ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್, ಯಾವ ರೀತಿ ದಳಪತಿ ವಿಜಯ್ ಅಂದ್ರೆ ಸಿಎಂ ವಿಜಯ್ ತಮ್ಮ ಕರಿಯರ್ ಯಶಸ್ಸಿಗೆ ಕಾರಣವಾಗಿದ್ದಾರೆ ಎನ್ನುವುದನ್ನು ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದು, ಇಂದು ನಾನು, ಶರ್ಟ್, ಪ್ಯಾಂಟ್, ವಾಚ್ ಧರಿಸಲು ಅವರೇ ಕಾರಣ ಎಂದಿದ್ದಾರೆ.

ಸಿಎಂ ವಿಜಯ್ ಕುರಿತು ನಿರ್ದೇಶಕ ಅಟ್ಲೀ ಹೇಳಿದ್ದೇನು?

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಜೊತೆ "ಜವಾನ್" ಚಿತ್ರದಲ್ಲಿ ಕೆಲಸ ಮಾಡಿದ ನಂತರ ಚಲನಚಿತ್ರ ನಿರ್ದೇಶಕ ಅಟ್ಲೀ ಅವರ ಕರಿಯರ್ ಗೆ ಒಂದು ಮಹತ್ವದ ತಿರುವು ಸಿಕ್ಕಿತು. ಆದರೆ ಅದಕ್ಕೂ ಮೊದಲೇ, ಅಟ್ಲೀ ಸಿಎಂ ವಿಜಯ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು; ಅಟ್ಲೀ ನಿರ್ದೇಶನದ"ಥೇರಿ," "ಮೆರ್ಸಲ್," ಮತ್ತು "ಬಿಗಿಲ್" ನಂತಹ ಚಲನಚಿತ್ರಗಳಲ್ಲಿ ವಿಜಯ್ ನಟಿಸಿದ್ದರು. ಅಟ್ಲೀ ಇತ್ತೀಚೆಗೆ ಆ ಸಮಯವನ್ನು ನೆನಪಿಸಿಕೊಂಡು, ನಾನು ಇವತ್ತು ಈ ಪ್ಯಾಂಟ್- ಶರ್ಟ್ ಹಾಕಿಕೊಂಡು ನಿಂತಿದ್ದೇನೆ ಅಂದ್ರೆ ಅದಕ್ಕೆ ವಿಜಯ್ ಕಾರಣ ಎಂದಿದ್ದಾರೆ.

ವಿಜಯ್ ನನಗೆ ನಿರಂತರವಾಗಿ ಸಿನಿಮಾಗಳನ್ನು ನೀಡಿದ್ದಾರೆ

ಇತ್ತೀಚೆಗೆ, ವಿಜಯ್ ಸೇತುಪತಿ ಅವರ ಮುಂಬರುವ ಚಿತ್ರ "ಬತ್ತ"ದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ, ಅಟ್ಲೀ ಮಾತನಾಡಿ, ತಮ್ಮ ಸಿನಿ ಪ್ರಯಾಣಕ್ಕೆ ವಿಜಯ್ ನೀಡಿದ ಕೊಡುಗೆ ಬಗ್ಗೆ ಮಾತನಾಡಿದರು. "ನಾನು ಇಂದು ಧರಿಸುವ ಶರ್ಟ್, ಪ್ಯಾಂಟ್ ಮತ್ತು ವಾಚ್ ಕಷ್ಟಪಟ್ಟು ಸಂಪಾದಿಸಿದ್ದು ಹೌದು, ಆದರೆ ಅದು ನನ್ನ 'ಅಣ್ಣ' ದಳಪತಿ ವಿಜಯ್ ಅವರಿಂದ ನನಗೆ ಸಿಕ್ಕಿರುವುದು ಎಂದು ನಾನು ಭಾವಿಸುತ್ತೇನೆ. ಅವರಿಲ್ಲದಿದ್ದರೆ, ನನಗೆ ಯಾವುದೇ ದೊಡ್ಡ ಅವಕಾಶ ಸಿಗುತ್ತಿರಲಿಲ್ಲ.... ಆದರೆ ವಿಜಯ್ ನನಗೆ ನಿರಂತರವಾಗಿ ಸಿನಿಮಾಗಳನ್ನು ನೀಡಿದ್ದಾರೆ ಥೇರಿ (2016), ಮೆರ್ಸಲ್ (2017), ಮತ್ತು ಬಿಗಿಲ್ (2019)ಗಳನ್ನು ನೀಡಿದ ಕಾರಣ, ನಾನು ಇಂದು ಶಾರುಕ್ ಖಾನ್ ಜೊತೆ ಸಿನಿಮಾ ಮಾಡುವುದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಜವಾನ್ ಸಿನಿಮಾಗೆ ವಿಜಯ್ ಪ್ರೋತ್ಸಾಹ

ಶಾರುಖ್ ಖಾನ್ ‘ಜವಾನ್’ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ವಿಜಯ್ ಅವರಿಗೆ ಹೇಳಿದಾಗ, ವಿಜಯ್ ಅಶ್ಚರ್ಯ ವ್ಯಕ್ತಪಡಿಸಿದ್ದು, ಸತ್ಯ ಹೇಳುತ್ತಿದ್ದೀರಾ? ಶಾರುಖ್ ನಿನ್ನನ್ನು ಸ್ವತಃ ಕಾಂಟಾಕ್ಟ್ ಮಾಡಿದ್ರಾ?" ಎಂದು ಕೇಳಿದ್ದರಂತೆ.. ಶಾರುಖ್ ನಿಜವಾಗಿಯೂ ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಅಟ್ಲೀ ದೃಢಪಡಿಸಿದ, ನಂತರ ವಿಜಯ್ ಅವರು ಪ್ರಾಜೆಕ್ಟ್ ಮೇಲೆ ಸಂಪೂರ್ಣವಾಗಿ ಗಮನಹರಿಸುವಂತೆ ಪ್ರೋತ್ಸಾಹ ನೀಡಿದರಂತೆ.. ‘ಜವಾನ್’ ಹಿಂದಿ ಫಿಲಂ ಇಂಡಷ್ಟ್ರಿಯಲ್ಲಿ ನಿರ್ದೇಶಕರಾಗಿ ಮೊದಲ ಪ್ರಾಜೆಕ್ಟ್ ಆಗಿರುವುದರಿಂದ, ಈ ಅವಕಾಶ ಅಟ್ಲೀಗೆ ಬಹಳ ವಿಶೇಷವಾಗಿತ್ತು. ಬಾಲಿವುಡ್‌ಗೆ ಪ್ರವೇಶಿಸುವ ಮೊದಲು, ಅವರು ವಿಜಯ್ ಅವರೊಂದಿಗೆ ಕೆಲಸ ಮಾಡುವ ಮೂಲಕ ತಮಿಳು ಚಿತ್ರರಂಗದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದರು. ಹಾಗಾಗಿ ವಿಜಯ್ ಅವರಿಂದ ನಾನಿಂದು ಉತ್ತಮ ಸ್ಥಾನದಲ್ಲಿದ್ದೇನೆ ಎಂದಿದ್ದಾರೆ.