MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
PM Narendra Modi Birthday
IPL Auction Update
Karnataka Cabinet Meeting
UPI Payment Charges
Nelamangala Metro Connectivity
Karnataka Congress District Presidents
Dharwad Tehsildar
Bengaluru PVR INOX Fined 75K
Gadag's Bhishma Lake
Koppal Ancient Inscription
Coastal Karnataka Railway Connectivity
Sakleshpur Railway Project
  • Home
  • Business
  • ದೀಪಾವಳಿಗೆ ಮೊದಲೇ ಮುಕೇಶ್ ಅಂಬಾನಿ ಭರ್ಜರಿ ಗಿಫ್ಟ್: ಜಿಯೋ ಗ್ರಾಹಕರು ₹4,000 ಮೌಲ್ಯದ ಉಚಿತ ಗಿಫ್ಟ್ ಪಡೆಯೋದು ಹೇಗೆ?

ದೀಪಾವಳಿಗೆ ಮೊದಲೇ ಮುಕೇಶ್ ಅಂಬಾನಿ ಭರ್ಜರಿ ಗಿಫ್ಟ್: ಜಿಯೋ ಗ್ರಾಹಕರು ₹4,000 ಮೌಲ್ಯದ ಉಚಿತ ಗಿಫ್ಟ್ ಪಡೆಯೋದು ಹೇಗೆ?

ರಿಲಯನ್ಸ್ ಜಿಯೋ(Reliance Jio) ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಕೇವಲ ₹399 ರೀಚಾರ್ಜ್ ಮಾಡಿದರೆ ಸುಮಾರು ₹4,000 ಮೌಲ್ಯದ Canva Pro ಚಂದಾದಾರಿಕೆ(Canva Pro subscription)ಯನ್ನು 12 ತಿಂಗಳ ಕಾಲ ಉಚಿತವಾಗಿ ಪಡೆಯಬಹುದು. ಈ ಪ್ರಯೋಜನ ಪಡೆಯಲು ಯಾರು ಅರ್ಹರು? ವಿವರವಾಗಿ ತಿಳಿಯಿರಿ.

2 Min read
Author : Ravi Janekal
Published : Sep 17 2026, 10:55 AM IST
Share this Photo Gallery
  • FB
  • TW
  • Linkdin
  • Whatsapp
14
ಜಿಯೋ ಗ್ರಾಹಕರಿಗೆ ಮುಕೇಶ್ ಅಂಬಾನಿ ಭರ್ಜರಿ ಗಿಫ್ಟ್
Image Credit : Google

ಜಿಯೋ ಗ್ರಾಹಕರಿಗೆ ಮುಕೇಶ್ ಅಂಬಾನಿ ಭರ್ಜರಿ ಗಿಫ್ಟ್

ರಿಲಯನ್ಸ್ ಜಿಯೋ(Reliance Jio) ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಕೇವಲ ₹399 ರೀಚಾರ್ಜ್ ಮಾಡಿದರೆ ಸುಮಾರು ₹4,000 ಮೌಲ್ಯದ Canva Pro ಚಂದಾದಾರಿಕೆ(Canva Pro subscription)ಯನ್ನು 12 ತಿಂಗಳ ಕಾಲ ಉಚಿತವಾಗಿ ಪಡೆಯಬಹುದು. ಇದರಿಂದ ಗ್ರಾಹಕರು Canva ಪ್ರೀಮಿಯಂ ಡಿಸೈನ್ ಹಾಗೂ AI ಆಧಾರಿತ ಕ್ರಿಯೇಟಿವ್ ಟೂಲ್‌ಗಳನ್ನು ಬಳಸಿಕೊಳ್ಳಬಹುದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಜಿಯೋ- Canva ನಡುವೆ ಪಾರ್ಟನರ್‌ಶಿಪ್,  ಜಿಯೋ ಗ್ರಾಹಕರಿಗೆ ಭರ್ಜರಿ ಕೊಡುಗೆ
Image Credit : Google

ಜಿಯೋ- Canva ನಡುವೆ ಪಾರ್ಟನರ್‌ಶಿಪ್, ಜಿಯೋ ಗ್ರಾಹಕರಿಗೆ ಭರ್ಜರಿ ಕೊಡುಗೆ

ಜಿಯೋ ಮತ್ತು Canva ನಡುವಿನ ಪಾರ್ಟನರ್‌ಶಿಪ್ ಭಾಗವಾಗಿ ಈ ಹೊಸ ಆಫರ್ ನೀಡಲಾಗುತ್ತಿದೆ. 2026ರ ಸೆಪ್ಟೆಂಬರ್ 16ರಿಂದ MyJio ಆ್ಯಪ್ ಮೂಲಕ ಈ ಆಫರ್‌ನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.

ಈ ಆಫರ್ ವಿಶೇಷವಾಗಿ ಕಂಟೆಂಟ್ ಕ್ರಿಯೇಟರ್‌ಗಳು, ವಿದ್ಯಾರ್ಥಿಗಳು, ಸಣ್ಣ ಉದ್ಯಮಿಗಳು, ಸೋಷಿಯಲ್ ಮೀಡಿಯಾ ಬಳಸುವವರು ಹಾಗೂ ಪೋಸ್ಟ್‌ಗಳು, ಪ್ರೆಸೆಂಟೇಷನ್‌ಗಳು ಮತ್ತು ವಿಡಿಯೋಗಳನ್ನು ಎಡಿಟರ್‌ಗಳಿಗೆ ಇದು ತುಂಬಾ ಉಪಯುಕ್ತವಾಗಿದೆ.

Related Articles

Related image1
Viral News: ನೆಟ್‌ವರ್ಕ್ ಸಿಗಲಿಲ್ಲವೆಂದು Jio ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿ ಚಚ್ಚಿದ ನೆಟ್ಟಿಗರು!
Related image2
Jio: ಎದುರಾಳಿಗಳ ಬುಡವನ್ನೇ ಅಲ್ಲಾಡಿಸಿದ ಜಿಯೋ ಫ್ರೀಡಂ ಪ್ಲಾನ್; ಏರ್‌ಟೆಲ್ ತತ್ತರ!
34
ಜಿಯೋ ₹399 ರೀಚಾರ್ಜ್ ಮಾಡಿದರೆ ಏನೇನು ಆಫರ್?
Image Credit : Google

ಜಿಯೋ ₹399 ರೀಚಾರ್ಜ್ ಮಾಡಿದರೆ ಏನೇನು ಆಫರ್?

ನೀವು ಜಿಯೋ ಬಳಕೆದಾರರಾಗಿದ್ದರೆ ₹399 ಜಿಯೋ ಪ್ರೀಪೇಯ್ಡ್ ಪ್ಲಾನ್ ರೀಚಾರ್ಜ್ ಮಾಡಿಸಿ. ರಿಚಾರ್ಜ್ ಮಾಡಿಸಿದ ಬಳಿಕ ನಿಮಗೆ 12 ತಿಂಗಳ Canva Pro subscription ಉಚಿತವಾಗಿ ಸಿಗಲಿದೆ. Canva Proನ ವಾರ್ಷಿಕ ಚಂದಾದಾರಿಕೆಯ ತುಂಬಾ ದುಬಾರಿಯಾಗಿದೆ. ಅದರ ವಾರ್ಷಿಕ ಬೆಲೆ ಸುಮಾರು ₹4,000 ಎಂದು ತಿಳಿಸಲಾಗಿದೆ. ಹೀಗಾಗಿ ಮೊಬೈಲ್ ರೀಚಾರ್ಜ್ ಜೊತೆಗೆ ಒಂದು ವರ್ಷದ ಪ್ರೀಮಿಯಂ ಡಿಸೈನ್ ಸೌಲಭ್ಯವೂ ಸಿಗುವುದರಿಂದ ನಿಮಗೆ 399 ರೂ, ರಿಚಾರ್ಜ್‌ಗೆ 4000 ರೂಪಾಯಿ ಮೌಲ್ಯದ ಪ್ರಯೋಜನ ಸಿಗಲಿದೆ.

Canva Pro ಮೂಲಕ ಪ್ರೀಮಿಯಂ ಟೆಂಪ್ಲೇಟ್‌ಗಳು, ಹಲವು ಎಡಿಟಿಂಗ್ ಟೂಲ್‌ಗಳು, ಬ್ಯಾಕ್‌ಗ್ರೌಂಡ್ ರಿಮೂವಲ್, Magic Eraser ಸೇರಿದಂತೆ ಹಲವು ಫೀಚರ್‌ಗಳನ್ನು ಬಳಸಬಹುದು. ಇದು ಸೋಷಿಯಲ್ ಮೀಡಿಯಾದಲ್ಲಿ ಮೀಡಿಯಾ ಎಡಿಟ್ ಮಾಡುವವರಿಗೆ ಸುವರ್ಣಾವಕಾಶವೆಂದೇ ಹೇಳಬಹುದು.

ಈ ಆಫರ್‌ ಎಲ್ಲ ಬಳಕೆದಾರರಿಗೆ ಅಲ್ಲ. ಮುಖ್ಯವಾಗಿ ಈ ಆಫರ್ ₹399 ಜಿಯೋ ಪ್ರೀಪೇಯ್ಡ್ ಪ್ಲಾನ್‌ಗೆ ಸಂಬಂಧಿಸಿದ್ದಾಗಿದೆ. ನಿಮಗೆ ಇದು ಅಗತ್ಯವಿದ್ದರೆ MyJio ಆ್ಯಪ್‌ ತೆರೆದು ನಿಮ್ಮ ಮೊಬೈಲ್ ಸಂಖ್ಯೆಗೆ Canva Pro ಪ್ರಯೋಜನ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಸೌಲಭ್ಯವಿದ್ದರೆ ರಿಚಾರ್ಜ್ ಮಾಡಿಸಬಹುದು. ಇದರ ಜೊತೆಗೆ ₹349 ಪ್ಲಾನ್ ಹಾಗೂ ದಿನಕ್ಕೆ 2GB ಡೇಟಾ ನೀಡುವ ₹349ಕ್ಕಿಂತ ಹೆಚ್ಚಿನ ಕೆಲವು ಅರ್ಹ ಪ್ಲಾನ್‌ಗಳ ಗ್ರಾಹಕರಿಗೂ Canva Pro Lite ಸೌಲಭ್ಯವನ್ನು ಜಿಯೋ ನೀಡಿದೆ.

44
ಉಚಿತ Canva Pro ಪಡೆಯುವುದು ಹೇಗೆ?
Image Credit : Google

ಉಚಿತ Canva Pro ಪಡೆಯುವುದು ಹೇಗೆ?

ಉಚಿತ Canva Pro ಪಡೆಯುವುದು ಹೇಗೆ?

ಮೊದಲು ₹399 ಜಿಯೋ ಪ್ಲಾನ್‌ ರೀಚಾರ್ಜ್ ಮಾಡಬೇಕು. ನಂತರ MyJio ಆ್ಯಪ್‌ ತೆರೆಯಬೇಕು. ಅಲ್ಲಿ ನಿಮ್ಮ ಖಾತೆಗೆ ಲಭ್ಯವಿರುವ Offers ಅಥವಾ Benefits ವಿಭಾಗವನ್ನು ಪರಿಶೀಲಿಸಿ. Canva Pro ಆಫರ್ ಕಾಣಿಸಿಕೊಂಡರೆ, ಅದನ್ನು ಆಕ್ಟಿವೇಟ್ ಮಾಡಲು ನೀಡಿರುವ ಸೂಚನೆಗಳನ್ನು ಅನುಸರಿಸಬೇಕು. ಆಫರ್‌ಗೆ ಸಂಬಂಧಿಸಿದ ಸಂಪೂರ್ಣ ನಿಯಮ ಮತ್ತು ಷರತ್ತುಗಳನ್ನು ಜಿಯೋ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ನೀಡಿದೆ.

ನಿಜವಾಗಿಯೂ ₹4,000 ಮೌಲ್ಯದ Canva Pro ಉಚಿತವೇ?

ಹೌದು. ಅರ್ಹತೆ ಹೊಂದಿರುವ ಬಳಕೆದಾರರಿಗೆ 12 ತಿಂಗಳ Canva Pro ಚಂದಾದಾರಿಕೆಗೆ ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗಿಲ್ಲ. ಆದರೆ ಈ ಪ್ರಯೋಜನವು ನಿರ್ದಿಷ್ಟ ಜಿಯೋ ರೀಚಾರ್ಜ್ ಪ್ಲಾನ್ ಮತ್ತು ಅದರ ನಿಯಮಗಳಿಗೆ ಒಳಪಟ್ಟಿರುತ್ತದೆ. ಹೀಗಾಗಿ ರೀಚಾರ್ಜ್ ಮಾಡುವ ಮೊದಲು ನಿಮ್ಮ MyJio ಖಾತೆಯಲ್ಲಿ ಆಫರ್ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸುವುದು ಉತ್ತಮ.

ಏರ್‌ಟೆಲ್‌ಗೆ ಹೋಲಿಸಿದರೆ ಜಿಯೋದಲ್ಲಿ ಏನು ವಿಶೇಷ?

ಈ ಆಫರ್‌ನ ಪ್ರಮುಖ ಗಮನ ಸೆಳೆಯುವ ಅಂಶ ಮೊಬೈಲ್ ರೀಚಾರ್ಜ್ ಜೊತೆಗೆ Canva Pro ಸಿಗುತ್ತಿರುವುದು.

₹399 ಪ್ಲಾನ್‌ಗೆ Canva Pro ಜಿಯೋದಲ್ಲಿದೆ ಇದಕ್ಕೆ ಸಮಾನವಾದ ಯಾವುದೇ ಆಫರ್ ಏರ್‌ಟೆಲ್‌ನಲ್ಲಿ ಲಭ್ಯವಿಲ್ಲ. ಜಿಯೋ ಗ್ರಾಹಕರಿಗೆ ಈ ಸೌಲಭ್ಯವಿದೆ.

ಗ್ರಾಹಕರ ಗಮನಕ್ಕೆ:

ಜಿಯೋ ಗ್ರಾಹಕರು ತಮ್ಮ ₹399 ರೀಚಾರ್ಜ್ ಮಾಡುವ ಮೊದಲು MyJio ಆ್ಯಪ್‌ನಲ್ಲಿ Canva Pro ಆಫರ್ ತಮ್ಮ ಸಂಖ್ಯೆಗೆ ಲಭ್ಯವಿದೆಯೇ ಎಂದು ಪರಿಶೀಲಿಸಬೇಕು. ಏರ್‌ಟೆಲ್‌ನ ಪ್ರಸ್ತುತ ಪ್ಲಾನ್ ಮತ್ತು ಪ್ರಯೋಜನಗಳನ್ನು ಪರಿಶೀಲಿಸಿದ ನಂತರವಷ್ಟೇ ಎರಡೂ ಕಂಪನಿಗಳ ಬೆಲೆ, ಡೇಟಾ, ವ್ಯಾಲಿಡಿಟಿ ಮತ್ತು ಹೆಚ್ಚುವರಿ OTT/ಆ್ಯಪ್ ಪ್ರಯೋಜನಗಳ ಸಂಪೂರ್ಣ ಹೋಲಿಕೆ ಮಾಡುವುದು ಸೂಕ್ತ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ವ್ಯವಹಾರ
ಮುಕೇಶ್ ಅಂಬಾನಿ
 

Latest Videos
Recommended Stories
Recommended image1
UPI Payment: ಯಾರೇ ವಿರೋಧಿಸಿದ್ರೂ ಯುಪಿಐ ಮೇಲಿನ ಶುಲ್ಕ ವಾಪಸ್ ಇಲ್ಲ: ಹೊರಬಿತ್ತು ಅಚ್ಚರಿಯ ಸತ್ಯ! ಯಾವಾಗ ಜಾರಿ?
Recommended image2
ರೈಡ್‌ಗೂ ಮುನ್ನ ಟಿಪ್ಸ್‌: ರಾಪಿಡೋಗೆ 10 ಲಕ್ಷ ದಂಡ ವಿಧಿಸಿದ ಸಿಸಿಪಿಎ, ನಮ್ಮ ಯಾತ್ರಿಗೆ ಏಕಿಲ್ಲ?
Recommended image3
ಧೂಮಪಾನಿಗಳ ಹೊಗೆ ಹಾಕಿಸಿದ ITC, ಫೇಮಸ್‌ ಬ್ರ್ಯಾಂಡ್‌ಗಳ ಸಿಗರೇಟ್‌ ದರದಲ್ಲಿ ಭರ್ಜರಿ ಏರಿಕೆ!
Related Stories
Recommended image1
Viral News: ನೆಟ್‌ವರ್ಕ್ ಸಿಗಲಿಲ್ಲವೆಂದು Jio ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿ ಚಚ್ಚಿದ ನೆಟ್ಟಿಗರು!
Recommended image2
Jio: ಎದುರಾಳಿಗಳ ಬುಡವನ್ನೇ ಅಲ್ಲಾಡಿಸಿದ ಜಿಯೋ ಫ್ರೀಡಂ ಪ್ಲಾನ್; ಏರ್‌ಟೆಲ್ ತತ್ತರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved