಶ್ಲೇಷಿಸಿದ್ದಾರೆ.
ಬುಮ್ರಾಗೆ ಸೂಕ್ತ ಜೊತೆಗಾರ ಭುವಿ!
2027ರ ಏಕದಿನ ವಿಶ್ವಕಪ್ ಪಂದ್ಯಾವಳಿಗಳು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯದಲ್ಲಿ ನಡೆಯಲಿವೆ. ಅಲ್ಲಿನ ಪರಿಸ್ಥಿತಿ ಮತ್ತು ಪಿಚ್‌ಗಳಲ್ಲಿ ಹೊಸ ಚೆಂಡನ್ನು ಎರಡು ಕಡೆ ಸ್ವಿಂಗ್ ಮಾಡುವ ಭುವನೇಶ್ವರ್ ಅವರ ಕೌಶಲ್ಯ ಭಾರತಕ್ಕೆ ಅತ್ಯಂತ ಮುಖ್ಯವಾಗುತ್ತದೆ. ಜಸ್ಪ್ರಿತ್ ಬುಮ್ರಾ ಅವರೊಂದಿಗೆ ಹೊಸ ಚೆಂಡಿನಲ್ಲಿ ಕರಾರುವಾಕ್ ದಾಳಿ ನಡೆಸಿ ಎದುರಾಳಿಗಳ ಮೇಲೆ ಆರಂಭಿಕ ಒತ್ತಡ ಹೇರಲು ಭುವಿ ಬೇಕೇ ಬೇಕು ಎಂಬುದು ಆ ಕನ್ನಡಿಗ ಆಟಗಾರನ ಸಬಲ ವಾದವಾಗಿದೆ. ಅವರೇ ರಾಬಿನ್ ಉತ್ತಪ್ಪ.
ವಿಶ್ವಕಪ್‌ಗೆ ನಾ ಸಿದ್ಧ ಎಂದ ಭುವನೇಶ್ವರ್ ಕುಮಾರ್!
ಇನ್ನೊಂದೆಡೆ, ಸ್ವತಃ ಭುವನೇಶ್ವರ್ ಕುಮಾರ್ ಕೂಡ ತಮ್ಮ ಇಚ್ಛೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಆಯ್ಕೆಗಾರರು ಕರೆ ನೀಡಿದರೆ ತಾವೂ ಕೂಡ 2027ರ ವಿಶ್ವಕಪ್ ಆಡಲು ಸಂಪೂರ್ಣ ಸಿದ್ಧರಿರುವುದಾಗಿ ಹೇಳಿದ್ದಾರೆ. 2022ರ ನಂತರ ಭಾರತ ತಂಡದಿಂದ ದೂರ ಉಳಿದಿದ್ದರೂ, ಕನ್ನಡಿಗ ಮಾಜಿ ಆಟಗಾರ ಸೇರಿದಂತೆ ಹಲವು ಕ್ರಿಕೆಟ್ ವಿಶ್ಲೇಷಕರು ಭುವಿ ಪರ ಬ್ಯಾಟ್ ಬೀಸುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಆಸೆ ಹಾಗೂ ಕೌತುಕವನ್ನು ಮೂಡಿಸಿದೆ.


