ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ರಜಾ ದಿನಗಳ ಮಜಾ ಸವಿಯಲು ಇದೀಗ ಜಿಯೋ ಭರ್ಜರಿ ಕೊಡುಗೆ ನೀಡಿದೆ. 10ನೇ ವರ್ಷಾಚರಣೆ ಸಂಭ್ರಮದಲ್ಲಿ ಬರೋಬ್ಬರಿ ಒಂದು ವರ್ಷ ಅಮೇಜಾನ್ ಪ್ರೈಮ್ ಲೈಟ್ ಉಚಿತವಾಗಿ ನೀಡುತ್ತಿದೆ.

ಬೆಂಗಳೂರು (ಸೆ.20) ಜಿಯೋ ಭಾರತದಲ್ಲಿ ಹಲವು ಆಫರ್ ಮೂಲಕ ತನ್ನ ಗ್ರಾಹಕರಿಗೆ ಅದ್ಧೂರಿ ಕೊಡುಗೆ ನೀಡುತ್ತಿದೆ. ಇದೀಗ ಜಿಯೋ ಗ್ರಾಹಕರಿಗೆ ವಿಶೇಷ ಗಿಫ್ಟ್ ನೀಡುತ್ತಿದೆ. ಹೌದು ಒಂದು ವರ್ಷದವರಗೆ ಅಮೇಜಾನ್ ಪ್ರೈಮ್ ಲೈಟ್ ಉಚಿತವಾಗಿ ನೀಡಲಾಗುತ್ತಿದೆ. ಜಿಯೋಹೋಮ್‌ನ 30 ಎಂಬಿಪಿಎಸ್ ಮತ್ತು 100 ಎಂಬಿಪಿಎಸ್ ಯೋಜನೆಗಳನ್ನು ಹೊಂದಿರುವ ಗ್ರಾಹಕರು ಅಮೆಜಾನ್ ಪ್ರೈಮ್ ಲೈಟ್ ಬರೋಬ್ಬರಿ ಒಂದು ವರ್ಷ ಸಂಪೂರ್ಣ ಉಚಿತವಾಗಿ ಪಡೆಯಲಿದ್ದಾರೆ.

ಜಿಯೋ 10 ವರ್ಷದ ಸಂಭ್ರಮದಲ್ಲಿ ಕೊಡುಗೆ

ಈ ಪ್ರಯೋಜನವನ್ನು ಜಿಯೋಹೋಮ್‌ನ 3-ಇನ್-1( ಟಿವಿ + ಒಟಿಟಿ + ವೈ-ಫೈ) ಯೋಜನೆಯ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನೀಡಲಾಗುವುದು. ಜಿಯೋ 10 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಈ ಹೊಸ ಕೊಡುಗೆಯನ್ನು ನೀಡಲಾಗುತ್ತಿದೆ. ಒಂದು ವರ್ಷದ ಅಮೆಜಾನ್ ಪ್ರೈಮ್ ಲೈಟ್ ಸದಸ್ಯತ್ವದಲ್ಲಿ, ಗ್ರಾಹಕರು ಪ್ರೈಮ್ ವಿಡಿಯೋದಲ್ಲಿ ಚಲನಚಿತ್ರಗಳು ಮತ್ತು ಪ್ರದರ್ಶನಗಳನ್ನು ವೀಕ್ಷಿಸುವ ಸೌಲಭ್ಯವನ್ನು ಪಡೆಯುತ್ತಾರೆ. ಇದಲ್ಲದೆ, ಅರ್ಹ ಖರೀದಿಗಳ ಮೇಲೆ ಉಚಿತ ಮತ್ತು ವೇಗದ ಡೆಲಿವರಿಯೂ ಅಮೆಜಾನ್‌ನಲ್ಲಿ ಲಭ್ಯವಿರುತ್ತದೆ.

12 ತಿಂಗಳ ಕಾಲ ಉಚಿತ

ಈ ಆಫರ್ ಸೆಪ್ಟೆಂಬರ್ 19 ರಿಂದ ಹಂತ ಹಂತವಾಗಿ ಪ್ರಾರಂಭವಾಗಲಿದೆ. ಮುಂದಿನ ಎರಡು ವಾರಗಳಲ್ಲಿ ಈ ಯೋಜನೆಗಳು ಎಲ್ಲಾ ಗ್ರಾಹಕರನ್ನು ತಲುಪಲಿದೆ. ಮೈಜಿಯೋ ಅಪ್ಲಿಕೇಶನ್‌ನ ಮುಖಪುಟದಲ್ಲಿ ಅಮೆಜಾನ್ ಪ್ರೈಮ್ ಲೈಟ್‌ನ ಆಫರ್ ಕಾಣಿಸಿಕೊಳ್ಳುತ್ತದೆ. ಆಫರ್ ಮೇಲೆ ಟ್ಯಾಪ್ ಮಾಡಿ ಮತ್ತು ಒಂದು ವರ್ಷದ ಉಚಿತ ಸದಸ್ಯತ್ವವನ್ನು ಸಕ್ರಿಯಗೊಳಿಸಲಾಗುತ್ತದೆ. ಸಕ್ರಿಯಗೊಳಿಸಿದ ದಿನದಿಂದ 12 ತಿಂಗಳ ಕೌಂಟ್ ಡೌನ್ ಪ್ರಾರಂಭವಾಗುತ್ತದೆ.

ಅದೇ ಸಮಯದಲ್ಲಿ, ₹ 888, ₹ 1,199 ಮತ್ತು 150 Mbps ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಗಳ ಗ್ರಾಹಕರು ಈಗಾಗಲೇ ಲಭ್ಯವಿರುವ 24 ತಿಂಗಳ ಅಮೆಜಾನ್ ಪ್ರೈಮ್ ಲೈಟ್ ಪ್ರಯೋಜನವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಭರ್ಜರಿ ಆಫರ್ ಮೂಲಕ ಜಿಯೋ ತನ್ನ ಗ್ರಾಹಕರಿಗೆ ಹಬ್ಬದ ಆಫರ್ ನೀಡುತ್ತಿದೆ. ಜಿಯೋ 10 ವರ್ಷದ ಸಂಭ್ರಮಾಚರಣೆಯಲ್ಲಿ ಹಲವು ಕೊಡುಗೆ ಘೋಷಿಸಿದೆ. ಇದೀಗ ಅಮೇಜಾನ್ ಪ್ರೈಮ್ ಲೈಟ್ ಆಫರ್ ನೀಡಿದೆ.