Asianet Suvarna News Asianet Suvarna News

ಐಕಿಯಾ ಮಾಲ್ ತೆರೆದದ್ದೇ ತಡ, ಒಳಗೆ ಜನ ಜಾಮ್ ಹೊರಗೆ ಭಯಂಕರ ಟ್ರಾಫಿಕ್ ಜಾಮ್!

ಸ್ವೀಡಿಷ್ ಸಂಸ್ಥೆ ಐಕೆಇಎ ಹೈದರಾಬಾದ್ ನಲ್ಲಿ ಗುರುವಾರ ಮೊದಲ ಮಳಿಗೆಯನ್ನು ಪ್ರಾರಂಭಿಸಿದೆ. ಮಾಲ್ ತೆರೆದದ್ದೇ ತಡ, ಹೈದ್ರಾಬಾದ್ ಜನ ಹೇಗೆ ಲಗ್ಗೆಯಿಟ್ಟಿದ್ದಾರೆ ಎಂದು ನೋಡಿದರೆ ಬೆಚ್ಚಿಬೀಳೋದು ಖಂಡಿತಾ. ಒಂದುಕಡೆ ರಸ್ತೆಯಲ್ಲಿ ಕಿ.ಮಿ. ಉದ್ದದ ಟ್ರಾಫಿಕ್ ಜಾಮ್, ಇನ್ನೊಂದೆಡೆ ಮಾಲ್ ಒಳಗೆ ನುಗ್ಗಲು ಹರಸಾಹಸ ಪಡುತ್ತಿರುವ ಜನ... 

ಸ್ವೀಡಿಷ್ ಸಂಸ್ಥೆ ಐಕೆಇಎ ಹೈದರಾಬಾದ್ ನಲ್ಲಿ ಗುರುವಾರ ಮೊದಲ ಮಳಿಗೆಯನ್ನು ಪ್ರಾರಂಭಿಸಿದೆ. ಮಾಲ್ ತೆರೆದದ್ದೇ ತಡ, ಹೈದ್ರಾಬಾದ್ ಜನ ಹೇಗೆ ಲಗ್ಗೆಯಿಟ್ಟಿದ್ದಾರೆ ಎಂದು ನೋಡಿದರೆ ಬೆಚ್ಚಿಬೀಳೋದು ಖಂಡಿತಾ. ಒಂದುಕಡೆ ರಸ್ತೆಯಲ್ಲಿ ಕಿ.ಮಿ. ಉದ್ದದ ಟ್ರಾಫಿಕ್ ಜಾಮ್, ಇನ್ನೊಂದೆಡೆ ಮಾಲ್ ಒಳಗೆ ನುಗ್ಗಲು ಹರಸಾಹಸ ಪಡುತ್ತಿರುವ ಜನ... ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅನುಮೋದನೆ ಪಡೆದ ಐದು ವರ್ಷದ ಬಳಿಕ ಐಕೆಇಎ ಭಾರತಕ್ಕೆ ಅಧಿಕೃತವಾಗಿ ಲಗ್ಗೆ ಇಟ್ಟಿದೆ.  2013 ರಲ್ಲಿ ಕೇಂದ್ರ ಸರ್ಕಾರದಿಂದ ರಾಷ್ಟ್ರದಲ್ಲಿ 10,500 ಕೋಟಿ ರೂ. ಹೂಡಿಕೆಯೊಂದಿಗೆ ಚಿಲ್ಲರೆ ವ್ಯಾಪಾರಕ್ಕೆ ಐಕೆಇಎ ಸಂಸ್ಥೆ ಅನುಮತಿ ಪಡೆದಿತ್ತು. ತೆಲಂಗಾಣ ಐಟಿ ಸಚಿವ ಕೆ.ಟಿ. ರಾಮರಾವ್ ಮಳಿಗೆಯನ್ನು ಉದ್ಘಾಟಿಸಿದರು.

Video Top Stories